For Quick Alerts
ALLOW NOTIFICATIONS  
For Daily Alerts

ಸೈಡ್ ಇನ್ಕಮ್ ಮಾಡಿಕೊಳ್ಳಲು ಆರು ಮಾರ್ಗಗಳು

|

ಮೂನ್‌ಲೈಟಿಂಗ್ ಬಗ್ಗೆ ಕಾರ್ಪೊರೇಟ್ ಜಗತ್ತಿನಲ್ಲಿ ಗಂಭೀರ ಚರ್ಚೆಗಳಾಗುತ್ತಿವೆ. ಎರಡೆರಡು ಕಡೆ ಕೆಲಸ ಮಾಡುವುದು ತಪ್ಪು ಎಂದು ಹೇಳಲಾಗುತ್ತಿದೆ. ಅದು ಸರಿಯೇ. ಆದರೆ, ನೀವು ಮಾಡುತ್ತಿರುವ ವೃತ್ತಿಗಿಂತ ವಿಭಿನ್ನವಾದ ಹಾಗೂ ಭಿನ್ನ ಸಮಯದಲ್ಲಿ ಕೆಲಸ ಮಾಡಲು ಯಾವ ಅಡ್ಡಿಯೂ ಇಲ್ಲ. ಈ ರೀತಿಯ ಕೆಲಸಗಳಿಂದ ನಿಮಗೆ ಏಕತಾನತೆ ನೀಗಿದಂತಾಗುತ್ತದೆ, ಜೊತೆಗೆ ಹೆಚ್ಚುವರಿ ಆದಾಯವೂ ಹರಿದುಬರುತ್ತದೆ.

ಈ ರೀತಿಯ ಸೈಡ್ ಇನ್ಕಂ ತರಬಲ್ಲ ಕೆಲಸಗಳ್ಯಾವುವು ಎಂಬ ಪ್ರಶ್ನೆ ಬರುತ್ತದೆ. ವಾಸ್ತವದಲ್ಲಿ ಹಲವಾರು ರೀತಿಯ ಕೆಲಸಗಳಿವೆ. ಸಮಾಜಸೇವೆಗೆ ಬಹಳಷ್ಟು ಕೆಲಸಗಳಿವೆ. ಆದರೆ, ಆದಾಯ ಕೊಡಬಲ್ಲ ಕೆಲ ಪ್ರಮುಖ ಕೆಲಸಗಳು ಇಂದಿನ ಸಂದರ್ಭದಲ್ಲಿ ಯಾವುವಿವೆ? ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಮಿತ್ ಗುಪ್ತಾ ಕೆಲವೊಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಿದ್ದಾರೆ.

World Savings Day: ವಿಶ್ವ ಉಳಿತಾಯ ದಿನದ ಇತಿಹಾಸ, ಪ್ರಾಮುಖ್ಯತೆ, ಇತರೆ ಮಾಹಿತಿWorld Savings Day: ವಿಶ್ವ ಉಳಿತಾಯ ದಿನದ ಇತಿಹಾಸ, ಪ್ರಾಮುಖ್ಯತೆ, ಇತರೆ ಮಾಹಿತಿ

1) ವಿಲಾಗ್:
ಜನರನ್ನು ಸೆಳೆಯುವಂಥ ವಿಡಿಯೋ ಮಾಡಬಲ್ಲಿರಾದರೆ, ಅಥವಾ ಒಳ್ಳೆಯ ಮಾತುಗಾರಿಕೆ, ನಟನಾ ಕಲೆ, ಹಾಸ್ಯ ಇತ್ಯಾದಿ ಯಾವುದಾದರೂ ಕಲೆ ನಿಮ್ಮಲ್ಲಿ ಅದನ್ನು ಉಪಯೋಗಿಸಿಕೊಳ್ಳಲು ಒಳ್ಳೆಯ ಅವಕಾಶಗಳಿವೆ. ನಿಮ್ಮದೇ ಯೂಟ್ಯೂಬ್ ಚಾನಲ್ ಮಾಡಿಕೊಂಡು ವಿಡಿಯೋಗಳನ್ನು ಪೋಸ್ಟ್ ಮಾಡಬಹುದು. ಇನ್ಸ್‌ಟಾಗ್ರಾಂ, ಫೇಸ್‌ಬುಕ್, ಯೂಟ್ಯೂಬ್ ಶಾರ್ಟ್ಸ್, ಜೋಶ್ ಇತ್ಯಾದಿ ಹಲವು ಶಾರ್ಟ್ ವಿಡಿಯೋ ತಾಣಗಳೂ ಉಂಟು. ಉತ್ತಮ ಕಂಟೆಂಟ್ ಕೊಟ್ಟರೆ ಒಳ್ಳೆಯ ಲಾಭ ಮಾಡಿಕೊಳ್ಳಬಹುದು.

ಸೈಡ್ ಇನ್ಕಮ್ ಮಾಡಿಕೊಳ್ಳಲು ಆರು ಮಾರ್ಗಗಳು

ಅಡುಗೆ, ಡ್ಯಾನ್ಸ್, ಹಾಡು, ಹಾಸ್ಯ ಹೀಗೆ ಏನು ಬೇಕಾದರೂ ನೀವು ವಿಡಿಯೋ ಮಾಡಬಹುದು.

2) ಫ್ರೀಲಾನ್ಸಿಂಗ್
ಇಲ್ಲಿಯೂ ನಾನಾ ರೀತಿಯ ಕೆಲಸಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ನಿಮಗೆ ಬರವಣಿಗೆ ಬರುತ್ತದೆ ಎಂದರೆ ಅದಕ್ಕೆ ವಿಫುಲ ಅವಕಾಶಗಳಿವೆ. ಗ್ರಾಫಿಕ್ಸ್, ವಿಡಿಯೋ ಎಡಿಟಿಂಗ್‌ಗೆ ಬಹಳ ಡಿಮ್ಯಾಂಡ್ ಇದೆ. ನೀವು ಮನೆಯಲ್ಲೇ ಕೂತು ಈ ಕೆಲಸಗಳನ್ನು ಬಿಡುವಿನ ವೇಳೆಯಲ್ಲಿ ಮಾಡಬಹುದು.

3) ಪ್ರವಾಸಿಗರ ಆತಿಥ್ಯ
ಪೇಯಿಂಗ್ ಗೆಸ್ಟ್ ಮಾದರಿಯಲ್ಲಿ ಈಗ ಪ್ರವಾಸಿಗರಿಗೆ ಆತಿಥ್ಯ ವಹಿಸುವ ಸೇವೆಯೊಂದು ಟ್ರೆಂಡಿಂಗ್‌ನಲ್ಲಿದೆ. ಏರ್‌ಬಿಎನ್‌ಬಿ ಮೊದಲಾದ ಕೆಲ ಕಂಪನಿಗಳು ಇಂಥ ಸೇವೆಗೆ ವೇದಿಕೆ ಒದಗಿಸುತ್ತಿವೆ. ನಿಮಗೆ ಬಹಳ ಪರಿಚಯ ಇರುವ ಪ್ರವಾಸೀ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವುದು, ಅವರಿಗೆ ಎಲ್ಲಾ ರೀತಿಯ ಆತಿಥ್ಯ ವಹಿಸುವುದು, ಈ ಕೆಲಸಗಳಿಂದ ನೀವು ಆದಾಯ ಗಳಿಸಬಹುದು. ನಿಮ್ಮ ಮನೆಯಲ್ಲೇ ಪ್ರವಾಸಿಗರು ಉಳಿದುಕೊಳ್ಳಲು ಸ್ಥಳಾವಕಾಶ ಇದ್ದರೆ ಸಾಕು.

Dubai Gold- ದುಬೈನಲ್ಲಿ ಚಿನ್ನದ ಬೆಲೆ ಕಮ್ಮಿ; ಅಲ್ಲಿಂದ ತರುವ ಮುನ್ನ ಈ ಅಂಶ ತಿಳಿದಿರಿDubai Gold- ದುಬೈನಲ್ಲಿ ಚಿನ್ನದ ಬೆಲೆ ಕಮ್ಮಿ; ಅಲ್ಲಿಂದ ತರುವ ಮುನ್ನ ಈ ಅಂಶ ತಿಳಿದಿರಿ

ನೀವು ಏರ್‌ಬಿಎನ್‌ಬಿಯಂತಹ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಪ್ರವಾಸಿಗರಿಗೆ ಆತಿಥ್ಯ ವಹಿಸುವ ಸ್ಥಳವನ್ನು ಪಟ್ಟಿ ಮಾಡಬೇಕು. ಆಸಕ್ತ ಪ್ರವಾಸಿಗರು ನಿಮ್ಮನ್ನು ಸಂಪರ್ಕಿಸುತ್ತಾರೆ. ಈ ಸೇವೆಗೆ ನಿಮಗೆ ಹಣವೂ ಸಿಗುತ್ತದೆ.

ಸೈಡ್ ಇನ್ಕಮ್ ಮಾಡಿಕೊಳ್ಳಲು ಆರು ಮಾರ್ಗಗಳು

4) ಪಾಠ
ಟ್ಯೂಷನ್ ಎನ್ನುವುದು ಈಗ ಶಾಲೆಗಳಿಗಿಂತ ಹೆಚ್ಚು ಅದಾಯ ತರುವ ಕೇಂದ್ರಗಳಾಗಿವೆ. ನಿಮಗೆ ಪಾಠ ಹೇಳಿಕೊಡುವ ಕಲೆ ಮತ್ತು ಇಚ್ಛೆ ಇದ್ದರೆ ಆನ್‌ಲೈನ್‌ನಲ್ಲಿ ಪಾಠ ಮಾಡಿ ಹಣ ಸಂಪಾದಿಸಬಹುದು. ನಿಮ್ಮಿಷ್ಟದ ಮತ್ತು ನೀವು ಪರಿಣಿತಿ ಇರುವ ಸಬ್ಜೆಕ್ಟ್ ಆರಿಸಿಕೊಂಡು ಪಾಠ ಮಾಡಬಹುದು. ಇದನ್ನೂ ನೀವು ಬಿಡುವಿನ ವೇಳೆಯಲ್ಲೇ ಮಾಡಲು ಸಾಧ್ಯ.

5) ಮಾರ್ಕೆಟಿಂಗ್
ಇದೂ ಕೂಡ ಯಾವತ್ತಿದ್ದರೂ ಬೇಡಿಕೆ ಇಳಿಯದ ಕೆಲಸ. ಒಂದು ವಸ್ತುವನ್ನು ಗುಣಮಟ್ಟದಲ್ಲಿ ತಯಾರಿಸುವುದು ಸವಾಲಿನ ಕೆಲಸವಾದರೆ, ಆ ವಸ್ತುವನ್ನು ಜನರು ಕೊಳ್ಳುವ ರೀತಿಯಲ್ಲಿ ಮಾಡುವುದು ಇನ್ನೊಂದು ಸವಾಲಿನ ಕೆಲಸ. ಒಂದು ಉತ್ಪನ್ನದ ಬಗ್ಗೆ ಜನರನ್ನು ಆಕರ್ಷಿಸುವಂತಹ ಬರವಣಿಗೆ ನಿಮ್ಮಿಂದ ಸಾಧ್ಯವೆಂದರೆ ಅದರಿಂದ ಒಳ್ಳೆಯ ಆದಾಯ ನಿರೀಕ್ಷಿಸಬಹುದು.

ಈಗ ಅನೇಕ ಕಂಪನಿಗಳು ತಮ್ಮದೇ ಮಾರ್ಕೆಟಿಂಗ್ ವಿಭಾಗವನ್ನು ಹೊಂದಿದ್ದರೂ ಥರ್ಡ್ ಪಾರ್ಟಿಗಳ ಮೂಲಕವೂ ಮಾರ್ಕೆಟಿಂಗ್ ಮಾಡುತ್ತವೆ. ಇವೆಲ್ಲಾ ಕಮಿಷನ್ ಆಧಾರಿತವಾಗಿರುತ್ತವೆ. ಇದಕ್ಕೆ ಅಫಿಲಿಯೇಟ್ ಮಾರ್ಕೆಟಿಂಗ್ ಎಂದು ಕರೆಯುತ್ತಾರೆ. ನೀವು ಕಂಪನಿ ಬಗ್ಗೆ ಅಥವಾ ಅದರ ಒಂದು ಉತ್ಪನ್ನದ ಬಗ್ಗೆ ನಿಮ್ಮ ಬ್ಲಾಗ್‌ನಲ್ಲಿ ಚೆಂದವಾಗಿ ಬರೆದು, ಆ ಕಂಪನಿಯ ವೆಬ್‌ತಾಣಕ್ಕೆ ನಿಮ್ಮ ಬ್ಲಾಗ್ ಮೂಲಕ ಜನರನ್ನು ಕಳುಹಿಸುವಲ್ಲಿ ಯಶಸ್ವಿಯಾದರೆ ನಿಮಗೆ ಹಣ ಕೈಸೇರಿದಂತೆಯೇ.

6) ಕೌನ್ಸೆಲಿಂಗ್ ಅಥವಾ ಟ್ರಬಲ್ ಶೂಟಿಂಗ್
ನಿಮಗೆ ಸಮಾಜಸೇವೆಯಲ್ಲಿ ಆಸಕ್ತಿ ಇದ್ದರೆ ಅದರಿಂದಲೂ ನ್ಯಾಯಯುತವಾಗಿ ಮತ್ತು ವೃತ್ತಿಪರವಾಗಿ ಹಣ ಮಾಡಬಹುದು. ಇಂದಿನ ಸಂದರ್ಭದಲ್ಲಿ ಯಾರದ್ದೇ ಜೀವನವಾದರೂ ಏನಾದರೊಂದು ತೊಡಕುಗಳು ಬಂದು ಜನರು ಹತಾಶರಾಗುತ್ತಾರೆ. ಅಂಥವರು ಯಾರದ್ದಾದರೂ ಸಹಾಯದ ನಿರೀಕ್ಷೆಯಲ್ಲಿರುತ್ತಾರೆ. ನೀವು ಅವರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಹುಡುಕಬಲ್ಲಿರಾದರೆ ಅದಕ್ಕೂ ಅವಕಾಶಗಳುಂಟು, ಆದಾಯಗಳುಂಟು. ನೀವು ಆನ್‌ಲೈನ್‌ನಲ್ಲೇ ಜನರಿಗೆ ಕೌನ್ಸಲಿಂಗ್ ನೀಡಬಹುದು.

ಅಥವಾ ಮೊಬೈಲ್, ಕಂಪ್ಯೂಟರ್ ಇತ್ಯಾದಿ ಬಳಕೆಯಲ್ಲಿ ಜನರಿಗೆ ಗೊಂದಲವಾದಾಗ ಆ ಸಮಸ್ಯೆಯನ್ನು ಅರಿತು ಅದಕ್ಕೆ ಪರಿಹಾರ ಹುಡುಕುವ ಕೆಲಸವನ್ನೂ ಮಾಡಬಹುದು.

English summary

How To Earn Extra Income, Know 6 Trending Ways in Kannada

There are many ways to earn extra income now. Among them you can explore some important ways for side income.
Story first published: Thursday, October 27, 2022, 18:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X