For Quick Alerts
ALLOW NOTIFICATIONS  
For Daily Alerts

ಹೋಮ್ ಲೋನ್ ಜಂಟಿಯಾಗಿ ಪಡೆಯುವುದರ ಲಾಭಗಳೇನು ಗೊತ್ತಾ?

|

ಹೋಮ್ ಲೋನ್ ಅಥವಾ ಗೃಹ ಸಾಲ ಎಂಬುದು ಸೆಕ್ಯೂರ್ಡ್ ಆದ ಸಾಲ. ಏಕೆಂದರೆ ಮನೆಯನ್ನೇ ಅಡಮಾನ ಮಾಡಿ, ಸಾಲ ಪಡೆಯಲಾಗುತ್ತದೆ. ಇನ್ನು ಸಾಲ ಮರುಪಾವತಿ ಅವಧಿ ಬಹಳ ದೀರ್ಘವಾದದ್ದು. ದೊಡ್ಡ ಮೊತ್ತದ ಸಾಲವನ್ನು ದೀರ್ಘಾವಧಿ ತನಕ ಪಾವತಿಸುತ್ತಾ ಹೋಗುತ್ತೀರಿ. ಆದರೆ ನಿಮಗೆ ಗೊತ್ತಿರಲಿ, ಗೃಹ ಸಾಲವನ್ನು ಜಂಟಿಯಾಗಿ ಪಡೆಯುವುದಕ್ಕೇ ಹಲವರು ಆದ್ಯತೆ ನೀಡುತ್ತಾರೆ.

ಇನ್ನೂ ಕೆಲ ಬ್ಯಾಂಕ್ ಗಳಲ್ಲಿ ಜಂಟಿ ಅರ್ಜಿದಾರರೊಬ್ಬರು ಇರುವುದು ಗೃಹಸಾಲಕ್ಕೆ ಕಡ್ಡಾಯವೇ ಮಾಡಲಾಗಿದೆ. ಜಂಟಿ ಮಾಲೀಕರನ್ನೇ ಮತ್ತೊಬ್ಬ ಅರ್ಜಿದಾರರನ್ನಾಗಿ ಮಾಡುವುದುಂಟು. ಹಾಗಂತ ಜಂಟಿ ಮಾಲೀಕರೇ ಆಗಿರಬೇಕು ಎಂಬ ನಿಯಮ ಏನಿಲ್ಲ. ಇಲ್ಲಿ ಜಂಟಿ ಮಾಲೀಕರು ಅಂದರೆ, ಆಸ್ತಿಯ ಸ್ವಲ್ಪ ಭಾಗದ ಮಾಲೀಕತ್ವ ಅವರದೂ ಆಗಿರುತ್ತದೆ. ಆದರೆ ಜಂಟಿ ಅರ್ಜಿದಾರರು ಅದರೆ ಅವರು ಆ ಆಸ್ತಿಯ ಮಾಲೀಕತ್ವ ಹೊಂದಿರಲೇಬೇಕು ಅಂತಿಲ್ಲ.

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹೌಸಿಂಗ್ ಲೋನ್ ಬಡ್ಡಿ; ಯಾವ ಬ್ಯಾಂಕ್ ನಲ್ಲಿ ಎಷ್ಟು?ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹೌಸಿಂಗ್ ಲೋನ್ ಬಡ್ಡಿ; ಯಾವ ಬ್ಯಾಂಕ್ ನಲ್ಲಿ ಎಷ್ಟು?

ಆದರೆ, ಒಂದು ವೇಳೆ ಮೂಲ ಅರ್ಜಿದಾರರು ಹಣ ಹಿಂತಿರುಗಿಸುವುದಕ್ಕೆ ವಿಫಲರಾದರೆ ಆ ಸಾಲ ತೀರಿಸುವುದಕ್ಕೆ ಅವರೂ ಜವಾಬ್ದಾರರು.

ಹೆಚ್ಚಿನ ಮೊತ್ತದ ಸಾಲ ದೊರೆಯುತ್ತದೆ

ಹೆಚ್ಚಿನ ಮೊತ್ತದ ಸಾಲ ದೊರೆಯುತ್ತದೆ

ಜಂಟಿ ಸಾಲ ಪಡೆಯುವುದು ಅದರದೇ ಅನುಕೂಲ ಇದೆ. ಉದಾಹರಣೆಗೆ ಅರ್ಜಿದಾರರಿಗೆ ದೊಡ್ಡ ಮೊತ್ತದ ಸಾಲ ಪಡೆಯಲು ಅನುಕೂಲ ಆಗುತ್ತದೆ. ಇದರ ಜತೆಗೆ ಬಡ್ಡಿಯಲ್ಲಿ ವಿನಾಯಿತಿ ಕೂಡ ಸಿಗುತ್ತದೆ. ವೈಯಕ್ತಿಕ ಸಾಲಕ್ಕಾಗಿ ಪ್ರಯತ್ನಿಸಿದಿರಿ ಅಂತಿಟ್ಟುಕೊಳ್ಳಿ. ಸಾಲದ ಮೊತ್ತ ಕಡಿಮೆ ಸಿಗುತ್ತದೆ. ಅದೇ ಸಂಗಾತಿಯ ಹೆಸರನ್ನೂ ಸೇರಿಸಿ, ಸಾಲಕ್ಕೆ ಯತ್ನಿಸಿದಲ್ಲಿ ಹೆಚ್ಚಿನ ಮೊತ್ತ ದೊರೆಯುತ್ತದೆ. ಒಂದು ವೇಳೆ ವೈಯಕ್ತಿಕವಾಗಿ ನಿಮ್ಮ ಸಾಲದ ಅರ್ಹತೆ 40 ಲಕ್ಷ ಇದ್ದಲ್ಲಿ, ಸಂಗಾತಿಯ ಹೆಸರನ್ನೂ ಸೇರಿಸಿಕೊಂಡು, ಜಂಟಿಯಾಗಿ ಪ್ರಯತ್ನಿಸಿದಲ್ಲಿ ಆ ಮೊತ್ತ 60ರಿಂದ 70 ಲಕ್ಷ ಮುಟ್ಟುತ್ತದೆ. ಆಗ ದೊಡ್ಡ ಮನೆಯನ್ನು ಕಟ್ಟಬಹುದು ಅಥವಾ ಖರೀದಿಸಬಹುದು.

ಕಡಿಮೆ ಬಡ್ಡಿ ದರಕ್ಕೆ ಸಾಲ

ಕಡಿಮೆ ಬಡ್ಡಿ ದರಕ್ಕೆ ಸಾಲ

ಇದರ ಜತೆಗೆ ಗೃಹ ಸಾಲದ ಮೇಲೆ ಹೆಚ್ಚುವರಿಯಾಗಿ ವಿನಾಯಿತಿಗಳು ಸಿಗುತ್ತವೆ. ಒಂದು ವೇಳೆ ಮನೆ ಸಾಲಕ್ಕೆ ಪತ್ನಿಯೇ ಮೂಲ ಅರ್ಜಿದಾರರಾಗಿದ್ದಲ್ಲಿ ಸಾಲವು ಕಡಿಮೆ ಬಡ್ಡಿ ದರಕ್ಕೆ ಸಿಗುತ್ತದೆ. ಬಹುತೇಕ ಬ್ಯಾಂಕ್ ಗಳು ಮಹಿಳಾ ಅರ್ಜಿದಾರರಿಗೆ ಬಡ್ಡಿ ದರದಲ್ಲಿ ವಿನಾಯಿತಿಯನ್ನು ನೀಡುತ್ತವೆ. ಅಷ್ಟೇ ಅಲ್ಲ, ಮಹಿಳಾ ಅರ್ಜಿದಾರರು ಅಂದರೆ ಮುದ್ರಾಂಕ ಶುಲ್ಕ ಸಹ ಕಡಿಮೆ ಆಗುತ್ತದೆ. ಎಷ್ಟೋ ರಾಜ್ಯಗಳಲ್ಲಿ ಮಹಿಳೆಯರಿಗೆ ಆ ವಿನಾಯಿತಿ ನೀಡಲಾಗಿದೆ. ಈ ನಿಯಮವು ಒಂದು ರಾಜ್ಯದಿಂದ ಮತ್ತೊಂದಕ್ಕೆ ಬದಲಾವಣೆ ಆಗುತ್ತದೆ ಎಂಬ ಅಂಶ ಗಮನದಲ್ಲಿ ಇರಬೇಕು.

ತೆರಿಗೆ ಅನುಕೂಲಕ್ಕಾಗಿಯೇ ಜಂಟಿ ಅರ್ಜಿದಾರರಾಗುತ್ತಾರೆ
 

ತೆರಿಗೆ ಅನುಕೂಲಕ್ಕಾಗಿಯೇ ಜಂಟಿ ಅರ್ಜಿದಾರರಾಗುತ್ತಾರೆ

ಹೆಚ್ಚಿನ ತೆರಿಗೆ ಅನುಕೂಲಗಳು ಸಹ ದೊರೆಯುತ್ತವೆ. ಹಲವು ಮಂದಿ ತಮಗೆ ತೆರಿಗೆ ಅನುಕೂಲ ದೊರೆಯಲಿ ಎಂಬ ಏಕೈಕ ಕಾರಣಕ್ಕೆ ಜಂಟಿ ಸಾಲಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಜಂಟಿ ಗೃಹ ಸಾಲದ ಮೂಲಕ ಹೆಚ್ಚಿನ ತೆರಿಗೆ ವಿನಾಯಿತಿ ದೊರೆಯುತ್ತದೆ. ಉದಾಹರಣೆಗೆ ಗಂಡ- ಹೆಂಡತಿ ಇಬ್ಬರಿಗೂ ಪ್ರತ್ಯೇಕವಾಗಿ 80C ಸೆಕ್ಷನ್ ಅಡಿಯಲ್ಲಿ ಅಸಲು ಮೊತ್ತದ ಮೇಲೆ ತಲಾ 1.5 ಲಕ್ಷ ರುಪಾಯಿ ವಿನಾಯಿತಿ ಸಿಗುತ್ತದೆ. ಆದ್ದರಿಂದ ಜಂಟಿ ಗೃಹ ಸಾಲ ಪಡೆದಾಗ ಸೆಕ್ಷನ್ 80C ಅಡಿಯಲ್ಲಿ 3 ಲಕ್ಷದ ತನಕ ತೆರಿಗೆ ಅನುಕೂಲ ಸಿಗಲಿದೆ. ಸ್ವಂತ ಇರುವ ಮನೆಗಳಿಗೆ ಸೆಕ್ಷನ್ 24 ಅಡಿಯಲ್ಲಿ 2 ಲಕ್ಷದ ವಿನಾಯಿತಿಯು ಜಂಟಿ ಗೃಹಸಾಲದಲ್ಲಿ 4 ಲಕ್ಷ ರುಪಾಯಿಗೆ ಏರಿಕೆ ಆಗುತ್ತದೆ.

English summary

Why Home Loan Should Taken Jointly: Here Is The Benefits For Borrowers

Peronal finance: Why people prefer housing loan jointly? Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X