For Quick Alerts
ALLOW NOTIFICATIONS  
For Daily Alerts

ಕಾಲ್‌ಸೆಂಟರ್‌ನಲ್ಲಿ 8,000 ಪಡೆಯುತ್ತಿದ್ದ ವ್ಯಕ್ತಿ ಈಗ 2,094 ಕೋಟಿ ರೂ ಒಡೆಯ!

|

ಕೆಲವು ವರ್ಷಗಳ ಹಿಂದೆ ಕಾಲ್‌ಸೆಂಟರ್‌ನಲ್ಲಿ 8 ಸಾವಿರ ರೂಪಾಯಿ ವೇತನಕ್ಕೆ ದುಡಿಯುತ್ತಿದ್ದ ವ್ಯಕ್ತಿಯೋರ್ವ ಈಗ ಬರೋಬ್ಬರಿ 2,094 ಕೋಟಿ ರೂಪಾಯಿ ಆದಾಯವುಳ್ಳ ಸಂಸ್ಥೆಯ ಒಡೆಯ ಎಂದು ಹೇಳಿದರೆ, ನಂಬಲು ಸಾಧ್ಯವೇ? ಹೌದು ಅಂತಹ ಸಾಹಸಕ್ಕೆ ಇಳಿದು ತನ್ನ ಆದಾಯವನ್ನು ಹೆಚ್ಚಿಸಿಕೊಂಡವರು ನಿತಿನ್ ಕಾಮತ್.

ಜೆರೋಧಾ ಪ್ರಸ್ತುತ ಅತೀ ದೊಡ್ಡ ಆನ್‌ಲೈನ್ ಬ್ರೋಕರೇಜ್ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಕೆಲವು ವರ್ಷಗಳ ಹಿಂದೆ 8 ಸಾವಿರ ರೂಪಾಯಿಗೆ ದುಡಿಯುತ್ತಿದ್ದ ನಿತಿನ್ ಕಾಮತ್ ಸ್ಥಾಪನೆ ಮಾಡಿದ್ದಾರೆ. ತನ್ನ ಸಹೋದರ ಹಾಗೂ ಇತರರೊಂದಿಗೆ ಸೇರಿ ಈ ಸಂಸ್ಥೆಯನ್ನು ನಿತಿನ್ ಕಾಮತ್ ಆರಂಭಿಸಿದ್ದಾರೆ. ಹಣಕಾಸು ವರ್ಷ 2022ರಲ್ಲಿ ಸಂಸ್ಥೆಯ ಒಟ್ಟು ಲಾಭವು 2,094 ಕೋಟಿ ರೂಪಾಯಿ ಆಗಿದೆ.

Pele Net Worth: ಕೊನೆಯುಸಿರೆಳೆಯುವುದಕ್ಕೂ ಮುನ್ನ ಪೀಲೆ ನಿವ್ವಳ ಆದಾಯ ಎಷ್ಟಿತ್ತು?Pele Net Worth: ಕೊನೆಯುಸಿರೆಳೆಯುವುದಕ್ಕೂ ಮುನ್ನ ಪೀಲೆ ನಿವ್ವಳ ಆದಾಯ ಎಷ್ಟಿತ್ತು?

ಹಾಗೆಯೇ ಸಂಸ್ಥೆಯ ಆದಾಯವು ಕೂಡಾ ಹೆಚ್ಚಳವಾಗಿ, 4964 ಕೋಟಿ ರೂಪಾಯಿಗೆ ತಲುಪಿದೆ. ಪ್ರಸ್ತುತ ಪ್ರತಿ ತಿಂಗಳು ನಿತಿನ್ ಕಾಮತ್ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಕಾಲ್‌ ಸೆಂಟರ್‌ನಲ್ಲಿ ದುಡಿಯುತ್ತಿದ್ದಾಗ ನಿತಿನ್ ಕಾಮತ್ ವೇತನ ಮಾಸಿಕವಾಗಿ 8 ಸಾವಿರ ರೂಪಾಯಿ ಆಗಿತ್ತು. ಜೆರೋಧಾ ಸಂಸ್ಥೆಯನ್ನು ಸ್ಥಾಪನೆ ಮಾಡಿದ ನಿತಿನ್ ಕಾಮತ್‌ರ ಬದುಕಿನ ಸ್ಪೂರ್ತಿದಾಯಕ ಕತೆಯನ್ನು ತಿಳಿಯಲು ಮುಂದೆ ಓದಿ....

 ಯೂನಿಕಾರ್ನ್ ಆದ ಸಂಸ್ಥೆ

ಯೂನಿಕಾರ್ನ್ ಆದ ಸಂಸ್ಥೆ

ಭಾರತದ ಯೂನಿಕಾರ್ನ್ ಸಂಸ್ಥೆಗಳಲ್ಲಿ ಜೆರೋಧಾ ಕೂಡಾ ಒಂದಾಗಿದೆ. ತಮ್ಮಲ್ಲೇ ಇದ್ದ ಸೌಲಭ್ಯಗಳನ್ನು, ವೈಯಕ್ತಿಕ ಉಳಿತಾಯವನ್ನು, ವೈಯಕ್ತಿಕವಾಗಿ ಬಳಕೆ ಮಾಡುತ್ತಿದ್ದ ತಂತ್ರಜ್ಞಾನವನ್ನು ಸಂಸ್ಥೆಗಾಗಿ ಮುಡಿಪಿಟ್ಟು ಬೆಳೆದ ಸಂಸ್ಥೆ ಜೆರೋಧಾ ಆಗಿದೆ. ಹಾಗೆಯೇ ಪ್ರಸ್ತುತ ಭಾರೀ ಲಾಭವನ್ನು ಪಡೆಯುತ್ತಿರುವ ಸಂಸ್ಥೆ ಎಂದರೆ ಕೂಡಾ ತಪ್ಪಾಗಲಾರದು. ನಿತಿನ್ ಕಾಮತ್ ತನ್ನ 17ನೇ ವಯಸ್ಸಿನಲ್ಲಿಯೇ ಸ್ಟಾಕ್ ಮಾರುಕಟ್ಟೆ ಹೂಡಿಕೆ ಆರಂಭಿಸಿದ್ದಾರೆ. ಆ ಸಂದರ್ಭದಲ್ಲಿ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. 2001ರಿಂದ 2005ರವರೆಗೆ ನಿತಿನ್ ಕಾಮತ್ ಕಾಲ್‌ಸೆಂಟರ್‌ನಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

 ನಿತಿನ್ ಕಾಮತ್‌ರ ಮೊದಲ ಕ್ಲೈಂಟ್

ನಿತಿನ್ ಕಾಮತ್‌ರ ಮೊದಲ ಕ್ಲೈಂಟ್

ನಿತಿನ್ ಕಾಮತ್ ತನ್ನ ಜಿಮ್‌ನಲ್ಲಿ ಎನ್‌ಆರ್‌ಐ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಆ ವ್ಯಕ್ತಿ ನಿತಿನ್ ಕಾಮತ್‌ ಏನು ಕಾರ್ಯ ಮಾಡುವುದು ಎಂದು ಕೇಳಿದ್ದಾರೆ. ಆಗ ನಿತಿನ್ ಕಾಮತ್ ತನ್ನ ಸ್ಟಾಕ್ ಮಾರುಕಟ್ಟೆ ಹೂಡಿಕೆಯ ಖಾತೆಯನ್ನು ತೋರಿಸಿದ್ದಾರೆ. ಇದರಿಂದ ಪ್ರಭಾವಿತರಾದ ಆ ಎನ್‌ಆರ್‌ಐ ವ್ಯಕ್ತಿ ಕಾಮತ್‌ಗೆ ತನ್ನ ಖಾತೆ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನೀಡಿದ್ದಾರೆ. ಇವರೇ ಕಾಮತ್‌ನ ಮೊದಲ ಕ್ಲೈಂಟ್ ಆಗಿದ್ದಾರೆ. ಇದಾದ ಬಳಿಕ ಕಾಮತ್ ತನ್ನ ಕಾಲ್‌ಸೆಂಟರ್ ಕೆಲಸವನ್ನು ತೊರೆದಿದ್ದಾರೆ.

 ಸಂಸ್ಥೆಯ ಆರಂಭ ಹೇಗೆ ಆಗಿದ್ದು?

ಸಂಸ್ಥೆಯ ಆರಂಭ ಹೇಗೆ ಆಗಿದ್ದು?

ನಿತಿನ್ ಕಾಮತ್ ಕಾಲ್‌ ಸೆಂಟರ್‌ನಲ್ಲಿನ ತನ್ನ ಕೆಲಸವನ್ನು ಬಿಟ್ಟ ಬಳಿಕ ಒಟ್ಟು ಸುಮಾರು 12 ಬ್ರೋಕರೇಜ್ ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅದಾದ ಬಳಿಕ ಈ ಸಂಸ್ಥೆಗಳು ಕಾಲಕ್ಕೆ ತಕ್ಕ ಬದಲಾಗುತ್ತಿಲ್ಲ ಎಂದು ನಿತಿನ್ ಕಾಮತ್‌ಗೆ ಅನಿಸಿದೆ. ಅದಾದ ಬಳಿಕ ಅವಕಾಶ ಸಿಕ್ಕಾಗ ನಿತಿನ್ ಕಾಮತ್ ಆನ್‌ಲೈನ್ ಬ್ರೋಕರೇಜ್ ಸಂಸ್ಥೆ ಜೆರೋಧಾವನ್ನು ಆರಂಭ ಮಾಡಿದ್ದಾರೆ. ಆ ಸಂದರ್ಭದಲ್ಲಿ ಎನ್‌ಎಸ್‌ಇ ತಮ್ಮ ಸದಸ್ಯರಿಗೆ ಉಚಿತ ಸಾಫ್ಟ್‌ವೇರ್ ನೀಡುತ್ತಿತ್ತು. ಈ ಸಂಸ್ಥೆಯನ್ನು ತನ್ನ ಸಹೋದರ, ಇತರೆ ಮಂದಿಯ ಸಹಾಯದಿಂದ ಆರಂಭ ಮಾಡಿದ್ದಾರೆ. ಒಂದು ವರ್ಷದ ಬಳಿಕ ಮೊದಲ 1000 ಗ್ರಾಹಕರು ಸಂಸ್ಥೆಗೆ ಆಗಮಿಸಿದ್ದಾರೆ. ಅದಾದ ಬಳಿಕ ಮಾಸಿಕವಾಗಿ 100ರಿಂದ 400ಕ್ಕೆ ಗ್ರಾಹಕರ ಸಂಖ್ಯೆ ಏರಿಕೆಯಾಗಿದೆ.

 ಫಂಡ್ ರೈಸ್ ಮಾಡಲು ನಿರ್ಧಾರ

ಫಂಡ್ ರೈಸ್ ಮಾಡಲು ನಿರ್ಧಾರ

2009ರಲ್ಲಿ ನಿತಿನ್ ಕಾಮತ್ ಫಂಡ್ ರೈಸ್ ಮಾಡಲು ಮುಂದಾಗಿದ್ದರು. ಆದರೆ ನಿತಿನ್ ಕಾಮತ್ ಸಂಸ್ಥೆಯ ಮೇಲೆ ನಂಬಿಕೆಯಿಲ್ಲ ಎಂಬ ಕಾರಣ ನೀಡಿ ಫಂಡ್ ರೈಸ್‌ಗೆ ಅವಕಾಶ ನೀಡಿಲ್ಲ. ಹಾಗೆಯೇ ನಿತಿನ್ ಕಾಮತ್ ವ್ಯಾಪಾರ ಕ್ಷೇತ್ರದವರು ಅಲ್ಲ ಎಂಬುವುದು ಕೂಡಾ ಕಾರಣವಾಗಿತ್ತು. ಹಾಗೆಯೇ ನಿತಿನ್ ಕಾಮತ್‌ರ ಶಿಕ್ಷಣ ಅರ್ಹತೆ ಕೂಡಾ ಅಡಿಯಾಯಿತು. ಆದರೂ ಈಗ ಸಂಸ್ಥೆಯು ಲಾಭವನ್ನು ಕಾಣುತ್ತಿದೆ. ಜೆರೋಧಾ ಬಳಕೆ ಮಾಡುವವರ ಸಂಖ್ಯೆ ಹೆಚ್ಚಳವಾದಂತೆ ಸಂಸ್ತೆಯ ಲಾಭ ಹೆಚ್ಚಾಗಿದೆ. ಈಕ್ವಿಟಿಗೆ ಯಾವುದೇ ಶುಲ್ಕವನ್ನು ಸಂಸ್ಥೆ ವಿಧಿಸಲ್ಲ. ಇತರೆ ಹೂಡಿಕೆಗೆ 20 ರೂಪಾಯಿ ಅಥವಾ ಶೇಕಡ 0.03 ಆಗಿದೆ. ಈ ಎರಡರಲ್ಲಿ ಯಾವುದು ಕಡಿಮೆಯೋ ಅದು ಶುಲ್ಕವಾಗಿದೆ.

English summary

Meet Nithin Kamath, call centre worker with 8k salary whose Zerodha made Rs 2,094 crore

Zerodha is one of the biggest online brokerage companies in the country. Meet Nithin Kamath, call centre worker with 8k salary whose Zerodha made Rs 2,094 crore; why doesn't he hire from IIMs?.
Story first published: Thursday, January 26, 2023, 11:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X