For Quick Alerts
ALLOW NOTIFICATIONS  
For Daily Alerts

ಚಿನ್ನದ ಮೇಲೆ 500 ರು ಹೂಡಿಕೆ ಮಾಡಿ, ರಿಯಾಯಿತಿ ಗಳಿಸಿ

|

ನೀವು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಮತ್ತೊಮ್ಮೆ ಸವರನ್ ಗೋಲ್ಡ್ ಬಾಂಡ್‌ ಸರಣಿ ಆರಂಭಿಸುತ್ತಿದೆ. ಚಿನ್ನದ ಮೇಲೆ 10 ಗ್ರಾಂಗೆ 500 ರೂಪಾಯಿ ರಿಯಾಯಿತಿ ಸಿಗಬೇಕಾದರೆ, ಕೇಂದ್ರ ಸರ್ಕಾರದ ಸವರನ್ ಗೋಲ್ಡ್ ಬಾಂಡ್‌ಗಳು ಸರಿಯಾದ ಆಯ್ಕೆಯಾಗಿದೆ.

ಕೇಂದ್ರವು ಇತ್ತೀಚೆಗೆ 2022-23 ರ ಹಣಕಾಸು ವರ್ಷಕ್ಕೆ ಸವರನ್ ಗೋಲ್ಡ್ ಬಾಂಡ್‌ಗಳ ಮೊದಲ ಕಂತಿನ ಬಿಡುಗಡೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ 10 ಗ್ರಾಂಗೆ ರೂ 5091 ನಿಗದಿಯಾಗಿದೆ. ಆದರೆ, ನೀವು ಕೇವಲ ಶಾಪಿಂಗ್ ಮಾಡಿದರೆ, ನೀವು ಪ್ರತಿ ಗ್ರಾಂಗೆ 10 ರೂ ರಿಯಾಯಿತಿ ಪಡೆಯುತ್ತೀರಿ.

ಸವರನ್ ಗೋಲ್ಡ್ ಬಾಂಡ್‌ ಯೋಜನೆಯಲ್ಲಿ ಹೂಡಿಕೆಗೆ ಇದು ಸಕಾಲವೇ?ಸವರನ್ ಗೋಲ್ಡ್ ಬಾಂಡ್‌ ಯೋಜನೆಯಲ್ಲಿ ಹೂಡಿಕೆಗೆ ಇದು ಸಕಾಲವೇ?

ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತ್ತೀಚಿನ ಟ್ವೀಟ್‌ನಲ್ಲಿ ಹೂಡಿಕೆ ಯೋಜನೆಯ ಹಲವಾರು ಪ್ರಯೋಜನಗಳನ್ನು ಪಟ್ಟಿ ಮಾಡಿದೆ. ಮೊದಲನೆಯದು ಹೂಡಿಕೆದಾರರು ವಾರ್ಷಿಕವಾಗಿ 2.5 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಇದನ್ನು ಎರಡು ವರ್ಷಕ್ಕೊಮ್ಮೆ ಪಾವತಿಸಲಾಗುವುದು. ಸವರನ್ ಗೋಲ್ಡ್ ಬಾಂಡ್‌ಗಳ ಮೇಲೆ ಯಾವುದೇ ಬಂಡವಾಳ ಗಳಿಕೆ ತೆರಿಗೆಯನ್ನು ವಿಧಿಸಲಾಗುವುದಿಲ್ಲ.

ಚಿನ್ನದ ಮೇಲೆ 500 ರು ಹೂಡಿಕೆ ಮಾಡಿ, ರಿಯಾಯಿತಿ ಗಳಿಸಿ

ಈ ಬಾಂಡ್‌ಗಳನ್ನು ಸಾಲಗಳನ್ನು ಪಡೆದುಕೊಳ್ಳಲು ಮೇಲಾಧಾರವಾಗಿ ಬಳಸಬಹುದು. ಅಲ್ಲದೆ, ಭೌತಿಕ ಚಿನ್ನದ ವಿಷಯದಲ್ಲಿ ಸುರಕ್ಷಿತ ಸಂಗ್ರಹಣೆಯನ್ನು ಕಂಡುಹಿಡಿಯುವ ಅಗತ್ಯವಿಲ್ಲ. ಚಿನ್ನದ ಬಾಂಡ್‌ಗೆ ಯಾವುದೇ ಮೇಕಿಂಗ್ ಶುಲ್ಕಗಳು ಮತ್ತು ಜಿಎಸ್‌ಟಿ ವಿಧಿಸಲಾಗುವುದಿಲ್ಲ.

ಇವುಗಳನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ಖರೀದಿಸಬಹುದು. ಈ ಬಾಂಡ್‌ಗಳ ಖರೀದಿಗೆ ಜೂನ್ 24 ಕೊನೆಯ ದಿನವಾಗಿದೆ.

ಸವರನ್ ಗೋಲ್ಡ್‌ ಬಾಂಡ್ ಯೋಜನೆ

ಸವರನ್ ಗೋಲ್ಡ್‌ ಬಾಂಡ್ ಯೋಜನೆ

2015ರಲ್ಲಿ ಮೊದಲ ಬಾರಿಗೆ ಈ ಭೌತಿಕ ಚಿನ್ನದ ಬೇಡಿಕೆ ಕಡಿಮೆ ಮಾಡಲು ಸವರನ್ ಗೋಲ್ಡ್‌ ಬಾಂಡ್ ಯೋಜನೆಯನ್ನು ಪ್ರಾರಂಭಿಸಲಾಯಿತು.SGB ಗಳು ಗ್ರಾಂ ಚಿನ್ನದಲ್ಲಿ ಗುರುತಿಸಲಾದ ಸರ್ಕಾರಿ ಭದ್ರತೆಗಳಾಗಿವೆ. ನೀವು ಈ ಬಾಂಡ್‌ಗಳನ್ನು ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ ಮತ್ತು ಈ ಯೋಜನೆಯಡಿಯಲ್ಲಿ ನೀವು ಹೂಡಿಕೆಯ ಮೇಲೆ ಶೇಕಡಾ 2.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯುತ್ತೀರಿ.

ನಗದು ರೂಪದಲ್ಲಿ ರಿಡೀಮ್

ನಗದು ರೂಪದಲ್ಲಿ ರಿಡೀಮ್

ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು) ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಷೇರು ವಿನಿಮಯ ಕೇಂದ್ರಗಳಿಂದ ಬಾಂಡ್‌ಗಳನ್ನು ಖರೀದಿಸಬಹುದು. ಬಾಂಡ್‌ಗಳನ್ನು ಮೆಚ್ಯೂರಿಟಿಯಲ್ಲಿ ನಗದು ರೂಪದಲ್ಲಿ ರಿಡೀಮ್ ಮಾಡಲಾಗುತ್ತದೆ. ಬಾಂಡ್ ಅನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ನೀಡುತ್ತದೆ.

ಸವರನ್ ಗೋಲ್ಡ್ ಬಾಂಡ್ ಅಥವಾ ಡಿಜಿಟಲ್ ಚಿನ್ನ: ಯಾವುದರಲ್ಲಿ ಹೂಡಿಕೆ ಮಾಡಬೇಕು?ಸವರನ್ ಗೋಲ್ಡ್ ಬಾಂಡ್ ಅಥವಾ ಡಿಜಿಟಲ್ ಚಿನ್ನ: ಯಾವುದರಲ್ಲಿ ಹೂಡಿಕೆ ಮಾಡಬೇಕು?

ಹೊಸ ಸರಣಿಯಲ್ಲಿ ಬೆಲೆ

ಹೊಸ ಸರಣಿಯಲ್ಲಿ ಬೆಲೆ

ಹೊಸ ಸರಣಿಯಲ್ಲಿ ಬೆಲೆ ರೂ. ಪ್ರತಿ 10 ಗ್ರಾಂಗೆ 5091 ರು ಇರಲಿದೆ, SGB ಟ್ರ್ಯಾಂಚ್ I ಸಮಂಜಸವಾದ ಬೆಲೆಯಾಗಿದೆ. ಮುಂಬೈನಲ್ಲಿ 24K ಚಿನ್ನ ಪ್ರತಿ 10 ಗ್ರಾಂಗೆ 52,110 ಮತ್ತು ಇದು GST ಮತ್ತು ಇತರ ಲೆವಿಗಳಿಗೆ ಪ್ರತ್ಯೇಕವಾಗಿದೆ. ಆದ್ದರಿಂದ, ಇಲ್ಲಿ ನೀವು ಪಡೆದುಕೊಳ್ಳಬಹುದಾದ ಪ್ರಮುಖ ಪ್ರಯೋಜನವೆಂದರೆ ಕಡಿಮೆ ಬೆಲೆ ಮತ್ತು ನಾಮಮಾತ್ರ ಮೌಲ್ಯದ ಮೇಲೆ ಅರೆ-ವಾರ್ಷಿಕವಾಗಿ ಪಾವತಿಸಬಹುದಾದ ವಾರ್ಷಿಕ 2.5% ಹೆಚ್ಚುವರಿ ಬಡ್ಡಿ ದರದ ಪ್ರಯೋಜನವಾಗಿದೆ.

ಬಂಡವಾಳ ಲಾಭದ ತೆರಿಗೆಯನ್ನು ವಿನಾಯಿತಿ

ಬಂಡವಾಳ ಲಾಭದ ತೆರಿಗೆಯನ್ನು ವಿನಾಯಿತಿ

ಒಬ್ಬ ವ್ಯಕ್ತಿಗೆ SGB ಯ ಹಿಂತಿಗೆದುಕೊಳ್ಳುವಿಕೆಯ ಮೇಲೆ ಉಂಟಾಗುವ ಬಂಡವಾಳ ಲಾಭದ ತೆರಿಗೆಯನ್ನು ವಿನಾಯಿತಿ ನೀಡಲಾಗುತ್ತದೆ. SGB ವರ್ಗಾವಣೆಯ ಮೇಲೆ ಯಾವುದೇ ವ್ಯಕ್ತಿಗೆ ಉಂಟಾಗುವ ದೀರ್ಘಾವಧಿಯ ಬಂಡವಾಳ ಲಾಭಗಳಿಗಾಗಿ ಸೂಚ್ಯಂಕ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. "2022-23 ರ ಸವರನ್ ಗೋಲ್ಡ್ ಬಾಂಡ್‌ನ ಸರಣಿ-I ಗೆ ರೂ 5,091/gm ಗೆ ಬೆಲೆ ನಿಗದಿಪಡಿಸಲಾಗಿದೆ. ಸವರನ್ ಚಿನ್ನದ ಬಾಂಡ್‌ಗಳಲ್ಲಿನ ಹೂಡಿಕೆಯು ಅಂಗೀಕೃತ ಅಭ್ಯಾಸವಾಗಿದೆ, ಭೌತಿಕ ಚಿನ್ನವನ್ನು ವೇಗವಾಗಿ ಬದಲಾಯಿಸುತ್ತಿದೆ. RBI ಈಗಾಗಲೇ FY21ರಲ್ಲಿ16,000 ಕೋಟಿ ರೂ. ಮತ್ತು 2015 ರಿಂದ SGB ಗಳ ಮೂಲಕ 25,702 ಕೋಟಿ ರೂ ಸಂಗ್ರಹಿಸಿದೆ

English summary

Sovereign Gold Bonds: Invest in Gold get a discount of Rs 500 per 10 grams

Sovereign Gold Bonds: Invest in gold with a discount of Rs 500 per 10 grams? No making charges, GST levied
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X