For Quick Alerts
ALLOW NOTIFICATIONS  
For Daily Alerts

ಪೋಸ್ಟ್ ಆಫೀಸ್ ಸ್ಕೀಮ್: ನಿಮ್ಮ ಹಣ ಡಬಲ್ ಮಾಡುವ ಯೋಜನೆ

|

ಇವತ್ತಿನ ಯದ್ವಾತದ್ವಾ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಗಗನ ಕುಸುಮದಂತಾಗಿ ಹೋಗಿದೆ. ಬರುವ ಆದಾಯ ಸಂಪೂರ್ಣ ಖರ್ಚಾಗಿ ಹೋಗಿ ತರಿತಪಿಸುವವರೇ ಹೆಚ್ಚು. ಆದಾಯದಲ್ಲಿ ಒಂದಷ್ಟು ಉಳಿತಾಯ ಮಾಡಿದರೆ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಅಂಚೆ ಇಲಾಖೆಯಿಂದ ಇಂಥ ಕೆಲ ಮುಖ್ಯ ಸ್ಕೀಮ್‌ಗಳಿವೆ. ಅದರಲ್ಲಿ ಕಿಸಾನ್ ವಿಕಾಸ್ ಪತ್ರ ಒಂದು. ಇದು ಉಳಿತಾಯ ಸ್ಕೀಮ್ ಮಾತ್ರವಲ್ಲ ರಿಸ್ಕ್ ಇಲ್ಲದೇ ಹಣ ಹೂಡಿಕೆಗೆ ಒಳ್ಳೆಯ ಯೋಜನೆಯಾಗಿದೆ.

ಸರ್ಕಾರಿ ಪ್ರಾಯೋಕತ್ವವಾದ್ದರಿಂದ ಕಿಸಾನ್ ವಿಕಾಸ್ ಪತ್ರದ ವಿಶ್ವಾಸಾರ್ಹತೆ ಬಗ್ಗೆ ಸಂಶಯ ಬೇಡ. ಕಿಸಾನ್ ವಿಕಾಸ್ ಪತ್ರ ಮಾತ್ರವಲ್ಲ ಪೋಸ್ಟ್ ಆಫೀಸ್‌ನ ಹಲವಾರು ಸ್ಕೀಮ್‌ಗಳು ಇದೇ ಕಾರಣಕ್ಕೆ ಜನರನ್ನು ಸೆಳೆದಿವೆ. ಇದ್ದುದ್ದರಲ್ಲಿ ಹೆಚ್ಚು ಬಡ್ಡಿ ನೀಡುತ್ತವೆ.

ಪಿಎಂ ಕಿಸಾನ್ ಯೋಜನೆ ನಿಯಮ ಬದಲಾವಣೆ, ಹೊಸದೇನಿದೆ?ಪಿಎಂ ಕಿಸಾನ್ ಯೋಜನೆ ನಿಯಮ ಬದಲಾವಣೆ, ಹೊಸದೇನಿದೆ?

ಏನಿದು ಕಿಸಾನ್ ವಿಕಾಸ್ ಪತ್ರ ಯೋಜನೆ?

ಇದು 124 ತಿಂಗಳ ಅವಧಿಯದ್ದಾಗಿರುತ್ತದೆ. ಒಮ್ಮೆ ಹಣ ತೊಡಗಿಸಿದರೆ ಸಾಕು. ಕನಿಷ್ಠ 1 ಸಾವಿರ ರೂ ಗೆ ಕಿಸಾನ್ ವಿಕಾಸ್ ಪತ್ರ ಖರೀದಿಸಬಹುದು. ಗರಿಷ್ಠ ಮಿತಿ ಇಲ್ಲ. ಆಧಾರ್ ಕಾರ್ಡ್ ಅನ್ನು ಐಡಿಯಾಗಿ ನೀಡಬೇಕು. ಆದರೆ, 50 ಸಾವಿರ ರೂಗಿಂತ ಹೆಚ್ಚು ಮೊತ್ತದ ಕಿಸಾನ್ ವಿಕಾಸ್ ಪತ್ರ ಖರೀದಿಸಿದರೆ ಪಾನ್ ನಂಬರ್ ನಮೂದಿಸಬೇಕು.

10 ಲಕ್ಷ ರೂಗಿಂತ ಹೆಚ್ಚು ಹಣ ಹೂಡಿಕೆ ಮಾಡಿದರೆ ಐಟಿಆರ್, ಬ್ಯಾಂಕ್ ಸ್ಟೇಟ್ಮೆಂಟ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನೀವು ಎಷ್ಟೇ ಮೊತ್ತದ ಹಣವನ್ನು ಕಿಸಾನ್ ವಿಕಾಸ್ ಪತ್ರ ಯೋಜನೆಗೆ ತೊಡಗಿಸಿದರೂ 124 ತಿಂಗಳಿಗೆ, ಅಂದರೆ 10 ವರ್ಷ 4 ತಿಂಗಳ ಬಳಿಕ ಹಣ ದ್ವಿಗುಣಗೊಂಡು ನಿಮ್ಮ ಕೈ ಸೇರುತ್ತದೆ.

MICR Code of bank: ಎಂಐಸಿಆರ್ ಕೋಡ್ ಎಂದರೇನು, ಅದನ್ನು ಪತ್ತೆಹಚ್ಚುವುದು ಹೇಗೆ?MICR Code of bank: ಎಂಐಸಿಆರ್ ಕೋಡ್ ಎಂದರೇನು, ಅದನ್ನು ಪತ್ತೆಹಚ್ಚುವುದು ಹೇಗೆ?

ಮೊದಲಿಗೆ ಈ ಯೋಜನೆಯನ್ನು ರೈತರಿಗೆಂದು ಮಾಡಲಾಗಿತ್ತು. ಇದೀಗ ಎಲ್ಲರಿಗೂ ಇದನ್ನು ಮುಕ್ತಗೊಳಿಸಲಾಗಿದೆ.

ಪೋಸ್ಟ್ ಆಫೀಸ್ ಸ್ಕೀಮ್: ನಿಮ್ಮ ಹಣ ಡಬಲ್ ಮಾಡುವ ಯೋಜನೆ

ಹೇಗೆ ಖರೀದಿಸುವುದು?

ಅಂಚೆ ಕಚೇರಿಯಲ್ಲಿ ನೀವು ಕೆವಿಪಿಯನ್ನು ಖರೀದಿಸಬಹುದು. ಪೋಸ್ಟ್ ಆಫೀಸ್ ವೆಬ್‌ಸೈಟ್‌ಗೆ ಹೋದರೆ ಅಲ್ಲಿ ಸಿಗುವ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬಹುದು.

18 ವರ್ಷ ಮೇಲ್ಪಟ್ಟವರು ಕಿಸಾನ್ ವಿಕಾಸ್ ಪತ್ರ ಪಡೆಯಬಹುದು. ಅಪ್ರಾಪ್ತರಾದರೆ ದೊಡ್ಡವರ ಮೂಲಕ ಅದನ್ನು ಖರೀದಿಸಬಹುದು. ಗಮನಾರ್ಹ ಅಂಶ ಎಂದರೆ ಹಿಂದೂ ಅವಿಭಕ್ತ ಕುಟುಂಬದವರು ಕಿಸಾನ್ ವಿಕಾಸ್ ಪತ್ರ ಪಡೆಯುವಂತಿಲ್ಲ. ಎನ್‌ಆರ್‌ಐಗಳಿಗೂ ಇದು ಲಭ್ಯ ಇರುವುದಿಲ್ಲ.

ಇಲ್ಲಿ ಕಿಸಾನ್ ವಿಕಾಸ್ ಪತ್ರಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ. ಇದರಲ್ಲಿ ಸಿಗುವ ಬಡ್ಡಿಗೆ ತೆರಿಗೆ ಕಡಿತ ಮಾಡಲಾಗುತ್ತದೆ. ಸ್ಕೀಮ್ 124 ತಿಂಗಳು ಇರುತ್ತದೆ. 30 ತಿಂಗಳ ಲಾಕ್-ಇನ್ ಅವಧಿ ಇರುತ್ತದೆ. ಈ ಅವಧಿಯ ಬಳಿಕ ನೀವು ಸ್ಕೀಮ್‌ನಲ್ಲಿ ತೊಡಗಿಸಿರುವ ಹಣವನ್ನು ಹಿಂಪಡೆಯಲು ಸಾಧ್ಯ ಇದೆ.

English summary

Kisan Vikas Patra (KVP) – Eligibility, Features, Interest Rates, Returns and Details in Kannada

Kisan Vikas Patra (KVP) plan will run for 124 months, or 10 years and 4 months. If you invest in this plan your lump sum investment will double in value after 10 years and 4 months.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X