For Quick Alerts
ALLOW NOTIFICATIONS  
For Daily Alerts

Q3ಯಲ್ಲಿ ಹೊಸ ನೇಮಕಾತಿ ಪ್ರಮಾಣ ಕಡಿತ, ಕಾರಣವೇನು?

|

ಹಣದುಬ್ಬರ ಹೆಚ್ಚಳವಾಗುತ್ತಿದ್ದಂತೆ ಹಲವಾರು ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ವೆಚ್ಚವನ್ನು ಕಡಿತ ಮಾಡುವ ಪ್ರಯತ್ನವನ್ನು ಮಾಡುತ್ತಿದೆ. ಇನ್ನು ಕೆಲವು ಸಂಸ್ಥೆಗಳು ನಷ್ಟದಲ್ಲಿಯೂ ಇದೆ. ಅದರಿಂದಾಗಿ ಉದ್ಯೋಗಿಗಳ ಕಡಿತವನ್ನು ಮಾಡುತ್ತಿದೆ. ಪ್ರಮುಖವಾಗಿ ಟೆಕ್ ಸಂಸ್ಥೆಗಳು ಉದ್ಯೋಗ ಕಡಿತ ಮಾಡುತ್ತಿದೆ. ಟ್ವಿಟ್ಟರ್‌ನಿಂದ ಹಿಡಿದು ಎಚ್‌ಪಿವರೆಗೂ ಹಲವಾರು ಟೆಕ್ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಆದರೆ ಈ ನಡುವೆ ನೇಮಕಾತಿಯಲ್ಲಿ ಕೂಡಾ ಕಡಿತ ಮಾಡಿದೆ.

ಭಾರತದಲ್ಲಿ ಟಿಸಿಎಸ್‌ ಅಂದಾಜು ಲಾಭ ಕುಸಿತ, ಆದ್ರೆ 1.25 ಲಕ್ಷ ಉದ್ಯೋಗಿಗಳ ನೇಮಕಾತಿ ಘೋಷಣೆ!ಭಾರತದಲ್ಲಿ ಟಿಸಿಎಸ್‌ ಅಂದಾಜು ಲಾಭ ಕುಸಿತ, ಆದ್ರೆ 1.25 ಲಕ್ಷ ಉದ್ಯೋಗಿಗಳ ನೇಮಕಾತಿ ಘೋಷಣೆ!

ಹೌದು, ದೇಶದ ಐಟಿ ಸೇವಾ ಸಂಸ್ಥೆಗಳಾದ ಎಚ್‌ಸಿಎಲ್‌ ಟೆಕ್, ಟಿಸಿಎಸ್, ಇನ್ಫೋಸಿಸ್ ನೇಮಕಾತಿಯನ್ನು ಕಡಿತ ಮಾಡಿದೆ. ಹಣಕಾಸು ವರ್ಷ 2022-24ರ ಡಿಸೆಂಬರ್‌ನಲ್ಲಿ ಅಂತ್ಯವಾಗುವ ಮೂರನೇ ತ್ರೈಮಾಸಿಕದಲ್ಲಿ ಈ ಪ್ರಮುಖ ಸಂಸ್ಥೆಗಳು ಹೊಸ ನೇಮಕಾತಿಯನ್ನು ಕಡಿತಗೊಳಿಸಿದೆ. ಸಂಸ್ಥೆಗಳು ಇದಕ್ಕೆ ಬೇರೆ ಬೇರೆ ಕಾರಣಗಳನ್ನು ನೀಡಿದೆ.

ಸೆಪ್ಟೆಂಬರ್‌ನಲ್ಲಿ 16.82 ಲಕ್ಷ ಇಪಿಎಫ್‌ಒ ಚಂದಾದಾರಿಕೆ, ಇಲ್ಲಿದೆ ವಿವರಸೆಪ್ಟೆಂಬರ್‌ನಲ್ಲಿ 16.82 ಲಕ್ಷ ಇಪಿಎಫ್‌ಒ ಚಂದಾದಾರಿಕೆ, ಇಲ್ಲಿದೆ ವಿವರ

ಹಣಕಾಸು ವರ್ಷ 2023ರ Q3ಯಲ್ಲಿ ಟಿಸಿಎಸ್ 7000 ಮಂದಿಯನ್ನು ನೇಮಿಸಿದರೆ, ಅದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ 9840 ಮಂದಿಯ ನೇಮಕಾತಿ ಮಾಡಿದೆ. ಇನ್ಫೋಸಿಸ್ 2023ರ Q3ಯಲ್ಲಿ 6000 ಮಂದಿಯ ನೇಮಕಾತಿ ಮಾಡಿದ್ದರೆ, ಅದಕ್ಕೂ ಹಿಂದಿನ Q2ನಲ್ಲಿ 10,032 ಮಂದಿಯನ್ನು ನೇಮಿಸಿತ್ತು. ಎಚ್‌ಸಿಎಲ್‌ Q3 FY23ನಲ್ಲಿ 5892 ಮಂದಿಯನ್ನು ಹೊಸದಾಗಿ ನೇಮಿಸಿದ್ದರೆ, ಅದಕ್ಕೂ ಹಿಂದಿನ ತ್ರೈಮಾಸಿಕಕ್ಕಿಂತ 2500 ಕಡಿಮೆ ನೇಮಕಾತಿ ಮಾಡಲಾಗಿದೆ. ಆದರೆ ಇದಕ್ಕೆ ಮುಖ್ಯ ಕಾರಣವೇನೆಂದು ತಿಳಿಯೋಣ ಮುಂದೆ ಓದಿ...

 ಬೆನ್ಚ್ ಸೈಸ್ ಏರಿಕೆ, ಏನಿದು?

ಬೆನ್ಚ್ ಸೈಸ್ ಏರಿಕೆ, ಏನಿದು?

ಪ್ರಸ್ತುತ ಸಂಸ್ಥೆಗಳಲ್ಲಿ ಬೆನ್ಚ್‌ ಪ್ರಮಾಣ ಹೆಚ್ಚಾಗಿದೆ, ಆದ್ದರಿಂದಾಗಿ ನೇಮಕಾತಿ ಕಡಿಮೆ ಮಾಡಲಾಗುತ್ತಿದೆ. ಆದರೆ ಈ ಬೆನ್ಚ್‌ ಎಂದರೇನು ಎಂದು ನಿಮಗಿಸಬಹುದು. ವ್ಯವಹಾರಿಕ ಭಾಷೆಯಲ್ಲಿ ಈ ಬೆನ್ಚ್ ಎಂದರೆ, ಸಂಸ್ಥೆಯಲ್ಲಿ ಯಾವುದೇ ವ್ಯಕ್ತಿಯು ಯೋಜನೆಯಲ್ಲಿ ಇಲ್ಲದಿರುವುದು, ಆದ್ದರಿಂದಾಗಿ ಯಾವುದೇ ಕಾರ್ಯನಿರ್ವಹಣೆ ಇಲ್ಲದಿರುವುದು, ಆದರೆ ಸಂಸ್ಥೆಯಿಂದ ವೇತನವನ್ನು ಪಡೆಯುತ್ತಿರುವುದು ಆಗಿದೆ. ಅಂದರೆ ಸಂಸ್ಥೆಯಲ್ಲಿ ಯೋಜನೆಗಳು ಅಥವಾ ಕೆಲಸ ಕಡಿಮೆಯಾಗಿರುವುದು, ಅದರಿಂದಾಗಿ ಎಲ್ಲರಿಗೂ ಹೆಚ್ಚಿನ ಕೆಲಸವಿಲ್ಲದೆ, ವೇತನ ಪಡೆಯುವುದು ಆಗಿದೆ. ಪ್ರಸ್ತುತ ಐಟಿ ಸಂಸ್ಥೆಗಳಲ್ಲಿ ಇಂತಹ ಉದ್ಯೋಗಿಗಳ ಪ್ರಮಾಣ ಹೆಚ್ಚಾಗಿದೆ. ಅದರಿಂದಾಗಿ ಸಂಸ್ಥೆಯು ಹೊಸ ಯೋಜನೆ ಲಭ್ಯವಾಗುವವರೆಗೂ ನೇಮಕಾತಿಯಲ್ಲಿ ನಿಯಂತ್ರಣ ಮಾಡುತ್ತಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಇಂತಹ ಉದ್ಯೋಗಿಗಳ ಪ್ರಮಾಣ ಹೆಚ್ಚಾಗಿದೆ. ಇನ್ಫೋಸಿಸ್‌ನಲ್ಲಿ ಕೇವಲ 81.7 ಶೇಕಡ ಉದ್ಯೋಗಿಗಳಿಂದ ಸಹಾಯವಾಗುತ್ತಿದೆ. ಉಳಿದವರುಗಳು ಬರೀ ಹೆಸರಿಗೆ ಕೆಲಸಕ್ಕೆ ಇದ್ದಾರೆ ಎನ್ನಬಹುದು.

 ಉದ್ಯೋಗಿಗಳ ಪ್ರಮಾಣ ಹೆಚ್ಚಳ

ಉದ್ಯೋಗಿಗಳ ಪ್ರಮಾಣ ಹೆಚ್ಚಳ

ಸಂಸ್ಥೆಯಲ್ಲಿ ಉದ್ಯೋಗಿಗಳ ಪ್ರಮಾಣ ಹೆಚ್ಚಳವಾಗಿರುವುದು ಕೂಡಾ ನೇಮಕಾತಿ ಕಡಿತ ಮಾಡಲು ಕಾರಣವಾಗಿದೆ. ಇದನ್ನು employee retention rate ಎಂದು ಕೂಡಾ ಕರೆಯಲಾಗುತ್ತದೆ. ಉದ್ಯೋಗಿಗಳ ಸ್ಥಿರ ಪ್ರಮಾಣ ಹೆಚ್ಚಾದಂತೆ ಸಂಸ್ಥೆಗಳು ನೇಮಕಾತಿಯನ್ನು ಕಡಿತಗೊಳಿಸುತ್ತಿದೆ. employee retention rate ಎಂದರೆ, ಒಂದು ನಿರ್ದಿಷ್ಟ ಅವಧಿಯಿಂದ ಇನ್ನೊಂದು ನಿರ್ದಿಷ್ಟ ಅವಧಿಯವರೆಗೆ ಸಂಸ್ಥೆಯಲ್ಲೇ ಉಳಿದಿರುವುದು ಆಗಿದೆ. ಈ ಪ್ರಮಾಣವು ಹೆಚ್ಚಳವಾದಂತೆ ಹೊಸ ನೇಮಕಾತಿಯನ್ನು ಸಂಸ್ಥೆಯು ಕಡಿಮೆ ಮಾಡುತ್ತಿದೆ. ಎಚ್‌ಸಿಎಲ್ ಟೆಕ್ ಮುಖ್ಯ ಅಧಿಕಾರಿ ಪ್ರಕಾರ, "ಎಚ್‌ಸಿಎಲ್‌ನಲ್ಲಿ ರೆಟೆಷನ್ ರೇಟ್ ಹೆಚ್ಚಳವಾಗಿದೆ. ಇದರಿಂದಾಗಿ ಹೊಸ ನೇಮಕಾತಿಯನ್ನು ಕಡಿತ ಮಾಡಲಾಗಿದೆ," ಎಂದು ತಿಳಿಸಿದ್ದಾರೆ.

 ಉದ್ಯೋಗ ತೊರೆಯುವವರ ಸಂಖ್ಯೆ ಇಳಿಕೆ

ಉದ್ಯೋಗ ತೊರೆಯುವವರ ಸಂಖ್ಯೆ ಇಳಿಕೆ

ಸಾಮಾನ್ಯವಾಗಿ ಒಂದು ಸಂಸ್ಥೆಯಲ್ಲಿ ನೇಮಕಾತಿಗೆ ಹಲವಾರು ಮಾನದಂಡಗಳಿದೆ. ಸಂಸ್ಥೆಯಲ್ಲಿ ಯಾವುದೇ ಕಾರ್ಯವಿಲ್ಲದೆ ವೇತನ ಪಡೆಯುವವರ ಪ್ರಮಾಣ, ಸಂಸ್ಥೆಯಲ್ಲಿಯೇ ಉಳಿದಿರುವ ಉದ್ಯೋಗಿಗಳ ಪ್ರಮಾಣ, ಸಂಸ್ಥೆಯನ್ನು ತೊರೆಯುವ ಉದ್ಯೋಗಿಗಳ ಪ್ರಮಾಣವನ್ನು ನೋಡಿಕೊಂಡು ಹೊಸ ನೇಮಕಾತಿಯನ್ನು ಮಾಡಲಾಗುತ್ತದೆ. ಸಂಸ್ಥೆಯಲ್ಲಿ ಯಾವುದೇ ಕಾರ್ಯವಿಲ್ಲದೆ ವೇತನ ಪಡೆಯುವವರ ಪ್ರಮಾಣ ಹೆಚ್ಚಾದಂತೆ ಹೊಸ ನೇಮಕಾತಿ ಕಡಿತವಾಗುತ್ತದೆ, ಸಂಸ್ಥೆಯಲ್ಲಿಯೇ ಉಳಿದಿರುವ ಉದ್ಯೋಗಿಗಳ ಪ್ರಮಾಣ ಹೆಚ್ಚಾದಂತೆ ಹೊಸ ನೇಮಕಾತಿ ಕಡಿಮೆಯಾಗುತ್ತದೆ. ಹಾಗೆಯೇ ಸಂಸ್ಥೆಯನ್ನು ತೊರೆಯುವವರ ಸಂಖ್ಯೆಯು ಇಳಿಕೆಯಾದಂತೆ ಹೊಸ ನೇಮಕಾತಿ ಕಡಿಮೆಯಾಗುತ್ತದೆ. ಕಳೆದ ಕೆಲವು ತ್ರೈಮಾಸಿಕಗಳಿಂದ ಸಂಸ್ಥೆಯನ್ನು ಉದ್ಯೋಗಿಗಳು ತಾವಾಗಿಯೇ ತೊರೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ನೋಡುವವರೇ ಹೆಚ್ಚಾಗಿದ್ದಾರೆ. ಈ ಹಿಂದೆ ಸಂಸ್ಥೆಗಳು ಯಾರು ಉದ್ಯೋಗವನ್ನು ತೊರೆಯುತ್ತಾರೋ ಅವರ ಸ್ಥಾನಕ್ಕೆ ಬೇರೆ ಉದ್ಯೋಗಿಯ ನೇಮಕಾತಿ ಮಾಡುತ್ತಿತ್ತು. ಆದರೆ ಸಂಸ್ಥೆಯನ್ನು ತೊರೆಯುವ ಉದ್ಯೋಗಿಗಳ ಪ್ರಮಾಣವೇ ಕಡಿಮೆಯಾದಾಗ ಹೊಸ ನೇಮಕಾತಿಗೆ ಅವಕಾಶವಿಲ್ಲದಂತಾಗಿದೆ.

English summary

Infosys, TCS, and HCL Tech reduced hiring in Q3 FY23, Here's Why

Leading Indian IT services companies, TCS, Infosys, and HCL Tech, have reduced hiring significantly in the December-ended quarter of FY 2022-23 as compared to the previous quarters. Here's Why.
Story first published: Tuesday, January 17, 2023, 14:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X