ಪ್ರತಿದಿನ 95 ರೂ ಹೂಡಿಕೆ ಮಾಡಿ 14 ಲಕ್ಷ ರೂ ಪಡೆಯಿರಿ!

ನಮ್ಮ ಮುಂದಿನ ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗದಂತೆ ನಾವು ಈಗಲೇ ತಯಾರಿ ನಡೆಸುವುದು ಮುಖ್ಯ. ನಾವು ಉದ್ಯೋಗ ಮಾಡಿ ಹಣ ಸಂಪಾದನೆ ಮಾಡುವಷ್ಟು ಸದೃಢರಾಗಿಲ್ಲದೆ ಇರುವಾಗ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವುದಕ್ಕಿಂತ ಮೊದಲೇ ಉಳಿತಾಯ ಮಾಡುವುದು ಉತ್ತಮವಲ್ಲವೇ? ಹಣ ಉಳಿತಾಯ ಮಾಡಲು ನಮ್ಮಲ್ಲಿ ಇರುವ ಉತ್ತಮ ಆಯ್ಕೆ ಹೂಡಿಕೆ.

ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಯಾವ ಹೂಡಿಕೆಯಿಂದ ಹೆಚ್ಚು ರಿಟರ್ನ್ ಪಡೆಯಲು ಸಾಧ್ಯ, ಯಾವ ಹೂಡಿಕೆಯಿಂದ ಮೆಚ್ಯೂರಿಟಿ ವೇಳೆ ಹೆಚ್ಚು ಹಣ ಪಡೆಯಲು ಸಾಧ್ಯ ಎಂದು ನೋಡಿಕೊಳ್ಳುತ್ತೇವೆ. ಆದರೆ ಸುರಕ್ಷತೆ ಎಷ್ಟಿದೆ ಎಂದು ಕೂಡಾ ನೋಡುತ್ತೇವೆ. ನಮಗೆ ಅಧಿಕ ರಿಟರ್ನ್ ಕೂಡಾ ಬೇಕು, ಸುರಕ್ಷತೆಯೂ ಇರಬೇಕು ಎಂದಾದಾಗ ಅದಕ್ಕೆ ಉತ್ತಮ ಆಯ್ಕೆ ಅಂಚೆ ಕಚೇರಿ ಯೋಜನೆ.

ಈ ಒಂದು ಅಂಚೆ ಕಚೇರಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ಹೆಚ್ಚು ಲಾಭವನ್ನು ಪಡೆಯಬಹುದು ಹಾಗೂ ಮೆಚ್ಯೂರಿಟಿ ವೇಳೆ ಅಧಿಕ ಮೊತ್ತವನ್ನು ಗಳಿಸಬಹುದು. ಪ್ರತಿ ದಿನ 95 ರೂಪಾಯಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 10 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 ಯೋಜನೆ ಬಗ್ಗೆ ಮಾಹಿತಿ

ಯೋಜನೆ ಬಗ್ಗೆ ಮಾಹಿತಿ

ನೀವು ಹೆಚ್ಚು ಉಳಿತಾಯ ಮಾಡಲು ಬಯಸುವುದಾದರೆ ಅದಕ್ಕೆ ಉತ್ತಮ ಆಯ್ಕೆ ಸುಮಂಗಲ ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ 19 ವರ್ಷದಿಂದ 45 ವರ್ಷದ ಒಳಗಿನ ಭಾರತೀಯರು ಹೂಡಿಕೆ ಮಾಡಬಹುದು. ಹಾಗೆಯೇ ಈ ಯೋಜನೆಯಲ್ಲಿ ನಾವು 10 ಲಕ್ಷ ರೂಪಾಯಿಯ ವಿಮಾ ಸೌಲಭ್ಯವನ್ನು ಕೂಡಾ ಪಡೆಯಬಹುದು. ವಿಮಾದಾದರು ಸಾವನ್ನಪ್ಪಿದರೆ ವಿಮಾದಾರರ ಕುಟುಂಬ ಸದಸ್ಯರಿಗೆ, ನಾಮಿನಿಗಳಿಗೆ ಅಥವಾ ಕಾನೂನುಬದ್ಧವಾದ ಹಕ್ಕುದಾರರಿಗೆ ಪಾಲಿಸಿಯ ಮೊತ್ತವನ್ನು ನೀಡಲಾಗುತ್ತದೆ.

 ಎರಡು ಮೆಚ್ಯೂರಿಟಿ ಆಯ್ಕೆಗಳು

ಎರಡು ಮೆಚ್ಯೂರಿಟಿ ಆಯ್ಕೆಗಳು

ಈ ಅಂಚೆ ಕಚೇರಿಯ ಉಳಿತಾಯ ಯೋಜನೆಯಲ್ಲಿ ಎರಡು ಮೆಚ್ಯೂರಿಟಿ ಆಯ್ಕೆಗಳು ಇದೆ. ಒಂದು 15 ವರ್ಷ ಮತ್ತೊಂದು 20 ವರ್ಷದ ಮೆಚ್ಯೂರಿಟಿ ಅವಧಿಯಾಗಿದೆ. ನೀವು ಈ ಎರಡರಲ್ಲಿ ಒಂದು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. 15 ವರ್ಷದ ಯೋಜನೆಯಲ್ಲಿ ನೀವು 6, 9 ಹಾಗೂ 12 ವರ್ಷದಲ್ಲಿ ಶೇಕಡ 20ರಷ್ಟು ಮೊತ್ತವನ್ನು ಹಿಂಪಡೆಯಬಹುದು. ಇನ್ನು 20 ವರ್ಷದ ಪಾಲಿಸಿಯಲ್ಲಿ ನೀವು 8, 12, 16 ವರ್ಷದಲ್ಲಿ ನೀವು ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವ ಆಯ್ಕೆ ಇದೆ. ಉಳಿದ ಶೇಕಡ 40ರಷ್ಟು ಮೆಚ್ಯೂರಿಟಿ ವೇಳೆ ಬೋನಸ್ ರೂಪದಲ್ಲಿ ಲಭ್ಯವಾಗಲಿದೆ.

 14 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ

14 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ

ನೀವು 20 ವರ್ಷ ಪ್ರಾಯದಲ್ಲಿ 20 ವರ್ಷಗಳ ಅವಧಿಗೆ ಸುಮಾರು 7 ಲಕ್ಷ ರೂಪಾಯಿಯ ಪಾಲಿಸಿಯನ್ನು ಖರೀದಿ ಮಾಡಿದರೆ ಪ್ರತಿ ದಿನ ಸುಮಾರು 95 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಅಂದರೆ ಒಂದು ತಿಂಗಳಿಗೆ 2850 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಒಂದು ವರ್ಷಕ್ಕೆ 17,100 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ನೀವು ನಿಮ್ಮ ಹಣವನ್ನು ಹಿಂದಕ್ಕೆ ಪಡೆಯುತ್ತೀರಿ. ಆದರೆ ಮೆಚ್ಯೂರಿಟಿ ವೇಳೆ 14 ಲಕ್ಷ ರೂಪಾಯಿ ಪಡೆಯಬಹುದು.

 ಹೂಡಿಕೆ ಲೆಕ್ಕಾಚಾರ ಹೀಗಿದೆ

ಹೂಡಿಕೆ ಲೆಕ್ಕಾಚಾರ ಹೀಗಿದೆ

ನೀವು ಈ ಹೂಡಿಕೆ ಆರಂಭಿಸಿದ 8ನೇ, 12ನೇ ಹಾಗೂ 16ನೇ ವರ್ಷದಲ್ಲಿ ಒಟ್ಟು ಮೊತ್ತದ ಶೇಕಡ 20ರಷ್ಟು ಮೊತ್ತವನ್ನು ಪಡೆಯಬಹುದು. ನಿಮ್ಮ 7 ಲಕ್ಷದ ಹೂಡಿಕೆಯಲ್ಲಿ ನೀವು 20ರಷ್ಟು ಎಂದರೆ 1.4 ಲಕ್ಷ ರೂಪಾಯಿಯನ್ನು ಪಡೆಯಬಹುದು. 20ನೇ ವರ್ಷಕ್ಕೆ ನೀವು 2.8 ಲಕ್ಷ ರೂಪಾಯಿಯನ್ನು ಪಡೆಯುತ್ತೀರಿ. ಅದಾದ ಬಳಿಕ ನೀವು ವಾರ್ಷಿಕ ಬೋನಸ್ ಆಗಿ ಪ್ರತಿ ದಿನಕ್ಕೆ ಸಾವಿರ ರೂಪಾಯಿಗೆ 48 ರೂಪಾಯಿ ಪಡಯುತ್ತೀರಿ. 20 ವರ್ಷಕ್ಕೆ ಈ ಮೊತ್ತ 6.72 ಲಕ್ಷ ರೂಪಾಯಿ ಆಗುತ್ತದೆ. ಅದರಿಂದಾಗಿ ಮೆಚ್ಯೂರಿಟಿ ವೇಳೆ ನೀವು 9.52 ಲಕ್ಷ ರೂಪಾಯಿ ಪಡೆಯುತ್ತೀರಿ. ಒಟ್ಟಾಗಿ ಈ ಯೋಜನೆಯಲ್ಲಿ ನೀವು 13.72 ಲಕ್ಷ ರೂಪಾಯಿ ಪಡೆಯಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+