For Quick Alerts
ALLOW NOTIFICATIONS  
For Daily Alerts

ನಿಮ್ಮ ಆಸ್ತಿಯನ್ನು ಬಳಸಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುವುದು ಹೇಗೆ?

|

ಸಾಲವನ್ನು ಪಡೆಯುವ ಸಂದರ್ಭದಲ್ಲಿ ಹಲವಾರು ಮಂದಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುವುದು ಹೇಗೆ ಎಂದು ಯೋಚನೆ ಮಾಡುತ್ತಿರುತ್ತಾರೆ. ಇದಕ್ಕಾಗಿ ಹಲವಾರು ಮೂಲಗಳಲ್ಲಿ ಪರಿಶೀಲನೆಯನ್ನು ನಡೆಸುತ್ತಾರೆ. ಅಂತಹ ಜನರಿಗೆ ಉಪಯುಕ್ತವಾದ ಮಾಹಿತಿಯನ್ನು ಇಲ್ಲಿ ನಾವು ನೀಡುತ್ತೇವೆ.

 

ನಾವು ಸಾಲವನ್ನು ಪಡೆಯುವ ಸಂದರ್ಭದಲ್ಲಿ ಕೆಲವು ಸಾಲದಾತರು ಕ್ರೆಡಿಟ್‌ ರಿಪೋರ್ಟ್ ಅನ್ನು ನೋಡಿಕೊಳ್ಳುತ್ತಾರೆ. ಆದ್ದರಿಂದ ನಾವು ನಮ್ಮ ಕ್ರೆಡಿಟ್‌ ರಿಪೋರ್ಟ್ ಅನ್ನು ಸರಿಯಾಗಿ ಅಪ್‌ಗ್ರೇಡ್‌ ಮಾಡಿಕೊಳ್ಳವುದು, ಅಪ್‌ಗ್ರೇಡ್‌ ಆಗಿದೆಯೇ ಎಂದು ಖಾತರಿ ಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವಾಗ ಈ ಅಂಶಗಳನ್ನು ಮರೆಯದಿರಿ..ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವಾಗ ಈ ಅಂಶಗಳನ್ನು ಮರೆಯದಿರಿ..

ಆದರೆ ಸಾಮಾನ್ಯವಾಗಿ ಸಾಲದಾತರು ಕೆಲವು ಉದ್ದೇಶಗಳನ್ನು ಹೊರತುಪಡಿಸಿ, ಆಸ್ತಿಯ ವಿರುದ್ದದ ಸಾಲದ ಅಂತಿಮ ಬಳಕೆಗೆ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ. ಇದು ನಿಮ್ಮ ಆಸ್ತಿಯನ್ನು ಸದುಪಯೋಗ ಮಾಡಿಕೊಳ್ಳಲು ಹಾಗೂ ವೈಯಕ್ತಿಕ ಅಥವಾ ವ್ಯಾಪಾರಕ್ಕಾಗಿ ಅಧಿಕ ಸಾಲವನ್ನು ಪಡೆಯಲು ನಿಮಗೆ ಅನುಮತಿ ನೀಡುತ್ತದೆ. ನೀವು ಆಸ್ತಿಯ ಮೇಲೆ ಸಾಲವನ್ನು ಪಡೆಯಲು ಬಯಸಿದರೆ ನೀವು ಕೆಲವೊಂದು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅವು ಯಾವುದು ಹಾಗೂ ಆಸ್ತಿಯನ್ನು ಬಳಸಿಕೊಂಡು ಸಾಲವನ್ನು ಪಡೆಯುವುದ ಹೇಗೆ ಎಂದು ತಿಳಿಯಲು ಮುಂದೆ ಓದಿ.

 ಬಡ್ಡಿ ದರ ಹೇಗೆ ಬದಲಾಗುತ್ತದೆ?

ಬಡ್ಡಿ ದರ ಹೇಗೆ ಬದಲಾಗುತ್ತದೆ?

ಆಸ್ತಿಯ ಮೇಲೆ ಲಭಿಸುವ ಸಾಲದ ಬಡ್ಡಿ ದರವು ಬದಲಾವಣೆ ಆಗುತ್ತಿರುತ್ತದೆ. ಆಸ್ತಿಯ ಮೇಲೆ ಲಭಿಸುವ ಸಾಲದ ಬಡ್ಡಿ ದರವು ಸಾಮಾನ್ಯವಾಗಿ ಶೇಕಡ 6.90 ರಿಂದ 13.85 ಆಗಿರುತ್ತದೆ. ಇದು ಸಾಲದಾತರು, ಆಸ್ತಿ ಹಾಗೂ ಸಾಲ ಪಡೆಯುವ ವ್ಯಕ್ತಿಯ ಈ ಹಿಂದಿನ ಸಾಲದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಸಾಲದಾತರು ಸ್ವಯಂ ಉದ್ಯೋಗಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಆಸ್ತಿ ಮೇಲಿನ ಸಾಲವನ್ನು ನೀಡುತ್ತಾರೆ. ಬಡ್ಡಿ ದರವು ನಾವು ಸಾಲವನ್ನು ಎಷ್ಟು ಪಡೆಯುತ್ತೇವೆ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗೆಯೇ ಎಷ್ಟು ಅವಧಿಯಲ್ಲಿ ಸಾಲವನ್ನು ಮರುಪಾವತಿ ಮಾಡುತ್ತೇವೆ ಎಂಬುವುದರ ಮೇಲೆ ಅವಲಂಭಿತವಾಗಿರುತ್ತದೆ.

 ಮರುಪಾವತಿ ಅವಧಿ ಎಷ್ಟು?
 

ಮರುಪಾವತಿ ಅವಧಿ ಎಷ್ಟು?

ಹೆಚ್ಚಾಗಿ ಸಾಲದಾತರು ಆಸ್ತಿ ಮೇಲಿನ ಸಾಲದ ಮರು ಪಾವತಿ ಅವಧಿಯನ್ನು 15-20 ವರ್ಷಕ್ಕೆ ನಿಗದಿ ಮಾಡಿದ್ದಾರೆ. ಬೇರೆ ಎಲ್ಲಾ ಸಾಲಗಳಿಗೆ ಈ ಒಂದು ನಿಗದಿತವಾದ ನಿರ್ಬಂಧಗಳು ಇರುವುದಿಲ್ಲ. ಚಿನ್ನ, ವೈಯಕ್ತಿಕ ಮತ್ತು ಟಾಪ್-ಅಪ್ ಗೃಹ ಸಾಲಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ಟಾಪ್-ಅಪ್ ಗೃಹ ಸಾಲದ ಅವಧಿಯು ಸಾಮಾನ್ಯವಾಗಿ ಆಧಾರವಾಗಿರುವ ಗೃಹ ಸಾಲದ ಉಳಿದ ಅವಧಿಯವರೆಗೆ ಇರುತ್ತದೆ. ಗರಿಷ್ಠ ಮಿತಿ 15 ವರ್ಷಗಳವರೆಗೆ ಇರುತ್ತದೆ. ವೈಯಕ್ತಿಕ ಸಾಲದ ಅವಧಿ ಕೂಡ ಕಡಿಮೆ ಆಗಿರುತ್ತದೆ, ಹೆಚ್ಚಿನ ಸಾಲದಾತರಿಗೆ 1-5 ವರ್ಷಗಳು ಆಗಿರುತ್ತದೆ. ಕಡಿಮೆ ಅವಧಿಯ ಮರುಪಾವತಿ ಆದರೆ ನಾವು ಹೆಚ್ಚಿನ ಇಎಂಐ ಪಾವತಿಯನ್ನು ಮಾಡಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಬಡ್ಡಿ ದರವು ಕಡಿಮೆ ಆಗಿರುತ್ತದೆ. ಆದರೆ ಹೆಚ್ಚಿನ ಅವಧಿಯ ಮರುಪಾವತಿ ಇದ್ದರೆ, ಸಾಲ ಮರು ಪಾವತಿ ಮಾಡಬೇಕಾದ ಕಂತಿನ ಹಣವು ಕಡಿಮೆ ಆಗಿರುತ್ತದೆ. ಆದರೆ ಅದರಲ್ಲಿ ಬಡ್ಡಿ ದರವು ಅಧಿಕವಾಗಿರುತ್ತದೆ. ಆದ್ದರಿಂದ ನಿಮ್ಮ ಮರುಪಾವತಿಯನ್ನು ನಿರ್ಧಾರ ಮಾಡುವ ಸಂದರ್ಭ ಬಹಳ ಯೋಚಿಸಿ ನಿರ್ಧಾರ ಕೈಗೊಳ್ಳಿ. ನೀವು ಹೆಚ್ಚುವರಿ ಹಣವನ್ನು ಹೊಂದಿರುವಾಗ ಸಾಲವನ್ನು ಪೂರ್ವಪಾವತಿ ಮಾಡುವ ಮೂಲಕ ಒಟ್ಟಾರೆ ಬಡ್ಡಿ ವೆಚ್ಚವನ್ನು ಕಡಿಮೆ ಮಾಡಲು ನೀವು ಪ್ರಯತ್ನಿಸಬಹುದು.

ಎಲ್‌ಐಸಿ ಸರಳ ಪಿಂಚಣಿ 2021: ಹಿರಿಯ ನಾಗರಿಕ ಬಾಳಿಗೆ ಹೊಂಬೆಳಕುಎಲ್‌ಐಸಿ ಸರಳ ಪಿಂಚಣಿ 2021: ಹಿರಿಯ ನಾಗರಿಕ ಬಾಳಿಗೆ ಹೊಂಬೆಳಕು

 ಸಾಲದ ಮೊತ್ತ ಈ ಎಲ್ಲಾ ಅಂಶಗಳು ನೋಡುತ್ತಾರೆ

ಸಾಲದ ಮೊತ್ತ ಈ ಎಲ್ಲಾ ಅಂಶಗಳು ನೋಡುತ್ತಾರೆ

ಅರ್ಜಿದಾರರ ಮರುಪಾವತಿ ಸಾಮರ್ಥ್ಯ, ಆದಾಯ, ಇತ್ಯಾದಿಗಳನ್ನು ನೋಡಿಕೊಂಡು ಸಾಲದಾತರು ಸಾಮಾನ್ಯವಾಗಿ ಆಸ್ತಿಯ ಮಾರುಕಟ್ಟೆ ಮೌಲ್ಯದ 50 ಪ್ರತಿಶತ -70 ಪ್ರತಿಶತವನ್ನು ಸಾಲವಾಗಿ ನೀಡುತ್ತಾರೆ. ಹೆಚ್ಚುವರಿಯಾಗಿ, ಆಸ್ತಿಯ ಸ್ಥಳ ಮತ್ತು ವಯಸ್ಸು, ಸುತ್ತಮುತ್ತಲಿನ ಮೂಲಸೌಕರ್ಯ ಇತ್ಯಾದಿಗಳನ್ನು ಒಳಗೊಂಡಂತೆ ಇತರ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಮೌಲ್ಯಮಾಪನ ಮಾಡುವಾಗ ನೋಡಿಕೊಳ್ಳುತ್ತಾರೆ.

 ಆಸ್ತಿ ಮೇಲಿನ ಸಾಲದ ಪ್ರಕ್ರಿಯೆ ಅವಧಿ

ಆಸ್ತಿ ಮೇಲಿನ ಸಾಲದ ಪ್ರಕ್ರಿಯೆ ಅವಧಿ

ನಿಮಗೆ ಸಾಲವನ್ನು ನೀಡುವ ಮುನ್ನ ಸಾಲದಾತರು ನಿಮ್ಮ ಎಲ್ಲಾ ಆಸ್ತಿ ಸಂಬಂಧಿತ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ. ಹಾಗೆಯೇ ಈ ಆಸ್ತಿಯ ಮಾಲೀಕತ್ವ ಹಾಗೂ ಮಾರುಕಟ್ಟೆ ಮೌಲ್ಯವನ್ನು ನೋಡಲು ಸಾಲದಾತರು ಎಲ್ಲಾ ತಾಂತ್ರಿಕ ಪರಿಶೀಲನೆಯನ್ನು ಕೂಡಾ ಮಾಡುತ್ತಾರೆ. ಆದ್ದರಿಂದ ಆಸ್ತಿಯ ಮೇಲಿನ ಸಾಲವು ನಿಮಗೆ ಲಭಿಸಬೇಕಾದರೆ ಸುಮಾರು ಎರಡರಿಂದ ಮೂರು ವಾರಗಳ ಕಾಲ ಬೇಕಾಗುತ್ತದೆ. ಆದ್ದರಿಂದ ನೀವು ಆಸ್ತಿ ಮೇಲಿನ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಲ್ಲಿಸಬೇಕು ಹಾಗೂ ಆಸ್ತಿಯಲ್ಲಿ ಯಾವುದೇ ಕಾನೂನು ತೊಡಕುಗಳು ಇದ್ದರೂ ಅದನ್ನು ಸರಿ ಪಡಿಸಿಕೊಳ್ಳಬೇಕು. ಈ ಮೂಲಕವಾಗಿ ನಿಮಗೆ ಆಸ್ತಿ ಮೇಲಿನ ಸಾಲವು ಸ್ವಲ್ಪ ಶೀಘ್ರದಲ್ಲಿ ದೊರೆಯುವ ಸಾಧ್ಯತೆ ಇರುತ್ತದೆ.

ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಯ ಎಟಿಎಂ ಕಾರ್ಡ್, ಇಬ್ಯಾಂಕಿಂಗ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಯ ಎಟಿಎಂ ಕಾರ್ಡ್, ಇಬ್ಯಾಂಕಿಂಗ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

 ಪ್ರೋಸೆಸಿಂಗ್‌ ಫೀ ಎಷ್ಟು ಇರುತ್ತದೆ?

ಪ್ರೋಸೆಸಿಂಗ್‌ ಫೀ ಎಷ್ಟು ಇರುತ್ತದೆ?

ಹೆಚ್ಚಿನ ಸಾಲದಾತರು ನೀವು ಪಡೆಯುವ ಸಾಲದ ಸುಮಾರು ಒಂದು ಅಥವಾ ಎರಡು ಶೇಕಡದಷ್ಟು ಹಣವನ್ನು ಪ್ರೋಸೆಸಿಂಗ್‌ ಫೀ ಆಗಿ ಪಡೆಯುತ್ತಾರೆ. ಆದರೆ ಆಸ್ತಿ ಮೇಲಿನ ಸಾಲವು ಅತೀ ಹೆಚ್ಚಿನ ಸಾಲವಾಗಿರುವ ಕಾರಣ ಒಟ್ಟು ಸಾಲದ ಮೇಲೆ ಪ್ರೋಸೆಸಿಂಗ್‌ ಫೀ ಶೇಕಡಾಂಶವನ್ನು ಕೊಂಚ ಸಾಲದಾತರು ಕಡಿಮೆ ಮಾಡಬಹುದು. ಆದ್ದರಿಂದ ನೀವು ಆಸ್ತಿ ಮೇಲಿನ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಪ್ರೋಸೆಸಿಂಗ್‌ ಫೀ ಎಲ್ಲಿ ಎಷ್ಟಿದೆ ಎಂದು ನೋಡಿಕೊಂಡು ಸಾಲದಾತರನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಸಾಲದ ಮೊತ್ತದಲ್ಲಿ ಗಣನೀಯವಾದ ಬದಲಾವಣೆ ಆಗಬಹುದು.

 ಪೂರ್ವಪಾವತಿ ಶುಲ್ಕ ಎಷ್ಟು ಇರುತ್ತದೆ?

ಪೂರ್ವಪಾವತಿ ಶುಲ್ಕ ಎಷ್ಟು ಇರುತ್ತದೆ?

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಸಾಲದಾತರು ಬದಲಾಗುತ್ತಿರುವ ಬಡ್ಡಿ ದರದಲ್ಲಿ ವಿತರಿಸಲಾದ ಆಸ್ತಿ ಮೇಲಿನ ಸಾಲಕ್ಕೆ ಪೂರ್ವಪಾವತಿ ಶುಲ್ಕ ಅಥವಾ ದಂಡವನ್ನು ವಿಧಿಸುವುದನ್ನು ನಿರ್ಬಂಧಿಸಲಾಗಿದೆ. ಆದರೂ ಕೂಡಾ ಸಾಲದಾತರು ನಿಗದಿತ ಬಡ್ಡಿ ದರದಲ್ಲಿ ನೀಡುವ ಆಸ್ತಿ ಸಾಲದ ಮೇಲೆ ಪೂರ್ವಪಾವತಿ ಶುಲ್ಕವನ್ನು ವಿಧಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ನಿಗದಿತ ದರ ಆಸ್ತಿ ಮೇಲಿನ ಸಾಲ ಅನ್ನು ಪೂರ್ವಪಾವತಿ ಮಾಡುವುದರಿಂದ ಪೂರ್ವಪಾವತಿ ಶುಲ್ಕದ ಕಾರಣದಿಂದಾಗಿ ನಿಮಗೆ ಗಣನೀಯ ಮೊತ್ತ ತಗುಲಬಹುದು. ಬದಲಾಗಿ, ಸ್ಥಿರ ದರಗಳ ಮೇಲೆ ಬದಲಾಗುವ ದರದಲ್ಲಿ ಆಸ್ತಿ ಮೇಲಿನ ಸಾಲವನ್ನು ತೆಗೆದುಕೊಳ್ಳಿ. ಹಾಗೆಯೇ ನೀವು ಹೆಚ್ಚುವರಿ ಹಣವನ್ನು ಹೊಂದಿರುವ ಸಂದರ್ಭದಲ್ಲಿ ಹೆಚ್ಚು ಸಾಲವನ್ನು ಮರುಪಾವತಿ ಮಾಡಿಬಿಡಲು ಸಾಧ್ಯವಾಗುತ್ತದೆ.

ಮೊದಲು ನೀವು ಬ್ಯಾಂಕುಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳಲ್ಲಿ ಲಭ್ಯವಿರುವ ಆಯ್ಕೆಗಳನ್ನು ಪರಿಶೀಲನೆ ಮಾಡುವುದು ಅತೀ ಮುಖ್ಯವಾಗುತ್ತದೆ. ನಂತರ, ನಿಮ್ಮ ಮಾಸಿಕ ಆದಾಯ, ಕ್ರೆಡಿಟ್ ಸ್ಕೋರ್, ಉದ್ಯೋಗ ವಿವರ ಮತ್ತು ಇತರ ಸಾಲದ ಅರ್ಹತೆಯ ಮಾನದಂಡಗಳ ಆಧಾರದ ಮೇಲೆ ಇತರ ಸಾಲದ ಕೊಡುಗೆಗಳನ್ನು ಆನ್‌ಲೈನ್‌ ಮೂಲಕ ಹೋಲಿಕೆ ಮಾಡಿ ನೋಡಿಕೊಳ್ಳಿ.

English summary

How to leverage your property to raise a loan at low rates, Explained in Kannada

How to leverage your property to raise a loan at low rates, Explained in Kannada. To know more Read on.
Story first published: Friday, September 17, 2021, 22:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X