For Quick Alerts
ALLOW NOTIFICATIONS  
For Daily Alerts

ಅಂಬಾನಿ ನೇತೃತ್ವದ ರಿಲಯನ್ಸ್ ಲಾಭ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಳ

|

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಅವರ ನೇತೃತ್ವದಲ್ಲಿ, ನಾಯಕತ್ವದಲ್ಲಿ ರಿಲಯನ್ಸ್ ಸಂಸ್ಥೆಯು ಕಳೆದ ಎರಡು ದಶಕಗಳಲ್ಲಿ ಆದಾಯ, ಲಾಭ ಮತ್ತು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಸ್ಥಿರವಾದ ಎರಡಂಕಿ ಬೆಳವಣಿಗೆ ದರಗಳನ್ನು ಸಾಧಿಸಿದೆ. ಈ ಅವಧಿಯಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 42 ಪಟ್ಟು ಮತ್ತು ಲಾಭದ ಪ್ರಮಾಣವು ಸುಮಾರು 20 ಪಟ್ಟು ಹೆಚ್ಚಾಗಿದೆ.

ಮುಕೇಶ್ ಅಂಬಾನಿ ಇಪ್ಪತ್ತು ವರ್ಷಗಳ ಹಿಂದೆ ರಿಲಯನ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾದರು. ರಿಲಯನ್ಸ್‌ನ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಕಂಪನಿಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ಆರಂಭಿಸಿದ್ದಾರೆ. ಇಂದಿಗೂ ಕೂಡಾ ಸಂಸ್ಥೆಯು ಲಾಭವನ್ನು ಪಡೆಯುವುದನ್ನು ಮುಂದುವರಿಸಿದ್ದಾರೆ.

Year Ender 2022: ಈ ವರ್ಷ 5 ವಿಚಾರದಲ್ಲಿ ಹೆಡ್‌ಲೈನ್‌ನಲ್ಲಿ ಕಂಡ ಅಂಬಾನಿ ಕುಟುಂಬ!Year Ender 2022: ಈ ವರ್ಷ 5 ವಿಚಾರದಲ್ಲಿ ಹೆಡ್‌ಲೈನ್‌ನಲ್ಲಿ ಕಂಡ ಅಂಬಾನಿ ಕುಟುಂಬ!

ಕಳೆದ 20 ವರ್ಷಗಳಲ್ಲಿ ರಿಲಯನ್ಸ್ ಹೂಡಿಕೆದಾರರಿಗೆ ಸಾಕಷ್ಟು ಲಾಭ ಹರಿದುಬಂದಿದೆ. ವಾರ್ಷಿಕ 87 ಸಾವಿರ ಕೋಟಿ ರೂಪಾಯಿಯಂತೆ ಹೂಡಿಕೆದಾರರ ತಿಜೋರಿಗೆ 17.4 ಲಕ್ಷ ಕೋಟಿ ರೂಪಾಯಿ ಹರಿದಿದೆ. ಈ ಮಧ್ಯೆ, ರಿಲಯನ್ಸ್ ಪ್ರಪಂಚದಾದ್ಯಂತದ ದೊಡ್ಡ ಕಂಪನಿಗಳಿಂದ ಹೂಡಿಕೆಯನ್ನು ಪಡೆದಿದೆ. ಫೇಸ್‌ಬುಕ್, ಗೂಗಲ್ ಮತ್ತು ಬ್ರಿಟಿಷ್ ಪೆಟ್ರೋಲಿಯಂನಂಥ ಬೃಹತ್ ಕಂಪನಿಗಳು ರಿಲಯನ್ಸ್ ಜತೆ ಪಾಲುದಾರಿಕೆಗೆ ಮುಂದಾದವು.

ಅಂಬಾನಿ ನೇತೃತ್ವದ ರಿಲಯನ್ಸ್ ಲಾಭ 20 ವರ್ಷಗಳಲ್ಲಿ 20 ಪಟ್ಟು ಹೆಚ್ಚಳ

ಮುಕೇಶ್ ಅಂಬಾನಿ ನೇತೃತ್ವದಲ್ಲಿ ಸಂಸ್ಥೆಯು ಹಲವು ಘಟ್ಟಗಳನ್ನು ತಲುಪಿದೆ. ತೈಲದಿಂದ ಪ್ರಾರಂಭಿಸಿ, ಟೆಲಿಕಾಂ ಮತ್ತು ರೀಟೇಲ್ ವ್ಯಾಪಾರದಲ್ಲಿ ಕಂಪನಿಯು ತನ್ನ ಬಾಹುವನ್ನು ವಿಸ್ತರಿಸಿದೆ. ಅಂದ ಹಾಗೆ ಡೇಟಾವನ್ನು 'ಹೊಸ ತೈಲ' ಎಂದು ಕರೆದ ಮೊದಲ ವ್ಯಕ್ತಿ ಮುಕೇಶ್ ಅಂಬಾನಿ. ಡೇಟಾವು ದೇಶದ ಸಾಮಾನ್ಯ ಮನುಷ್ಯರ ದೈನಂದಿನ ಜೀವನವನ್ನು ಎಷ್ಟು ಬದಲಾಯಿಸಿದೆ ಎಂದು ಹೇಳಬೇಕಾಗಿಲ್ಲ.

ರಿಲಯನ್ಸ್ ಜಿಯೋ ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿಸುವಲ್ಲಿ ಮುಕೇಶ್ ಅಂಬಾನಿ ಪಾತ್ರ ದೊಡ್ಡದ್ದು. ಹಾಗೆಯೇ ಸಂಸ್ಥೆಯು ಅತೀ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡಿದೆ. ಡಿಜಿಟಲ್ ವಹಿವಾಟು ಅಧಿಕವಾಗಿದೆ. ಗರಿಷ್ಠ ಸಂಖ್ಯೆಯ ಡಿಜಿಟಲ್ ವಹಿವಾಟಿನ ದಾಖಲೆ ಇಂದು ಭಾರತದ ಹೆಸರಿನಲ್ಲಿದೆ.

ಭಾರತದ ಆರ್ಥಿಕ ಪ್ರಗತಿ; ಅದಾನಿಗಿಂತಲೂ ಅಂಬಾನಿಗೆ ಹೆಚ್ಚು ವಿಶ್ವಾಸಭಾರತದ ಆರ್ಥಿಕ ಪ್ರಗತಿ; ಅದಾನಿಗಿಂತಲೂ ಅಂಬಾನಿಗೆ ಹೆಚ್ಚು ವಿಶ್ವಾಸ

ಪ್ರತಿ ಜಿಬಿಗೆ ಪ್ರಸ್ತುತ ಹತ್ತು ರೂಪಾಯಿಗೆ ಇಳಿಕೆ

ಪ್ರತಿ ಜಿಬಿಗೆ 250 ರೂಪಾಯಿ ಇದ್ದ ಡೇಟಾ ಜಿಯೋ ಬಂದ ನಂತರ ಸುಮಾರು 10 ರೂಪಾಯಿಗೆ ಇಳಿದಿದೆ. ಡೇಟಾ ಬಳಕೆಯಲ್ಲಿ ದೇಶವು ಅದ್ಭುತ ಜಿಗಿತ ಮಾಡಿದೆ, 2016ರಲ್ಲಿ 150ನೇ ಸ್ಥಾನದಿಂದ ಭಾರತವು ವಿಶ್ವದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಹೇಳಿಕೆಯಲ್ಲಿ ಸಂಸ್ಥೆ ತಿಳಿಸಿದೆ.

ರೀಟೇಲ್ ವಲಯದಲ್ಲೂ ರಿಲಯನ್ಸ್ ವಿಶ್ವದ ಪ್ರಮುಖ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ. ಆನ್‌ಲೈನ್ ಅಥವಾ ಆಫ್‌ಲೈನ್, ರೀಟೇಲ್ ಅಥವಾ ಸಗಟು ಹೀಗೆ ಮುಕೇಶ್ ಅಂಬಾನಿ ನಾಯಕತ್ವದಲ್ಲಿ ರಿಲಯನ್ಸ್ ಎಲ್ಲದರಲ್ಲೂ ತನ್ನ ಹಿಡಿತ ಬಲಪಡಿಸಿದೆ. ಅಮೆಜಾನ್, ಫ್ಲಿಫ್‌ಕಾರ್ಟ್, ವಾಲ್‌ಮಾರ್ಟ್‌ನಂತಹ ಕಂಪನಿಗಳು ರಿಲಯನ್ಸ್ ಅನ್ನು ಪ್ರತಿಸ್ಪರ್ಧಿ ಎಂದು ಪರಿಗಣಿಸುತ್ತವೆ.

ರಿಲಯನ್ಸ್ ರೀಟೇಲ್ ತೀವ್ರ ವೇಗದಲ್ಲಿ ಮಳಿಗೆಗಳನ್ನು ತೆರೆಯಿತು. ನಂಬಲಸಾಧ್ಯ, ಆದರೆ ಕಳೆದ ವರ್ಷ ರಿಲಯನ್ಸ್ ರೀಟೇಲ್ ಒಂದೇ ದಿನದಲ್ಲಿ 7 ಮಳಿಗೆಗಳನ್ನು ತೆರೆದು ದಾಖಲೆ ಮಾಡಿದೆ. ಆದಾಯದ ದೃಷ್ಟಿಯಿಂದಲೂ, ಇದು ದೇಶದ ನಂಬರ್ ಒನ್ ರೀಟೇಲ್ ಕಂಪನಿ ಆಗಿದೆ. ದೂರದರ್ಶಿತ್ವ ಹೊಂದಿರುವ ಮುಕೇಶ್ ಅಂಬಾನಿಯ ಲೋಹ ವ್ಯವಹಾರವನ್ನು ಇಡೀ ಜಗತ್ತು ನಂಬುತ್ತದೆ, ಆದರೆ ಅವರು ಇಲ್ಲಿಗೆ ನಿಲ್ಲುವುದಿಲ್ಲ. ಭವಿಷ್ಯದ ರಿಲಯನ್ಸ್ಗಾಗಿ ಅವರು ಈಗಾಗಲೇ ಕನಸುಗಳನ್ನು ಹೆಣೆಯಲು ಪ್ರಾರಂಭಿಸಿದ್ದಾರೆ. 75 ಸಾವಿರ ಕೋಟಿ ಬಂಡವಾಳದಲ್ಲಿ ಜಾಮ್ನಗರದಲ್ಲಿ ಹೊಸ ಇಂಧನಕ್ಕಾಗಿ 5 ಗಿಗಾ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದೆ. ರಿಲಯನ್ಸ್ ಸೌರ ಶಕ್ತಿ ಮತ್ತು ಹಸಿರು ಹೈಡ್ರೋಜನ್ನಂತಹ ಹೊಸ ಇಂಧನ ಮೂಲಗಳ ಮೇಲೆ ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ.

English summary

With Mukesh Ambani Reliance achieves double-digit growth in 20 years

With Mukesh Ambani Reliance company saw a 17-fold jump in revenues, 20-times surge in profit and has become a global conglomerate.
Story first published: Wednesday, December 28, 2022, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X