For Quick Alerts
ALLOW NOTIFICATIONS  
For Daily Alerts

LIC Jeevan Labh: ಪ್ರತಿದಿನ 238 ರೂ. ಹೂಡಿಕೆ ಮಾಡಿ 54 ಲಕ್ಷ ರೂ. ಪಡೆಯುವುದು ಹೇಗೆ?

|

ನಾವು ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಸುರಕ್ಷಿತ ಹೂಡಿಕೆಗೆ ಹೆಚ್ಚು ಆದ್ಯತೆ ನೀಡುತ್ತೇವೆ ಹಾಗಿರುವಾಗ ಸುರಕ್ಷಿತ ಹೂಡಿಕೆಯಲ್ಲಿಯೇ ನಮಗೆ ಅಧಿಕ ಲಾಭ ಲಭಿಸಿದರೆ ಅದು ನಮ್ಮ ಗಮನ ಸೆಳೆಯದೆ ಇರುತ್ತದೆಯೇ?. ನೀವು ಪ್ರತಿದಿನ 238 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಸಂದರ್ಭದಲ್ಲಿ 54 ಲಕ್ಷ ರೂಪಾಯಿ ಪಡೆಯಲು ಅವಕಾಶ ನೀಡುವ ಯೋಜನೆಯ ಬಗ್ಗೆ ನಾವು ಇಲ್ಲಿ ವಿವರ ನೀಡುತ್ತೇವೆ.

ಎಲ್‌ಐಸಿಯು ನಮಗೆ ವಿಮಾ ಪಾಲಿಸಿ ಜೊತೆ ಉಳಿತಾಯ ಮಾಡುವ ಯೋಜನೆಯನ್ನು ನೀಡುತ್ತದೆ. ಇದು ನಿಯಮಿತ ಪ್ರೀಮಿಯಂ ಅನ್ನು ಹೊಂದಿರುವ ಯೋಜನೆಯಾಗಿದ್ದು, ನಾನ್‌ಲಿಂಕ್ಡ್ ಯೋಜನೆ ಇದಾಗಿದೆ. ಇದು ಲಾಭದೊಂದಿಗೆ ರಕ್ಷಣೆ ಮತ್ತು ಉಳಿತಾಯದ ಯೋಜನೆಯಾಗಿದೆ. ಇದರಲ್ಲಿ ಡೆತ್ ಬೆನಿಫಿಟ್ ಹಾಗೂ ಮೆಚ್ಯೂರಿಟಿ ಬೆನಿಫಿಟ್ ಎರಡೂ ಲಭ್ಯವಿದೆ.

LIC Dhan Ratna Plan : ಎಲ್‌ಐಸಿ ಧನ ರತ್ನ ಯೋಜನೆ: ನೀವು ಹೂಡಿಕೆ ಮಾಡಬಹುದೇ?LIC Dhan Ratna Plan : ಎಲ್‌ಐಸಿ ಧನ ರತ್ನ ಯೋಜನೆ: ನೀವು ಹೂಡಿಕೆ ಮಾಡಬಹುದೇ?

ಪಾಲಿಸಿದಾರರು ಮರಣ ಹೊಂದಿದ ಸಂದರ್ಭದಲ್ಲಿ ಈ ಯೋಜನೆಯಲ್ಲಿ ಪಾಲಿಸಿದಾರರ ಕುಟುಂಬಕ್ಕೆ ಡೆತ್ ಬೆನಿಫಿಟ್ ರೂಪದಲ್ಲಿ ಹಣವನ್ನು ನೀಡಲಾಗುತ್ತದೆ. ಮೆಚ್ಯೂರಿಟಿ ಅವಧಿಗೂ ಮುನ್ನವೇ ಪಾಲಿಸಿದಾರರು ಸಾವನ್ನಪ್ಪಿದರು ಈ ಪ್ರಯೋಜನ ಕುಟುಂಬಕ್ಕೆ ಲಭ್ಯವಾಗಲಿದೆ. ಇದು ಪಾಲಿಸಿದಾರರು ಮೆಚ್ಯೂರಿಟಿ ಅವಧಿಯವರೆಗೂ ಜೀವಂತವಾಗಿದ್ದರೆ, ಅವರಿಗೆ ಸರ್ವೈವಲ್ ಬೆನಿಫಿಟ್ ಅನ್ನು ನೀಡಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಈ ಪಾಲಿಸಿಯಲ್ಲಿ ಸಾಲ ಸೌಲಭ್ಯ ಕೂಡಾ ಇದೆ. ನಾವು ತೀರಾ ಹಣಕಾಸು ಅಗತ್ಯ ಸಂದರ್ಭದಲ್ಲಿ ಪಾಲಿಸಿ ಮೂಲಕ ಸಾಲವನ್ನು ಪಡೆಯಬಹುದು. ಈ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಡೆತ್ ಬೆನಿಫಿಟ್ ಏನಿದೆ ನೋಡಿ

ಡೆತ್ ಬೆನಿಫಿಟ್ ಏನಿದೆ ನೋಡಿ

ಪಾಲಿಸಿದಾರರು ಪಾಲಿಸಿ ಸಂದರ್ಭದಲ್ಲೇ ಸಾವನ್ನಪ್ಪಿದರೆ ಡೆತ್ ಬೆನಿಫಿಟ್ ಲಭ್ಯವಾಗಲಿದೆ. ಎಲ್ಲಾ ಬಾಕಿ ಪ್ರೀಮಿಯಂಗಳನ್ನು ಪಾವತಿಸಲಾಗುತ್ತದೆ. 'ಸಾವಿನ ವಿಮಾ ಮೊತ್ತ' ಎಂದು ಇದನ್ನು ಕರೆಯಲಾಗುತ್ತದೆ. ಸಿಂಪಲ್ ರಿವರ್ಷನರಿ ಬೋನಸ್‌, ಹೆಚ್ಚುವರಿ ಬೋನಸ್‌ಗಳು ಇದ್ದರೆ ಅದನ್ನು ಕೂಡಾ ಪಾವತಿ ಮಾಡಲಾಗುತ್ತದೆ.

 ಮೆಚ್ಯೂರಿಟಿ ಬೆನಿಫಿಟ್ ಏನಿದೆ?

ಮೆಚ್ಯೂರಿಟಿ ಬೆನಿಫಿಟ್ ಏನಿದೆ?

ಸಿಂಪಲ್ ರಿವರ್ಷನರಿ ಬೋನಸ್, ಅಂತಿಮವಾಗಿ ನೀಡುವ ಹೆಚ್ಚುವರಿ ಬೋನಸ್ ಮೂಲ ವಿಮಾ ಮೊತ್ತಕ್ಕೆ ಸಮನಾದ ಮೆಚ್ಯೂರಿಟಿಯ ಸಂದರ್ಭದಲ್ಲಿ ನೀಡಲಾಗುವ ಮೊತ್ತವಾಗಿದೆ. ಒಂದು ವೇಳೆ ಯಾವುದೇ ಬೋನಸ್‌ಗಳು ಮೆಚ್ಯೂರಿಟಿ ವೇಳೆ ಇದ್ದರೆ ಅದನ್ನು ಪಾವತಿ ಮಾಡಬೇಕಾಗುತ್ತದೆ. ಪಾಲಿಸಿದಾರರು ಮೆಚ್ಯೂರಿಟಿ ಅವಧಿಯವರೆಗೂ ಬದುಕಿದ್ದರೆ ಅವದು ಭಾರೀ ಮೊತ್ತವನ್ನು ಒಮ್ಮೆಯೇ ಪಡೆಯುವ ಅವಕಾಶವನ್ನು ಹೊಂದಿರುತ್ತದೆ. ಸುಮಾರು 54 ಲಕ್ಷ ರೂಪಾಯಿವರೆಗೆ ಹಣವನ್ನು ಪಡೆಯಲು ಸಾಧ್ಯವಾಗಲಿದೆ.

 ಪಾವತಿ ಆಯ್ಕೆಗಳು ಯಾವುದು?
 

ಪಾವತಿ ಆಯ್ಕೆಗಳು ಯಾವುದು?

ಮಾಸಿಕ ಕನಿಷ್ಠ ಹೂಡಿಕೆ ಮೊತ್ತ - 5000 ರೂಪಾಯಿ
ತ್ರೈಮಾಸಿಕ ಕನಿಷ್ಠ ಹೂಡಿಕೆ ಮೊತ್ತ - 15,000 ರೂಪಾಯಿ
ಅರ್ಧ ವಾರ್ಷಿಕ ಕನಿಷ್ಠ ಹೂಡಿಕೆ ಮೊತ್ತ - 25,000 ರೂಪಾಯಿ
ವಾರ್ಷಿಕ ಕನಿಷ್ಠ ಹೂಡಿಕೆ ಮೊತ್ತ - 50,000 ರೂಪಾಯಿ

 238 ರೂ. ಹೂಡಿಕೆ ಮಾಡಿ 54  ಲಕ್ಷ ರೂ. ಹೀಗೆ ಪಡೆಯಿರಿ

238 ರೂ. ಹೂಡಿಕೆ ಮಾಡಿ 54 ಲಕ್ಷ ರೂ. ಹೀಗೆ ಪಡೆಯಿರಿ

ಈ ನಡುವೆ ನೀವು ಈ ಯೋಜನೆಯಲ್ಲಿ 54 ಲಕ್ಷ ರೂಪಾಯಿ ಪಡೆಯುವುದು ಹೇಗೆ ಎಂಬ ಸಂಶಯ ನಿಮಗೆ ಉಂಟಾಗಿರಬಹುದು. ಈ ಬಗ್ಗೆ ನಾವಿಲ್ಲಿ ವಿವರ ನೀಡಿದ್ದೇವೆ. ನೀವು 25 ವರ್ಷ ವಯಸ್ಸಿನವರು ಎಂದುಕೊಳ್ಳಿ. ಹಾಗೆಯೇ 25 ವರ್ಷದ ಪ್ರೀಮಿಯಂ ಪೇಮೆಂಟ್ ಅವಧಿಯನ್ನು ಆಯ್ಕೆ ಮಾಡಿದ್ದೀರಿ ಎಂದುಕೊಳ್ಳಿ. ಈ ಸಂದರ್ಭದಲ್ಲಿ ನೀವು 20 ಲಕ್ಷ ರೂಪಾಯಿ ಮೂಲ ವಿಮಾ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿ ವರ್ಷ 86954 ರೂಪಾಯಿ (ಜಿಎಸ್‌ಟಿ ಇಲ್ಲದೆ) ಅಂದರೆ ಪ್ರತಿದಿನ 238 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಹಾಗಿರುವಾಗ ಒಟ್ಟು ಮೆಚ್ಯೂರಿಟಿ ಮೊತ್ತ 54.50 ಲಕ್ಷ ರೂಪಾಯಿ ಆಗಲಿದೆ. ನಿಮ್ಮ ಮೆಚ್ಯೂರಿಟಿ ಅವಧಿ 25 ವರ್ಷ ಆದ ಕಾರಣದಿಂದಾಗಿ ನಿಮಗೆ 50 ವರ್ಷ ಆಗುವ ಸಂದರ್ಭದಲ್ಲಿ 54.50 ಲಕ್ಷ ರೂಪಾಯಿ ಲಭ್ಯವಾಗಲಿದೆ.

English summary

LIC Jeevan Labh Scheme: Invest Rs 238 everyday to Get Rs 54 Lakh on Maturity

LIC Jeevan Labh Scheme: Invest Rs 238 everyday to get Rs 54 lakh on maturity.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X