For Quick Alerts
ALLOW NOTIFICATIONS  
For Daily Alerts

LIC Dhan Ratna Plan : ಎಲ್‌ಐಸಿ ಧನ ರತ್ನ ಯೋಜನೆ: ನೀವು ಹೂಡಿಕೆ ಮಾಡಬಹುದೇ?

|

ಎಲ್‌ಐಸಿ ಧನ ರತ್ನ ಯೋಜನೆಯು ನಾನ್‌ಲಿಂಕ್ಡ್ ಯೋಜನೆಯಾಗಿದೆ. ಹಾಗೆಯೇ ಇದು ನಮಗೆ ಉಳಿತಾಯ, ರಕ್ಷಣೆ ಎರಡಕ್ಕೂ ಸಹಕಾರಿಯಾದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಾವು ಜೀವ ವಿಮಾ ರಕ್ಷಣೆ ಪಡೆಯುವುದು ಮಾತ್ರವಲ್ಲದೇ ಮುಂದಿನ ಜೀವನಕ್ಕಾಗಿ ಉಳಿತಾಯವನ್ನು ಕೂಡಾ ಮಾಡಬಹುದು.

ಈ ಪಾಲಿಸಿಯು ಡೆತ್ ಬೆನಿಫಿಟ್ ಅನ್ನು ಕೂಡಾ ಹೊಂದಿದೆ. ಒಂದು ವೇಳೆ ಪಾಲಿಸಿದಾರರು ಪಾಲಿಸಿ ಚಾಲ್ತಿಯಲ್ಲಿ ಇರುವ ಸಂದರ್ಭದಲ್ಲಿ ಸಾವನ್ನಪ್ಪಿದರೆ ಪಾಲಿಸಿದಾರರ ಕುಟುಂಬಕ್ಕೆ ಹಣಕಾಸು ಸಹಾಯವನ್ನು ನೀಡಲಾಗುತ್ತದೆ. ಹಾಗೆಯೇ ಸರ್ವವೈಲ್ ಬೆನಿಫಿಟ್ ಕೂಡಾ ಇದೆ. ಪಾಲಿಸಿದಾರರು ಬದುಕಿರುವವರೆಗೂ ಸರ್ವವೈಲ್ ಬೆನಿಫಿಟ್ ಲಭ್ಯವಾಗಲಿದೆ.

 ಪ್ರತಿದಿನ 45 ರೂ. ಹೂಡಿಕೆ ಮಾಡಿ, 36000 ರೂ. ಗಳಿಸಿ! ಪ್ರತಿದಿನ 45 ರೂ. ಹೂಡಿಕೆ ಮಾಡಿ, 36000 ರೂ. ಗಳಿಸಿ!

ಈ ಪಾಲಿಸಿಯು ಬೆಸಿಕ್ ಮೊತ್ತ 5,00,000 ರೂಪಾಯಿ ಆಗಿದೆ. ಆದರೆ ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ. ಪಾಲಿಸಿ ಅವಧಿಯು ಮೂರು ರೀತಿಯಲ್ಲಿ ಇರಲಿದೆ. ಹಾಗಾದರೆ ಈ ಎಲ್‌ಐಸಿ ಧನ ರತ್ನ ಯೋಜನೆಯ ಪ್ರಮುಖ ಪ್ರಯೋಜನಗಳು ಏನು, ಯಾರು ಅರ್ಹರು, ನೀವು ಹೂಡಿಕೆ ಮಾಡಬಹುದೇ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ....

ಪಿಎಂ ರೋಜ್‌ಗಾರ್ ಯೋಜನೆ 2022: ಅರ್ಹತೆ, ಲಾಭ ಇತರೆ ಮಾಹಿತಿ ಇಲ್ಲಿದೆಪಿಎಂ ರೋಜ್‌ಗಾರ್ ಯೋಜನೆ 2022: ಅರ್ಹತೆ, ಲಾಭ ಇತರೆ ಮಾಹಿತಿ ಇಲ್ಲಿದೆ

 ಯೋಜನೆಯ ಲಾಭ ಪಡೆಯಲು ಯಾರು ಅರ್ಹರು?

ಯೋಜನೆಯ ಲಾಭ ಪಡೆಯಲು ಯಾರು ಅರ್ಹರು?

ಎಲ್‌ಐಸಿ ಧನ ರತ್ನ ಯೋಜನೆಯಲ್ಲಿ ಕನಿಷ್ಠ ಮೊತ್ತ 5,00,000 ರೂಪಾಯಿ ಆಗಿದೆ. ಆದರೆ ಯಾವುದೇ ಗರಿಷ್ಠ ಮಿತಿ ಇಲ್ಲ. ಆದರೆ ಮೂಲ ವಿಮಾ ಪಾವತಿ ಮೊತ್ತ ರೂ. 25,000 ಆಗಿದೆ. ಪಾಲಿಸಿಯ ಅವಧಿ ಮೂರು ವಿಭಾಗದಲ್ಲಿದೆ. ನಾವು 15 ವರ್ಷಗಳು, 20 ವರ್ಷಗಳು ಮತ್ತು 25 ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. 15 ವರ್ಷ ಅವಧಿಯ ವಿಮೆಗೆ 11 ವರ್ಷಕ್ಕೆ ಪ್ರಿಮಿಯಂ ಅನ್ನು ಪಾವತಿ ಮಾಡಿದರೆ, 20 ವರ್ಷದ ವಿಮೆಗೆ 16 ವರ್ಷಕ್ಕೆ ಪ್ರಿಮೀಯಂ ಪಾವತಿ ಮಾಡಲಾಗುತ್ತದೆ. 25 ವರ್ಷದ ವಿಮೆ 21 ವರ್ಷದ ವಿಮೆಯನ್ನು ಪಾವತಿ ಮಾಡಲಾಗುತ್ತದೆ.

ಈ ಯೋಜನೆಯನ್ನು ಪಡೆಯಲು ಕನಿಷ್ಠ ವಯಸ್ಸು 15 ವರ್ಷಗಳ ಪಾಲಿಸಿ ಅವಧಿಗೆ 5 ವರ್ಷ ಮತ್ತು 20 ಮತ್ತು 25 ವರ್ಷಗಳ ಪಾಲಿಸಿ ಅವಧಿಗೆ ಕನಿಷ್ಠ ವಯಸ್ಸು 90 ದಿನಗಳು ಆಗಿದೆ. ಯೋಜನೆಯ ಗರಿಷ್ಠ ವಯಸ್ಸು 15 ವರ್ಷಗಳ ಪಾಲಿಸಿ ಅವಧಿಗೆ 55 ವರ್ಷಗಳು, 20 ವರ್ಷಗಳ ಪಾಲಿಸಿ ಅವಧಿಗೆ 50 ವರ್ಷಗಳು, 25 ವರ್ಷಗಳ ಪಾಲಿಸಿ ಅವಧಿಗೆ 45 ವರ್ಷಗಳು ಆಗಿದೆ. ಮೆಚ್ಯೂರಿಟಿಯಲ್ಲಿ ಕನಿಷ್ಠ ವಯಸ್ಸು 15 ಮತ್ತು 20 ವರ್ಷಗಳ ಪಾಲಿಸಿ ಅವಧಿಗೆ 20 ವರ್ಷಗಳು, 25 ವರ್ಷಗಳ ಪಾಲಿಸಿ ಅವಧಿಗೆ 25 ವರ್ಷಗಳು ಆಗಿದೆ. ಮೆಚ್ಯೂರಿಟಿಯಲ್ಲಿ ಗರಿಷ್ಠ ವಯಸ್ಸು 70 ವರ್ಷಗಳು ಮತ್ತು 65 ವರ್ಷಗಳು ಆಗಿದೆ.

 ಡೆತ್ ಬೆನಿಫಿಟ್, ಮೆಚ್ಯೂರಿಟಿ ಬೆನಿಫಿಟ್

ಡೆತ್ ಬೆನಿಫಿಟ್, ಮೆಚ್ಯೂರಿಟಿ ಬೆನಿಫಿಟ್

ಪಾಲಿಸಿದಾರರು ಪಾಲಿಸಿ ಅವಧಿಯಲ್ಲಿ ಸಾವನ್ನಪ್ಪಿದರೆ ಡೆತ್ ಬೆನಿಫಿಟ್ ಅನ್ನು ಪಾಲಿಸಿದಾರರ ಕುಟುಂಬಸ್ಥರಿಗೆ ನೀಡಲಾಗುತ್ತದೆ. ಈ ಸಂರ್ದರ್ಭದಲ್ಲಿ ಸಾವಿನ ವಿಮಾ ಮೊತ್ತ ಮೂಲ ವಿಮಾ ಮೊತ್ತದ ಶೇಡಕ 125ರಷ್ಟು ಅಥವಾ ವಾರ್ಷಿಕ 7 ಪಟ್ಟು ಹೆಚ್ಚು ನೀಡಲಾಗುತ್ತದೆ. ಇನ್ನು ಈ ಡೆತ್ ಬೆನಿಫಿಟ್ ಸಾವಿನ ದಿನಾಂಕದವರೆಗೆ ಪಾವತಿ ಮಾಡಿದ ಒಟ್ಟು ಪ್ರೀಮಿಯಂಗಳ ಶೇಕಡ 105ಕ್ಕಿಂತ ಕಡಿಮೆ ಇರುವುದಿಲ್ಲ. ಅಪಾಯದ ಅವಧಿ ಎಂದು ಪರಿಗಣಿಸಲಾಗುವ ಸಮಯಕ್ಕೂ ಮುನ್ನ ಅಪ್ರಾಪ್ತ ಪಾಲಿಸಿದಾರರು ಸಾವನ್ನಪ್ಪಿದರೆ ಅವರಿಗೆ ಬಡ್ಡಿ ಇಲ್ಲದೆಯೇ ಪಾಲಿಸಿ ಮೊತ್ತವನ್ನು ಮಾತ್ರ ಮರುಪಾವತಿ ಮಾಡಲಾಗುತ್ತದೆ. ಇನ್ನು ಮೆಚ್ಯೂರಿಟಿ ಬಳಿಕ ಮೆಚ್ಯೂರಿಟಿ ಮೊತ್ತ, ಮೆಚ್ಯೂರಿಟಿ ಮೇಲಿನ ವಿಮಾ ಮೊತ್ತವನ್ನು ಪಾವತಿ ಮಾಡಲಾಗುತ್ತದೆ. ಇದು ಮೂಲ ವಿಮೆಯ ಶೇಖಡ 50ರಷ್ಟು ಇರಲಿದೆ.

 ಸರ್ವವೈಲ್ ಬೆನಿಫಿಟ್ ಏನಿದೆ?

ಸರ್ವವೈಲ್ ಬೆನಿಫಿಟ್ ಏನಿದೆ?

ಪಾಲಿಸಿದಾರರಿಗೆ ಸರ್ವವೈಲ್ ಬೆನಿಫಿಟ್ ಕೂಡಾ ಲಭ್ಯವಾಗಲಿದೆ. ಈ ಬಗ್ಗೆ ಈ ಕೆಳಗೆ ವಿವರವಿದೆ
* 15 ವರ್ಷದ ಅವಧಿ: 13ನೇ ಮತ್ತು 14ನೇ ಪಾಲಿಸಿ ವರ್ಷದ ಕೊನೆಯಲ್ಲಿ ಮೂಲ ವಿಮಾ ಮೊತ್ತದ ಶೇಕಡ 25ರಷ್ಟು ಪಾವತಿ ಮಾಡಲಾಗುತ್ತದೆ
* 20 ವರ್ಷದ ಅವಧಿ: 18ನೇ ಮತ್ತು 19ನೇ ಪಾಲಿಸಿ ವರ್ಷದ ಅಂತ್ಯದಲ್ಲಿ ಮೂಲ ವಿಮಾ ಮೊತ್ತದ ಶೇಕಡ 25ರಷ್ಟು ಪಾವತಿ ಮಾಡಲಾಗುತ್ತದೆ
* 25 ವರ್ಷದ ಅವಧಿ: 23ನೇ ಮತ್ತು 24ನೇ ಪಾಲಿಸಿ ವರ್ಷದ ಅಂತ್ಯದಲ್ಲಿ ಮೂಲ ವಿಮಾ ಮೊತ್ತದ ಶೇಕಡ 25ರಷ್ಟು ಪಾವತಿ ಮಾಡಲಾಗುತ್ತದೆ

 ಸೆಟಲ್‌ಮೆಂಟ್ ಆಯ್ಕೆ

ಸೆಟಲ್‌ಮೆಂಟ್ ಆಯ್ಕೆ

ಒಟ್ಟು ಮೊತ್ತದ ಬದಲಿಗೆ 5 ವರ್ಷಗಳ ಅವಧಿಯಲ್ಲಿ ಕಂತುಗಳಲ್ಲಿ ಮೆಚ್ಯೂರಿಟಿ ಬೆನಿಫಿಟ್ ಅನ್ನು ಪಡೆಯುವ ಆಯ್ಕೆಯನ್ನು ಸೆಟಲ್ಮೆಂಟ್ ಆಯ್ಕೆ ಎಂದು ಕರೆಯಲಾಗುತ್ತದೆ. ವಿಮಾದಾರರು ಅಪ್ರಾಪ್ತರಾಗಿದ್ದ ಸಂದರ್ಭ ಅಥವಾ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜೀವ ವಿಮಾದಾರರು ಪಾಲಿಸಿಯ ಅಡಿಯಲ್ಲಿ ಪಾವತಿಸಬೇಕಾದ ಪೂರ್ಣ ಅಥವಾ ಅರ್ಧ ಮೆಚ್ಯೂರಿಟಿ ಆದಾಯಕ್ಕಾಗಿ ಈ ಆಯ್ಕೆಯನ್ನು ಪಡೆಯಬಹುದು. ಈ ಬಗ್ಗೆ ಕೆಳಗಿದೆ ವಿವರ

* ಮಾಸಿಕ: 5,000 ರೂಪಾಯಿ
* ತ್ರೈಮಾಸಿಕ: 15,000 ರೂಪಾಯಿ
* ಅರ್ಧ-ವಾರ್ಷಿಕ: 25,000 ರೂಪಾಯಿ
* ವಾರ್ಷಿಕ: 50,000 ರೂಪಾಯಿ

English summary

LIC Dhan Ratna Life Insurance Plan: Benefits, Policy Term & Premium, Here's Details in kannada

LIC's Dhan Ratna plan is a non-linked, savings, life insurance plan which offers a combination of protection and savings.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X