For Quick Alerts
ALLOW NOTIFICATIONS  
For Daily Alerts

ದೀಪಾವಳಿ ಬೋನಸ್‌ಗಾಗಿ ಕಾತುರ: ಹಣದ ಸದ್ಬಳಕೆಗೆ ಇಲ್ಲಿದೆ ಟಿಪ್ಸ್‌

|

ದೀಪಾವಳಿ ಆಚರಣೆಗೆ ಎಲ್ಲೆಲ್ಲೂ ಈಗಲೇ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಹಬ್ಬ ಆಚರಣೆಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಬ್ಬಕ್ಕೆ ಯಾವ ಬಟ್ಟೆ ತೊಡುವುದು? ಎಂದು ಆಲೋಚನೆ ಮಾಡುತ್ತಿದ್ದರೆ, ಇನ್ನು ಕೆಲವರು ಈ ಕೊರೊನಾವೈರಸ್‌ ಸೋಂಕಿನ ನಡುವೆ ಹೇಗೆ ಹಬ್ಬ ಆಚರಣೆ ಮಾಡುವುದು? ಎಂಬ ಬಗ್ಗೆ ಚಿಂತಿಸುತ್ತಿದ್ದಾರೆ.

ಈ ನಡುವೆ ಕೆಲವರು ಹಬ್ಬಕ್ಕೂ ಮುನ್ನ ದೊರೆಯುವ ಬೋನಸ್‌ಗಾಗಿ ಕಾಯುತ್ತಿದ್ದಾರೆ. ಬೋನಸ್‌ ಬಂದ ಕೂಡಲೇ ಅದನ್ನು ಹೇಗೆ ಖರ್ಚು ಮಾಡುವುದು ಎಂದು ಈಗಲೇ ಲೆಕ್ಕ ಹಾಕಿಕೊಂಡಿದ್ದಾರೋ ಗೊ‌ತ್ತಿಲ್ಲ. ಬೋನಸ್‌ ಕೈಗೆ ಸಿಕ್ಕರೆ ಸಾಕಪ್ಪ ಎಂದು ಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಕೆಲವೊಂದು ಸಂಸ್ಥೆಗಳು ಬೋನಸ್‌ ಅನ್ನು ನೀಡದಿದ್ದರೆ, ಎಂಬ ಭಯ ಜನರಿಗೆ ಇದೆ ಹಾಗೂ ಅದು ಸಾಮಾನ್ಯ.

ಈ ಹಬ್ಬದ ಸೀಸನ್‌ನಲ್ಲಿ ಶಾಪಿಂಗ್‌ ಮಾಡುವ ಮುನ್ನ ಇದನ್ನು ಓದಿ..ಈ ಹಬ್ಬದ ಸೀಸನ್‌ನಲ್ಲಿ ಶಾಪಿಂಗ್‌ ಮಾಡುವ ಮುನ್ನ ಇದನ್ನು ಓದಿ..

ಆದರೆ ನೀವು ವರ್ಷ ಪೂರ್ತಿ ಕಷ್ಟಪಟ್ಟು ದುಡಿದ ಫಲವಾಗಿ ಈಗ ನಿಮಗೆ ಈ ವಾರ್ಷಿಕ ಬೋನಸ್‌ ಸಿಕ್ಕಿದರೆ ಏನು ಮಾಡುವುದು?. ಆ ಹಣ ಎಷ್ಟು ಹೆಚ್ಚೇ ಅಗಿರಲಿ ಅಥವಾ ಸಣ್ಣ ಪ್ರಮಾಣದ್ದೇ ಆಗಿರಲಿ, ಆದರೆ ಹಣವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುವುದರ ಮೇಲೆ ಸಫಲತೆ ಇರುತ್ತದೆ. ಈ ಬೋನಸ್‌ ಹಣವನ್ನು ನೀವು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?, ತಿಳಿಯಲು ಮುಂದೆ ಓದಿ.

 ಸಾಲವಿದ್ದರೆ ತೀರಿಸಿಬಿಡಿ, ಯಾಕೆ ಇನ್ನಷ್ಟು ತಲೆ ಬಿಸಿ..

ಸಾಲವಿದ್ದರೆ ತೀರಿಸಿಬಿಡಿ, ಯಾಕೆ ಇನ್ನಷ್ಟು ತಲೆ ಬಿಸಿ..

ನಾವು ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಯಾವುದಾದರೂ ಸಾಲವನ್ನು ಮಾಡಿರಬಹುದು. ಆದರೆ ಆ ಸಾಲವನ್ನು ತೀರಿಸಲು ಈಗ ನಿಮಗೆ ಸದವಾಕಾಶ ಬಂದಿದೆ. ಈ ದೀಪಾವಳಿಗೆ ದೊರೆಯುವ ಬೋನಸ್‌ ಮೂಲಕ ನೀವು ಸಾಧ್ಯವಾದಷ್ಟು ಸಾಲವನ್ನು ಸಂದಾಯ ಮಾಡಬಹುದು. ಸಾಲವಿದ್ದಷ್ಟು ಹೊರೆ, ಯಾಕೆ ಇನ್ನಷ್ಟು ತಲೆ ಬಿಸಿ? ಸಾಲ ತೀರಿಸಿ ಬಿಡಿ. ಇನ್ನು ನೀವು ಗೃಹ ಸಾಲದಂತಹ ಯಾವುದಾದರೂ ಇಎಂಐ ಸಂದಾಯದ ಸಾಲವನ್ನು ಪಡೆದಿದ್ದರೆ, ಈಗ ಬೋನಸ್‌ನ ಹಣವನ್ನು ಸಂದಾಯ ಮಾಡಿದರೆ, ನಿಮ್ಮ ಹೊರೆ ಕೊಂಚ ಸಡಿಲವಾದೀತು, ಅಲ್ಲವೇ?. ನಿಮ್ಮಲ್ಲಿ ಕ್ರೆಡಿಟ್‌ ಕಾರ್ಡ್ ಇದ್ದರೆ ಅದನ್ನು ಪಾವತಿಸಲು ಕೂಡಾ ಈ ಹಣವನ್ನು ಬಳಸಿಕೊಳ್ಳಬಹುದು ಅಥವಾ ಈ ಬೋನಸ್‌ ಸಣ್ಣ ಪ್ರಮಾಣದ್ದು ಆದರೆ ನೀವು ಅಂಗಡಿಗಳಲ್ಲಿ ಮಾಡಿದ ಸಾಲವನ್ನಾದರೂ ತೀರಿಸಬಹುದು.

 ಹೂಡಿಕೆ ಮಾಡಿ, ಭವಿಷ್ಯದ ಸುರಕ್ಷಿತಗೊಳಿಸಿ

ಹೂಡಿಕೆ ಮಾಡಿ, ಭವಿಷ್ಯದ ಸುರಕ್ಷಿತಗೊಳಿಸಿ

ನಿಮಗೆ ಬೋನಸ್‌ ದೊರೆತ ಬಳಿಕ ಅದರ ಸದುಪಯೋಗವನ್ನು ನೀವು ಮಾಡಲು ಇನ್ನೊಂದು ದಾರಿ ಇರುವುದು ಹೂಡಿಕೆ ಮಾಡುವುದು. ಹೌದು ಹೂಡಿಕೆಯು ನಿಮ್ಮ ಭವಿಷ್ಯಕ್ಕೆ ಸುರಕ್ಷತೆ. ನೀವು ಇಂದು ಮಾಡಿದ ಹೂಡಿಕೆ ಮುಂದೆ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಸಹಾಯವಾದೀತು. ಇನ್ನು ನೀವು ಆರ್ಥಿಕ ತಜ್ಞರ ಸಲಹೆಯನ್ನು ಪಡೆದು ಉತ್ತಮ ರಿಟರ್ನ್ ನೀಡುವ ಮ್ಯೂಚುವಲ್‌ ಫಂಡ್‌ ಅಥವಾ ಬೇರೆ ಕಡೆ ಹೂಡಿಕೆಯನ್ನು ಮಾಡಬಹುದು. ಆದರೆ ನೆನಪಿಡಿ ಹೂಡಿಕೆ ಮಾಡುವಾಗ ನೀವು ಆ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವುದು ಮುಖ್ಯ. ನೀವು ಸ್ಟಾಕ್‌ಗಳ ಮೇಲೆಯೂ ಹೂಡಿಕೆ ಮಾಡಬಹುದು. ಆದರೆ ಏನೇ ಆದರೂ ಈ ಹೂಡಿಕೆಯ ಬಗ್ಗೆ ನೀವು ಸರಿಯಾಗಿ ತಿಳಿಯುವುದು ಮುಖ್ಯ.

ಆಧಾರ್‌ ಹ್ಯಾಕಥಾನ್ 2021: ಬಹುಮಾನ ಗೆಲ್ಲಲು ನಿಮಗಿದೆ ಅವಕಾಶ, ರಿಜಿಸ್ಟರ್‌ ಮಾಡುವುದು ಹೇಗೆ?ಆಧಾರ್‌ ಹ್ಯಾಕಥಾನ್ 2021: ಬಹುಮಾನ ಗೆಲ್ಲಲು ನಿಮಗಿದೆ ಅವಕಾಶ, ರಿಜಿಸ್ಟರ್‌ ಮಾಡುವುದು ಹೇಗೆ?

 ಮನೆಗೆ ಅಗತ್ಯ ವಸ್ತು ಖರೀದಿಸಿ, ಬೋನಾಸ್‌ನ ಸದ್ಬಳಕೆ ಮಾಡಿ

ಮನೆಗೆ ಅಗತ್ಯ ವಸ್ತು ಖರೀದಿಸಿ, ಬೋನಾಸ್‌ನ ಸದ್ಬಳಕೆ ಮಾಡಿ

ಇನ್ನು ನೀವು ಮನೆಗೆ ಅಗತ್ಯವಾದ ವಸ್ತುವನ್ನು ಖರೀದಿ ಮಾಡುವ ಮೂಲಕವೂ ಕೂಡಾ ನಿಮ್ಮ ವಾರ್ಷಿಕ ಬೋನಸ್‌ನ ಸದ್ಬಳಕೆ ಮಾಡಬಹುದು. ಮನೆಯಲ್ಲಿ ಏನಾದರೂ ರಿಪೇರಿ ಕಾರ್ಯ ಆಗಬೇಕಿದ್ದರೆ ಅದಕ್ಕಾಗಿ ಕೂಡಾ ಈ ಬೋನಸ್‌ ಹಣವನ್ನು ಬಳಕೆ ಮಾಡಬಹುದು. ಮನೆಯಲ್ಲಿರುವ ಟಿವಿ ಹಳೆಯದಾಗಿದ್ದರೆ, ಹೊಸ ಟಿವಿಯನ್ನು ಖರೀದಿ ಮಾಡಬಹುದು. ಮನೆಗೆ ಬೇಕಾದ ಪೀಠೋಪಕರಣಗಳನ್ನು ಖರೀದಿ ಮಾಡಬಹುದು. ಅದೂ ಕೂಡಾ ಮುಖ್ಯವಾಗಿ ಈ ದೀಪಾವಳಿ ಸಂದರ್ಭದಲ್ಲಿ ನಿಮಗೆ ಈ ವಸ್ತುಗಳು ಕೊಂಚ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಹಲವಾರು ಅಂಗಡಿಗಳಲ್ಲಿ ಈಗಾಗಲೇ ದೀಪಾವಳಿ, ನವರಾತ್ರಿ ಆಫರ್‌ಗಳು ಇದೆ.

 ನಿಮ್ಮ ಕುಟುಂಬದ ಖುಷಿಗೆ ಕೊಂಚ ಖರ್ಚು ಮಾಡಿದರೆ, ತಪ್ಪೇನಿಲ್ಲ..

ನಿಮ್ಮ ಕುಟುಂಬದ ಖುಷಿಗೆ ಕೊಂಚ ಖರ್ಚು ಮಾಡಿದರೆ, ತಪ್ಪೇನಿಲ್ಲ..

ನಿಮಗೆ ಲಭಿಸುವ ಬೋನಸ್‌ಗೆ ನೀವು ಮಾತ್ರವಲ್ಲದೇ ನಿಮ್ಮ ಮನೆಯ ಎಲ್ಲರೂ ಕಾಯುತ್ತಿರಬಹುದು. "ಬೋನಸ್‌ ಬಂದರೆ ಅಪ್ಪ/ಅಮ್ಮ ಏನಾದರೂ ಕೊಡಿಸುತ್ತಾರೆ" ಎಂಬ ಸಂಭ್ರಮದಲ್ಲಿ ನಿಮ್ಮ ಮಕ್ಕಳು, ಬೋನಸ್‌ ಬಂದಾಗ ಎಲ್ಲಾದರೂ ಮಿನಿ ಟೂರ್‌ ಹೋಗಬೇಕು ಎಂಬ ಆಸೆಯಲ್ಲಿ ನಿಮ್ಮ ಕುಟುಂಬ ಇರಬಹುದು. ಹೀಗಾಗಿ ನೀವು ಕುಟುಂಬದ ಸಂತೋಷಕ್ಕೂ ಕೊಂಚ ಖರ್ಚು ಮಾಡಿದರೆ, ತಪ್ಪೇನಿಲ್ಲ ಬಿಡಿ. ವರ್ಷಕ್ಕೆ ಒಮ್ಮೆ ದೊರೆಯುವ ಈ ಬೋನಾಸ್‌ನಲ್ಲಿ ನೀವು ಮನೆಯಲ್ಲಿ ಸಣ್ಣ ಔತಣಕೂಟ ನಡೆಸಬಹುದು, ಕುಟುಂಬದೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗಬಹುದು. ಆದರೆ ಎಲ್ಲಾ ಹಣವನ್ನು ಇದಕ್ಕಾಗಿಯೇ ಖರ್ಚು ಮಾಡದೆ ಕೊಂಚ ಉಳಿತಾಯವು ಮಾಡಿದರೆ ಉತ್ತಮ.

 ಮುಂದಿನ ತಿಂಗಳ ಬಿಲ್‌ ಅನ್ನು ಈಗಲೇ ಪಾವತಿ ಮಾಡಿಬಿಡಿ

ಮುಂದಿನ ತಿಂಗಳ ಬಿಲ್‌ ಅನ್ನು ಈಗಲೇ ಪಾವತಿ ಮಾಡಿಬಿಡಿ

ನಿಮ್ಮ ಬೋನಸ್‌ ಅನ್ನು ನೀವು ನಿಮ್ಮ ಖರ್ಚು ವೆಚ್ಚವನ್ನು ಸರಿದೂಗಿಸಲು ಬಳಸಿಕೊಳ್ಳುತ್ತೀರಿ ಎಂದಾದರೆ ಅದಕ್ಕೆ ಒಳ್ಳೆಯ ಉಪಾಯವಿದೆ. ನೀವು ನಿಮ್ಮ ಮನೆಯ ಮುಂದಿನ ತಿಂಗಳ ಬಿಲ್‌ಗಳನ್ನು ಈಗಲೇ ಪಾವತಿ ಮಾಡಿಬಿಡಬಹುದು. ಇದರಿಂದಾಗಿ ನಿಮಗೆ ಮುಂದಿನ ತಿಂಗಳಲ್ಲಿ ಹೊರೆ ಕೊಂಚ ಕಡಿಮೆ ಆದೀತು. ನೀವು ಟಿವಿಯ ಕೇಬಲ್‌ ಬಿಲ್‌, ಇಂಟರ್‌ನೆಟ್‌ ಡೇಟಾ ಅನ್ನು ವಾರ್ಷಿಕವಾಗಿ ಈಗಲೇ ಬೋನಸ್‌ ಮೂಲಕ ಪಾವತಿ ಮಾಡಿದರೆ, ಬಳಿಕ ನಿಮಗೆ ತಿಂಗಳು ತಿಂಗಳು ಪಾವತಿ ಮಾಡಬೇಕಾದ ತಲೆ ಬಿಸಿ ಇರುವುದಿಲ್ಲ.

 ದಾನ ಮಾಡಿದರೆ ಮನಸ್ಸಿಗೂ ತೃಪ್ತಿ, ಇನ್ನೊಂದು ಕುಟುಂಬಕ್ಕೂ ಹರ್ಷ

ದಾನ ಮಾಡಿದರೆ ಮನಸ್ಸಿಗೂ ತೃಪ್ತಿ, ಇನ್ನೊಂದು ಕುಟುಂಬಕ್ಕೂ ಹರ್ಷ

ಬೋನಸ್‌ ಬಂದಾಗ ನಾವು ಅದನ್ನು ನಮ್ಮ ಸ್ವಂತ ಖರ್ಚಿಗೆ ಬಳಸುವ ಬದಲಾಗಿ ಕೊಂಚ ಬಡವರಿಗೆ ಸಹಾಯ ಮಾಡುವ ಬಗ್ಗೆಯೂ ಯೋಚನೆ ಮಾಡೋಣ ಬನ್ನಿ. ನಾವು ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ನಮಗೂ ಮನಸ್ಸಿಗೆ ತೃಪ್ತಿ, ಸಹಾಯ ಪಡೆದವರಿಗೂ ಸಂತೋಷ. ನಮ್ಮಿಂದ ಆದಷ್ಟು ಬಡವರಿಗೆ ಈ ಹಬ್ಬದ ಸಂದರ್ಭದಲ್ಲಿ ಸಹಾಯ ಮಾಡುವುದರಿಂದ ಹಬ್ಬದ ಸಂಭ್ರಮ ಇನ್ನಷ್ಟು ಅಧಿಕವಾಗುವುದು ಮಾತ್ರ ಖಂಡಿತ. ನೀವು ದುಂದು ವೆಚ್ಚ ಮಾಡುವ ಬದಲಾಗಿ ಈ ಹಬ್ಬದ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಿ. ಹಬ್ಬವನ್ನು ಬಡ ಜನರು ಸಂತೋಷದಿಂದ ಆಚರಣೆ ಮಾಡಲು ಸಹಾಯ ಮಾಡುವ ಮೂಲಕ ನಿಮ್ಮ ಸಂತಸವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ಇರುವ ಕೆಲವು ಸಾಮಾಗ್ರಿಗಳು ನಿಮಗೆ ಬೇಡ ಈ ಬೋನಸ್‌ನಲ್ಲಿ ಹೊಸದು ಖರೀದಿ ಮಾಡುವ ಅನಿಸಬಹುದು. ಆ ಸಾಮಾಗ್ರಿ ಬಳಕೆಗೆ ಯೋಗ್ಯವಾಗಿದ್ದರೆ, ಅಗತ್ಯವಿರುವವರಿಗೆ ನೀಡಿ. ನೀವು ಹೊಸದಾಗಿ ಖರೀದಿ ಮಾಡಿ ನೀಡಿದರೆ ಇನ್ನಷ್ಟು ಉತ್ತಮ.

English summary

Ideas To Utilize Your Deepavali Bonus Efficiently, Explained in Kannada

Ideas To Utilise Your Deepavali Bonus Efficiently, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X