For Quick Alerts
ALLOW NOTIFICATIONS  
For Daily Alerts

ಸೆಲೆಬ್ರಿಟಿಗಳ ಫೇವರೇಟ್ ಮುಂಬೈನ ಸಿದ್ದಿವಿನಾಯಕ ದೇವಾಲಯದ ಆದಾಯವೆಷ್ಟು?

|

ಮುಂಬೈನ ಸಿದ್ದಿವಿನಾಯಕ ದೇವಾಲಯವು ಸೆಲೆಬ್ರೆಟಿಗಳ ಅತೀ ನೆಚ್ಚಿನ ದೇವಾಲಯಗಳಲ್ಲಿ ಒಂದಾಗಿದೆ. 1801ರಲ್ಲಿ ಈ ದೇವಾಲಯ ನಿರ್ಮಾಣ ಕಾರ್ಯವನ್ನು ಆರಂಭ ಮಾಡಲಾಗಿದ್ದು, 1993ರಲ್ಲಿ ನಿರ್ಮಾಣ ಸಂಪೂರ್ಣವಾಗಿದೆ. ಪ್ರಸ್ತುತ ಈ ದೇವಾಲಯವು ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಸೆಲೆಬ್ರೆಟಿಗಳ ಫೇವರೇಟ್ ದೇವಾಲಯವಾಗಿದೆ.

 

ಅಷ್ಟು ಮಾತ್ರವಲ್ಲದೆ ದೇಶದ ಹತ್ತು ಅತೀ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಮುಂಬೈನ ಈ ಸಿದ್ದಿವಿನಾಯಕ ದೇವಾಲಯವು ಕೂಡಾ ಕಂಡುಬರುತ್ತದೆ. ಈ ದೇವಾಲಯಕ್ಕೆ ಸಾವಿರಾರು ಪ್ರವಾಸಿಗರು ಕೂಡಾ ಆಗಮಿಸುತ್ತಾರೆ. ದೇವಾಲಯದ ಅಭಿವೃದ್ಧಿಗೆ ಕೊಡುಗೆಯನ್ನು ಕೂಡಾ ನೀಡುವವರು ಕೂಡಾ ಇದ್ದಾರೆ.

ಇತ್ತೀಚೆಗೆ ಈ ದೇವಾಲಯಕ್ಕೆ ಸಲ್ಮಾನ್ ಖಾನ್, ಬಚ್ಚನ್ ಕುಟುಂಬ, ಸಂಜಯ್ ದತ್ತ್, ಏಕ್ತಾ ಕಪೂರ್, ದೀಪಿಕಾ ಪಡುಕೋಣೆ, ರಿತೇಶ್ ದೇಶ್‌ಮುಖ್, ಕಾರ್ತಿಕ್ ಆರ್ಯನ್, ಕಾಜೋಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭೇಟಿ ನೀಡಿದ್ದಾರೆ. ಇತ್ತೀಚೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕೂಡಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇಶದ ಅತೀ ಶ್ರೀಮಂತ ದೇವಾಲಯಗಳ ಪೈಕಿ ಒಂದಾಗಿರುವ ಸಿದ್ದಿವಿನಾಯಕ ದೇವಾಲಯದ ಆದಾಯವೆಷ್ಟು ಎಂದು ನಿಮಗೆ ತಿಳಿದಿದೆಯೇ?, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಶ್ರೀಮಂತ ದೇವಾಲಯಗಳಲ್ಲಿ ಒಂದು

ಶ್ರೀಮಂತ ದೇವಾಲಯಗಳಲ್ಲಿ ಒಂದು

ಭಾರತದ ಅತೀ ಶ್ರೀಮಂತ ದೇವಾಲಯಗಳಲ್ಲಿ ಮಾತ್ರವಲ್ಲ ವಿಶ್ವದ ಅತೀ ಶ್ರೀಮಂತ ದೇವಾಲಯಗಳಲ್ಲಿ ಕೂಡಾ ಮುಂಬೈನ ಸಿದ್ದಿವಿನಾಯಕ ದೇವಾಲಯವು ಒಂದಾಗಿದೆ. ಸಾಮಾನ್ಯವಾಗಿ ನಾವು ಶ್ರೀಮಂತ ದೇವಾಲಯವೆಂದಾಗ ಪದ್ಮನಾಭ ದೇವಾಲಯ, ತಿರುಮಲ ದೇವಾಲಯವ ಎಂದುಕೊಳ್ಳುತ್ತೇವೆ. ಆದರೆ ಮುಂಬೈನ ಸಿದ್ದಿವಿನಾಯಕ ದೇವಾಲಯವು ಕೂಡಾ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.

 ಸಿದ್ದಿವಿನಾಯಕ ದೇವಾಲಯದ ಆದಾಯ

ಸಿದ್ದಿವಿನಾಯಕ ದೇವಾಲಯದ ಆದಾಯ

ಗಣೇಶ ದೇವರ ದೇವಾಲಯವಾದ ಮಹಾರಾಷ್ಟ್ರದ ಮುಂಬೈನಲ್ಲಿರುವ ಸಿದ್ದಿವಿನಾಯಕ ದೇವಾಲಯವು ಅತೀ ಹೆಚ್ಚು ಕಾಣಿಕೆಯನ್ನು ಪಡೆಯುತ್ತದೆ. ಹೆಚ್ಚಾಗಿ ಶ್ರೀಮಂತರಾಗಿರುವ ಭಕ್ತರು ಈ ದೇವಾಲಯಕ್ಕೆ ದಾನ ರೂಪದಲ್ಲಿ ಧನ ಸಹಾಯವನ್ನು ಮಾಡುತ್ತಾರೆ. ಆದ್ದರಿಂದಾಗಿ ಈ ದೇವಾಲಯದ ಆದಾಯವು ಹೆಚ್ಚಾಗಿದೆ. ಇನ್ನು ಈ ದೇವಾಲಯವು ಸುಮಾರು ನಾಲ್ಕು ಕೆಜಿ ಬಂಗಾರದಿಂದ ಮಾಡಿರುವಂತಹ ದೇವಾಲಯವಾಗಿದೆ. ಈ ದೇವಾಲಯದ ನಿವ್ವಳ ಆದಾಯ 125 ಕೋಟಿ ರೂಪಾಯಿ ಆಗಿದೆ. ಪ್ರತಿ ದಿನ ದಾನದ ರೂಪದಲ್ಲಿ ಸುಮಾರು 30 ಲಕ್ಷ ರೂಪಾಯಿ ಆದಾಯವು ದೇವಾಲಯಕ್ಕೆ ಲಭ್ಯವಾಗುತ್ತದೆ.

 ದೇವಾಲಯದ ಎಂಟ್ರಿ ಫೀಸ್ ಎಷ್ಟಿದೆ?
 

ದೇವಾಲಯದ ಎಂಟ್ರಿ ಫೀಸ್ ಎಷ್ಟಿದೆ?

ಸಾಮಾನ್ಯ ಜನರಿಗೆ ಸಿದ್ದಿವಿನಾಯಕ ದೇವಾಲಯದಲ್ಲಿ ಯಾವುದೇ ಶುಲ್ಕವಿಲ್ಲ, ಉಚಿತ ಪ್ರವೇಶವಾಗಿದೆ. ನೀವು ವಿಶೇಷ ಕ್ಯೂನಲ್ಲಿ ನಿಂತು ಶೀಘ್ರವೇ ದೇವರ ದರ್ಶನವನ್ನು ಪಡೆಯಬೇಕಾದರೆ 50 ಸಾವಿರ ರೂಪಾಯಿ ಪಾವತಿಸಬಹುದು. ಎನ್‌ಆರ್‌ಐಗಳು ದರ್ಶನವನ್ನು ಪಡೆಯಲು http://www.siddhivinayak.org/bookyourdarshan.asp ಮೂಲಕ ಬುಕ್ ಮಾಡಬಹುದು. ಈ ದೇವಾಲಯಕ್ಕೆ ಕ್ಯಾಮೆರಾವನ್ನು ಕೊಂಡೊಯ್ಯಲು ಅವಕಾಶವಿಲ್ಲ. ನೀವು ಈ ಕ್ಯಾಮೆರಾವನ್ನು ಹತ್ತು ರೂಪಾಯಿ ನೀಡಿ ಹಾಗೂ ಲ್ಯಾಪ್‌ಟಾಪ್ ಅನ್ನು 50 ರೂಪಾಯಿ ನೀಡಿ ಲಾಕರ್‌ನಲ್ಲಿ ಇರಿಸಬಹುದು. ಮೊಬೈಲ್ ಫೋನ್ ಕೊಂಡೊಯ್ಯಬಹುದು, ಆದರೆ ಅದನ್ನು ಸೈಲೆಂಟ್ ಮೋಡ್‌ನಲ್ಲಿ ಇಡಬೇಕಾಗುತ್ತದೆ. ನಿಮ್ಮ ಚಪ್ಪಲಿಯನ್ನು ಇಡಲು ಕೂಡಾ ಇಲ್ಲಿ ಸ್ಥಳವಿದೆ. ಅದು ಉಚಿತವಾಗಿದೆ. ಆದರೆ ಅದಕ್ಕಾಗಿ ದೇವಾಲಯಕ್ಕೆ ಭೇಟಿ ನೀಡಿದವರು, ಸಿಬ್ಬಂದಿಗಳಿಗೆ 10-20 ರೂಪಾಯಿ ನೀಡುತ್ತಾರೆ.

 ದೇಶದ ಅತೀ ಶ್ರೀಮಂತ  ದೇವಾಲಯಗಳಿವು

ದೇಶದ ಅತೀ ಶ್ರೀಮಂತ ದೇವಾಲಯಗಳಿವು

ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯ (650 ಕೋಟಿ ರೂಪಾಯಿ), ಮೀನಾಕ್ಷಿ ದೇವಾಲಯ, ಮದುರೈ (ಆರು ಕೋಟಿ ರೂಪಾಯಿ), ಶಿರಡಿ ಸಾಯಿ ಬಾಬಾ ದೇವಾಲಯ, ಶಿರಡಿ (320 ಕೋಟಿ ರೂಪಾಯಿ), ಸಿದ್ಧಿವಿನಾಯಕ ದೇವಾಲಯ (125 ಕೋಟಿ ರೂಪಾಯಿ), ಸೋಮನಾಥ್ ದೇವಾಲಯ, ಗುಜರಾತ್ (90,000 ಮಿಲಿಯನ್ ರೂಪಾಯಿ), ಶ್ರೀ ಪದ್ಮನಾಭಸ್ವಾಮಿ ದೇವಾಲಯ, ತಿರುವನಂತಪುರಂ (500 ಕೋಟಿ ರೂಪಾಯಿ), ಜಗನ್ನಾಥ್ ದೇವಾಲಯ, ಪುರಿ (1.72 ಕೋಟಿ ರೂಪಾಯಿ), ಗೋಲ್ಡನ್ ಟೆಂಪಲ್, ಅಮೃತಸರ (130 ಕೋಟಿ ರೂಪಾಯಿ), ಶಬರಿಮಲೆ ಅಯ್ಯಪ್ಪ ದೇವಾಲಯ, ಕೇರಳ (500 ಕೋಟಿ ರೂಪಾಯಿ), ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ದೇಶದ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.

English summary

Income of Celebraties Favorite Place Siddhivinayak Temple, Details in Kannada

Siddhivinayak Temple, The temple of Lord Ganesha is one of the richest temples in India in terms of donations received and annual income. Income of Celebraties Favorite Place Siddhivinayak Temple, Details in Kannada.
Story first published: Wednesday, January 4, 2023, 16:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X