ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇದರ ಲಾಭಗಳೇನು?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಭಾರತದಲ್ಲಿ ಅನೇಕ ಕಾಲದಿಂದಲೂ ಮಹಿಳೆಯ ಹಕ್ಕುಗಳನ್ನು ದಮನಗೊಳಿಸಿ ಅವುಗಳನ್ನು ಉಲ್ಲಂಘಿಸಲಾಗಿದೆ. ಭಾರತದಲ್ಲಿ ಹೆಣ್ಣು ಮಗುವಿನ ಬದಲಾಗಿ ಗಂಡು ಮಗುವಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಏಕೆಂದರೆ ಗಂಡು ಮಗು ಬೆಳೆದು ದೊಡ್ಡವನಾದಾಗ ಕುಟುಂಬಕ್ಕಾಗಿ ದುಡಿಯುತ್ತಾನೆ ಆದರೆ ಹೆಣ್ಣು ಮಗು ಕೇವಲ ತಂದೆ ತಾಯಿಯ ಹೊಣೆಗಾರಿಕೆಯಾಗಿರುತ್ತಾಳೆ ಎಂದು ಜನ ನಂಬಿದ್ದಾರೆ. ಇದರಿಂದಾಗಿ ಅನೇಕ ಕುಟುಂಬಗಳಲ್ಲಿ ಜನರು ಹೆಣ್ಣುಭ್ರೂಣ ಹತ್ಯೆಗೆ ಮುಂದಾಗುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಹೆಣ್ಣು ಮಗು ಜನಿಸುತ್ತಿದ್ದಂತೆಯೇ ಅದನ್ನು ಹತ್ಯೆಗೈಯಲಾಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ 1000 ಗಂಡು ಮಕ್ಕಳಿಗೆ ಕೇವಲ 879 ಹೆಣ್ಣು ಮಕ್ಕಳಿರುವುದು ತಿಳಿದು ಬಂದಿದೆ. ಇದು ಲಿಂಗ ಅನುಪಾತದಲ್ಲಿ ಭಾರಿ ಅಂತರವನ್ನು ಸೃಷ್ಟಿಸಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚಿನ ಸಾಧನೆಯನ್ನು ಸಾಧಿಸಿರುವುದು ಜನರು ಮರೆತಿದ್ದಾರೆ.

   

  ಆದರೆ ನರೇಂದ್ರ ಮೋದಿಯವರು ಸಮತೋಲಿತ ಸಮಾಜದ ಪ್ರಾಮುಖ್ಯತೆಯನ್ನು ಅರಿತಿದ್ದಾರೆ. ಇಂತಹ ಪಕ್ಷಪಾತೀಯ ಪದ್ಧತಿಯನ್ನು ಅಂತ್ಯಗೊಳಿಸಲು ಅವರು 'ಬೇಟಿ ಬಚಾವೊ ಬೇಟಿ ಪಢಾವೊ' ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಅವರು ಮಗುವಿಗೆ ಹಾಗೂ ಪೋಷಕರಿಗೆ ವಿಶೇಷವಾದ ಧನ ಸಹಾಯ ಹಾಗೂ ಅನೇಕ ಪ್ರಯೋಜನಗಳನ್ನು ನೀಡುವ ಮೂಲಕ ಹೆಣ್ಣು ಮಕ್ಕಳನ್ನು ಬೆಳೆಸಲು ಉತ್ತೇಜಿಸುತ್ತಿದ್ದಾರೆ. ಈ ಯೋಜನೆಯ ಕುರಿತು ಎಲ್ಲಾ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

  ಯೋಜನೆಯ ಉದ್ದೇಶ ಹಾಗೂ ವಿವರ

  ಈ ಯೋಜನೆಯು ಎರಡು ವಿಭಾಗಗಳಾಗಿ ಕಾರ್ಯ ನಿರ್ವಹಿಸುತ್ತದೆ. ಮೊದಲನೆಯದಾಗಿ ಬೇಟಿ ಬಚಾವೋ ಅಂದರೆ, ಈ ವಿಭಾಗದಲ್ಲಿ ಮಗುವನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದು ಅಸಮತೋಲಿತವಾಗಿರುವ ಲಿಂಗ ಅನುಪಾತವನ್ನು ಸರಿದೂಗಿಸಲು ಅತ್ಯವಶ್ಯಕವಾಗಿದೆ. ಬೇಟಿ ಪಢಾವೋ, ಇದು ಯೋಜನೆಯ ಎರಡನೆಯ ಭಾಗವಾಗಿದೆ. ಇದರಲ್ಲಿ ಹೆಣ್ಣು ಮಗುವಿನ ಶಿಕ್ಷಣಕ್ಕೆ ಸರ್ಕಾರವು ಹೆಚ್ಚು ಒತ್ತನ್ನು ನೀಡುತ್ತದೆ. ಭಾರತದ ಕೆಲವು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಗೆಲಸಕ್ಕೆ ಸೀಮಿತವಾಗಿಸುವುದೇ ಒಳ್ಳೆಯದು ಎಂದು ನಂಬಿದ್ದಾರೆ. ಆದರೆ ಸರ್ಕಾರವು ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಬೇಕೆಂದು ಪ್ರಯತ್ನಿಸುತ್ತಿದೆ. ಇದನ್ನೇ ಈ ಯೋಜನೆಯ ಎರಡನೆಯ ಭಾಗದಲ್ಲಿ ಪ್ರಯೋಗಿಸಲಾಗಿದೆ. ಮೋದಿ ಆರೋಗ್ಯ ವಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

  ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?

  ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಹಂತ-ಹಂತವಾಗಿ ಕಾರ್ಯನಿರ್ವಹಿಸಲು ಅನೇಕ ವಿಧಾನಗಳನ್ನು ರೂಪಿಸಿದೆ. ಇದರ ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರವು ಮೊದಲು ಅತೀ ಕಡಿಮೆ ಲಿಂಗ ಅನುಪಾತವನ್ನು ಹೊಂದಿರುವ ಜಿಲ್ಲೆಗಳನ್ನು ಆಯ್ಕೆ ಮಾಡಿ, ನಂತರ ಇತರೆ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳುತ್ತಿದೆ. ಈ ವಿಧಾನದಿಂದಾಗಿ ಸರ್ಕಾರವು ಇತರೆ ಭಾಗಗಳಿಗೆ ಹೋಗುವ ಮುನ್ನ ಕೆಲವು ಪ್ರಮುಖ ಭಾಗಗಳ ಮೇಲೆ ಗಮನ ಹರಿಸಲು ಸಹಾಯವಾಗುತ್ತದೆ. ಈ ಯೋಜನೆಯಲ್ಲಿ, ಹೆಣ್ಣುಮಗುವಿನ ಪೋಷಕರು ಮಗುವಿನ ಹೆಸರಿನಲ್ಲಿ ಹಣವನ್ನು ಠೇವಣಿಯನ್ನು ಮಾಡಿ ಆ ಮಗುವಿಗೆ 21 ವರ್ಷ ವಯಸ್ಸಾಗುವವರೆಗೆ ಠೇವಣಿ ನಿಧಿಯನ್ನು ಮುಂದುವರೆಸಬಹುದು. ಹೆಣ್ಣು ಮಗುವಿಗೆ 29 ವರ್ಷ ವಯಸ್ಸಾದ ತಕ್ಷಣ ನಿಧಿಯ ಅವಧಿ ಮುಕ್ತಾಯಗೊಳ್ಳುತ್ತದೆ ಅಥವಾ ಆ ಹೆಣ್ಣುಮಗಳ ವಿವಾಹವು 18 ರಿಂದ 29 ವಯಸ್ಸಿನ ಒಳಗೆ ನಿಶ್ಚಯವಾಗಿದ್ದಲ್ಲಿ, ಈ ನಿಧಿಯ ಅವಧಿ ಸ್ವಯಂಚಾಲಿತವಾಗಿ ಮುಕ್ತಾಯದ ಹಂತವನ್ನು ತಲುಪುತ್ತದೆ ಹಾಗೂ ಸಂಗ್ರಹವಾದ ಹಣವನ್ನು ಹೆಣ್ಣುಮಗಳು ಹಿಂಪಡೆಯಬಹುದಾಗಿದೆ.

  ಈ ಯೋಜನೆಯ ಅರ್ಹತಾ ಮಾನದಂಡಗಳೇನು?

  ಈ ಯೋಜನೆಯ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:
  1. ಕುಟುಂಬವು ಹೆಣ್ಣು ಮಗುವನ್ನು ಹೊಂದಿರಬೇಕು.
  2. ಕುಟುಂಬವು ಯಾವುದೇ ಬ್ಯಾಂಕ್ ನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆದಿರಬೇಕು.

  ಯೋಜನೆಯ ಅನರ್ಹತೆಗೆ ಸಂಬಂಧಿಸಿದ ನಿಯಮಗಳು ಯಾವುವೆಂದರೆ:
  1. ಹೆಣ್ಣು ಮಗಳು ಅಥವಾ ಕುಟುಂಬ NRI (ನಾನ್ ರೆಸಿಡೆಂಟ್ ಇಂಡಿಯನ್) ಆಗಿರಬಾರದು.
  2. ಅರ್ಹತಾ ಮಾನದಂಡದಲ್ಲಿ ಉಲ್ಲೇಖಿಸದ ಯಾವುದೇ ಆದರೂ ಈ ಯೋಜನೆಯ ಪ್ರಯೊಜನೆಯನ್ನು ಪಡೆಯಲು ಕುಟುಂಬವನ್ನು ಅನರ್ಹಗೊಳಿಸುತ್ತದೆ.

  ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

  ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಳಗಿನ ವಿಧಾನಗಳನ್ನು ಅನುಸರಿಸಬೇಕು.
  1. ಪೋಷಕರು ಬೆಂಬಲಿತ ಬ್ಯಾಂಕ್ ಗಳನ್ನು ಸಂಪರ್ಕಿಸಿ, SSA ವರ್ಗದ ಅಡಿಯಲ್ಲಿ ಖಾತೆಯನ್ನು ತೆರೆಯಬೇಕು. ಖಾತೆಯನ್ನು ತೆರೆಯಲು, ಫಾರಂ ಪಡೆದು ಅದನ್ನು ಭರ್ತಿ ಮಾಡಬೇಕು.
  ಲಗತ್ತಿಸಬೇಕಾದ ದಾಖಲೆಗಳು:
  1. ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ,
  2. ಪೋಷಕರ ಗುರುತು ಪತ್ರ ಮತ್ತು ವಿಳಾಸ ದಾಖಲೆ

  ಈ ಯೋಜನೆಯ ಪ್ರಯೋಜನಗಳೇನು?

  ಈ ಯೋಜನೆಯ ಪ್ರಯೋಜನೆಗಳೆಂದರೆ,
  1. ಪ್ರಸ್ತುತವಾಗಿ ಗಂಡುಮಕ್ಕಳ ಕಡೆಗೆ ಪಕ್ಷಪಾತೀಯವಾದ ಲಿಂಗ ಅನುಪಾತದಲ್ಲಿ ಸಮಾನತೆಯನ್ನು ತರುವಲ್ಲಿ ಈ ಯೋಜನೆ ಸಹಕಾರಿಯಾಗಿದೆ.
  2. ಗಂಡು ಮಕ್ಕಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಹೆಣ್ಣು ಮಕ್ಕಳಿಗೂ ನೀಡಲಾಗುತ್ತದೆ ಎನ್ನುವುದನ್ನು ಈ ಯೋಜನೆ ಖಚಿತಪಡಿಸುತ್ತದೆ.
  3. ಅಲ್ಲದೇ, ಈ ಯೋಜನೆ ಹೆಣ್ಣುಮಗುವಿಗೂ ಸರಿಯಾದ ಶಿಕ್ಷಣವನ್ನು ನೀಡುತ್ತೇವೆ ಎನ್ನುವುದನ್ನು ಖಚಿತಪಡಿಸುತ್ತದೆ.
  4. ಈ ಯೋಜನೆ, ಹೆಣ್ಣುಮಗುವಿನ ಮದುವೆಗಾಗಿ ಹಣವನ್ನು ಉಳಿಸುವಲ್ಲಿ ಪೋಷಕರಿಗೆ ಸಹಕಾರಿಯಾಗಿದೆ. ಇದು ಜನರ ಮನಸ್ಸನ್ನು ಬದಲಾಯಿಸುವಲ್ಲಿ ಸಹಾಯ ಮಾಡುತ್ತದೆ.
  5. ಹೆಣ್ಣುಮಗುವಿನ ಪೋಷಕರಿಗೆ ತೆರೆಗೆ ವಿನಾಯಿತಿಯನ್ನು ನೀಡಲಾಗುತ್ತದೆ. ಅಲ್ಲದೇ ಉಳಿತಾಯ ಖಾತೆಯಲ್ಲಿ ಬಡ್ಡಿದರವು ಪ್ರತಿ ಇತರ ಉತ್ಪನ್ನಗಳ ಪೈಕಿ ಹೆಚ್ಚಾಗಿರುತ್ತದೆ.
  6. ಒಮ್ಮೆ ಹೆಣ್ಣುಮಗುವು ಅರ್ಹವಾದ ವಯಸ್ಸನ್ನು ತಲುಪಿದಾಗ ಉಳಿತಾಯ ಖಾತೆಯಲ್ಲಿ ಜಮೆಯಾದ ಹಣವನ್ನು ಆ ಹೆಣ್ಣುಮಗಳಿಗೆ ನೀಡಲಾಗುತ್ತದೆ.

  ಯೋಜನೆಯ ಬೆನ್ನೆಲುಬು ಯಾರು?

  ಈ ಯೋಜನೆಗೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಇದರೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು, ಹೆಣ್ಣುಭ್ರೂಣ ಹತ್ಯೆಯನ್ನು ತಡೆಯಲು ಹಾಗೂ ಸಮತೋಲಿತವಾದ ಶೈಕ್ಷಣಿಕ ಸಮಾಜವನ್ನು ಮುನ್ನಡೆಸಲು ಈ ಯೋಜನೆಯನ್ನು ಬೆಂಬಲಿಸುತ್ತಿವೆ.

  ಯೋಜನೆಯ ವಿವರಗಳು

  ಯೋಜನೆಯ ಹೆಸರು - ಬೇಟಿ ಬಚಾವೋ ಬೇಟಿ ಪಢಾವೋ
  ಯೋಜನೆಗಾಗಿ ಬಜೆಟ್- ಅನ್ವಯಿಸುವುದಿಲ್ಲ
  ಯೋಜನೆಯನ್ನು ಪ್ರಾರಂಭಿಸಿದವರು - ಶ್ರೀ ನರೇಂದ್ರ ಮೋದಿ

  ದೇಶವನ್ನು ಮುನ್ನಡೆಸಲು ಇದು ಒಂದು ಮಾರ್ಗವೇ?

  ಶ್ರೀ ನರೇಂದ್ರ ಮೋದಿಯವರು ದೇಶದ ಭವಿಷ್ಯದ ಕುರಿತು ಉನ್ನತವಾದ ದೃಷ್ಟಿಕೋನವನ್ನು ಹೊಂದಿದ್ದಾರೆ ಹಾಗೂ ದೇಶವು ತನ್ನ ಗುರಿಯನ್ನು ತಲುಪಲು ಅವರು ಖಚಿತವಾಗಿ ಸಹಾಯ ಮಾಡುತ್ತಾರೆ. ಅಂತಹ ಗುರಿಗಳಲ್ಲಿ ನಿಖರವಾದ ಲಿಂಗ ಅನುಪಾತವನ್ನು ಸಾಧಿಸುವುದು ಹಾಗೂ ಸ್ತ್ರೀಯನ್ನು, ಹೆಣ್ಣುಭ್ರೂಣ ಹತ್ಯೆಯಂತಹ ಪಿಡುಗಿನಿಂದ ದೂರಗೊಳಿಸಿ, ಸಬಲವಾಗಿಸುವುದು. ನರೇಂದ್ರ ಮೋದಿಯವರು ಇಂತಹ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಿದ್ದಾರೆ ಹಾಗೂ ಈ ಯೋಜನೆಗಳು ಅದ್ಭುತವಾದ ಭವಿಷ್ಯದ ಕಡೆಗೆ ಮಾರ್ಗವನ್ನು ಸೂಚಿಸುವಲ್ಲಿ ದೇಶಕ್ಕೆ ಸಹಕಾರಿಯಾಗಿವೆ.

  English summary

  Beti Bachao Beti Padhao Yojana – How to Apply and What are the Benefits?

  The scheme functions in two parts. The first part of the scheme says Beti Bachao which means that the scheme stresses on saving the girl child. This is necessary to cover up the sex ratio which is highly unbalanced. The second part of the scheme is about Beti Padhao.
  Story first published: Monday, March 19, 2018, 10:59 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more