For Quick Alerts
ALLOW NOTIFICATIONS  
For Daily Alerts

Year Ender 2022: ಈ ವರ್ಷದ ಬೆಸ್ಟ್ ಬ್ಯಾಂಕ್ ಡೆಪಾಸಿಟ್‌ಗಳು, 2023ರಲ್ಲೂ ಹೂಡಿಕೆ ಉತ್ತಮವೇ?

|

ಈ ವರ್ಷವು ಬ್ಯಾಂಕ್‌ನಲ್ಲಿ ಫಿಕ್ಸಿಡ್ ಡೆಪಾಸಿಟ್ ಇಟ್ಟವರಿಗೆ ಉತ್ತಮ ವರ್ಷವಾಗಿದೆ. ಯಾಕೆಂದರೆ ಈ 2022ರ ವರ್ಷದಲ್ಲಿ ಹಲವಾರು ಬಾರಿ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ. ಆದರೆ ಈ ಬಡ್ಡಿದರ ಏರಿಕೆಯು ಗೃಹ ಸಾಲದಂತಹ ರೆಪೋ ಆಧಾರಿತ ಬಡ್ಡಿದರವಿರುವ ಸಾಲವನ್ನು ಪಡೆದವರಿಗೆ ಮಾತ್ರ ಇಎಂಐ ಹೊರೆಯು ಅಧಿಕವಾಗಿದೆ. ಆದರೆ ಎಫ್‌ಡಿ ಹೂಡಿಕೆದಾರರಿಗೆ ಬೆಸ್ಟ್ ವರ್ಷ ಇದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣದುಬ್ಬರವನ್ನು ಹತೋಟಿಗೆ ತರುವ ಸತತ ಪ್ರಯತ್ನದಲ್ಲಿ ರೆಪೋ ದರವನ್ನು ಒಟ್ಟು ಐದು ಬಾರಿ ಹೆಚ್ಚಳ ಮಾಡಿದೆ. ಮೇ ತಿಂಗಳಿನಿಂದ ರೆಪೋ ದರ ಏರಿಕೆ ಆರಂಭ ಮಾಡಲಾಗಿದ್ದು, ಶೇಕಡ 4ರಷ್ಟಿದ್ದ ದರ ಈಗ ಶೇಕಡ 6.25ಕ್ಕೆ ತಲುಪಿದೆ. ಮೇ ತಿಂಗಳಲ್ಲಿ 40 ಬಿಪಿಎಸ್, ಜೂನ್‌ನಲ್ಲಿ 50 ಬಿಪಿಎಸ್, ಆಗಸ್ಟ್‌ನಲ್ಲಿ 50 ಬಿಪಿಎಸ್‌, ಸೆಪ್ಟೆಂಬರ್‌ನಲ್ಲಿ 50 ಬಿಪಿಎಸ್ ಹಾಗೂ ಡಿಸೆಂಬರ್‌ನಲ್ಲಿ 35 ಬಿಪಿಎಸ್‌ನಷ್ಟು ವಿತ್ತೀಯ ದರ ಹೆಚ್ಚಿಸಲಾಗಿದೆ.

2023ರಲ್ಲಿ ತ್ವರಿತ ರಿಟರ್ನ್ ಪಡೆಯಬೇಕಾದರೆ ಈ ಸ್ಟಾಕ್ ಖರೀದಿಸಿ!2023ರಲ್ಲಿ ತ್ವರಿತ ರಿಟರ್ನ್ ಪಡೆಯಬೇಕಾದರೆ ಈ ಸ್ಟಾಕ್ ಖರೀದಿಸಿ!

ಇದರಿಂದಾಗಿ ಬ್ಯಾಂಕ್‌ಗಳು ಕೂಡಾ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತಾ ಬಂದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಬಡ್ಡಿದರವನ್ನು ಶೇಕಡ 7ರಷ್ಟು ಹೆಚ್ಚಳ ಮಾಡಿದೆ. 2022ರಲ್ಲಿ ಫಿಕ್ಸಿಡ್ ಡೆಪಾಸಿಟ್ ಮೂಲಕ ಉತ್ತಮ ಬಡ್ಡಿದರವನ್ನು ನೀಡುತ್ತಿರುವ, ಮುಂದಿನ ದಿನಗಳಲ್ಲಿ ಉತ್ತಮ ರಿಟರ್ನ್ ಪಡೆಯಲು ಸಾಧ್ಯವಾಗುವ ಸ್ಮಾಲ್ ಫೈನಾನ್ಸ್ ಬ್ಯಾಂಕ್, ವೃತ್ತಿಪರ ಬ್ಯಾಂಕ್‌ಗಳ ಬಗ್ಗೆ ಇಲ್ಲಿದೆ... ಮುಂದೆ ಓದಿ.....

 ಶೇ.9ರಷ್ಟು ಬಡ್ಡಿದರ ನೀಡುವ ಬ್ಯಾಂಕು!

ಶೇ.9ರಷ್ಟು ಬಡ್ಡಿದರ ನೀಡುವ ಬ್ಯಾಂಕು!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಡಿಯಲ್ಲಿ ಬರುವ ಸೂರ್ಯೋಧಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ 5 ವರ್ಷದ ಡೆಪಾಸಿಟ್‌ ಮೇಲೆ ಸುಮಾರು ಶೇಕಡ 9.01ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಾಗೆಯೇ ಹಿರಿಯ ನಾಗರಿಕರಿಗೆ ಅದೇ ಅವಧಿಯ ಡೆಪಾಸಿಟ್‌ಗೆ ಶೇಕಡ 9.59ರಷ್ಟು ಬಡ್ಡಿದರವನ್ನು ಈ ಬ್ಯಾಂಕ್ ನೀಡುತ್ತದೆ. ಡಿಸೆಂಬರ್ 20, 2022ರ ಒಳಗೆ ನಾವು ಈ ಬ್ಯಾಂಕ್‌ನಲ್ಲಿ ಮಾಡಲಾಗುವ 5 ವರ್ಷದ ಡೆಪಾಸಿಟ್‌ಗಳ ಮೇಲೆ ಮಾತ್ರ ಈ ಬಡ್ಡಿದರವು ಅನ್ವಯವಾಗುತ್ತದೆ. ಇನ್ನು 1 ವರ್ಷ 6 ತಿಂಗಳಿನಿಂದ 2 ವರ್ಷದವರೆಗಿನ ಎಫ್‌ಡಿ ಮೇಲೆ ಶೇಕಡ 8.01ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ ಹಿರಿಯ ನಾಗರಿಕರಿಗೆ ಇದೇ ಅವಧಿಗೆ ಶೇಕಡ 8.56ರಷ್ಟು ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. 999 ದಿನಗಳ ಡೆಪಾಸಿಟ್ ಮೇಲೆ ಬ್ಯಾಂಕ್‌ ಸಾಮಾನ್ಯ ನಾಗರಿಕರಿಗೆ ಶೇಕಡ 8.51ರಷ್ಟು ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 8.76ರಷ್ಟು ಬಡ್ಡಿದರವನ್ನು ನೀಡುತ್ತದೆ. 2 ವರ್ಷದಿಂದ 998 ದಿನಗಳ ಎಫ್‌ಡಿ ಮೇಲೆ ಶೇಕಡ 7.51 ಹಾಗೂ ಹಿರಿಯ ನಾಗರಿಕರಿಗೆ ಶೇಕಡ 8.01ರಷ್ಟು ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ.

Year Ender 2022: ಈ ವರ್ಷ ವಿವಾದಕ್ಕೆ ಒಳಗಾದ ಬಾಸ್‌ಗಳು ಇವರೇ ನೋಡಿ!Year Ender 2022: ಈ ವರ್ಷ ವಿವಾದಕ್ಕೆ ಒಳಗಾದ ಬಾಸ್‌ಗಳು ಇವರೇ ನೋಡಿ!

 ನೀವು ಎಫ್‌ಡಿ ಮೇಲೆ ಹೂಡಿಕೆ ಮಾಡಬಹುದೇ?

ನೀವು ಎಫ್‌ಡಿ ಮೇಲೆ ಹೂಡಿಕೆ ಮಾಡಬಹುದೇ?

5 ಲಕ್ಷ ರೂಪಾಯಿವರೆಗಿನ ಡೆಪಾಸಿಟ್‌ಗೆ ಡಿಐಸಿಜಿಸಿ ವಿಮೆ ಇರುತ್ತದೆ. ಆದ್ದರಿಂದಾಗಿ ಈ ಹೂಡಿಕೆಯು ಸುರಕ್ಷಿತವಾಗಿದೆ. ಈ ಹಿಂದೆಯೇ ನಾವು ಹೇಳಿದಂತೆ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅನ್ನು ಆರ್‌ಬಿಐ ನಿಯಂತ್ರಣ ಮಾಡುತ್ತದೆ. ನೀವು 5 ಲಕ್ಷ ರೂಪಾಯಿಗಿಂತ ಕಡಿಮೆ ಹೂಡಿಕೆ ಮಾಡುವುದರಿಂದ ಯಾವುದೇ ತೊಂದರೆ ಉಂಟಾಗಲಾರದು. ಹಾಗೆಯೇ ಡೆಪಾಸಿಟ್ ಮೇಲೆ ಅಧಿಕ ಲಾಭ ಲಭ್ಯವಾಗಲಿದೆ. ಸಾಮಾನ್ಯ ಬ್ಯಾಂಕ್‌ಗಳು ಶೇಕಡ 4ರಿಂದ 8ರವರೆಗೆ ಬಡ್ಡಿದರವನ್ನು ನೀಡಿದರೆ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಅಧಿಕ ಬಡ್ಡಿದರವನ್ನು ನೀಡುತ್ತದೆ

 ಉತ್ತಮ ಬಡ್ಡಿದರ ಹೊಂದಿರುವ ಬ್ಯಾಂಕ್‌ಗಳು

ಉತ್ತಮ ಬಡ್ಡಿದರ ಹೊಂದಿರುವ ಬ್ಯಾಂಕ್‌ಗಳು

ಸೂರ್ಯೋಧಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 9.01, ಹಿರಿಯ ನಾಗರಿಕರಿಗೆ ಶೇ. 0.25-0.50 ಅಧಿಕ
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 8.50, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಈಕ್ವಿಟಿಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 8.00, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಇಎಸ್‌ಎಎಫ್‌ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 8.00, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 8.00, ಹಿರಿಯ ನಾಗರಿಕರಿಗೆ ಶೇ. 0.75 ಅಧಿಕ
ಫೀನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 8.00, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 8.00, ಹಿರಿಯ ನಾಗರಿಕರಿಗೆ ಶೇ. 0.75 ಅಧಿಕ
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 7.75, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 7.75, ಹಿರಿಯ ನಾಗರಿಕರಿಗೆ ಶೇ. 0.75 ಅಧಿಕ
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 7.55, ಹಿರಿಯ ನಾಗರಿಕರಿಗೆ ಶೇ. 0.95 ಅಧಿಕ
ಆರ್‌ಬಿಎಲ್ ಬ್ಯಾಂಕ್: ಶೇಕಡ 7.55, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಯೆಸ್ ಬ್ಯಾಂಕ್: ಶೇಕಡ 7.50, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಬಂಧನ್ ಬ್ಯಾಂಕ್: ಶೇಕಡ 7.50, ಹಿರಿಯ ನಾಗರಿಕರಿಗೆ ಶೇ. 0.50-0.75 ಅಧಿಕ
ಶಿವಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇಕಡ 7.50, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಡಿಸಿಬಿ ಬ್ಯಾಂಕ್: ಶೇಕಡ 7.50, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಶೇಕಡ 7.30, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಐಡಿಎಫ್‌ಸಿ ಫಸ್ಟ್ ಬ್ಯಾಂಕ್: ಶೇಕಡ 7.25, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಬ್ಯಾಂಕ್ ಆಫ್ ಇಂಡಿಯಾ: ಶೇಕಡ 7.25, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಎಸ್‌ಬಿಎಂ ಬ್ಯಾಂಕ್: ಶೇಕಡ 7.00, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ
ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡ 7.00, ಹಿರಿಯ ನಾಗರಿಕರಿಗೆ ಶೇ. 0.50 ಅಧಿಕ

English summary

Year Ender 2022: Best Bank Deposit interest Rates Of 2022, Details in Kannada

Year Ender 2022: The year 2022 was one that saw constant increase in interest rates. Here's Best Bank Deposit interest Rates Of 2022, Can Invest For 2023 As Well?, details in kannada.
Story first published: Thursday, December 15, 2022, 11:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X