For Quick Alerts
ALLOW NOTIFICATIONS  
For Daily Alerts

ಅಧಿಕ ಅವಧಿ ಕೆಲಸ ಮಾಡಿ ಅಥವಾ ರಾಜೀನಾಮೆ ನೀಡಿ: ಟ್ವಿಟ್ಟರ್ ಉದ್ಯೋಗಿಗಳಿಗೆ ಎಲಾನ್ ಮಸ್ಕ್ ವಾರ್ನಿಂಗ್

|

ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಹಲವಾರು ನಿಯಮಗಳನ್ನು ಬದಲಾವಣೆ ಮಾಡುತ್ತಾ ಬಂದಿದ್ದಾರೆ. ಸಂಸ್ಥೆ ನಷ್ಟದಲ್ಲಿದೆ ಎಂದು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದು ಮಾತ್ರವಲ್ಲದೆ ಇದ್ದವರು ಅಧಿಕ ಅವಧಿ ದುಡಿಯುವಂತೆ ಆದೇಶಿಸಿದ್ದಾರೆ. ಅಧಿಕ ಅವಧಿ ಕೆಲಸ ಮಾಡಲು ಸಿದ್ಧರಾಗಿರಿ, ಅದು ನಿಮ್ಮಿಂದ ಸಾಧ್ಯವಿಲ್ಲವೆಂದಾದರೆ ಕೆಲಸ ರಾಜೀನಾಮೆ ನೀಡಿ ಹೋಗಿ ಎಂದು ವಿಶ್ವದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ವಿಟ್ಟರ್ ಉದ್ಯೋಗಿಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಎಲಾನ್ ಮಸ್ಕ್ ಉದ್ಯೋಗಿಗಳು ವಾರದಲ್ಲಿ 80 ಗಂಟೆ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದರು ಎಂಬ ಬಗ್ಗೆ ವರದಿಯಾಗಿತ್ತು. ಈಗ ಅಧಿಕ ಅವಧಿ ಕೆಲಸ ಮಾಡಲು ಸಿದ್ಧವಾಗಿರಿ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಈ ಬಗ್ಗೆ ಉದ್ಯೋಗಿಗಳಿಗೆ ಸಂಸ್ಥೆಯಿಂದ ಇಮೇಲ್ ಮಾಡಲಾಗಿದ್ದು, ಗುರುವಾರದ ಒಳಗಾಗಿ ಪ್ರತಿಕ್ರಿಯೆ ನೀಡಲು ಹೇಳಲಾಗಿದೆ.

ಇನ್ಮುಂದೆ ಟ್ವಿಟ್ಟರ್ ಉದ್ಯೋಗಿಗಳಿಗೆ ವಾರದಲ್ಲಿ 80 ಗಂಟೆ ಕೆಲಸದ ಅವಧಿಯೇ?ಇನ್ಮುಂದೆ ಟ್ವಿಟ್ಟರ್ ಉದ್ಯೋಗಿಗಳಿಗೆ ವಾರದಲ್ಲಿ 80 ಗಂಟೆ ಕೆಲಸದ ಅವಧಿಯೇ?

ಈ ಇಮೇಲ್‌ನಲ್ಲಿ ಅಧಿಕ ಅವಧಿ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಲು ನೀವು ಸಿದ್ಧರಾಗಿರಿ ಅಥವಾ ಮೂರು ತಿಂಗಳ ವೇತನವನ್ನು ಪಡೆದು ಸಂಸ್ಥೆಯನ್ನು ತೊರೆಯಿರಿ ಎಂದು ಉಲ್ಲೇಖ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ "ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ, ಟ್ವಿಟ್ಟರ್‌ನ ಯಶಸ್ವಿಗಾಗಿ ನೀವು ನೀಡಿದ ಶ್ರಮಕ್ಕೆ ಧನ್ಯವಾದಗಳು," ಎಂದು ಕೂಡಾ ಇಮೇಲ್‌ನಲ್ಲಿದೆ.

 ಇಮೇಲ್‌ನಲ್ಲಿ ಬೇರೆ ಏನೇನಿದೆ?

ಇಮೇಲ್‌ನಲ್ಲಿ ಬೇರೆ ಏನೇನಿದೆ?

ಇನ್ನು ಈ ಇಮೇಲ್‌ನಲ್ಲಿ ಒಂದು ಲಿಂಕ್‌ ಅನ್ನು ಕೂಡಾ ನೀಡಲಾಗಿದೆ. ಉದ್ಯೋಗಿಗಳು ಸಂಸ್ಥೆಯಲ್ಲಿ ಇರಲು ಬಯಸಿದರೆ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಗುರುವಾರ ಸಂಜೆ 5 ಗಂಟೆಯ (ನ್ಯೂಯಾರ್ಕ್ ಟೈಮ್) ಒಳಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಹೇಳಲಾಗಿದೆ. ಹಾಗೆಯೇ ಯಾರು ಈ ಲಿಂಕ್ ಅನ್ನು ಸಂಜೆ 5 ಗಂಟೆಯ ಒಳಗೆ ಕ್ಲಿಕ್ ಮಾಡುವುದಿಲ್ಲವೋ ಅವರಿಗೆ ಮೂರು ತಿಂಗಳ ವೇತನವನ್ನು ನೀಡಿ ಮನೆಗೆ ಕಳುಹಿಸಲಾಗುತ್ತದೆ ಎಂದು ಕೂಡಾ ಇಮೇಲ್‌ನಲ್ಲಿದೆ. "ಟ್ವಿಟ್ಟರ್ 2. 0 ಬೆಳವಣಿಗೆಗಾಗಿ ಹಾಗೂ ಈ ಸ್ಪರ್ಧಾತ್ಪಕ ಜಗತ್ತಿನಲ್ಲಿ ಸಂಸ್ಥೆಯ ಯಶಸ್ವಿಗಾಗಿ ನಾವು ಅತೀ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಅಧಿಕ ಅವಧಿ ಉತ್ತಮ ಗುಣಮಟ್ಟದ ಕೆಲಸ ಎಂದು ಇದರ ಅರ್ಥವಾಗಿದೆ. ಅಧಿಕ ಶ್ರಮದೊಂದಿಗೆ ಕೆಲಸ ಮಾಡಿದರೆ ಮಾತ್ರ ಇಲ್ಲಿ ನೀವು ಉಳಿಯಲು ಸಾಧ್ಯ," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.

 ನಷ್ಟದಲ್ಲಿರುವ ಟ್ವಿಟ್ಟರ್
 

ನಷ್ಟದಲ್ಲಿರುವ ಟ್ವಿಟ್ಟರ್

ಟ್ವಿಟ್ಟರ್ ಅನ್ನು ಸುಮಾರು 44 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದ ಎಲಾನ್ ಮಸ್ಕ್ ಇತ್ತೀಚೆಗಷ್ಟೆ ನಷ್ಟವನ್ನು ಸರಿದೂಗಿಸಲು ಟೆಸ್ಲಾದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಟ್ವಿಟ್ಟರ್ ಸಂಸ್ಥೆಯು ಜೂನ್ 30, 2022 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಸುಮಾರು 270 ಮಿಲಿಯನ್ ಯುಎಸ್ ಡಾಲರ್ ನಷ್ಟವನ್ನು ಕಂಡಿದೆ. ಈ ನಡುವೆ ಹಲವಾರು ಮಂದಿಯನ್ನು ಕೆಲಸದಿಂದ ಮಸ್ಕ್ ತೆಗೆದು ಹಾಕಿದ್ದಾರೆ.

ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಟ್ವಿಟ್ಟರ್ ಸುಮಾರು 66 ಮಿಲಿಯನ್ ಯುಎಸ್ ಡಾಲರ್ ನಿವ್ವಳ ಲಾಭವನ್ನು ಘೋಷಣೆ ಮಾಡಿತ್ತು. ಆದರೆ ಈ ವರ್ಷ ನಷ್ಟವನ್ನು ಕಂಡಿದೆ. 2022 ರ ಜೂನ್ ತ್ರೈಮಾಸಿಕದಲ್ಲಿ ಟ್ವಿಟರ್‌ನ ಆದಾಯವು ಭಾರೀ ಕುಸಿದಿದೆ. ಒಂದು ವರ್ಷದ ಹಿಂದೆ ಜೂನ್‌ನಿಂದ ಅಂತ್ಯವಾಗುವ ತ್ರೈಮಾಸಿಕದಲ್ಲಿ ಟ್ವಿಟ್ಟರ್‌ನ ಆದಾಯವು 1,190 ಮಿಲಿಯನ್‌ ಯುಎಸ್ ಡಾಲರ್ ಆಗಿತ್ತು. ಆದರೆ ಆದಾಯವು ಈ ವರ್ಷದಲ್ಲಿ 1,176 ಮಿಲಿಯನ್‌ ಡಾಲರ್‌ಗೆ ಕುಸಿದಿದೆ. ಈಗ ಕಂಪನಿಯ ಜಾಗತಿಕವಾಗಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.

 

 ವಾರಕ್ಕೆ 80 ಗಂಟೆ ಕೆಲಸವೇ?

ವಾರಕ್ಕೆ 80 ಗಂಟೆ ಕೆಲಸವೇ?

ಎಲಾನ್ ಮಸ್ಕ್ ಇತ್ತೀಚೆಗೆ ಉದ್ಯೋಗಿಗಳಿಗಾಗಿ ತಾನು ಮಾಡಿದ ಭಾಷಣದಲ್ಲಿ ಗಂಭೀರವಾಗಿ ಹಲವಾರು ವಿಚಾರಗಳನ್ನು ಹೇಳಿದ್ದಾರೆ. ಉದ್ಯೋಗಿಗಳಿಂದ ತಾನು ವಾರದಲ್ಲಿ 80 ಗಂಟೆ ಕೆಲಸವನ್ನು ನಿರೀಕ್ಷೆ ಮಾಡುವುದಾಗಿ ತಿಳಿಸಿದ್ದು ಮಾತ್ರವಲ್ಲದೆ ಉಚಿತ ಊಟದಂತಹ ಬೇರೆ ಪ್ರಯೋಜನಗಳು ಇರಲಾರದು ಎಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಬಹುತೇಕ ಎಲ್ಲ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅನ್ನು ನೀಡಿದೆ. ಆದರೆ ಎಲಾನ್ ಮಸ್ಕ್ ಈಗ ಈ ಆಯ್ಕೆಯನ್ನು ಕಿತ್ತೆಯೆಸಲು ಮುಂದಾಗಿದ್ದಾರೆ. "ನೀವು ಕಚೇರಿಗೆ ಬರಲು ಬಯಸದಿದ್ದರೆ, ರಾಜೀನಾಮೆಯನ್ನು ನಾವು ಸ್ವೀಕರಿಸುತ್ತೇವೆ," ಎಂದು ಹೇಳಿದ್ದಾರೆ.

English summary

Prepare to Work Longer Hours or Quit, Elon Musk Asks Twitter Employees

Elon Musk has asked employees to be prepared to work harder and for longer hours at Twitter 2.0 or leave the company, in a new message to employees. Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X