For Quick Alerts
ALLOW NOTIFICATIONS  
For Daily Alerts

Year Ender 2022: ಈ ವರ್ಷ ಅತೀ ದೊಡ್ಡ ಡೀಲ್‌ಗಳಿವು ನೋಡಿ

|

2022ರಲ್ಲಿ ಹಲವಾರು ಡೀಲ್‌ಗಳು, ಒಪ್ಪಂದಗಳು, ವಿಲೀನ ಪ್ರಕ್ರಿಯೆಗಳು ನಡೆದಿದ್ದು ಜಾಗತಿಕವಾಗಿ ಸದ್ದು ಮಾಡಿದೆ. ಎಲಾನ್ ಮಸ್ಕ್‌ ವಿವಾದಾದ್ಮಕ ಟ್ವಿಟ್ಟರ್‌ ಡೀಲ್‌ನಿಂದ ಹಿಡಿದು, ಟಾಟಾ ಸನ್ಸ್‌ನ ಏರ್‌ಇಂಡಿಯಾ ಒಪ್ಪಂದದವರೆಗೂ ಹಲವಾರು ಡೀಲ್‌ಗಳು ನಡೆದಿದೆ. ಹಾಗೆಯೇ ಹಲವಾರು ವಿಲೀನ ಪ್ರಕ್ರಿಯೆಗಳು ನಡೆದಿದೆ.

ಸುಮಾರು 69 ವರ್ಷಗಳ ನಂತರ ಏರ್‌ ಇಂಡಿಯಾವನ್ನು ಟಾಟಾ ಸಂಸ್ಥೆ ಮತ್ತೆ ತನ್ನ ಮುಷ್ಠಿಗೆ ಪಡೆದುಕೊಂಡಿದೆ. ಈ ಡೀಲ್‌ಗಳು ಬರೀ ತಾಂತ್ರಿಕ ಸೆಕ್ಟರ್‌ಗಳಲ್ಲಿ ನಡೆದಿಲ್ಲ. ಬದಲಾಗಿ ಹಣಕಾಸು ಹಾಗೂ ಮನರಂಜನಾ ವಿಭಾಗದಲ್ಲಿಯೂ ನಡೆದಿದೆ. ಪ್ರಮುಖ ಡೀಲ್‌ಗಳು ಸೆಕ್ಟರ್‌ನಲ್ಲಿಯೇ ಭಾರೀ ಬದಲಾವಣೆಗೆ ಕಾರಣವಾಗಿದೆ.

ಹೋಲ್ಸಿಮ್ ಡೀಲ್ ಬಳಿಕ ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್!ಹೋಲ್ಸಿಮ್ ಡೀಲ್ ಬಳಿಕ ಎಸಿಸಿ, ಅಂಬುಜಾ ಸಿಮೆಂಟ್ಸ್ ಷೇರಿಗೆ ಭಾರೀ ಡಿಮ್ಯಾಂಡ್!

ಇನ್ನು ಈ ವರ್ಷದಲ್ಲಿ ಅಂದರೆ 2022ರಲ್ಲಿ ವಿಲೀನ ಪ್ರಕ್ರಿಯೆ ಹಾಗೂ ಡೀಲ್‌ಗಳು ಸಾರ್ವಕಾಲಿಕವಾಗಿ ಹೆಚ್ಚಾಗಿದೆ. 2022ರ ಮೊದಲ 9 ತಿಂಗಳಿನಲ್ಲಿಯೇ 148 ಬಿಲಿಯನ್ ಡಾಲರ್‌ನ ಡೀಲ್‌ಗಳು ನಡೆದಿದೆ. 2021ರಲ್ಲಿ ನಡೆದ ಡೀಲ್‌ಗಳಿಗಿಂತ ಈ ವರ್ಷ ಸುಮಾರು ಶೇಕಡ 58.2ರಷ್ಟು ಅಧಿಕ ಡೀಲ್‌ಗಳು ನಡೆದಿದೆ. 2018ರಲ್ಲಿ ಸುಮಾರು 132 ಬಿಲಿಯನ್ ಡಾಲರ್‌ನ ಡೀಲ್‌ಗಳು ನಡೆದಿದ್ದವು. 2022ರ ಮೊದಲ ಒಂಬತ್ತು ತಿಂಗಳಗಳು ಪ್ರತಿ ದಿನ ಡೀಲ್‌ಗಳ ಸುದ್ದಿಯಾಗಿತ್ತು. 2022ರ ಪ್ರಮುಖ ಡೀಲ್, ವಿಲೀನ ಪ್ರಕ್ರಿಯೆ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಏರ್‌ ಇಂಡಿಯಾ ಮತ್ತೆ ಟಾಟಾ ಮುಷ್ಠಿಗೆ

ಏರ್‌ ಇಂಡಿಯಾ ಮತ್ತೆ ಟಾಟಾ ಮುಷ್ಠಿಗೆ

ಏರ್‌ಇಂಡಿಯಾವನ್ನು ಮತ್ತೆ ತನ್ನ ಮಾಲೀಕತ್ವಕ್ಕೆ ಪಡೆಯುವ ರತನ್ ಟಾಟಾರ ಕನಸು ಈ ವರ್ಷ ನನಸಾಗಿದೆ. 1932 ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಅನ್ನು ಆರಂಭ ಮಾಡಿದ್ದಾರೆ. ಅದನ್ನು ಬಳಿಕ ಸರ್ಕಾರವು ತನ್ನ ಸ್ವಾಮ್ಯಕ್ಕೆ ಪಡೆದಿದ್ದು ಏರ್‌ಇಂಡಿಯಾ ಎಂದು ಹೆಸರುವಾಸಿಯಾಗಿದೆ. 2022ರಲ್ಲಿ ಏರ್‌ಇಂಡಿಯಾವನ್ನು ಟಾಟಾ ಗ್ರೂಪ್ ಮತ್ತೆ ಹತೋಟಿಗೆ ಪಡೆದಿದೆ. ಬಿಡ್ ಅನ್ನು 18,000 ಕೋಟಿ ರೂಪಾಯಿಗೆ ಗೆದ್ದಿರುವ ಟಾಟಾ ಗ್ರೂಪ್, ಈಗ ಏರ್‌ಇಂಡಿಯಾದ ನಿರ್ವಹಣೆ ಮಾಡುತ್ತಿದೆ. ಇತರೆ ಸಂಸ್ಥೆಗಳಿಗಿಂತ ಸುಮಾರು 2,900 ಕೋಟಿ ರೂಪಾಯಿ ಅಧಿಕ ಬಿಡ್‌ ಅನ್ನು ಟಾಟಾ ಮಾಡಿದೆ. ಅದಾದಾ ಬಳಿಕ ಟಾಟಾ ಸನ್ಸ್ ಏರ್‌ಇಂಡಿಯಾವನ್ನು ವಿಸ್ತಾರ ಹಾಗೂ ಏರ್‌ ಏಷ್ಯಾದ ಜೊತೆ ವಿಲೀನ ಮಾಡಿದೆ.

 ಮಸ್ಕ್‌ನ ವಿವಾದಾತ್ಮಕ ಟ್ವಿಟ್ಟರ್ ಡೀಲ್

ಮಸ್ಕ್‌ನ ವಿವಾದಾತ್ಮಕ ಟ್ವಿಟ್ಟರ್ ಡೀಲ್

ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿರುವುದು ಈ ವರ್ಷದ ಅತೀ ವಿವಾದಾದ್ಮಕ ಡೀಲ್ ಆಗಿದೆ. ಅಕ್ಟೋಬರ್‌ನಲ್ಲಿ ಈ ಡೀಲ್ ನಡೆದಿದೆ. ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡುವ ಬಗ್ಗೆ ಮೊದಲು ಮಾತನಾಡಿದ್ದು ಆ ಬಳಿಕ ಡೀಲ್‌ನಿಂದ ಹಿಂದೆ ಸರಿದಿದ್ದಾರೆ. ಆ ಬಳಿಕ ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ಕೊನೆಗೆ ಪ್ರತಿ ಷೇರಿಗೆ 54.20 ಡಾಲರ್‌ನಂತೆ 44 ಬಿಲಿಯನ್ ಡಾಲರ್ ನೀಡಿ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಖರೀದಿ ಮಾಡಿದ್ದಾರೆ. ಇನ್ನು ತಾನು ಟ್ವಿಟ್ಟರ್‌ನ ಮಾಲೀಕತ್ವವನ್ನು ಪಡೆದ ಬೆನ್ನಲ್ಲೇ ಎಲಾನ್ ಮಸ್ಕ್ ಸಿಇಒ ಪರಾಗ್ ಅಗರ್ವಾಲ್‌, ಇನ್ನಿಬ್ಬರು ಅಧಿಕಾರಿಗಳಾದ ನೆಡ್ ಸೆಗಲ್, ವಿಜಯ ಗಡ್ಡೆರನ್ನು ತನ್ನ ವಜಾಮಾಡಿದ್ದಾರೆ. ಸಂಸ್ಥೆಯು 3700 ಮಂದಿಯನ್ನು ಇಮೇಲ್‌ ಮೂಲಕವೇ ವಜಾಗೊಳಿಸಿದೆ.

 ಎನ್‌ಡಿಟಿವಿಯಲ್ಲಿ  ಅದಾನಿ ಅತೀ ದೊಡ್ಡ ಷೇರುದಾರರು

ಎನ್‌ಡಿಟಿವಿಯಲ್ಲಿ ಅದಾನಿ ಅತೀ ದೊಡ್ಡ ಷೇರುದಾರರು

ನ್ಯೂ ದೆಲ್ಲಿ ಟೆಲಿವಿಜನ್ ಲಿಮಿಟೆಡ್‌ನಲ್ಲಿ (ಎನ್‌ಡಿಟಿವಿ) ಅತೀ ಅಧಿಕ ಷೇರನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಬಿಲಿಯನರ್ ಗೌತಮ್ ಅದಾನಿ ಸಂಸ್ಥೆ ಅದಾನಿ ಗ್ರೂಪ್ ಮಿಡೀಯಾ ಪಡೆದುಕೊಂಡಿದೆ. ಸುಮಾರು ಶೇಕಡ 29.18ರಷ್ಟು ಷೇರನ್ನು ಹೊಂದಿರುವ ಸಂಸ್ಥೆಯು ಮಾಧ್ಯಮ ಲೋಕವನ್ನು ತನ್ನ ಹೆಜ್ಜೆ ಇರಿಸಿದೆ. ರಾಧಿಕಾ ರಾಯ್ ಹಾಗೂ ಪ್ರಣಯ್ ರಾಯ್ ಎನ್‌ಡಿಟಿವಿಯ ಸಂಸ್ಥಾಕರಾಗಿದ್ದು ಸಂಸ್ಥೆಯ ಶೇಕಡ 26ರಷ್ಟು ಷೇರನ್ನು ಖರೀದಿ ಮಾಡುವುದಾಗಿ ಅದಾನಿ ಸಂಸ್ಥೆ ಬಹಿರಂಗವಾಗಿ ಆಫರ್ ನೀಡಿತ್ತು. ಇನ್ನು ಈ ಒಪ್ಪಂದವು ಪರೋಕ್ಷವಾಗಿ ನಡೆಯಲಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮಾಲೀಕತ್ವದ ವಿಶ್ವಪ್ರಧಾನ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಮೂಲಕ ಇದು ನಡೆಯಲಿದೆ.

 ಪಿವಿಆರ್, ಐನಾಕ್ಸ್ ವಿಲೀನ ಪ್ರಕ್ರಿಯೆ

ಪಿವಿಆರ್, ಐನಾಕ್ಸ್ ವಿಲೀನ ಪ್ರಕ್ರಿಯೆ

ದೇಶದ ಪ್ರಮುಖ ಮಲ್ಟಿಫ್ಲೆಕ್ಸ್‌ಗಳಾದ ಪಿವಿಆರ್‌, ಐನಾಕ್ಸ್ ವಿಲೀನವಾಗಿರುವುದು ದೇಶದಲ್ಲಿ 2022ರಲ್ಲಿ ನಡೆದ ಬಹುದೊಡ್ಡ ವಿಲೀನ ಪ್ರಕ್ರಿಯೆಯಾಗಿದೆ. ಎರಡು ಕೂಡಾ ದೇಶದ ಜನಪ್ರಿಯ ಮಲ್ಟಿಫ್ಲೆಕ್ಸ್‌ಗಳಾಗಿದ್ದು, ಇದು ಈಗ ಒಟ್ಟಾಗಿ ಪಿವಿಆರ್ ಐನಾಕ್ಸ್ ಲಿಮಿಟೆಡ್ ಎಂದು ಆಗಿದೆ. ಹಾಗೆಯೇ ಹೊಸ ಸಿನಿಮಾದ ಪೋಸ್ಟ್‌ನಲ್ಲಿ ಪಿವಿಆರ್‌ ಐನಾಕ್ಸ್ ಎಂದೇ ಕಾಣಿಸಿಕೊಳ್ಳಲಿದೆ.

 ಅಂಬುಜಾ ಸಿಮೆಂಟ್ಸ್, ಎಸಿಸಿಯನ್ನು ಖರೀದಿಸಿದ ಅದಾನಿ ಸಿಮೆಂಟ್ಸ್

ಅಂಬುಜಾ ಸಿಮೆಂಟ್ಸ್, ಎಸಿಸಿಯನ್ನು ಖರೀದಿಸಿದ ಅದಾನಿ ಸಿಮೆಂಟ್ಸ್

ಅದಾನಿ ಗ್ರೂಪ್ ಈ ವರ್ಷದಲ್ಲಿ ಕುದುರಿಸಿದ ಮತ್ತೊಂದು ದೊಡ್ಡ ಡೀಲ್ ಸಿಮೆಂಟ್ ಸಂಸ್ಥೆಯ ಡೀಲ್ ಆಗಿದೆ. ಅದಾನಿ ಗ್ರೂಪ್ ದೇಶದ ಎರಡನೇ ಅತೀ ದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಈ ಸಂಸ್ಥೆಯು ಹೋಲ್ಸಿಮ್‌ನಿಂದ ಎಸಿಸಿಯನ್ನು ಹಾಗೂ ಅಂಬುಜಾ ಸಿಮೆಂಟ್ಸ್ ಅನ್ನು ಖರೀದಿ ಮಾಡಿದೆ. ಹೋಲ್ಸಿಮ್‌ ತನ್ನ ಎಲ್ಲ ಅಂಬುಜಾ ಸಿಮೆಂಟ್ಸ್ ಷೇರನ್ನು ಪ್ರತಿ ಷೇರಿಗೆ 385 ರೂಪಾಯಿಯಂತೆ ಮಾರಾಟ ಮಾಡಿದೆ. ಇನ್ನು ಎಸಿಸಿಯ ಪ್ರತಿ ಷೇರನ್ನು ಪ್ರತಿ ಷೇರಿಗೆ 2,300 ರೂಪಾಯಿಯಂತೆ ಮಾರಾಟ ಮಾಡಿದೆ. ಸುಮಾರು 6.4 ಬಿಲಿಯನ್ ಡಾಲರ್‌ನ ಡೀಲ್ ಇದಾಗಿದೆ. ಹೋಲ್ಸಿಮ್‌ ಅಂಬುಜಾ ಸಿಮೆಂಟ್‌ನ ಶೇಕಡ 63.11ರಷ್ಟು ಷೇರನ್ನು ಹಾಗೂ ಎಸಿಸಿಯ ಶೇಕಡ 50.05 ಷೇರನ್ನು ಹಾಗೆಯೇ ಶೇಕಡ 4.48ರಷ್ಟು ಡೈರೆಕ್ಟ್ ಸ್ಟೇಕ್ ಅನ್ನು ಮಾರಾಟ ಮಾಡಿದೆ.

 ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಲಿಮಿಟೆಡ್ ವಿಲೀನ ಪ್ರಕ್ರಿಯೆ

ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಲಿಮಿಟೆಡ್ ವಿಲೀನ ಪ್ರಕ್ರಿಯೆ

ಈ ವರ್ಷದಲ್ಲಿ ಪ್ರಕ್ರಿಯೆಯ್ಲಲಿರುವ ಮತ್ತೊಂದು ವಿಲೀನವು ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಆಗಿದೆ. ಈ ವಿಲೀನ ಪ್ರಕ್ರಿಯೆಯು 2023ರ ಎರಡನೇ ತ್ರೈಮಾಸಿಕದಲ್ಲಿ ಕೊನೆಯಾಗಲಿದೆ. ಹಲವಾರು ತಿಂಗಳುಗಳಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆಯು ನಡೆಯುತ್ತಿದೆ. ಈ ವಿಲೀನವು ದೇಶದ ವಹಿವಾಟಿನ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ. ಆದರೆ ಈ ಪ್ರಕ್ರಿಯೆ ಸಂಪೂರ್ಣವಾಗಲು ಇನ್ನೂ ಕೂಡಾ ಸುಮಾರು 8ರಿಂದ 10 ತಿಂಗಳುಗಳ ಕಾಲ ಬೇಕಾಗುತ್ತದೆ. 40 ಬಿಲಿಯನ್ ಡಾಲರ್‌ ಮೌಲ್ಯದ ವಿಲೀನ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆ ಏಪ್ರಿಲ್ 4, 2022ರಂದು ಆರಂಭವಾಗಿದೆ. ಆ ಸಂದರ್ಭದಲ್ಲಿ ಉಭಯ ಸಂಸ್ಥೆಗಳು ಈ ಪ್ರಕ್ರಿಯೆ ಪೂರ್ಣವಾಗಲು ಸುಮಾರು 12ರಿಂದ 18 ತಿಂಗಳುಗಳು ಬೇಕಾಗುತ್ತದೆ ಎಂದು ಹೇಳಿಕೊಂಡಿತ್ತು. ಪ್ರಕ್ರಿಯೆ ಆರಂಭವಾಗಿ ಸುಮಾರು 7-8 ತಿಂಗಳುಗಳು ಆಗಿದೆ. ಆದರೆ ಸಂಸ್ಥೆಗಳು ಈಗ ಪ್ರಕ್ರಿಯೆ ಪೂರ್ಣವಾಗಲು 8-10 ತಿಂಗಳು ಬೇಕಾಗುತ್ತದೆ ಎಂದು ಹೇಳಿಕೊಂಡಿದೆ.

English summary

Year Ender 2022: Top Mergers & Acquisitions Of This Year, Details in Kannada

Year Ender 2022: From the world’s richest man Elon Musk's controversial Twitter deal to Tata Sons taking Air India is Top Mergers & Acquisitions Of This Year, Details in Kannada.
Story first published: Friday, December 16, 2022, 15:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X