For Quick Alerts
ALLOW NOTIFICATIONS  
For Daily Alerts

ಆಗಸ್ಟ್‌ನಲ್ಲಿ ಮತ್ತೆ ರಿಟೇಲ್ ಹಣದುಬ್ಬರ ಏರಿಕೆ!

|

ಸತತ ಮೂರು ತಿಂಗಳುಗಳ ಕಾಲ ಇಳಿಕೆಯಾಗಿದ್ದ ರಿಟೇಲ್ ಹಣದುಬ್ಬರವು ಆಗಸ್ಟ್ ತಿಂಗಳಿನಲ್ಲಿ ಮತ್ತೆ ಹೆಚ್ಚಳವಾಗಿದೆ. ಆಹಾರ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಈ ನಡುವೆ ಆಗಸ್ಟ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 7ಕ್ಕೆ ಏರಿಕೆಯಾಗಿದೆ. ಈ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.

 

ಸತತ ಮೂರು ತಿಂಗಳುಗಳ ಕಾಲ ರಿಟೇಲ್ ಹಣದುಬ್ಬರ ಇಳಿಕೆಯಾಗಿದ್ದವು. ಆದರೆ ಈಗ ಮತ್ತೆ ಹೆಚ್ಚಳವಾಗಿದೆ. ಈ ಬಗ್ಗೆ ಈಗಾಗಲೇ ತಜ್ಞರುಗಳು ಮಾಹಿತಿ ನೀಡಿದ್ದಾರೆ. ಈ ವರ್ಷ ಪ್ರತಿ ತಿಂಗಳು ಹಣದುಬ್ಬರವು ಆರ್‌ಬಿಐನ 2ರಿಂದ 6 ಶೇಕಡದ ಮಿತಿಗಿಂತ ಅಧಿಕವಾಗಿಯೇ ಉಳಿದಿದೆ.

Breaking news: ಜುಲೈನಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿಕೆBreaking news: ಜುಲೈನಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿಕೆ

ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯಿಂದ ಬಿಡುಗಡೆಯಾದ ಮಾಹಿತಿಯು ಆಗಸ್ಟ್‌ನಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು (ಸಿಪಿಐ) ಅರ್ಥಶಾಸ್ತ್ರಜ್ಞರ ರಾಯಿಟರ್ಸ್ ಸಮೀಕ್ಷೆಗಿಂತ ಹೆಚ್ಚಾಗಿದೆ. ತಜ್ಞರ ಅಂದಾಜು ಶೇಕಡ 6.9 ಆಗಿತ್ತು. ಆದರೆ ರಿಟೇಲ್ ಹಣದುಬ್ಬರ ಶೇಕಡ 7.0 ಕ್ಕೆ ಏರಿದೆ. ಜುಲೈ, ಜೂನ್‌ನಲ್ಲಿ ರಿಟೇಲ್ ಹಣದುಬ್ಬರವು ಇಳಿಕೆಯಾಗಿದ್ದವು. ರಿಟೇಲ್ ಹಣದುಬ್ಬರ ಕಳೆದ ಎರಡು ತಿಂಗಳಲ್ಲಿ ಎಷ್ಟಿತ್ತು, ಪ್ರಸ್ತುತ ಹಣದುಬ್ಬರದ ಮೇಲೆ ಪರಿಣಾಮ ಬೀರಿರುವ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಆಹಾರ ಹಣದುಬ್ಬರವು ಕೂಡಾ ಏರಿಕೆ

ಆಹಾರ ಹಣದುಬ್ಬರವು ಕೂಡಾ ಏರಿಕೆ

ಈಗಾಗಲೇ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿರುವಾಗ ಬೆಲೆ ಏರಿಕೆಯು ಜನರ ಜೇಬಿಗೆ ಮತ್ತೆ ಕತ್ತರಿ ಹಾಕಿದೆ. ಇನ್ನು ಗೋಧಿ, ಅಕ್ಕಿ ಮತ್ತು ಬೇಳೆಕಾಳುಗಳಂತಹ ಅಗತ್ಯ ಬೆಳೆಗಳ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಆ ಸಂದರ್ಭದಲ್ಲೇ ಆಹಾರ ಹಣದುಬ್ಬವು ಕೂಡಾ ಗಗನಕ್ಕೆ ಏರಿಕೆಯಾಗಿದೆ. ಮಾಹಿತಿಯ ಪ್ರಕಾರ, ಆಗಸ್ಟ್‌ನಲ್ಲಿ ಆಹಾರ ಹಣದುಬ್ಬರವು ಶೇಕಡ 7.62ಕ್ಕೆ ಹೆಚ್ಚಳವಾಗಿದೆ. ಜುಲೈನಲ್ಲಿ ಆಹಾರ ಹಣದುಬ್ಬರವು ಶೇಕಡ 6.69ರಷ್ಟಿತ್ತು. ಇನ್ನು ಕಳೆದ ವರ್ಷ ಅಂದರೆ 2021ರಲ್ಲಿ ಆಹಾರ ಹಣದುಬ್ಬವು ಶೇಕಡ 3.11 ರಷ್ಟಿತ್ತು. ಅದಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಆಹಾರ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಜೂನ್ ರಿಟೇಲ್ ಹಣದುಬ್ಬರ ಶೇ.7.01ಕ್ಕೆ ಇಳಿಕೆಜೂನ್ ರಿಟೇಲ್ ಹಣದುಬ್ಬರ ಶೇ.7.01ಕ್ಕೆ ಇಳಿಕೆ

ಹಣದುಬ್ಬರ ಅಧಿಕವಾಗಲು ಕಾರಣಗಳೇನು?

ಹಣದುಬ್ಬರ ಅಧಿಕವಾಗಲು ಕಾರಣಗಳೇನು?

ದೇಶದಲ್ಲಿ ಪ್ರಮುಖವಾಗಿ ಮಳೆಯಿಂದಾಗಿ ಬೆಲೆಗೆ ಹಾನಿಯಾಗುತ್ತಿದೆ. ಇದರಿಂದಾಗಿ ತರಕಾರಿ, ಆಹಾರ ಉತ್ಪನ್ನದ ಬೆಲೆಗಳು ಅಧಿಕವಾಗುತ್ತಿದೆ. ಇನ್ನು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ತರಕಾರಿ ಬೆಲೆಯ ಮೇಲೆ ಭಾರಿ ಒತ್ತಡ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರುಗಳು ಹೇಳಿದ್ದಾರೆ. ಇನ್ನು ಮಳೆಯ ಕಾರಣದಿಂದಾಗಿ ಬೆಳೆಯಲ್ಲಿ ಅಭಾವ ಉಂಟಾಗಿದೆ. ಈ ನಡುವೆ ಬೆಲೆ ಏರಿಕೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ನುಚ್ಚಕ್ಕಿ, ಗೋಧಿ, ಸಕ್ಕರೆ ಮತ್ತು ಅಕ್ಕಿಯ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಿದೆ.

ಜನರ ಮಾಸಿಕ ಬಜೆಟ್ ಮೇಲೆ ಪರಿಣಾಮ
 

ಜನರ ಮಾಸಿಕ ಬಜೆಟ್ ಮೇಲೆ ಪರಿಣಾಮ

ಇನ್ನು ಆಹಾರ ಮತ್ತು ಇಂಧನ ಬೆಲೆಗಳ ಹೆಚ್ಚಳವು ಮನೆಯ ಬಜೆಟ್‌ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಿವಾಸಿಯೊಬ್ಬರು, "ಪ್ರಸ್ತುತ ತರಕಾರಿಗಳ ಬೆಲೆಯು ಹೆಚ್ಚಳವಾಗುತ್ತಿದೆ. ಇದರಿಂದಾಗಿ ನಾವು ತರಕಾರಿಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಿದ್ದೇವೆ. ನಾವು ಹೊರಗಡೆ ಹೆಚ್ಚಾಗಿ ತಿನ್ನುವುದಿಲ್ಲ," ಎಂದು ಹೇಳಿದ್ದಾರೆ. ಹಾಗೆಯೇ ಆದಷ್ಟು ಖರ್ಚಿನ ಮೇಲೆ ಮಿತಿ ಇರಿಸಿದ್ದೇವೆ ಎಂದು ಕೂಡಾ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಆರ್‌ಬಿಐ ಗವರ್ನರ್ ಹಣದುಬ್ಬರವು ಉತ್ತುಂಗಕ್ಕೇರಿದೆ ಮತ್ತು ಮುಂದಿನ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದ ವೇಳೆಗೆ ಸುಮಾರು 5 ಶೇಕಡಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

ರೆಪೋ ದರ ಹಾಗೂ ಹಣದುಬ್ಬರ

ರೆಪೋ ದರ ಹಾಗೂ ಹಣದುಬ್ಬರ

ಮೇ ತಿಂಗಳಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ರಿಟೇಲ್ ಹಣದುಬ್ಬರವು ಪ್ರಮಾಣ ಶೇ.7.04ರಷ್ಟಿತ್ತು. ಜೂನ್‌ನಲ್ಲಿ ಶೇಕಡ 7.01ಕ್ಕೆ ಇಳಿಕೆಯಾಗಿದ್ದವು. ಹಾಗೆಯೇ ಜುಲೈನಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿಕೆಯಾಗಿದ್ದವು. ಇನ್ನು ಹಣದುಬ್ಬರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸತತ ಮೂರು ಬಾರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ. ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಆ ಬಳಿಕ ಆರ್‌ಬಿಐ ಜೂನ್‌ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ರೆಪೋ ದರವನ್ನು ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಬಳಿಕ ಆಗಸ್ಟ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ.

English summary

Retail Inflation Again Rises To 7 Percent in August, Here's Details

Retail inflation, based on the consumer price index (CPI), rose to 7 per cent in August, That shows inflation has remained above RBI's 2-6 per cent tolerance band in each month this year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X