ಜುಲೈ ಒಂದರಿಂದ ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿ ಜಾರಿ ಆಗುವ ಎಲ್ಲಾ ಸಾಧ್ಯತೆ ಇದೆ. ಈ ನೀತಿ ಜಾರಿಯಾದ ಬಳಿಕ ಹಲವಾರು ವಲಯಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿದೆ. ನಮ್ಮ ಕೆಲಸದ ಅವಧಿಯೂ ಬದಲಾವಣೆಯಾಗಲಿದೆ.
ನಮ್ಮ ಕೆಲಸದ ಅವಧಿ, ಭವಿಷ್ಯ ನಿಧಿಯಿಂದ ಹಿಡಿದು ವೇತನ, ರಜೆವರೆಗೂ ಹಲವಾರು ಬದಲಾವಣೆಗಳು ಉಂಟಾಗಲಿದೆ. ಆದರೆ ಈ ಬಗ್ಗೆ ಇನ್ನೂ ಕೂಡಾ ಅಧಿಕೃತ ಸೂಚನೆ ಹೊರ ಬಿದ್ದಿಲ್ಲ. ಆದರೆ ಈ ನೀತಿಯಿಂದಾಗಿ ಸಂಬಳ, ಪಿಂಚಣಿ, ಗ್ರಾಚ್ಯುಟಿ, ಕಾರ್ಮಿಕ ರಕ್ಷಣೆ, ಆರೋಗ್ಯ, ಸುರಕ್ಷತೆಯಲ್ಲಿ ಹಲವಾರು ಬದಲಾವಣೆಗಳು ಉಂಟಾಗಲಿದೆ.
ಉತ್ತಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಅರುಣಾಚಲ ಪ್ರದೇಶ, ಹರಿಯಾಣ, ಜಾರ್ಖಂಡ್, ಪಂಜಾಬ್, ಮಣಿಪುರ, ಬಿಹಾರ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರವು ಈ ಹೊಸ ಕಾರ್ಮಿಕ ನೀತಿಯ ಅಡಿಯಲ್ಲಿ ನಿಯಮವನ್ನು ರೂಪಿಸಿದೆ. ಹಾಗಾದರೆ ಈ ಹೊಸ ನೀತಿ ಜಾರಿಗೆ ಬಂದರೆ ಏನೆಲ್ಲಾ ಬದಲಾವಣೆ ಆಗಲಿದೆ. ಇದರಿಂದ ಕಾರ್ಮಿಕರ ಮೇಲೆ ಏನು ಪರಿಣಾಮ ಉಂಟಾಗಲಿದೆ ಎಂದು ತಿಳಿಯಲು ಮುಂದೆ ಓದಿ..
ಕೆಲಸದ ಅವಧಿಯಲ್ಲಿ ಏನು ಬದಲಾವಣೆ?
ಎಲ್ಲಾ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಅವಧಿಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಫಾಕ್ಟರೀಸ್ ಆಕ್ಟ್ 1948 ಅಡಿಯಲ್ಲಿ ಪ್ರಸ್ತುತ ಕೆಲಸದ ಸಮಯವು ಆಧಾರಿತವಾಗಿದೆ. ಇದು ಕಚೇರಿ ಕೆಲಸಗಾರರು ಮತ್ತು ಇತರ ಉದ್ಯೋಗಿಗಳಿಗೆ ಪ್ರತಿ ರಾಜ್ಯದ ಕಾಯ್ದೆ ನಿಯಂತ್ರಿಸುತ್ತದೆ. ಹೊಸ ಕಾರ್ಮಿಕ ಕಾನೂನುಗಳ ಪ್ರಕಾರ, ದೈನಂದಿನ ಕೆಲಸದ ಸಮಯವನ್ನು 12 ಗಂಟೆಗಳಿಗೆ ಮಿತಿಗೊಳಿಸಲಾಗಿದೆ. ವಾರದ ಕೆಲಸದ ಸಮಯವನ್ನು 48 ಗಂಟೆ ಎಂದು ನಿಗದಿ ಮಾಡಲಾಗಿದೆ. ಇದರರ್ಥ ಕಂಪನಿಗಳು/ಕಾರ್ಖಾನೆಗಳು ಇದನ್ನು ನಾಲ್ಕು ದಿನಗಳಲ್ಲಿ ಕೆಲಸ ಮಾಡಿಸಬೇಕಾಗುತ್ತದೆ. ಓವರ್‌ಟೈಮ್ ಅನ್ನು 50 ಗಂಟೆಗಳಿಂದ 125 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆ ಕೈಗಾರಿಕೆ, ಕೆಲವೆಡೆ ಎಂಟು ಗಂಟೆಗಿಂತ ಅಧಿಕ ದುಡಿಮೆಯ ಅವಧಿಯು ಓವರ್ ಟೈಮ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ 12 ಗಂಟೆಗಳ ಅವಧಿಯನ್ನು ದುಡಿಮೆಯ ಅವಧಿ ಎಂದು ಪರಿಗಣಿಸಲಾಗುತ್ತದೆ.
ಸಂಬಳ ಹೆಚ್ಚಾಗುತ್ತಾ, ಕಡಿಮೆಯಾಗುತ್ತಾ?
ಹೊಸ ಕಾರ್ಮಿಕ ಕಾನೂನುಗಳ ಪ್ರಕಾರ ಉದ್ಯೋಗಿಯ ಮೂಲ ವೇತನವು ಒಟ್ಟು ವೇತನದ ಕನಿಷ್ಠ ಶೇಕಡ 50ರಷ್ಟು ಇರಬೇಕಾಗುತ್ತದೆ. ಇದರ ಕಾರಣದಿಂದಾಗಿ ನಿಮ್ಮ ಇಪಿಎಫ್‌ಗೆ ಕೊಡುಗೆ ಅಧಿಕವಾಗಲಿದೆ. ಗ್ರಾಚ್ಯುಟಿ ಕಡಿತ ಕೂಡಾ ಅಧಿಕವಾಗಲಿದೆ. ಆದರೆ ಪ್ರತಿ ತಿಂಗಳು ಕೈಗೆ ಬರುವ ಸಂಬಳ ಕಡಿಮೆ ಆಗಲಿದೆ.
ರಜೆಗಳು ಎಷ್ಟು ಸಿಗಲಿದೆ?
ಒಂದು ವರ್ಷದಲ್ಲಿ ರಜೆಗಳ ಪ್ರಮಾಣವು ಒಂದೇ ರೀತಿಯಾಗಿರುತ್ತದೆ. ಆದರೆ ನೌಕರರು 45 ರ ಬದಲಿಗೆ ಪ್ರತಿ 20 ದಿನಗಳ ಕೆಲಸಕ್ಕೆ ರಜೆಯನ್ನು ಪಡೆಯತ್ತಾರೆ. ಇದು ಉತ್ತಮ ಸುದ್ದಿಯಾಗಿದೆ. ಇದಲ್ಲದೆ, ಹೊಸ ಉದ್ಯೋಗಿಗಳು ಈಗ ಅನ್ವಯವಾಗುವಂತೆ 240 ದಿನಗಳ ಕೆಲಸದ ಬದಲಿಗೆ 180 ದಿನಗಳ ಉದ್ಯೋಗದ ನಂತರ ರಜೆ ಪಡೆಯಲು ಅರ್ಹರಾಗಿರುತ್ತಾರೆ.
ಪಿಎಫ್ ಕೊಡುಗೆಯಲ್ಲಿ ಬದಲಾವಣೆಯೇನು?
ಹೊಸ ಕಾರ್ಮಿಕ ಕಾನೂನಿನ ಅಡಿಯಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಗಲಿದೆ. ಅದುವೇ ಟೇಕ್ ಹೋಮ್ ಸಂಬಳ ಕಡಿಮೆಯಾಗುವುದು. ಉದ್ಯೋಗಿಯ ಮೂಲ ವೇತನವು ಒಟ್ಟು ವೇತನದ ಶೇಕಡ 50ರಷ್ಟು ಆಗಿರಬೇಕಾಗಿದೆ. ಇದರಿಂದಾಗಿ ಉದ್ಯೋಗಿ ಮತ್ತು ಉದ್ಯೋಗದಾತರ ಪಿಎಫ್ ಕೊಡುಗೆಗಳು ಹೆಚ್ಚಾಗುತ್ತದೆ. ಆದರೆ ಟೇಕ್ ಹೋಮ್ ಸಂಬಳ ಕಡಿಮೆಯಾಗುತ್ತದೆ. ವಿಶೇಷವಾಗಿ ಖಾಸಗಿ ವಲಯದಲ್ಲಿ ಕೆಲಸ ಮಾಡುವವರ ಮೇಲೆ ಇದು ಪರಿಣಾಮ ಉಂಟು ಮಾಡಲಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications