For Quick Alerts
ALLOW NOTIFICATIONS  
For Daily Alerts

ರೆಪೋ ದರ ಮತ್ತೆ 25 ಬಿಪಿಎಸ್ ಏರಿಕೆ ಸಾಧ್ಯತೆ, ಇಎಂಐ ಮತ್ತಷ್ಟು ಹೆಚ್ಚಾಗುತ್ತಾ?

|

ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಐದು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಹಲವಾರು ಸಮಯದವರೆಗೆ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಆರ್‌ಬಿಐ ಕಳೆದ ಮೇ ತಿಂಗಳಿನಿಂದ ರೆಪೋ ದರವನ್ನು ಹೆಚ್ಚಳ ಮಾಡುತ್ತಲ್ಲಿದೆ. ಕಳೆದ ಬಾರಿ ಡಿಸೆಂಬರ್‌ನಲ್ಲಿ 7ರಂದು ರೆಪೋ ದರವನ್ನು ಹೆಚ್ಚಳ ಮಾಡಿದೆ.

ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ ಹೆಚ್ಚಳ ಮಾಡಿದೆ. ಆ ಬಳಿಕ ಆರ್‌ಬಿಐ ಜೂನ್‌ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ರೆಪೋ ದರವನ್ನು ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ.

RBI Repo Rate : ಎಫ್‌ಡಿ ಹೊಂದಿರುವವರಿಗೆ ಸಿಹಿಸುದ್ದಿ: ರೆಪೋ ಏರಿಕೆ, ಹೂಡಿಕೆಗೆ ಸಕಾಲವೇ?RBI Repo Rate : ಎಫ್‌ಡಿ ಹೊಂದಿರುವವರಿಗೆ ಸಿಹಿಸುದ್ದಿ: ರೆಪೋ ಏರಿಕೆ, ಹೂಡಿಕೆಗೆ ಸಕಾಲವೇ?

ಅದಾದ ಬಳಿಕ ಡಿಸೆಂಬರ್‌ನಲ್ಲಿ ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಮತ್ತೆ 25 ಮೂಲಾಂಕ ಹೆಚ್ಚಳ ಮಾಡಿದೆ. ಇದರಿಂದಾಗಿ ರೆಪೋ ದರವು ಶೇಕಡ 6.25ಕ್ಕೆ ತಲುಪಿದೆ. ಈಗ ಮತ್ತೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಬಜೆಟ್‌ ಬಳಿಕ ಉಂಟಾಗುವ ಈ ಬಡ್ಡಿದರ ಏರಿಕೆಯಿಂದಾಗಿ, ನಿಮ್ಮ ಮೇಲೆ ಸಾಕಷ್ಟು ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ರೆಪೋ ದರ ಎಷ್ಟು ಏರಿಕೆಯಾಗಬಹುದು?

ರೆಪೋ ದರ ಎಷ್ಟು ಏರಿಕೆಯಾಗಬಹುದು?

ಕೇಂದ್ರ ಬಜೆಟ್ 2023ರ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರವರಿಯಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಫೆಬ್ರವರಿಯಲ್ಲಿ ರೆಪೋ ದರವನ್ನು ಆರ್‌ಬಿಐ 25 ಮೂಲಾಂಕ ಹೆಚ್ಚಿಸುವ ಸಾಧ್ಯತೆಯಿದೆ, ಇದರಿಂದಾಗಿ ರೆಪೋ ದರ ಶೇಕಡ 6.50ರಷ್ಟು ಏರಿಕೆಯಾಗಲಿದೆ. ಪ್ರಸ್ತುತ ರೆಪೋ ದರ ಶೇಕಡ 6.25ರಷ್ಟಿದೆ. ಇನ್ನು 52 ಅರ್ಥಶಾಸ್ತ್ರಜ್ಞರ ಪೈಕಿ 40ರಷ್ಟು ಮಂದಿ ರೆಪೋ ದರ 25 ಮೂಲಾಂಕ ಏರಿಕೆಯಾಗಬಹುದು ಎಂದಿದ್ದಾರೆ. ಆದರೆ 12 ಮಂದಿ ಫೆಬ್ರವರಿ 8ರ ಸಭೆಯಲ್ಲಿ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡದು ಎಂದು ಅಭಿಪ್ರಾಯಿಸಿದ್ದಾರೆ. ಫೆಬ್ರವರಿ 6ರಿಂದ 8ರವರೆಗೆ ಆರ್‌ಬಿಐ ಸಭೆಯು ನಡೆಯಲಿದೆ. ಮೇ ತಿಂಗಳಿನಿಂದ ಈವರೆಗೆ ಆರ್‌ಬಿಐ ಶೇಕಡ 2.25ರಷ್ಟು ಬಡ್ಡಿದರವನ್ನು ಹೆಚ್ಚಿಸಿದೆ.

 ಸಾಲದಾರರ ಮೇಲೆ ಏನು ಪ್ರಭಾವ?

ಸಾಲದಾರರ ಮೇಲೆ ಏನು ಪ್ರಭಾವ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದರೆ, ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಎರಡೂ ಕೂಡಾ ಹೆಚ್ಚಳವಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದರೆ, ಬ್ಯಾಂಕ್‌ಗಳು ಕೂಡಾ ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರವನ್ನು ಹೆಚ್ಚಿಸುತ್ತದೆ. ಮೇ ತಿಂಗಳಿನಿಂದ ಆರ್‌ಬಿಐ ಐದು ಬಾರಿ ರೆಪೋ ದರ ಹೆಚ್ಚಿಸಿದಾಗಲೂ ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ, ಇದರಿಂದಾಗಿ ಸಾಲದ ಇಎಂಐ ಕೂಡಾ ಭಾರೀ ಹೆಚ್ಚಳವಾಗಿದೆ. ಮತ್ತೆ ರೆಪೋ ದರ ಹೆಚ್ಚಾದರೆ, ಬ್ಯಾಂಕ್‌ಗಳು ಇಎಂಐ ಕೂಡಾ ಹೆಚ್ಚಿಸಬಹುದು. ಇದರಿಂದಾಗಿ ಮತ್ತಷ್ಟು ಇಎಂಐ ಪಾವತಿ ಮಾಡಬೇಕಾಗುತ್ತದೆ.

 ರೆಪೋ ದರ ಎಂದರೇನು?

ರೆಪೋ ದರ ಎಂದರೇನು?

ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್ ಆಗಿದೆ. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ರೆಪೋ ದರವಾಗಿದೆ. ಅದಕ್ಕಾಗಿ ಬ್ಯಾಂಕುಗಳು ತಮ್ಮ ಗ್ರಾಹಕರ ಸಾಲದ ಬಡ್ಡಿದರವನ್ನು ಕೂಡಾ ಅಧಿಕಗೊಳಿಸುತ್ತದೆ.

English summary

RBI May Hike Interest Rates By 25 Basis Points in February, Details in Kannada

Reserve Bank of India May Hike Interest Rates By 25 Basis Points in February. How Hike In Repo Rate Will Affect Loan Borrowers? here's details. read on.
Story first published: Monday, January 30, 2023, 17:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X