For Quick Alerts
ALLOW NOTIFICATIONS  
For Daily Alerts

ಯಾವುದೇ ಕೆಲಸ ಮಾಡದೆ ಸುಮ್ಮನಿರಲು ವೇತನ ಪಡೆಯುವ ಈ ವ್ಯಕ್ತಿ, ಮಾಡುವುದಾದರೂ ಏನು?

|

ನಾವು ಮಾಡುವ ಕೆಲಸಕ್ಕೆಯೇ ಸರಿಯಾಗಿ ಸಂಬಳ ದೊರೆಯದ ಈ ಕಾಲದಲ್ಲಿ ಜಪಾನ್‌ನ ಈ ವ್ಯಕ್ತಿ ಯಾವುದೇ ಕೆಲಸವನ್ನು ಮಾಡದೆಯೇ ಸಂಬಳವನ್ನು ಪಡೆಯುತ್ತಾರಂತೆ. ಅಷ್ಟಕ್ಕೂ ಈ ಕೆಲಸ ಶೋಜಿ ಮೊರಿಮೊಟೊ ಎಂಬ ಜಪಾನ್ ವ್ಯಕ್ತಿಯ ಕನಸಿನ ಉದ್ಯೋಗ ಆಗಿದೆಯಂತೆ!

38 ವರ್ಷ ವಯಸ್ಸಿನ ಟೋಕಿಯೊ ನಿವಾಸಿಯು ಕ್ಲೈಂಟ್‌ಗಳ ಜೊತೆಯಲ್ಲಿ ಹೋಗಿ, ಸರಳವಾಗಿ ಒಡನಾಡಿಯಾಗಿ ಇರಲು ಗಂಟೆಗೆ ಸುಮಾರು 10,000 ಯೆನ್ (71 ಡಾಲರ್) ಹಣವನ್ನು ಪಡೆಯುತ್ತಾರೆ. ತನ್ನನ್ನು ತಾನು ಬಾಡಿಗೆಗೆ ನೀಡುವುದಾಗಿ ಹೇಳಿದ ಈ ವ್ಯಕ್ತಿ ಆದರೆ ಇದರಲ್ಲಿ ಯಾವುದೇ ಲೈಂಗಿಕ ಕಾರ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಆದರೆ ನನಗೆ ಏನು ಕೆಲಸ ಮಾಡಲು ಕೂಡಾ ಇಲ್ಲ ಎಂದು ಹೇಳಿದ್ದಾರೆ.

ಉದ್ಯೋಗ ಸೃಷ್ಟಿಸಲು ಭಾರತ ಶೇ.8-10ರಷ್ಟು ಬೆಳವಣಿಗೆ ಹೊಂದಬೇಕು: ಸಿಂಗಾಪುರ ಸಚಿವಉದ್ಯೋಗ ಸೃಷ್ಟಿಸಲು ಭಾರತ ಶೇ.8-10ರಷ್ಟು ಬೆಳವಣಿಗೆ ಹೊಂದಬೇಕು: ಸಿಂಗಾಪುರ ಸಚಿವ

"ಮೂಲತಃ, ನಾನು ನನ್ನನ್ನು ಬಾಡಿಗೆಗೆ ನೀಡುತ್ತೇನೆ. ನನ್ನ ಗ್ರಾಹಕರು ನಾನು ಎಲ್ಲಿಗೆ ಇರಬೇಕೆಂದು ಮತ್ತು ನಿರ್ದಿಷ್ಟವಾಗಿ ಏನನ್ನೂ ಮಾಡದಿರುವುದು ನನ್ನ ಕೆಲಸವಾಗಿದೆ," ಎಂದು ತಿಳಿಸುತ್ತಾರೆ. ಅವರು ಯಾವ ಕಾರ್ಯ ಮಾಡಬಾರದು ಎಂದು ಹೇಳುತ್ತಾರೋ ನಾನು ಆ ಕಾರ್ಯವನ್ನು ಮಾಡಬಾರದು ಎಂದು ಕೂಡಾ ಹೇಳಿದ್ದಾರೆ. ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ ಅವರು ಸುಮಾರು 4,000 ಸೆಷನ್‌ಗಳನ್ನು ನಿರ್ವಹಿಸಿದ್ದಾರೆ.

ಮೊರಿಮೊಟೊ ಈಗ ಟ್ವಿಟ್ಟರ್‌ನಲ್ಲಿ ಸುಮಾರು ಕಾಲು ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಟ್ವಿಟ್ಟರ್‌ನಲ್ಲೇ ಮೊರಿಮೊಟೊಗೆ ಅಧಿಕ ಕ್ಲೈಂಟ್‌ಗಳು ಸಿಗುತ್ತಿದ್ದಾರೆ. ಸರಿಸುಮಾರು ಈ ಪೈಕಿ ಕಾಲು ಭಾಗದಷ್ಟು ಕ್ಲೈಂಟ್‌ಗಳು ಖಾಯಂ ಆಗಿದ್ದಾರೆ. ಒಬ್ಬರು 270 ಬಾರಿ ಮೊರಿಮೊಟೊರನ್ನು ಸುಮ್ಮನಿರುವ ಈ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.

ಪಿಎಂ ರೋಜ್‌ಗಾರ್ ಯೋಜನೆ 2022: ಅರ್ಹತೆ, ಲಾಭ ಇತರೆ ಮಾಹಿತಿ ಇಲ್ಲಿದೆಪಿಎಂ ರೋಜ್‌ಗಾರ್ ಯೋಜನೆ 2022: ಅರ್ಹತೆ, ಲಾಭ ಇತರೆ ಮಾಹಿತಿ ಇಲ್ಲಿದೆ

 ರೈಲಿನಲ್ಲಿ ಹೋಗುವ ವ್ಯಕ್ತಿಗೆ ಕೈಬೀಸಿ ಬೀಳ್ಕೊಡುಗೆ!

ರೈಲಿನಲ್ಲಿ ಹೋಗುವ ವ್ಯಕ್ತಿಗೆ ಕೈಬೀಸಿ ಬೀಳ್ಕೊಡುಗೆ!

ಉದ್ಯಾನವನದಲ್ಲಿ ವ್ಯಕ್ತಿಯೊಬ್ಬ ಆಟವಾಡುವಾಗ ಸುಮ್ಮನೆ ನಿಂತು ನೋಡುವ ಮೂಲಕ ಪ್ರೋತ್ಸಾಹಿಸುವ ಕೆಲಸಕ್ಕಾಗಿ ಈ ವ್ಯಕ್ತಿ ಹಣವನ್ನು ಪಡೆದಿದ್ದಾರೆ. ಹಾಗೆಯೇ ಒಂದು ಬಾರಿ ವ್ಯಕ್ತಿಯೊಬ್ಬ ಬೇರೆಡೆ ಪ್ರಯಾಣ ಮಾಡುವಾಗ ತನ್ನನ್ನು ಬೀಳ್ಕೊಡಲು ಯಾರು ಇಲ್ಲ ಎಂಬ ಕಾರಣಕ್ಕೆ ಮೊರಿಮೊಟೊರನ್ನು ನೇಮಿಸಿಕೊಂಡಿದ್ದಾರೆ. ಇಲ್ಲಿ ಮೊರಿಮೊಟೊಗೆ ಇದ್ದ ಕೆಲಸ "ನೇಮಿಸಿಕೊಂಡ ವ್ಯಕ್ತಿ ರೈಲಿನಲ್ಲಿ ಸಾಗುವಾಗ ನಿಲ್ದಾಣದಲ್ಲಿ ನಿಂತು ಕೈ ಬೀಸಿ ವಿದಾಯ ಹೇಳುವುದು". ಏನನ್ನೂ ಮಾಡದಿದ್ದರೆ ಮೊರಿಮೊಟೊ ಏನನ್ನೂ ಮಾಡುತ್ತಾನೆ ಎಂದಲ್ಲ. ಇನ್ನು ಮನೆಯಲ್ಲಿರು ಸಾಮಾನುಗಳನ್ನು ಬೇರೆಡೆ ವರ್ಗಾವಣೆ ಮಾಡುವ ಕಾರ್ಯದ ಆಫರ್ ಬಂದಾಗ ಅದನ್ನು ಮೊರಿಮೊಟೊ ತಿರಸ್ಕರಿಸಿದ್ದಾರೆ. ಹಾಗೆಯೇ ಲೈಂಗಿಕ ಕಾರ್ಯಕ್ಕಾಗಿ ಯಾವುದೇ ವಿನಂತಿಗಳು ಒಪ್ಪಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 ಸೀರೆ ಹಾಕಿದ ಮಹಿಳೆ ಎದುರು ಕೂತು ಮಾತುಕತೆ!
 

ಸೀರೆ ಹಾಕಿದ ಮಹಿಳೆ ಎದುರು ಕೂತು ಮಾತುಕತೆ!

ಇನ್ನು ಕಳೆದ ವಾರ ಮೊರಿಮೊಟೊ ಅವರು 27 ವರ್ಷದ ಡೇಟಾ ವಿಶ್ಲೇಷಕಿ ಅರುಣಾ ಚಿದಾ ಅವರ ಎದುರು ಕುಳಿತುಕೊಂಡು, ಚಹಾ ಮತ್ತು ಕೇಕ್‌ಗಳನ್ನು ಸೇವಿಸುತ್ತಾ ಸರಳವಾಗಿ ಮಾತನಾಡುವ ಕಾರ್ಯವನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಅರುಣಾ ಚಿದಾ ಸೀರೆಯನ್ನು ಧರಿಸಿದ್ದರು. ಚಿದಾ ಅವರು ಭಾರತೀಯ ಉಡುಪನ್ನು ಸಾರ್ವಜನಿಕವಾಗಿ ಧರಿಸಲು ಬಯಸಿದ್ದರು. ಆದರೆ ಅದು ತನ್ನ ಸ್ನೇಹಿತರನ್ನು ಮುಜುಗರಕ್ಕೀಡುಮಾಡಬಹುದೆಂದು ಚಿಂತಿಸಿದರು. ಆದ್ದರಿಂದ ತಾನು ಸೀರೆ ಧರಿಸಿದ ಸಂದರ್ಭದಲ್ಲಿ ತನ್ನೊಂದಿಗೆ ಸ್ನೇಹಿತರಂತೆ ಮಾತನಾಡಲು ಮೊರಿಮೊಟೊರನ್ನು ನೇಮಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿದಾ ನಾನು ನನ್ನ ಸ್ನೇಹಿತರೊಂದಿಗೆ ಕುಳಿತು ಮಾತನಾಡಬಹುದು. ಆದರೆ ಹೀಗೆ ಬಾಡಿಗೆಗೆ ಪಡೆದ ವ್ಯಕ್ತಿಯೊಂದಿಗೆ ಮಾತನಾಡಬೇಕು ಎಂದು ನನಗೆ ಅನಿಸಿಲ್ಲ ಎಂದಿದ್ದಾರೆ.

 ಏನೂ ಮಾಡದೆ ಸುಮ್ಮನಿರುವುದೇ ಮುಖ್ಯ

ಏನೂ ಮಾಡದೆ ಸುಮ್ಮನಿರುವುದೇ ಮುಖ್ಯ

ಪ್ರಸ್ತುತ ಈ ರೀತಿ ತನ್ನ ಕ್ಲೈಂಟ್‌ಗಳು ಏನು ಮಾಡಬಾರದು ಎಂದು ಹೇಳುತ್ತಾರೋ ಆ ಕಾರ್ಯವನ್ನು ಮಾಡದೆ ಕ್ಲೈಂಟ್‌ಗಳ ಬಾಡಿಗೆ ವ್ಯಕ್ತಿಯಾಗಿ ಹೇಳಿದ ಕಾರ್ಯವನ್ನು ಮಾಡು ಕೆಲಸವೊಂದೆ ಮೊರಿಮೊಟೊ ಜೀವನ ಆಧಾರವಾಗಿದೆ. ಆದರೆ ತಾನು ಈ ಕಾರ್ಯದಲ್ಲಿ ಎಷ್ಟು ಸಂಪಾದನೆ ಮಾಡುತ್ತೇನೆ ಎಂಬುವುದನ್ನು ಮಾತ್ರ ಬಹಿರಂಗ ಮಾಡಲು ಮೊರಿಮೊಟೊ ನಿರಾಕರಿಸಿದ್ದಾರೆ. ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ದಿನಕ್ಕೆ ಮೂರು ಅಥವಾ ನಾಲ್ಕು ಕಾರ್ಯಗಳು ಲಭ್ಯವಾಗುತ್ತಿತ್ತು. "ನಾನು ಏನು ಕೂಡಾ ಮಾಡದೆ ಇರುವುದು ಅತೀ ಮುಖ್ಯವಾಗಿದೆ ಎಂದು ಜನರು ಭಾವಿಸುತ್ತಾರೆ. ಯಾಕೆಂದರೆ ಅದುವೇ ನಮ್ಮ ಗ್ರಾಹಕರಿಗೆ ಬೇಕಾಗಿರುವುದು. ಆದರೆ ನಿಜವಾಗಿಯೂ ನಾವು ಏನನ್ನೂ ಮಾಡದೆ ಇರುವುದೇ ಉತ್ತಮ. ಜನರು ಯಾವುದೇ ನಿರ್ದಿಷ್ಟ ಕಾರ್ಯವನ್ನು ಮಾಡಿಯೇ ಹಣವನ್ನು ಸಂಪಾದನೆ ಮಾಡಬೇಕಾಗಿಲ್ಲ," ಎಂದು ಈ ಜಪಾನ್ ವ್ಯಕ್ತಿ ತಿಳಿಸಿದ್ದಾರೆ.

English summary

The Japanese Man Who Gets Paid To Do Nothing, Here's Details

Shoji Morimoto has what some would see as a dream job: he gets paid to do pretty much nothing.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X