For Quick Alerts
ALLOW NOTIFICATIONS  
For Daily Alerts

ಸಣ್ಣ ಪ್ರಾಯದಲ್ಲೇ ಸಂಪತ್ತು ಗಳಿಕೆ ಆರಂಭಿಸುವುದಕ್ಕೆ 4 ಟಿಪ್ಸ್

|

ಆರ್ಥಿಕ ಶಿಸ್ತನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಶುರು ಮಾಡುವುದರಿಂದ ಅದೆಷ್ಟೋ ಲಾಭಗಳಿವೆ. ಮನೆಗಳಲ್ಲಿ ಕುಟುಂಬದ ಹಿರಿಯರು ಹೇಳುವುದು ಹಾಗೂ ಸಮಾಜದಲ್ಲಿ ಗಮನಕ್ಕೆ ಬರುವುದು ಇವೇ ಮಾತುಗಳು. ನೀವು ಸಣ್ಣ ಪ್ರಾಯದವರಾಗಿದ್ದರೆ ಆಗಿನಿಂದಲೇ ಉಳಿತಾಯ ಆರಂಭಿಸಿ ಎನ್ನುವುದು ಎಲ್ಲ ಕಡೆಯಿಂದಲೂ ಕೇಳಿಬರುವುದು ಅವೇ ಮುಖ್ಯ ಸಲಹೆ.

ಆದರೆ, ಬ್ಯಾಂಕ್ ನಲ್ಲಿ ಹಣ ಉಳಿತಾಯ ಮಾತ್ರ ಮಾಡಿದರೆ ಸಾಕಾ? ಅದೊಂದರಿಂದ ದೊಡ್ಡ ಸಹಾಯ ಆಗುವುದಿಲ್ಲ. ಆರ್ಥಿಕವಾಗಿ ಸ್ವತಂತ್ರವಾಗಬೇಕು ಎಂದಾದಲ್ಲಿ ಸಂಪತ್ತು ಸೃಷ್ಟಿಯ ಕಡೆಗೆ ಹೆಚ್ಚು ಗಮನ ನೀಡಬೇಕು. ಅದಕ್ಕಾಗಿ ದೀರ್ಘಾವಧಿಯಲ್ಲಿ ಆದಾಯ ತರುವುದು ಹೇಗೆ ಎಂದು ಆಲೋಚನೆ ಮಾಡಿಟ್ಟುಕೊಳ್ಳಿ.

100 ರುಪಾಯಿಯಿಂದ ಹೂಡಿಕೆ ಆರಂಭಿಸಬಹುದಾದ ಎಸ್ ಐಪಿ ಅನುಕೂಲಗಳೇನು?100 ರುಪಾಯಿಯಿಂದ ಹೂಡಿಕೆ ಆರಂಭಿಸಬಹುದಾದ ಎಸ್ ಐಪಿ ಅನುಕೂಲಗಳೇನು?

ಈ ಲೇಖನದ ಕೆಲವು ಅಂಶಗಳು ನಿಮಗೆ ಅನುಕೂಲ ಆಗಲಿವೆ. ಒಮ್ಮೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.

ನಿಮ್ಮ ಸಾಲವನ್ನು ಮೊದಲಿಗೆ ಪಾವತಿಸಿ

ನಿಮ್ಮ ಸಾಲವನ್ನು ಮೊದಲಿಗೆ ಪಾವತಿಸಿ

ಸಣ್ಣ ಪ್ರಾಯದಲ್ಲಿ, ಯೌವನದ ಆರಂಭದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ ಕಡಿಮೆ. ಸರಾಸರಿಯಾಗಿ ಸನ್ನಿವೇಶ ಹೀಗೇ ಇರುತ್ತದೆ. ಇಪ್ಪತ್ತರ ಹರೆಯದಲ್ಲಿ ಶಿಕ್ಷಣ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಸರಿಯಾಗಿ ಪಾವತಿಸಬೇಕು. ಹೀಗೆ ಮಾಡುವುದರಿಂದ ನಂತರದ ವರ್ಷಗಳಲ್ಲಿ ಬಡ್ಡಿಯ ಹೊರೆ ಕಡಿಮೆ ಆಗುತ್ತದೆ. ಸರಿಯಾದ ಹಣ ಪಾವತಿಯಿಂದ ಉತ್ತಮ ಕ್ರೆಡಿಟ್ ಸ್ಕೋರ್ ಕಟ್ಟುತ್ತಾ ಸಾಗಬಹುದು. ಭವಿಷ್ಯದಲ್ಲಿ ಗೃಹ ಸಾಲ ಪಡೆಯಬೇಕು ಎಂದಾಗ ಅನುಕೂಲ ಆಗಲಿದೆ. ಆರಂಭದ ಹಂತದಲ್ಲೇ ಆರ್ಥಿಕ ಸ್ಥಿತಿಯ ಮೇಲೆ ಹತೋಟಿ ಸಾಧಿಸುವುದರಿಂದ ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಹೂಡಿಕೆ ಮುಂದಕ್ಕೆ ಹಾಕಬೇಡಿ; ಸಣ್ಣದಾಗಿ ಆರಂಭಿಸಿ

ಹೂಡಿಕೆ ಮುಂದಕ್ಕೆ ಹಾಕಬೇಡಿ; ಸಣ್ಣದಾಗಿ ಆರಂಭಿಸಿ

ಹೊಸದಾಗಿ ಸಂಪಾದನೆ ಶುರುವಾದಾಗ ಈ ಹೂಡಿಕೆ ನಮಗೆ ಸಾಧ್ಯವಿಲ್ಲ ಅಂತಲೇ ಅನ್ನಿಸುತ್ತವೆ. ನಿರ್ದಿಷ್ಟ ಕಂಪೆನಿಯ ಷೇರು, ಚಿನ್ನ, ಮ್ಯೂಚುವಲ್ ಫಂಡ್...ಹೀಗೆ. ಆದರೆ ಅದು ನಿಜ ಅಲ್ಲ. ಮಾರ್ಕೆಟ್ ಗೆ ತಳುಕು ಹಾಕಿಕೊಂಡಿದ್ದರಲ್ಲಿ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಎಸ್ ಐಪಿಗಳಲ್ಲಿ ನೂರು ರುಪಾಯಿಯಿಂದಲೂ ಹೂಡಿಕೆ ಆರಂಭಿಸಬಹುದು. ಭವಿಷ್ಯಕ್ಕಾಗಿ ನೂರು ಅಥವಾ ಐನೂರು ರುಪಾಯಿ ಉಳಿಸುವುದಕ್ಕೆ ಕಷ್ಟವಲ್ಲ. ಇನ್ನು ಈ ಹಣವನ್ನು ತಜ್ಞರೇ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಾರೆ. ಎಲ್ಲ ರೀತಿಯಲ್ಲೂ ಅಳೆದು- ತೂಗಿ ನೋಡಿದ ನಂತರವೇ ಷೇರು ಖರೀದಿ ಮಾಡುತ್ತಾರೆ. ಒಂದು ವೇಳೆ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಚಿನ್ನದ ಇಟಿಎಫ್ ಪ್ರಯತ್ನಿಸಬಹುದು. ಡೆಟ್ ಗೆ ಸಂಬಂಧಿಸಿದ್ದಾದರೆ ಸರ್ಕಾರದ ಸಣ್ಣ ಉಳಿತಾಯ ಯೋಜನೆ ಆರಿಸಿಕೊಳ್ಳಬಹುದು. ಇಲ್ಲಿ ಹೂಡಿಕೆ ಆರಂಭಿಸುವುದು ಬಹಳ ಮುಖ್ಯ. ಅದೆಷ್ಟು ಸಣ್ಣ ಪ್ರಮಾಣದಲ್ಲಿಯಾದರೂ ಸರಿ.

ಹೂಡಿಕೆ ಬಗ್ಗೆ ಕಲಿತುಕೊಳ್ಳಿ

ಹೂಡಿಕೆ ಬಗ್ಗೆ ಕಲಿತುಕೊಳ್ಳಿ

ಎಲ್ಲೋ ಓದಿದ್ದು, ಯಾರೋ ಹೇಳಿದ್ದು ಕೇಳಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ. ಭಾರತದಲ್ಲಿ ಆರ್ಥಿಕತೆ ಅರಿವಿನ ಕೊರತೆ ಹೆಚ್ಚು. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಅದಕ್ಕೆ ಹೊಂದಿಕೊಂಡಂತೆ ಇರುವ ಅಪಾಯಗಳ ಬಗ್ಗೆ ತಿಳಿದುಕೊಳ್ಳಿ. ಈ ಅಪಾಯವನ್ನು ನಿರ್ವಹಿಸುವ ಬಗ್ಗೆಯೂ ತಿಳಿಸುಕೊಳ್ಳಿ. ವೃತ್ತಿಪರರಿಂದ ಸಲಹೆ ಪಡೆದುಕೊಳ್ಳಿ. ನೋಂದಾಯಿತಿ ಹೂಡಿಕೆ ಸಲಹೆಗಾರರಿದ್ದಾರೆ. ಅಂಥವರ ಮೂಲಕವಾಗಿ ಹಣವನ್ನು ಎಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಹಾಗೂ ಉತ್ತಮ ಎಂಬುದನ್ನು ಅರಿತುಕೊಳ್ಳಿ. ಆಯ್ಕೆಗಳನ್ನು ಅವರೇ ಹೇಳಿದರೂ ಅಂತಿಮ ನಿರ್ಧಾರವನ್ನು ಅಳೆದು- ತೂಗಿ ನೋಡಿ, ತೆಗೆದುಕೊಳ್ಳಿ.

ಎಲ್ಲೆಲ್ಲಿ ಅವಕಾಶಗಳಿವೆ ಎಂಬುದನ್ನು ನೋಡಿ, ದಾರಿ ಸೃಷ್ಟಿಸಿ

ಎಲ್ಲೆಲ್ಲಿ ಅವಕಾಶಗಳಿವೆ ಎಂಬುದನ್ನು ನೋಡಿ, ದಾರಿ ಸೃಷ್ಟಿಸಿ

ಯೌವನದ ದಿನಗಳಲ್ಲಿ ಹೊಸದನ್ನು ಕಲಿಯುವ ಸಾಮರ್ಥ್ಯ ಹಾಗೂ ಸಮಯ ಇರುತ್ತದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಅದರಲ್ಲಿ ತಜ್ಞರು ಅಥವಾ ಪರಿಣತರು ಅನ್ನಿಸಿಕೊಳ್ಳಬಹುದು. ಒಂದು ವೇಳೆ ನೀವು ಕಾರ್ಯ ನಿರ್ವಹಿಸುವ ಕ್ಷೇತ್ರಕ್ಕೆ ಉತ್ತಮ ಭವಿಷ್ಯ ಇಲ್ಲ ಎಂದಾದಲ್ಲಿ ಅದನ್ನು ಕೂಡ ಬದಲಿಸಿಕೊಳ್ಳಬಹುದು. ಆರಂಭದ ದಿನಗಳಲ್ಲೇ ಒಳ್ಳೆ ಸಂಬಳ ಬರುವ ಕೆಲಸಕ್ಕೆ ಸೇರುವುದು ಉತ್ತಮ. ಆ ನಂತರ ವಯಸ್ಸಾದ ಮೇಲೆ ಹೊಸ ಕೆಲಸಕ್ಕೆ ಸೇರಬೇಕು ಮತ್ತು ಹೊಸ ಜವಾಬ್ದಾರಿಗಳು ಎನ್ನುವುದಕ್ಕಿಂತ ಇದು ಉತ್ತಮ. ಯಾವಾಗ ಹೆಚ್ಚು ಸಂಪಾದಿಸುತ್ತೀರೋ ಆಗ ಹೆಚ್ಚು ಉಳಿತಾಯ ಹಾಗೂ ಹೆಚ್ಚು ಹೂಡಿಕೆ ಸಾಧ್ಯ.

ಈ ಲೇಖನದ ಮೂಲಕ ಮಾಹಿತಿ ನೀಡಲಾಗುತ್ತಿದೆಯೇ ವಿನಾ ಅಂತಿಮ ನಿರ್ಧಾರವನ್ನು ಓದುಗರೇ ತೆಗೆದುಕೊಳ್ಳಬೇಕು. ಈ ಮಾಹಿತಿ ಆಧಾರದಲ್ಲಿ ತೆಗೆದುಕೊಂಡು ಸ್ವಂತ ನಿರ್ಧಾರಗಳಿಂದ ಆಗುವ ನಷ್ಟಕ್ಕೆ ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೆ. ಲಿಮಿಟೆಡ್, ಲೇಖಕರು ಹೊಣೆ ಅಲ್ಲ.

English summary

Tips To Start Building Wealth At A Young Age in Kannada

Personal finance in Kannada: Here is the 4 tips to start wealth creation at young age.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X