For Quick Alerts
ALLOW NOTIFICATIONS  
For Daily Alerts

ಗಮನಿಸಿ: ಡಿಸೆಂಬರ್‌ನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ಪ್ರಮುಖ ಬದಲಾವಣೆ!

|

ನಾವು ಈಗಾಗಲೇ ಡಿಸೆಂಬರ್ ತಿಂಗಳ ಮೂರು ದಿನವನ್ನು ಕಳೆದಿದ್ದೇವೆ. ಆದರೆ ಈ ತಿಂಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುವ, ಆಗಿರುವ ಪ್ರಮುಖ ಬದಲಾವಣೆಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ?. ಈ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ.

 

ಸಾಮಾನ್ಯವಾಗಿ ಒಂದು ತಿಂಗಳಿನಿಂದ ಇನ್ನೊಂದು ತಿಂಗಳಿಗೆ ಆಗುವ ಪ್ರಮುಖ ಬದಲಾವಣೆಗಳು ನಮ್ಮ ಮೇಲೆ ವೈಯಕ್ತಿಕವಾಗಿ, ಆರ್ಥಿಕವಾಗಿ ಹಲವಾರು ಪ್ರಭಾವವನ್ನು ಉಂಟು ಮಾಡುತ್ತದೆ. ಹಾಗಿರುವಾಗ ಈ ತಿಂಗಳಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲೇ ಪ್ರಮುಖ ಬದಲಾವಣೆ ಆಗಿರುವಾಗ ಅದು ನಮ್ಮ ಮೇಲೆ ಪ್ರಭಾವ ಉಂಟು ಮಾಡದೆ ಇರಬಹುದೇ?.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈಗಾಗಲೇ ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕವಾಗಿ ಆರಂಭ ಮಾಡಿದೆ. ಡಿಸೆಂಬರ್ 1, 2022ರಿಂದ ಆರಂಭಿಸಿದೆ. ಹಾಗೆಯೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದೆ. ಹಾಗೆಯೇ ಯೆಸ್‌ ಬ್ಯಾಂಕ್‌ನಲ್ಲಿಯೂ ಕೆಲವು ಬದಲಾವಣೆಗಳು ಆಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಡಿಜಿಟಲ್ ರೂಪಾಯಿಯ ಆರಂಭ

ಡಿಜಿಟಲ್ ರೂಪಾಯಿಯ ಆರಂಭ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರಿಟೇಲ್ ಡಿಜಿಟಲ್ ರೂಪಾಯಿಯ ಡಿಸೆಂಬರ್ 1, 2022ರಿಂದ ಪ್ರಾಯೋಗಿಕ ಆರಂಭ ಮಾಡಿದೆ. ಇದನ್ನು ಸಿಬಿಡಿಸಿ ಅಥವಾ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಎಂದು ಕೂಡಾ ಕರೆಯಲಾಗುತ್ತದೆ. ನಗದು ರಹಿತ ವಹಿವಾಟಿಗೆ ಅಧಿಕ ಪ್ರೇರಣೆ ನೀಡುವ ನಿಟ್ಟಿನಲ್ಲಿ ಆರ್‌ಬಿಐ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಿದೆ. ಈ ಹೊಸ ಸಿಸ್ಟಮ್‌ನಲ್ಲಿ ಬೇರೆ ಬೇರೆ ಪೇಮೆಂಟ್ ವಿಧಾನವಿದೆ. ಜನರು ಬ್ಯಾಂಕ್‌ನಿಂದ ಮೊದಲು ಡಿಜಿಟಲ್ ಕರೆನ್ಸಿಯನ್ನು ಖರೀದಿ ಮಾಡಬಹುದು. ಬಳಿಕ ಇದು ವ್ಯಾಲೆಟ್ ರೂಪದಲ್ಲಿರುತ್ತದೆ. ನೀವು ಯಾವುದೇ ವಸ್ತುವನ್ನು ಖರೀದಿ ಮಾಡುವಾಗ ಡಿಜಿಟಲ್ ಕರೆನ್ಸಿ ರೂಪದಲ್ಲಿ ಪಾವತಿ ಮಾಡಬಹುದು. ಇದು ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ.

 ರೆಪೋ ದರ ಬದಲಾವಣೆ ಸಾಧ್ಯತೆ
 

ರೆಪೋ ದರ ಬದಲಾವಣೆ ಸಾಧ್ಯತೆ

ಕಳೆದ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಆರ್‌ಬಿಐ ಒಟ್ಟು ನಾಲ್ಕು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಡಿಸೆಂಬರ್‌ 5ರಿಂದ 7ರವರೆಗೆ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆ ನಡೆಯಲಿದ್ದು ಈ ಸಭೆಯ ಅಂತ್ಯದಲ್ಲಿ ಅಂದರೆ ಡಿಸೆಂಬರ್ 7ರಂದು ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಈಗಾಗಲೇ ರೆಪೋ ದರವನ್ನು ಶೇಕಡ 1.9 ಅಥವಾ 190 ಮೂಲಾಂಕ ಅಧಿಕ ಮಾಡಿದೆ. ಈಗ ರೆಪೋ ದರ ಶೇಕಡ 5.90ಕ್ಕೆ ಏರಿಕೆಯಾಗಿದೆ. ಹಣದುಬ್ಬರವನ್ನು ಶೇಕಡ 6ರಿಂದ ಕೆಳಕ್ಕೆ ಇಳಿಸುವುದು ಆರ್‌ಬಿಐನ ಗುರಿಯಾಗಿದೆ. ಮುಂದಿನ ಸಭೆಯ ಬಳಿಕ ಆರ್‌ಬಿಐ 25ರಿಂದ 50 ಮೂಲಾಂಕದವರೆಗೆ ರೆಪೋ ದರ ಹೆಚ್ಚಿಸುವ ನಿರೀಕ್ಷೆ ಇದೆ.

 ಕ್ರೆಡಿಟ್ ಕಾರ್ಡ್ ಕನಿಷ್ಠ ಪಾವತಿ

ಕ್ರೆಡಿಟ್ ಕಾರ್ಡ್ ಕನಿಷ್ಠ ಪಾವತಿ

ಕ್ರೆಡಿಟ್ ಕಾರ್ಡ್‌ನಲ್ಲಿ ಎಷ್ಟರವರೆಗೆ ಕನಿಷ್ಠ ಪಾವತಿ ಮಾಡಬಹುದು ಅಥವಾ ಮಿತಿ ಎಷ್ಟು ಎಂಬುವುದನ್ನು ಬ್ಯಾಂಕ್‌ಗಳು ಅಥವಾ ಕಾರ್ಡ್ ಜಾರಿ ಮಾಡುವ ಸಂಸ್ಥೆಗಳು ನಿಗದಿ ಮಾಡಲು ಆರ್‌ಬಿಐ ಅಕ್ಟೋಬರ್‌ನಲ್ಲಿ ಜಾರಿ ಮಾಡಿದ ನೋಟಿಸ್‌ ಮೂಲಕ ತಿಳಿಸಿದೆ. ಇದರಿಂದಾಗಿ ಕಾರ್ಡ್‌ದಾರರು ಸಾಲದ ಹೊರೆಯಿಂದ ಹೊರಬರಲು ಸಾಧ್ಯವಾಗಲಿದೆ. ಅಧಿಕ ಖರ್ಚು ಮಾಡುವುದು ಕೂಡಾ ಕಡಿಮೆಯಾಗಲಿದೆ ಎಂಬುವುದು ಆರ್‌ಬಿಐನ ಅಭಿಪ್ರಾಯವಾಗಿದೆ.

 ಯೆಸ್‌ ಬ್ಯಾಂಕ್‌ನಲ್ಲಿ ಎಸ್‌ಎಂಎಸ್ ಅಲರ್ಟ್ ಸ್ಥಗಿತ

ಯೆಸ್‌ ಬ್ಯಾಂಕ್‌ನಲ್ಲಿ ಎಸ್‌ಎಂಎಸ್ ಅಲರ್ಟ್ ಸ್ಥಗಿತ

ಯೆಸ್ ಬ್ಯಾಂಕ್ ಡಿಸೆಂಬರ್ 1, 2022ರಿಂದ ಎಸ್‌ಎಂಎಸ್‌ ಬ್ಯಾಲೆನ್ಸ್ ಅಲರ್ಟ್ ಅನ್ನು ಸ್ಥಗಿತ ಮಾಡಿದೆ. ಅಂದರೆ ಈ ಹಿಂದೆ ನೀವು ನಡೆಸಿದ ಬ್ಯಾಂಕಿಂಗ್ ವಹಿವಾಟಿನ ಬಗ್ಗೆ ಎಸ್‌ಎಂಎಸ್ ಮೂಲಕ ನಿಮಗೆ ಅಲರ್ಟ್ ಲಭ್ಯವಾಗುತ್ತಿತ್ತು. ಆದರೆ ಈಗ ಈ ಸೇವೆಯನ್ನು ಬ್ಯಾಂಕ್ ಸ್ಥಗಿತಗೊಳಿಸಲಿದೆ. ಆದರೆ ಆನ್‌ಲೈನ್ ವಹಿವಾಟು ಪ್ರಕ್ರಿಯೆ ಎಂದಿನಂತೆ ನಡೆಸಬಹುದು. ಅದರಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ ಎಂದು ಕೂಡಾ ಬ್ಯಾಂಕ್ ಮಾಹಿತಿ ನೀಡಿದೆ. ವಂಚನೆ ಹಾಗೂ ಡೇಟಾ ಕಳ್ಳತನ ಹೆಚ್ಚಾದ ಕಾರಣದಿಂದಾಗಿ ಈ ಸೇವೆಯನ್ನು ಯೆಸ್‌ ಬ್ಯಾಂಕ್ ಸ್ಥಗಿತಗೊಳಿಸಿದೆ. ನಿಮಗೆ ಎಸ್‌ಎಂಎಸ್ ಅಲರ್ಟ್ ಬೇಕಾಗಿದ್ದರೆ, ಆನ್‌ಲೈನ್‌ ಸೇವೆಯನ್ನು ಪಡೆಯಬಹುದು.

English summary

This Significant Changes have been Made in Banking Sector December 2022

This Significant Changes have been Made in Banking Sector December 2022, this changes can impact your personal finance. read on.
Story first published: Saturday, December 3, 2022, 13:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X