For Quick Alerts
ALLOW NOTIFICATIONS  
For Daily Alerts

15 ವರ್ಷದ ಬಳಿಕ ನಿಮ್ಮ ಪಿಪಿಎಫ್ ಖಾತೆ ಏನು ಮಾಡುವುದು?

|

ಸಾರ್ವಜನಿಕ ಭವಿಷ್ಯ ನಿಧಿಗೆ (ಪಿಪಿಎಫ್) ನೀವು ಹೂಡಿಕೆ ಮಾಡಲು ಆರಂಭ ಮಾಡಿರಬಹುದು. ಪಿಪಿಎಫ್ ನಮಗೆ ಹಲವಾರು ಅವಕಾಶಗಳನ್ನು ನೀಡುತ್ತದೆ. ಆದರೆ ಇದು 15 ವರ್ಷಗಳ ಕಾಲಾವಧಿಯನ್ನು ಹೊಂದಿರುತ್ತದೆ ಎಂಬುವುದನ್ನು ನಾವು ಮರೆಯುವಂತಿಲ್ಲ. ಆದರೆ 15 ವರ್ಷಗಳ ಕಾಲಾವಧಿಯ ಬಳಿಕ ನಾವು ಪಿಪಿಎಫ್‌ ಖಾತೆ ಏನು ಮಾಡುವುದು ಎಂಬ ಪ್ರಶ್ನೆಯೂ ಮೂಡಬಹುದು.

ಭಾರತದ ಅತ್ಯುತ್ತಮ ಸ್ಥಿರ ಆದಾಯ ಹೂಡಿಕೆಯಾಗಿದೆ. ನೀವು ಸುಮಾರು 15 ವರ್ಷಗಳ ಕಾಲ ಮಾಡುವ ಹೂಡಿಕೆಯು ಸೆಕ್ಷನ್ 80C ಅಡಿಯಲ್ಲಿ ಆದಾಯ-ತೆರಿಗೆ ಕಡಿತದ ಪ್ರಯೋಜನಗಳನ್ನು ನೀವು ಪಡೆಯಲು ಸಹಕಾರಿಯಾಗುತ್ತದೆ. ಹಾಗೆಯೇ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡಲು ಸಹಾಯಕವಾಗಿದೆ. ಇನ್ನು ಬಡ್ಡಿ ಕೂಡಾ ತೆರಿಗೆ ಮುಕ್ತವಾಗಿದೆ. ಆದರೆ ನಿಮ್ಮ ಪಿಪಿಎಫ್ ಖಾತೆಯು 15 ವರ್ಷಗಳನ್ನು ಪೂರೈಸಿದ ನಂತರ ನೀವು ಅದನ್ನು ಮಾಡುವುದು ಏನು?

ನಿವೃತ್ತಿ ಉಳಿತಾಯ ಆಯ್ಕೆಗಳಲ್ಲಿ ಯಾವುದು ಉತ್ತಮ?ನಿವೃತ್ತಿ ಉಳಿತಾಯ ಆಯ್ಕೆಗಳಲ್ಲಿ ಯಾವುದು ಉತ್ತಮ?

ನಿಮಗೆ ಕೆಲವು ವರ್ಷಗಳವರೆಗೆ ಪಿಪಿಎಫ್ ಹಣದ ಅಗತ್ಯವಿಲ್ಲದಿದ್ದರೆ, ಪಿಪಿಎಫ್ ಖಾತೆಯ ಅವಧಿಯನ್ನು ವಿಸ್ತರಣೆ ಕೂಡಾ ಮಾಡಬಹುದು. ಆದರೆ ಇದು ನಿಮ್ಮ ಏಕೈಕ ಆಯ್ಕೆಯಾಗಿಲ್ಲ. ವಿವಿಧ ಅವಶ್ಯಕತೆಗಳನ್ನು ಹೊಂದಿರುವ ಜನರು ಮೆಚ್ಯೂರ್ ಆಗುತ್ತಿರುವ ಪಿಪಿಎಫ್ ಖಾತೆಯನ್ನು ಏನು ಮಾಡಬೇಕು ಎಂದು ಕೂಡಾ ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ....

 ಪಿಪಿಎಫ್ ಖಾತೆಯನ್ನು ಮುಚ್ಚುವುದು

ಪಿಪಿಎಫ್ ಖಾತೆಯನ್ನು ಮುಚ್ಚುವುದು

ಪಿಪಿಎಫ್ ಹಣವನ್ನು ನೀವು ಸಂಪೂರ್ಣವಾಗಿ ಹಿಂಪಡೆಯಬೇಕಾದರೆ, 15 ನೇ ವರ್ಷದ ಕೊನೆಯಲ್ಲಿ ಆ ಖಾತೆಯನ್ನು ನೀವು ಮುಚ್ಚಬೇಕಾಗುತ್ತದೆ. ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ಗೆ ಫಾರ್ಮ್ ಸಿ ಸಲ್ಲಿಸುವ ಮೂಲಕ ಮುಚ್ಚಬೇಕು. ಖಾತೆಯನ್ನು ನೀವು ಮುಚ್ಚಲು ಬಯಸದಿದ್ದರೆ, ಅದನ್ನು ಸಕ್ರಿಯಗೊಳಿಸಬಹುದು. ಈ ಸಂದರ್ಭದಲ್ಲಿ, ಖಾತೆಯನ್ನು ಮುಚ್ಚುವವರೆಗೆ ಬಡ್ಡಿಯು ಲಭ್ಯವಾಗಲಿದೆ. ಖಾತೆದಾರರು ಪ್ರತಿ ಹಣಕಾಸು ವರ್ಷಕ್ಕೆ ಒಮ್ಮೆ ಯಾವುದೇ ಹಣವನ್ನು ಹಿಂಪಡೆಯಬಹುದು.

 5 ವರ್ಷಗಳವರೆಗೆ ವಿಸ್ತರಣೆ

5 ವರ್ಷಗಳವರೆಗೆ ವಿಸ್ತರಣೆ

ನೀವು ಹದಿನೈದು ವರ್ಷ ಕೊನೆಯಾದ ಬಳಿಕ ಪಿಪಿಎಫ್ ಖಾತೆಯನ್ನು ವಿಸ್ತರಣೆ ಮಾಡಲು ಬಯಸಿದರೆ, ವಿಸ್ತರಣೆ ಮಾಡಬಹುದು. ಇನ್ನೂ 5 ವರ್ಷಗಳವರೆಗೆ ವಿಸ್ತರಣೆ ಮಾಡಬಹುದು. ಆದರೆ ನೀವು ಅದಕ್ಕೆ ಈ ಹಿಂದಿನಂತೆ ಹೂಡಿಕೆ ಮಾಡುವಂತಿಲ್ಲ. ಬದಲಾಗಿ ಐದು ವರ್ಷ ಬಡ್ಡಿಯನ್ನು ನೀವು ಗಳಿಸಬಹುದು. ನೀವು ಹಣವನ್ನು ಹಿಂಪಡೆಯಬೇಕಾದರೆ ಹಣವನ್ನು ಹಿಂದಕ್ಕೆ ಕೂಡಾ ಪಡೆದುಕೊಳ್ಳಬಹುದು. ಆದರೆ ಪ್ರತಿ ವರ್ಷ ಒಂದು ಬಾರಿ ಮಾತ್ರ ಹಣವನ್ನು ಹಿಂದಕ್ಕೆ ಪಡೆಯಲು ಸಾಧ್ಯವಾಗುತ್ತದೆ.

 ಕೊಡುಗೆಗಳೊಂದಿಗೆ 5 ವರ್ಷಗಳವರೆಗೆ ವಿಸ್ತರಣೆ

ಕೊಡುಗೆಗಳೊಂದಿಗೆ 5 ವರ್ಷಗಳವರೆಗೆ ವಿಸ್ತರಣೆ

ನೀವು ಹದಿನೈದು ವರ್ಷದ ಬಳಿಕವೂ ಪಿಪಿಎಫ್ ಕೊಡುಗೆಯನ್ನು ಮುಂದುವರಿಸಲು ಬಯಸಿದರೆ, ಆ ಆಯ್ಕೆಯೂ ಕೂಡಾ ನಿಮಗೆ ಇದೆ. ವಿಸ್ತೃತ ಅವಧಿಯಲ್ಲಿ ನೀವು ಪ್ರತಿ ವರ್ಷ ನಿಮ್ಮ ಪಿಪಿಎಫ್ ಖಾತೆಗೆ ಕೊಡುಗೆಗಳನ್ನು ಮಾಡಬೇಕಾಗುತ್ತದೆ. ಖಾತೆಯ ಬಾಕಿ ಮತ್ತು ಹೊಸ ಕೊಡುಗೆಗಳಿಗೆ ಬಡ್ಡಿ ಮುಂದುವರಿಸುತ್ತವೆ. ಆದರೆ ಕೆಲವು ವಾಪಸಾತಿ ನಿರ್ಬಂಧಗಳಿವೆ. 5 ವರ್ಷಗಳಲ್ಲಿ, ವಿಸ್ತರಣೆಯ ಅವಧಿಯ ಪ್ರಾರಂಭದಲ್ಲಿ ಅಸ್ತಿತ್ವದಲ್ಲಿದ್ದ ಖಾತೆಯ ಬ್ಯಾಲೆನ್ಸ್‌ನ ಗರಿಷ್ಠ ಶೇಕಡ 60ರಷ್ಟು ಮಾತ್ರ ನೀವು ಹಿಂಪಡೆಯಬಹುದು. ಆದ್ದರಿಂದ ನೀವು ಪ್ರಾರಂಭದಲ್ಲಿ 40 ಲಕ್ಷ ರೂ.ಗಳನ್ನು ಹೊಂದಿದ್ದರೆ, ನೀವು ಅದರಲ್ಲಿ ಶೇಕಡ 60 ಅಂದರೆ 24 ಲಕ್ಷ ರೂಪಾಯಿ ಮಾತ್ರ ಹಿಂದಕ್ಕೆ ಪಡೆಯಬಹುದು. ಅಲ್ಲದೆ, ವರ್ಷಕ್ಕೆ ಒಂದು ಬಾರಿ ಮಾತ್ರ ಹಿಂದಕ್ಕೆ ಪಡೆಯಲು ಸಾಧ್ಯವಾಗಲಿದೆ.

 ಮೆಚ್ಯೂರಿಟಿ ವಿಸ್ತರಣೆ/ಖಾತೆ ಮುಚ್ಚುವುದನ್ನು ಹೇಗೆ ಆಯ್ಕೆ ಮಾಡುವುದು?

ಮೆಚ್ಯೂರಿಟಿ ವಿಸ್ತರಣೆ/ಖಾತೆ ಮುಚ್ಚುವುದನ್ನು ಹೇಗೆ ಆಯ್ಕೆ ಮಾಡುವುದು?

ನೀವು ಮೆಚ್ಯೂರಿಟಿಯನ್ನು ವಿಸ್ತರಣೆ ಮಾಡುವುದು ಅಥವಾ ಖಾತೆಯನ್ನು ಮುಚ್ಚಿ ಹಣವನ್ನು ಹಿಂದಕ್ಕೆ ಪಡೆಯುವುದು, ಇವೆರಡರಲ್ಲಿ ನಿಮಗೆ ಯಾವುದನ್ನು ಆಯ್ಕೆ ಮಾಡುವುದು ಎಂದು ಹಲವಾರು ಗೊಂದಲಗಳು ಇರಬಹುದು. ನಿಮಗೆ ಆ ಬಗ್ಗೆ ಕೆಲವು ಸಲಹೆಯನ್ನು ನಾವು ಇಲ್ಲಿ ನೀಡುತ್ತೇವೆ. ನಿಮಗೆ ಮುಂದಿನ ಮೂರು ವರ್ಷ ಪಿಪಿಎಫ್ ಹಣದ ಅಗತ್ಯವಿಲ್ಲವೆಂದಾದರೆ, ಈ ಪಿಪಿಎಫ್ ಆಯ್ಕೆಯನ್ನು ವಿಸ್ತರಣೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಆ ಮೂಲಕ ನಿಮಗೆ ಬಡ್ಡಿಯೂ ಕೂಡಾ ಲಭ್ಯವಾಗಲಿದೆ. ಹಣ ಅನಗತ್ಯವಾಗಿ ಖರ್ಚು ಕೂಡಾ ಆಗಲಾರದು. ಸಾಧ್ಯವಾದರೆ ವರ್ಷಕ್ಕೆ ರೂ 500 ರ ಕನಿಷ್ಠ ಮಿತಿ ಅಗತ್ಯಕ್ಕಿಂತ ಹೆಚ್ಚಿನ ಕೊಡುಗೆಗಳನ್ನು ಮಾಡಿ.

English summary

What to do when your PPF completes 15 years? Explained in Kannada

PPF is a 15-year instrument and arguably India’s best fixed income investment. Let’s have a look at What to do when your PPF completes 15 years?.
Story first published: Tuesday, May 10, 2022, 16:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X