For Quick Alerts
ALLOW NOTIFICATIONS  
For Daily Alerts

ಯುಲಿಪ್ ಏನಿದು? ಯುಲಿಪ್ ಯೋಜನೆಗಳಿಗೆ ಭಾರತದಲ್ಲಿ ತೆರಿಗೆ ಹೇಗೆ?

|

ಇತ್ತೀಚಿನ 2021ರ ಕೇಂದ್ರ ಬಜೆಟ್ ಪ್ರಕಟವಾದ ನಂತರ ಯೂನಿಟ್ ಲಿಂಕ್ಡ್ ಹೂಡಿಕೆ ಯೋಜನೆ(ಯುಲಿಪ್)ಗಳು ಅನಿಶ್ಚಯದ ಕಡೆಗೆ ಮುಖ ಮಾಡಿವೆ. ಸಾಮಾನ್ಯ ಹೂಡಿಕೆ ಸಾಧನಗಳಲ್ಲಿ ಒಂದಾಗಿರುವ ಯುಲಿಪ್ ಯೋಜನೆಯಲ್ಲಿ ತೊಡಗಿಸುವ ಹೂಡಿಕೆ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.

 

ಅಧಿಕ ಆದಾಯ ವರ್ಗದ ಜನರಿಗೆ ಯುಲಿಪ್ ಯೋಜನೆಗಳು ಸದಾಕಾಲವೂ ಆಕರ್ಷಕ ಹೂಡಿಕೆ ಆಯ್ಕೆಯಾಗಿದೆ. ಭಾರತದ ಆದಾಯ ತೆರಿಗೆ ಕಾಯಿದೆಯ ಪರಿಚ್ಛೇದ 10(10ಡಿ) ಅಡಿ, ಈ ಯೋಜನೆಯು ಲಾಭದಾಯಕ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಇದರ ಜತೆಗೆ, ಯುಲಿಪ್ ಯೋಜನೆಗಳಲ್ಲಿ ಈಕ್ವಿಟಿ ಹೂಡಿಕೆ ಮಾಡಲು ಸಹ ಅವಕಾಶವಿದೆ. ಇದು ಸಹ ಅತ್ಯಂತ ಜನಪ್ರಿಯ ಹೂಡಿಕೆ ಸಾಧನವಾಗಿದೆ.

 

ಇತ್ತೀಚಿನ ತೆರಿಗೆ ಪದ್ಧತಿ ಹೇಗೆ ಯುಲಿಪ್ ಯೋಜನೆಯನ್ನು ಬದಲಿಸಿದೆ?
2021 ಬಜೆಟ್ ನಂತರ, ನೀವು ಯುಲಿಪ್ ಯೋಜನೆಯಲ್ಲಿ ತೊಡಗಿಸುವ ವಾರ್ಷಿಕ ಕಂತು 2.5 ಲಕ್ಷ ರೂ. ಮಿತಿ ದಾಟಿದರೆ, ನಿಮ್ಮ ಯುಲಿಪ್ ಹೂಡಿಕೆ ತೆರಿಗೆ ಮುಕ್ತವಾಗಿರುವುದಿಲ್ಲ. ಅಂದರೆ, ಭಾರತದ ಆದಾಯ ತೆರಿಗೆ ಕಾಯಿದೆಯ ಪರಿಚ್ಛೇದ 10(10)ಡಿ ಅನ್ವಯ, ಯುಲಿಪ್ ನಲ್ಲಿ ಮಾಡುವ ವಾರ್ಷಿಕ ಹೂಡಿಕೆ ಮೊತ್ತ 2.5 ಲಕ್ಷ ರೂ. ಒಳಗಿದ್ದರೆ, ಆ ಮೊತ್ತಕ್ಕೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ. 2.5 ಲಕ್ಷ ರೂ. ಮಿತಿ ದಾಟಿದರೆ, ಅದು ತೆರಿಗೆಗೆ ಒಳಪಡುತ್ತದೆ.
ಆದರೂ, ಈ ನಿಬಂಧನೆಗಳಲ್ಲಿ ಒಂದು ಆಕರ್ಷಣೆ ಇದೆ. ಅದೇನೆಂದರೆ, ಈಗಿರುವ ನಿಯಮಗಳ ಪ್ರಕಾರ, 2021 ಫೆಬ್ರವರಿ 1ರಂದು ಅಥವಾ ಅದರ ನಂತರ ಯುಲಿಪ್ ಯೋಜನೆಗಳಲ್ಲಿ ತೊಡಗಿಸುವ ವಾರ್ಷಿಕ ಕಂತುಗಳಿಗೆ 2.5 ಲಕ್ಷ ರೂ. ಮಿತಿ ಅನ್ವಯವಾಗುತ್ತದೆ.

ಯುಲಿಪ್ ಏನಿದು? ಯುಲಿಪ್ ಯೋಜನೆಗಳಿಗೆ ಭಾರತದಲ್ಲಿ ತೆರಿಗೆ ಹೇಗೆ?

ಆದ್ದರಿಂದ 2021 ಫೆಬ್ರವರಿ 1ಕ್ಕೆ ಮುನ್ನ ಯುಲಿಪ್‌ಗಳಲ್ಲಿ ಮಾಡಿರುವ ಹೂಡಿಕೆಗಳು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಅಥವಾ ಹಳೆಯ ಯುಲಿಪ್ ಹೂಡಿಕೆದಾರರು ಉದ್ವೇಗಕ್ಕೆ ಒಳಗಾಗುವ ಅಗತ್ಯವಿಲ್ಲ. ಇದರ ಜತೆಗೆ, ಬಹು ಪಾಲಿಸಿಗಳ ಕಂತಿಗೂ ಸರಾಸರಿ 2.5 ಲಕ್ಷ ರೂ. ಮಿತಿ ಇದ್ದು, ಅವು ತೆರಿಗೆ ವಿನಾಯಿತಿಗೆ ಸೇರುವುದಿಲ್ಲ.

ಯುಲಿಪ್ ವಾರ್ಷಿಕ ಕಂತು 2.5 ಲಕ್ಷ ರೂ. ದಾಟಿದರೆ, ಯಾವ ತೆರಿಗೆ ದರ ವಿಧಿಸಲಾಗುತ್ತದೆ?
ಸಮಕಾಲೀನ ಪರಿಸ್ಥಿತಿ ಅವಲೋಕಿಸಿ ಹಣಕಾಸು ತಜ್ಞರು ಹೇಳುವ ಪ್ರಕಾರ, ಇದೀಗ ಯುಲಿಪ್ ಹೂಡಿಕೆ ಅಥವಾ ಸಾಲ ನಿಧಿಗೆ ಸಿಗುವ ಲಾಭಾಂಶ ಪ್ರಮಾಣ(ಆದಾಯ)ವು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಗೆ ಸಿಗುವ ಲಾಭಾಂಶಕ್ಕೆ ತಕ್ಕಂತೆ ಇರುತ್ತದೆ. ಮತ್ತೊಂದು ಗಮನಾರ್ಹ ವಿಚಾರವೆಂದರೆ, 2021ರ ಹಣಕಾಸು ವಿಧೇಯಕದಲ್ಲಿ ಈಕ್ವಿಟಿ ಆಧರಿತ ನಿಧಿಗಳಿಗೆ ತಿದ್ದುಪಡಿ ತರಲಾಗಿದೆ.

ಆದ್ದರಿಂದ, ಇನ್ನೂ ಸ್ಪಷ್ಟವಾಗಿ ಮತ್ತು ಸರಳವಾಗಿ ಅರ್ಥ ಮಾಡಿಕೊಳ್ಳುವುದಾದರೆ, ಯುಲಿಪ್‌ಗಳಲ್ಲಿ ಸಿಗುವ ದೀರ್ಘಕಾಲೀನ ಬಂಡವಾಳ ಗಳಿಕೆಯು 1 ಲಕ್ಷ ರೂ. ಮಿತಿ ದಾಟಿದರೆ, ಅದಕ್ಕೆ 10% ತೆರಿಗೆ ವಿಧಿಸಲಾಗುತ್ತದೆ. ಬಂಡವಾಳ ಗಳಿಕೆಯು ಅಲ್ಪಕಾಲೀನವಾದರೆ, ಅದಕ್ಕೆ ಅಂದರೆ ಒಟ್ಟು ಮೊತ್ತಕ್ಕೆ 15% ತೆರಿಗೆ ಹಾಕಲಾಗುತ್ತದೆ.

ಯುಲಿಪ್ ಸಾಲ ನಿಧಿಯಿಂದ ಯುಲಿಪ್ ಈಕ್ವಿಟಿಗೆ ಬದಲಾದರೆ ಏನು ಲಾಭ?
ನೀವು ಸಾಲ ನಿಧಿಯಿಂದ ಈಕ್ವಿಟಿಗೆ ಅಥವಾ ಈಕ್ವಿಟಿಯಿಂದ ಸಾಲ ನಿಧಿಗೆ ಬದಲಾದರೆ ಹೆಚ್ಚುವರಿ ತೆರಿಗೆ ಬಾಧ್ಯತೆ ಅನ್ವಯವಾಗುವುದಿಲ್ಲ. ಆದರೆ ಯುಲಿಪ್ ಯೋಜನೆಯ ಅವಧಿ ಮುಕ್ತಾಯ (ಮೆಚ್ಯೂರಿಟಿ) ಅಥವಾ ಬಿಡುಗಡೆ(ರಿಡೆಮ್ಷನ್) ಪರಿಚ್ಛೇದ 10(10)ಡಿ ಅಡಿ ತೆರಿಗೆ ವಿನಾಯಿತಿಗೆ ಒಳಪಟ್ಟಿದ್ದರೆ, ಆಗ ಅದು ತೆರಿಗೆ ಬಾಧ್ಯತೆಗೆ ಅನ್ವಯವಾಗುತ್ತದೆ.

ದೀರ್ಘಕಾಲೀನ ಬಂಡವಾಳ ಗಳಿಕೆಯ ತೆರಿಗೆ ಉಳಿಸಲು ಯುಲಿಪ್ ಯೋಜನೆಗಳಲ್ಲಿ ಯಾವುದಾದರೂ ಪರ್ಯಾಯ ಸಾಧನಗಳು?
ವಾರ್ಷಿಕ ಗರಿಷ್ಠ 1 ಲಕ್ಷ ರೂ. ದೀರ್ಘಕಾಲೀನ ಬಂಡವಾಳ ಗಳಿಕೆ ಸಂಪಾದಿಸಲು ಅಥವಾ ಪಡೆಯಲು ಬಯಸಿದ್ದೇ ಆದಲ್ಲಿ, ಅಂಥವರು ಈಕ್ವಿಟಿ ಮ್ಯೂಚುವಲ್ ಫಂಡ್ ಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಆದರೆ, ಯುಲಿಪ್ ಗಳಲ್ಲಿ ಅಂತಹ ಪ್ರಯೋಜನಗಳು ಇಲ್ಲ. ಆದರೂ, ಲಾಕ್-ಇನ್ ಅವಧಿಯ ಆರಂಭಿಕ 5 ವರ್ಷಗಳ ನಂತರ ವ್ಯಕ್ತಿಯು ತೆರಿಗೆ ವಿನಾಯಿತಿ ಪಡೆಯಬಹುದು.

ಆನ್ ಲೈನ್ ಯುಲಿಪ್ ಯೋಜನೆಗಳು ಹೆಚ್ಚು ಆಕರ್ಷಣೀಯವಾಗುತ್ತಿವೆ
ಈ ಹಿಂದೆ, ಯುಲಿಪ್‌ ಯೋಜನೆಗಳು ಹೆಚ್ಚಿನ ಜನಪ್ರಿಯತೆ ಗಳಿಸಿರಲಿಲ್ಲ. ಏಕೆಂದರೆ ಹಲವಾರು ಮಾರಾಟಗಾರರು ಹೂಡಿಕೆದಾರರಿಗೆ ಅನಪೇಕ್ಷಿತ ಮತ್ತು ನಿರ್ಲಜ್ಜ ವ್ಯವಹಾರ ನಡೆಸುತ್ತಿದ್ದದ್ದೇ ಇದಕ್ಕೆ ಕಾರಣ. ಜತೆಗೆ, ಯುಲಿಪ್ ಗಳ ಮಾರಾಟ ಮತ್ತು ವಹಿವಾಟಿಗೆ ಅಧಿಕ ವಿಪರೀತ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಯುಲಿಪ್ ಯೋಜನೆಗಳು ಆನ್‌ಲೈನ್ ವೇದಿಕೆಗೆ ಬಂದ ನಂತರ ಮೋಸ ಮತ್ತು ವಂಚನೆಗಳು ನಿಂತಿವೆ. ಹಾಗಾಗಿ, ಜನರು ಮುಕ್ತವಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ. ಆನ್‌ಲೈನ್ ಯುಲಿಪ್‌ಗಳು ಇದೀಗ ಸುಭದ್ರ, ವೆಚ್ಚ ಪರಿಣಾಮಕಾರಿ, ಗ್ರಾಹಕರ ಹೂಡಿಕೆ ಅಗತ್ಯಗಳಿಗೆ ತಕ್ಕಂತೆ ಸಿಗುತ್ತಿವೆ. ಈಗ ವಿಧಿಸಲಾಗುತ್ತಿರುವ ಶುಲ್ಕ ದರಗಳು ಸ್ಪರ್ಧಾತ್ಮಕವಾಗಿವೆ, ನ್ಯಾಯಸಮ್ಮತವಾಗಿವೆ ಮತ್ತು ಸಮರ್ಥನೀಯವಾಗಿವೆ.

ಯುಲಿಪ್ ಖರೀದಿ ನಿರ್ಧಾರಕ್ಕೆ ಕೊನೆಯ ಮಾತು
ಹಣಕಾಸು ಮತ್ತು ಮಾರುಕಟ್ಟೆ ತಜ್ಞರ ಸಲಹೆ ಸೂಚನೆ ಆಧರಿಸಿ ಸೂಕ್ತ ಹೂಡಿಕೆ ಸಾಧನಗಳನ್ನು ಆಯ್ಕೆ ಮಾಡಿಕೊಳ್ಳುವುದಾದರೆ, ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಮೊದಲ ಆಯ್ಕೆಯಾಗಲಿ. ಅವಧಿ ವಿಮಾ ಯೋಜನೆಗಳು 2ನೇ ಆಯ್ಕೆ ಮತ್ತು ಯುಲಿಪ್ ಯೋಜನೆಗಳನ್ನು 3ನೇ ಆಯ್ಕೆ ಮಾಡಿಕೊಳ್ಳುವುದು ಯೋಗ್ಯಕರ ನಿರ್ಧಾರವಾಗಲಿದೆ. ನಗದು ಲಭ್ಯತೆಯ ದೃಷ್ಟಿಕೋನದಲ್ಲಿ ನೋಡುವುದಾದರೆ, ಮ್ಯೂಚುವಲ್ ಫಂಡ್‌ಗಳಿಗಿಂತ ಯುಲಿಪ್‌ಗಳಲ್ಲಿ ಅನನುಕೂಲಗಳು ಹೆಚ್ಚು. 5 ವರ್ಷಗಳ ಕಡ್ಡಾಯ ಲಾಕ್-ಇನ್ ಅವಧಿ ಮತ್ತು ಕೊಡುಗೆಗಳು, ಯೋಜನೆಯಲ್ಲಿ ಮುಂದುವರಿಯಬೇಕಾದರೆ ಇರುವ ದೀರ್ಘಕಾಲೀನ ಅವಧಿ, ಪಾರದರ್ಶಕವಲ್ಲದ ಮಾರ್ಗಸೂಚಿಯಂತಹ ಅಂಶಗಳು ಯುಲಿಪ್ ಯೋಜನೆಗೆ ವಿರುದ್ಧವಾಗಿವೆ.

English summary

What Are Unit Link Insurance Plan (ULIPs)? How Are ULIPs Taxed In India?

What Are ULIPs? How Are ULIPs Taxed In India? How has the latest taxation regime changed the face of ULIP investment? What will be the tax treatment to ULIP premium over Rs 2.5 lakh limit?.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X