For Quick Alerts
ALLOW NOTIFICATIONS  
For Daily Alerts

2022ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಧಿಕ ಹಣ ಬಾಚಿದ ಟಾಪ್ 5 ಭಾರತೀಯ ಸಿನೆಮಾಗಳು

|

ಕೊರೊನಾ ಸಾಂಕ್ರಾಮಿಕ ವಿಶ್ವದಾದ್ಯಂತ ಭಾರೀ ಆರ್ಥಿಕ ಹಾನಿಯನ್ನು ಕೂಡಾ ಉಂಟು ಮಾಡಿದೆ. ಕೋವಿಡ್ ಬಳಿಕ ಭಾರತೀಯ ಚಲನಚಿತ್ರೋದ್ಯಮವು ಹೊಸ ಹಾದಿಯನ್ನು ಹಿಡಿಯಬೇಕಾಯಿತು. ಕೋವಿಡ್ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್‌ಗಳು ಮತ್ತು ಏಕ-ಪರದೆಯ ಚಲನಚಿತ್ರ ಮಂದಿರಗಳನ್ನು ಸರ್ಕಾರವು ಮುಚ್ಚಿತು.

ಉದ್ಯಮವು ಎರಡು ವರ್ಷಗಳ ಕಾಲ ಭಾರೀ ಸಂಕಷ್ಟದಲ್ಲಿ ಸಿಲುಕಿದೆ, ಹೋರಾಟ ನಡೆಸಿದೆ. ಈ ಅವಧಿಯಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಆರಂಭವಾದವು. ಮನೆಯಲ್ಲಿಯೇ ಇದ್ದ ಜನರಿಗೆ ದೊಡ್ಡ ಮನರಂಜನೆಯು ಈ ಒಟಿಟಿ ಮೂಲಕ ಲಭಿಸಿದೆ. ಈ ವರ್ಷ ಸಿನಿಮಾ ಮಂದಿರಗಳು ತೆರೆದಿದೆ. ಈ ವರ್ಷ ಬಂದ ಹಲವು ಸಿನೆಮಾಗಳು ಬಾಕ್ಸ್‌ ಆಫೀಸ್ ಅನ್ನು ಬಾಚಿದೆ.

KGF Verse: ದಾಖಲೆ ಬರೆದ NFT ಟೋಕನ್, ಕೆಜಿಎಫ್ 2 ರಾಕಿ ಭಾಯ್ ಹೊಸ ಅವತಾರKGF Verse: ದಾಖಲೆ ಬರೆದ NFT ಟೋಕನ್, ಕೆಜಿಎಫ್ 2 ರಾಕಿ ಭಾಯ್ ಹೊಸ ಅವತಾರ

ಒಟಿಟಿಗಳ ಜೊತೆಗೆ ಈಗ ಮಲ್ಟಿಫ್ಲೆಕ್ಸ್‌ಗಳಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಆರಂಭವಾಗಿದೆ. ಈ ವರ್ಷ ಬಾಕ್ಸ್-ಆಫೀಸ್‌ನಲ್ಲಿ ಅತಿ ಹೆಚ್ಚು ಹಣವನ್ನು ಸಂಗ್ರಹ ಮಾಡಿದ ಟಾಪ್ 5 ಭಾರತೀಯ ಚಲನಚಿತ್ರಗಳು ಇಲ್ಲಿದೆ ಮುಂದೆ ಓದಿ....

 ಟಾಪ್ 1: ಕೆಜಿಎಫ್ ಚಾಪ್ಟರ್ 2

ಟಾಪ್ 1: ಕೆಜಿಎಫ್ ಚಾಪ್ಟರ್ 2

ಕೆಜಿಎಫ್ ಚಾಪ್ಟರ್ 2 ಕನ್ನಡದ ಆಕ್ಷನ್ ಸಿನಿಮಾವಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಈ ಸಿನಿಮಾ ತೆರೆಕಂಡಿದೆ. ಈ ಸಿನಿಮಾದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್ತ್, ರವೀನಾ ಟಂಡನ್ ಈ ಸಿನಿಮಾದಲ್ಲಿ ನಟಿಸಿದ್ದು, ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದು ಸುಮಾರು ನೂರು ಕೋಟಿಗಳ ಸಿನಿಮಾವಾಗಿದೆ. ಈ ಸಿನಿಮಾ ಮೊದಲ ದಿನವೇ ರೂ. 159 ಕೋಟಿ ಸಂಗ್ರಹ ಮಾಡಿದೆ. ಈವರೆಗೆ ವಿಶ್ವಾದ್ಯಂತ ಕಲೆಕ್ಷನ್ ರೂ. 1235.2 ಕೋಟಿ ಆಗಿದೆ. ಸಾಗರೋತ್ತರ ಕಲೆಕ್ಷನ್ ರೂ. 205.1 ಕೋಟಿ, ಮತ್ತು ಭಾರತದಲ್ಲಿ ಇದರ ಒಟ್ಟು ಸಂಗ್ರಹ ರೂ. 1030.1 ಕೋಟಿ ಆಗಿದೆ.

 ಟಾಪ್ 2: ಆರ್‌ಆರ್‌ಆರ್

ಟಾಪ್ 2: ಆರ್‌ಆರ್‌ಆರ್

ದಕ್ಷಿಣ ಭಾರತದ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಸೂಪರ್-ಹಿಟ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಬಾಹುಬಲಿಯ ಎರಡು ಸರಣಿಗಳು ರಾಷ್ಟ್ರದಾದ್ಯಂತ ಹೆಚ್ಚು ಮೆಚ್ಚುಗೆ ಪಡೆದಿವೆ. ಆರ್‌ಆರ್‌ಆರ್ ಕೂಡಾ ಬಹುತಾರಾಗಣದ ಚಿತ್ರವಾಗಿದೆ. ರಾಮರಾವ್ ಜೂನಿಯರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಅಂದಾಜು ಬಜೆಟ್ ಸುಮಾರು ರೂ. 450 ಕೋಟಿ ಆಗಿದೆ. ಮೊದಲ ದಿನ ವಿಶ್ವಾದ್ಯಂತ ಇದರ ಸಂಗ್ರಹ ರೂ. 223 ಕೋಟಿ ಆಗಿದೆ. ಇಲ್ಲಿಯವರೆಗೆ, ವಿಶ್ವಾದ್ಯಂತ ಸಂಗ್ರಹ ರೂ. 1135.8 ಕೋಟಿ, ಸಾಗರೋತ್ತರ ಕಲೆಕ್ಷನ್ ರೂ. 214.4 ಕೋಟಿ, ಮತ್ತು ಭಾರತದಲ್ಲಿ ರೂ. 921.4 ಕೋಟಿ ಸಂಗ್ರಹ ಮಾಡಿದೆ. ತೆಲುಗು ಭಾಷೆಯ ಚಲನಚಿತ್ರವು ಮಾರ್ಚ್ 2022 ರಲ್ಲಿ ಬಿಡುಗಡೆಯಾಯಿತು.

 ಟಾಪ್ 3: ವಿಕ್ರಮ್ (2022)

ಟಾಪ್ 3: ವಿಕ್ರಮ್ (2022)

ವಿಕ್ರಮ್ ಈ ವರ್ಷ ಸಿನಿಪ್ರಿಯರಿಗೆ ಬಹುನಿರೀಕ್ಷಿತ ತಮಿಳು ಚಿತ್ರವಾಗಿದೆ. ಈ ಚಿತ್ರವು ಸರಣಿ ಹತ್ಯೆಗಳ ಕುರಿತಾದ ಸಾಹಸಮಯ ಚಿತ್ರವಾಗಿದ್ದು, ಹೆಸರಾಂತ ದಕ್ಷಿಣ ಚಲನಚಿತ್ರ ನಿರ್ಮಾಪಕ ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ವಿಜಯ್ ಸೇತುಪತಿ, ಫಹದ್ ಫಾಸಿಲ್ ಮತ್ತು ನರೇನ್ ಅಭಿನಯದ ವಿಕ್ರಮ್ ಈ ವರ್ಷ ಜೂನ್‌ನಲ್ಲಿ ಭಾರತದಾದ್ಯಂತ ಬಿಡುಗಡೆಯಾಯಿತು. ಇದರ ಬಜೆಟ್ ಸುಮಾರು ರೂ. 120 ಕೋಟಿ ಆಗಿದೆ. ಮೊದಲ ದಿನ ವಿಶ್ವಾದ್ಯಂತ ಕಲೆಕ್ಷನ್ ರೂ. 62.2 ಕೋಟಿ ಆಗಿದೆ. ಇಲ್ಲಿಯವರೆಗೆ, ಅದರ ವಿಶ್ವಾದ್ಯಂತ ಸಂಗ್ರಹ ರೂ. 384.7 ಕೋಟಿ, ಸಾಗರೋತ್ತರ ಕಲೆಕ್ಷನ್ ರೂ. 119.2 ಕೋಟಿ, ಮತ್ತು ಭಾರತದ ಒಟ್ಟು ಕಲೆಕ್ಷನ್ ರೂ. 265.5 ಕೋಟಿ ಆಗಿದೆ. ಚಿತ್ರ ಇನ್ನೂ ಕೂಡಾ ತೆರೆ ಮೇಲಿದ್ದು, ನಿರ್ಮಾಪಕರು ಇನ್ನಷ್ಟು ಬಾಕ್ಸ್ ಆಫೀಸ್ ಬಾಚುವ ಭರಾಟೆಯಲ್ಲಿದ್ದಾರೆ.

 ಟಾಪ್ 4: ಕಾಶ್ಮೀರ ಫೈಲ್ಸ್ (2022)

ಟಾಪ್ 4: ಕಾಶ್ಮೀರ ಫೈಲ್ಸ್ (2022)

ಈ ಚಲನಚಿತ್ರವು 1990 ರಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ನರಮೇಧದ ವಿಚಾರದಲ್ಲಿದೆ. ಕಾಶ್ಮೀರ ಫೈಲ್ಸ್ ಅನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ. ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಷಿ ನಟಿಸಿದ್ದಾರೆ. ಈ ಚಿತ್ರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಚಿತ್ರವು ಅತ್ಯಂತ ಸಣ್ಣ ಪ್ರಮಾಣದ ಬಜೆಟ್‌ ರೂ. 20 ಕೋಟಿಯಲ್ಲಿ ಮಾಡಲಾಗಿದ್ದರೂ, ಇಲ್ಲಿಯವರೆಗಿನ ತನ್ನ ವಿಶ್ವಾದ್ಯಂತ ಭಾರೀ ಹಣವನ್ನು ಗಳಿಸಿದೆ. ಮೊದಲ ದಿನವೇ ವಿಶ್ವದಾದ್ಯಂತ ರೂ. 4.9 ಕೋಟಿ ಸಂಗ್ರಹ ಮಾಡಿದೆ. ವಿದೇಶದಲ್ಲಿ ಸಂಗ್ರಹ ರೂ. 46.1 ಕೋಟಿ ಆಗಿದೆ. ಭಾರತದಲ್ಲಿ ಇದರ ಒಟ್ಟು ಸಂಗ್ರಹ ರೂ. 291.1 ಕೋಟಿ ಆಗಿದೆ. ಚಿತ್ರವು ಈ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಯಿತು.

 ಟಾಪ್ 5: ಭೂಲ್ ಭುಲೈಯಾ 2 (2022)

ಟಾಪ್ 5: ಭೂಲ್ ಭುಲೈಯಾ 2 (2022)

ಭೂಲ್ ಭುಲೈಯಾ 2 ಎರಡನೇ ಸರಣಿಯಾಗಿದೆ. ಇದು ಮೇ 2022 ರಲ್ಲಿ ಬಿಡುಗಡೆಯಾಗಿದೆ. ಇದು ಹಾಸ್ಯ ಸಿನಿಮಾವಾಗಿದ್ದು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಭೂಲ್ ಭುಲೈಯಾ 2 ಅನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದಾರೆ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ, ಟಬು ಮತ್ತು ರಾಜ್ಪಾಲ್ ನೌರಂಗ್ ಯಾದವ್ ನಟಿಸಿದ್ದಾರೆ. ಇದರ ಬಜೆಟ್ ಸುಮಾರು ರೂ. 80 ಕೋಟಿ ಆಗಿದೆ. ಮೊದಲ ದಿನವೇ ಚಿತ್ರ ವಿಶ್ವಾದ್ಯಂತ 20.6 ಕೋಟಿ ರೂ. ಸಂಗ್ರಹ ಮಾಡಿದೆ. ಇಲ್ಲಿಯವರೆಗೆ ಇದರ ವಿಶ್ವಾದ್ಯಂತ ಸಂಗ್ರಹ ರೂ. 262.5 ಕೋಟಿ ಆಗಿದೆ. ಸಾಗರೋತ್ತರ ಕಲೆಕ್ಷನ್ ರೂ. 49.5 ಕೋಟಿ ಆಗಿದೆ. ಭಾರತದಲ್ಲಿ ಇದರ ಒಟ್ಟು ಸಂಗ್ರಹ ರೂ. 213 ಕೋಟಿ ಆಗಿದೆ.

English summary

Top 5 Indian Films To Bag Highest Box-office Collections In 2022

The Indian film industry had to take a new pathway after the pandemic. Here's 5 Indian Films To Bag Highest Box-office Collections In 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X