ಕರ್ನಾಟಕದಲ್ಲಿ ರೇರಾ(RERA) ಕಾಯಿದೆ ಜಾರಿ: ರಿಯಲ್ ಎಸ್ಟೇಟ್ ಹೊಸ ನಿಯಮಗಳೇನು?

Written By: Siddu
Subscribe to GoodReturns Kannada

ರಿಯಲ್ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು (ರೇರಾ) ರಾಜ್ಯದಲ್ಲಿ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ.

ಪ್ರತಿಯೊಬ್ಬರಿಗೂ ಕನಸಿನ ಮನೆ, ಫ್ಲ್ಯಾಟ್, ನಿವೇಶನ ಖರೀದಿಸುವ ಆಸೆ ಇರುತ್ತದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ಅನಿಯಂತ್ರಿತ ವಂಚನೆ ಪ್ರಕರಣಗಳಿಂದಾಗಿ ವ್ಯವಹಾರ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಅದೊಂದು ಸವಾಲಿನ ಕೆಲಸವೇ ಆಗಿತ್ತು. ಅನೇಕ ಅಮಾಯಕರು ವಂಚನೆ, ಮೋಸಕ್ಕೆ ಒಳಗಾದ ಉದಾಹರಣೆಗಳು ಇವೆ.

ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅಂಕುಶ ಹಾಕಿ ಹೊಸ ಕಾಯಿದೆ ಜಾರಿ ತರಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿ, ಮೇ 1, 2017ರಿಂದ ಅನುಷ್ಠಾನಕ್ಕೆ ಮುಂದಾಗಿದೆ. ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲೂ ಈ ನಿಯಮಗಳು ಜಾರಿಯಾಗಲಿವೆ. ಸ್ವಂತ ಮನೆ ಖರೀದಿಗೆ ಇದು ಸುಸಮಯ, ಯಾಕೆ ಗೊತ್ತೆ?

ರೇರಾ ಯಾರಿಗೆ ಅನ್ವಯ

ಕರ್ನಾಟಕ ರಾಜ್ಯ ಸರ್ಕಾರ ಎರಡು ಪ್ರಮುಖ ಬದಲಾವಣೆಗಳೊಂದಿಗೆ ಹೊಸ ನಿಯಮ ರೂಪಿಸಿದೆ. ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ ಶೇ. 60ರಷ್ಟು ಫ್ಲ್ಯಾಟ್, ನಿವೇಶನ/ವಿಲ್ಲಾಗಳ ಖರೀದಿದಾರರಿಗೆ ಕ್ರಯಪತ್ರ ಮಾಡಿಕೊಟ್ಟಿರುವ ರಿಯಲ್ ಎಸ್ಟೇಟ್ ಸಂಸ್ಥೆ, ಖಾಸಗಿ ಗೃಹ ನಿರ್ಮಾಣ ಸಂಸ್ಥೆಗಳು, ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಕರ್ನಾಟಕ ಗೃಹ ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರಗಳ ಯೋಜನೆಗಳಿಗೆ ರೇರಾ ನಿಯಮ ಅನ್ವಯಿಸುವುದಿಲ್ಲ. 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

ಯಾರಿಗೆ ಅನ್ವಯಿಸುವುದಿಲ್ಲ

ಪ್ರಾರಂಭದ ಹಂತದಲ್ಲಿರುವ ಎಲ್ಲ ಯೋಜನೆಗಳು ಇನ್ನು ಮುಂದೆ ರೇರಾ(RERA) ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಜೈಲು ಶಿಕ್ಷೆ ಮತ್ತು ದಂಡ ಪಾವತಿಸಬೇಕಾಗುತ್ತದೆ. ಆಯಾ ಆಯಾ ವಿಭಾಗದ ಮಾರ್ಗಸೂಚಿ ದರಗಳನ್ನು ಅನುಸರಿಸಿ ಫ್ಲ್ಯಾಟ್ ಅಥವಾ ನಿವೇಶನಗಳ ಮೌಲ್ಯಗಳನ್ನು ನಿಗದಿಪಡಿಸಬೇಕೆಂದು ನಿಯಮ ಜಾರಿ ಮಾಡಿದೆ.

ರೇರಾ ಕಾಯಿದೆ ಅಗತ್ಯವೇನು?

ಲಯಾಸೆಸ್ ಫೋರಸ್ ಕೈಗೊಂಡ ಸಮೀಕ್ಷೆ ಪ್ರಕಾರ ಶೇ. 80ರಷ್ಟು ರೆಸಿಡೆನ್ಶಿಯಲ್ ಪ್ರಾಜೆಕ್ಟ್​ಗಳು ನಿಗದಿತ ಸಮಯದೊಳಗೆ ಪೂರ್ಣಗೊಂಡಿಲ್ಲ. ಮಿಗಿಲಾಗಿ ಶೇ. 25ರಷ್ಟು ಯೋಜನೆಗಳು ನಿಗದಿತ ಸಮಯಕ್ಕಿಂತ ನಾಲ್ಕು ವರ್ಷಗಳಷ್ಟು ತಡವಾಗಿ ಮುಗಿದಿವೆ.
1. ರೆಸಿಡೆನ್ಶಿಯಲ್ ಪ್ರಾಜೆಕ್ಟ್​ಗಳ ವಿಳಂಬ ತಡೆಯುವುದು.
2. ಗ್ರಾಹಕರಿಗೆ ತಡವಾಗಿ ಮನೆಗಳು ಲಭ್ಯವಾಗುತ್ತಿರುವುದನ್ನು ತಪ್ಪಿಸಿ ನಿಗದಿತ ಅವಧಿಯೊಳಗೆ ಸಿಗುವಂತೆ ಮಾಡುವುದು.
3. ಗ್ರಾಹಕರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳನ್ನು ತಡೆಯುವುದು.
4. ಒಟ್ಟಿನಲ್ಲಿ ಮನೆ ಖರೀದಿದಾರರನ್ನು ಡೆವೆಲಪರ್ಸ್ ಗಳಿಂದ, ವಂಚನೆಗಳಿಂದ ರಕ್ಷಿಸುವುದು.

ಗ್ರಾಹಕರಿಗೆ ಪ್ರಯೋಜನ

ಈ ಹೊಸ ರೇರಾ ಕಾಯಿದೆ ಪ್ರಸ್ತುತ ಚಾಲ್ತಿಯಲ್ಲಿರುವ ಮತ್ತು ಹೊಸ ಪ್ರಾಜೆಕ್ಟ್ ಗಳಿಗೆ ಅನ್ವಯವಾಗಲಿದೆ. ಕನಿಷ್ಠ 500 ಚದರ ಮೀಟರ್ ವಿಸ್ತೀರ್ಣ ಅಥವಾ 8 ಫ್ಲ್ಯಾಟ್ ಹೊಂದಿರುವ ಎಲ್ಲ ರೆಸಿಡೆನ್ಶಿಯಲ್ ಯೋಜನೆಗಳಿಗೆ ಇದು ಅನ್ವಯಿಸುತ್ತದೆ. ಡೆವಲಪರ್​ಗಳು ತಮ್ಮ ಯೋಜನೆಗಳನ್ನು ನಿಯಂತ್ರಣಾ ಪ್ರಾಧಿಕಾರದಲ್ಲಿ ನೋಂದಣಿ ಮಾಡದ ಹೊರತು ಮಾರಾಟ ಮಾಡಲು ಸಾಧ್ಯವಿಲ್ಲ. ಆಕಸ್ಮಾತ್ ರೇರಾ ಕಾಯಿದೆ ನಿಯಮಗಳನ್ನು ಡೆವಲಪರ್ ಗಳು ಉಲ್ಲಂಘನೆ ಮಾಡಿದಲ್ಲಿ ನೋಂದಣಿಯನ್ನು ರದ್ದುಪಡಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ. ಜತೆಗೆ ರದ್ದುಪಡಿಸಲ್ಪಡುವ ಪ್ರಾಜೆಕ್ಟ್​ಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನೂ ನಿಷ್ಕ್ರಿಯಗೊಳಿಸಿ, ಖಾತೆಯಲ್ಲಿರುವ ಮೊತ್ತವನ್ನು ಯೋಜನೆ ಪೂರ್ಣಗೊಳಿಸಲು ಬಳಸಲಾಗುತ್ತದೆ.

ಡೆವೆಲಪರ್ಸ್/ಬಿಲ್ಡರ್ಸ್, ಏಜೆಂಟ್ ಗಳು ಏನು ಮಾಡಬೇಕು?

1. ಡೆವೆಲಪರ್ಸ್/ಬಿಲ್ಡರ್ಸ್, ಪ್ರಮೋಟರ್ಸ್ ತಮ್ಮ ಹಿನ್ನೆಲೆಯ ವಿವರಗಳನ್ನು ನೀಡಬೇಕು.
2. ಪ್ರಾಜೆಕ್ಟ್ ಗಳನ್ನು ನೋಂದಣಿ ಮಾಡಿಸಿ ನೋಂದಣಿ ಸಂಖ್ಯೆ ಪಡೆಯಬೇಕು.
3. ಪ್ರಮೋಟರ್ಸ್ ಲಾಂಚ್ ಮಾಡುವ ಯೋಜನೆಯ ಅಂದರೆ ಕಳೆದ ಐದು ವರ್ಷಗಳಲ್ಲಿ ಪರಿಪೂರ್ಣವಾದ ಇಲ್ಲವೇ ಅಭಿವೃದ್ಧಿ ಪಡಿಸುತ್ತಿರುವ ಯೋಜನೆಗಳ ಸಂಪೂರ್ಣ ವಿವರ ನೀಡಬೇಕು.
4. ಯೋಜನೆಗಳ ಪ್ರಸ್ತುತ ಸ್ಥಿತಿ, ಪೂರ್ಣಗೊಳ್ಳುವಲ್ಲಿನ ವಿಳಂಬ, ಬಾಕಿ ಉಳಿದಿರುವ ಪ್ರಕರಣಗಳು, ಭೂಮಿ ಪ್ರಕಾರ ಮತ್ತು ಬಾಕಿ ಉಳಿದಿರುವ ಪಾವತಿ ವಿವರಗಳನ್ನು ಸಹ ಹಂಚಿಕೊಳ್ಳಬೇಕು.
5. ಅನುಮೋದನೆ ಮತ್ತು ಪ್ರಾರಂಭ ಪ್ರಮಾಣಪತ್ರಗಳ ಅಧಿಕೃತ ಪ್ರತಿಯನ್ನು ಪ್ರಾಧಿಕಾರದಿಂದ ಪಡೆಯಬೇಕು.
6. ಮಂಜೂರು ಯೋಜನೆ, ಬಡಾವಣೆ ಯೋಜನೆ ಮತ್ತು ಪ್ರಾಜೆಕ್ಟ್ ನಿರ್ಧಿಷ್ಟ ಉದ್ದೇಶ ಅಥವಾ ನಿರ್ದಿಷ್ಟ ಪ್ರಾಧಿಕಾರದಿಂದ ಮಂಜೂರಾದ ಸಂಪೂರ್ಣ ಯೋಜನೆಯ ವಿವರ.
7. ಹಂಚಿಕೆ ಪತ್ರದ ಪ್ರಸ್ತಾವನೆ, ಮಾರಾಟ ಒಪ್ಪಂದ, ಮತ್ತು ಎಲ್ಲರ ಸಹಿ ಹೊಂದಿರುವ ಸಂವಹನ ಪತ್ರ ಹೊಂದಬೇಕು.
8. ಮಾರಾಟ ಮಾಡಲ್ಪಡುವ ಅಪಾರ್ಟ್‌ಮೆಂಟಿನ ಸಂಪೂರ್ಣ ವಿವರ ಒಳಗೊಂಡಂತೆ ಸಂಖ್ಯೆ, ವಿಧ, ಕಾರ್ಪೆಟ್ ಏರಿಯಾ, ಬಾಲ್ಕನಿ, ವರಾಂಡಾ, ತೆರೆದ ಪ್ರದೇಶ ಇತ್ಯಾದಿ ವಿವರ ಇರಬೇಕು.
9. ಪ್ರಾಜೆಕ್ಟ್ ನಲ್ಲಿ ಮಾರಾಟ ಮಾಡಲ್ಪಡುವ ಗ್ಯಾರೆಜ್ ಸಂಖ್ಯೆ ಮತ್ತು ಪ್ರದೇಶದ ವಿವರ.
10. ಗುತ್ತಿಗೆದಾರರು, ವಾಸ್ತುಶಿಲ್ಪಿ, ಎಂಜಿನೀಯರ್ ಮತ್ತು ಪ್ರಸ್ತಾವಿತ ಯೋಜನೆಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಇತರ ವ್ಯಕ್ತಿಗಳಿದ್ದಲ್ಲಿ ಅವರೆಲ್ಲರ ಹೆಸರು ಮತ್ತು ವಿಳಾಸ ಒದಗಿಸಬೇಕು.
11. ಪ್ರಮೋಟರ್ಸ್ ಅಥವಾ ಇತರ ಅಥಾರಿಟಿ ವ್ಯಕ್ತಿಗಳಿಂದ ಡಿಕ್ಲರೇಷನ್(ಘೋಷಣೆ) ಇರುವ ಅಫಿಡವಿಟ್ ಮಾಡಿಸಬೇಕು ಅದರ ಅವರ ಸಹಿ ಕೂಡ ಇರಬೇಕು.
12. ಏಜೆಂಟ್​ಗಳು ಪ್ರಾಧಿಕಾರದಲ್ಲಿ ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿಕೊಂಡಿರಬೇಕು. 2017ರಲ್ಲಿ ಮನೆ ಖರೀದಿ ಮಾಡಲು ಉತ್ತಮ 10 ನಗರಗಳು

English summary

Karnataka govt passes real estate Act: must know these things

The Karnataka government on Wednesday passed the Real Estate (Regulation and Development) Act 2016 or RERA, an Act described as customer-centric which aims to protect home-buyers and encourage genuine private players in the fast growing sector.
Story first published: Thursday, July 6, 2017, 15:39 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns