For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ vs ಎನ್‌ಪಿಎಸ್ ನಡುವಿನ 13 ವ್ಯತ್ಯಾಸಗಳೇನು? ಯಾವುದು ಬೆಸ್ಟ್..

ಭಾರತ ಸರ್ಕಾರ ದೇಶದ ನಾಗರಿಕರಿಗೆ ತಮ್ಮ ನಿವೃತ್ತಿ ನಂತರದ ಭದ್ರತೆಗಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಅಟಲ್ ಪಿಂಚಣಿ ಯೋಜನೆ ಹಾಗು ರಾಷ್ಟ್ರೀಯ ಪಿಂಚಣಿ ಯೋಜನೆ ಬಹುಮುಖ್ಯವಾದವುಗಳಾಗಿವೆ.

|

ಭಾರತ ಸರ್ಕಾರ ದೇಶದ ನಾಗರಿಕರಿಗೆ ತಮ್ಮ ನಿವೃತ್ತಿ ನಂತರದ ಭದ್ರತೆಗಾಗಿ ಅಟಲ್ ಪಿಂಚಣಿ ಯೋಜನೆ (APY) ಹಾಗು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಪರಿಚಯಿಸಿದೆ. ಈ ಎರಡು ಯೋಜನೆಗಳು ಸರ್ಕಾರಿ ಚಾಲಿತ ಯೋಜನೆಗಳಾಗಿದ್ದು, ಇವೆರಡರ ನಡುವಿನ ವ್ಯತ್ಯಾಸಗಳೇನು, ಯಾವುದು ಉತ್ತಮ ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಇರುವುದು ಸಹಜ.

 

ಅಟಲ್ ಪಿಂಚಣಿ ಯೋಜನೆ ಅಸಂಘಟಿತ ವಲಯದಲ್ಲಿ ಕೇಂದ್ರೀಕೃತವಾಗಿದ್ದರೆ, ರಾಷ್ಟ್ರೀಯ ಪಿಂಚಣಿ ಯೋಜನೆಯು ಎಲ್ಲರಿಂದಲೂ ಕೇಂದ್ರೀಕೃತವಾಗಿರುತ್ತದೆ. ಅಟಲ್ ಪಿಂಚಣಿ ಯೋಜನೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಗಳ ನಡುವಿನ ವ್ಯತ್ಯಾಸಗಳೇನು ಎಂಬುದನ್ನು ತಿಳಿಯೋಣ ಬನ್ನಿ... ಅಟಲ್ ಪಿಂಚಣಿ ಯೋಜನೆ ಮಾಡಿಸಿ, ತಿಂಗಳಿಗೆ 5000 ಪಡೆಯೋದು ಹೇಗೆ?

1. ವಯಸ್ಸು

1. ವಯಸ್ಸು

ಅಟಲ್ ಪಿಂಚಣಿ ಯೋಜನೆ ಚಂದಾದಾರರಾಗಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ರಾಷ್ಟ್ರೀಯ ಪಿಂಚಣಿ ಯೋಜನೆಯ ಚಂದಾದಾರರಾಗಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಅಟಲ್ ಪಿಂಚಣಿ ಯೋಜನೆಗೆ ಗರಿಷ್ಠ 60 ವರ್ಷಗಳ ಮಿತಿ ಇದ್ದರೆ, ರಾಷ್ಟ್ರೀಯ ಪಿಂಚಣಿ ಯೋಜನೆಯ ಗರಿಷ್ಠ 40 ವರ್ಷಗಳ ಮಿತಿ ಆಗಿರುತ್ತದೆ. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

2. ಯಾರು ಅರ್ಹರು?

2. ಯಾರು ಅರ್ಹರು?

ಅಟಲ್ ಪಿಂಚಣಿ ಯೋಜನೆಗೆ ಭಾರತದ ನಾಗರಿಕರು ಅರ್ಹರಾಗಿರುತ್ತಾರೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಭಾರತದ ನಾಗರಿಕರು ಹಾಗು ಎನ್ಆರ್ಐ ಅರ್ಹರಾಗಿರುತ್ತಾರೆ.

3. ಪಿಂಚಣಿ
 

3. ಪಿಂಚಣಿ

ಅಟಲ್ ಪಿಂಚಣಿ ಯೋಜನೆಯಲ್ಲಿ ನಿವೃತ್ತಿ ನಂತರ ನಿರ್ದಿಷ್ಟ ಮೊತ್ತದ ಹಣ ಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನಿವೃತ್ತಿ ನಂತರ ಹಣವಿಲ್ಲ.

4. ತೆರಿಗೆ ವಿನಾಯಿತಿ

4. ತೆರಿಗೆ ವಿನಾಯಿತಿ

ಅಟಲ್ ಪಿಂಚಣಿ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಇರುವುದಿಲ್ಲ.
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ರೂ. ೨ ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ.

5. ಹೂಡಿಕೆ ಮಿತಿ

5. ಹೂಡಿಕೆ ಮಿತಿ

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಟ ಮೊತ್ತದ ಮೇಲೆ ಯಾವುದೇ ಮಿತಿ ಇರುವುದಿಲ್ಲ.
ಸ್ಥಿರ ಪಿಂಚಣಿ ಪಡೆಯುವ ಪೂರ್ವ ನಿರ್ಧಾರಿತ ಮಾಸಿಕ ಕೊಡುಗೆಗಳ ಮೇಲೆ ಅಟಲ್ ಪಿಂಚಣಿ ಯೋಜನೆ ಕಾರ್ಯನಿರ್ವಹಿಸುತ್ತದೆ. ಆರಂಭದಿಂದ ಕೊನೆಯವರೆಗೂ ಅಪೇಕ್ಷಿತ ಪಿಂಚಣಿಯ ಗುರಿಯನ್ನು ತಲುಪಲು ಮಾಸಿಕ ಕೊಡುಗೆ ಇರುತ್ತದೆ. ಉದಾಹರಣೆಗೆ: ಒಬ್ಬ ವ್ಯಕ್ತಿ 18 ವರ್ಷದ ನಂತರ ಪ್ರತಿ ತಿಂಗಳು 210 ರೂಪಾಯಿಯನ್ನು 42 ವರ್ಷಗಳ ಕಾಲಕ್ಕೆ ಸಲ್ಲಿಸಿದರೆ ಪಿಂಚಣಿ ಹಣ ರೂ. 5,000 ಪಡೆಯಬಹುದು.

6. ಕನಿಷ್ಠ ಹೂಡಿಕೆ/ಕೊಡುಗೆ

6. ಕನಿಷ್ಠ ಹೂಡಿಕೆ/ಕೊಡುಗೆ

ರಾಷ್ಟ್ರೀಯ ಪಿಂಚಣಿ ಯೋಜನೆಯ ಕನಿಷ್ಠ ಕೊಡುಗೆಯ ಮೊತ್ತ ರೂ. 500 ನಂತೆ ಪ್ರತಿ ಹಣಕಾಸಿನ ವರ್ಷಕ್ಕೆ ಕನಿಷ್ಠ 6000 ರೂಪಾಯಿಯನ್ನು ಚಂದಾದಾರರು ನೀಡಬೇಕು.
ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿ ವರ್ಷ ಮೂರು ಪಾವತಿಯೊಂದಿಗೆ ಬರುತ್ತದೆ. ಮಾಸಿಕ, ತ್ರೈಮಾಸಿಕ ಮತ್ತು ಅರ್ಧವಾರ್ಷಿಕ. ಅಟಲ್ ಪಿಂಚಣಿ ಯೋಜನೆಗೆ 18 ವರ್ಷದ ಚಂದಾದಾರರು ಪ್ರತಿ ತಿಂಗಳು 42 ರೂಪಾಯಿಯಂತೆ ಅಥವಾ 248 ರೂಪಾಯಿಯನ್ನು ಅರ್ಧ ವಾರ್ಷಿಕ ಅವಧಿಯಲ್ಲಿ ತುಂಬಿದರೆ ನಂತರ ಅವರ 60ನೇ ವರ್ಷದ ನಂತರ ಪಿಂಚಣಿ ಹಣ 1,000 ರೂಪಾಯಿ ಆಗಿರುತ್ತದೆ.

7. ಖಾತೆ ಎಲ್ಲಿ ತೆರೆಯಬೇಕು?

7. ಖಾತೆ ಎಲ್ಲಿ ತೆರೆಯಬೇಕು?

ರಾಷ್ಟ್ರೀಯ ಪಿಂಚಣಿ ಯೋಜನೆ ಖಾತೆಯನ್ನು ನಿಮ್ಮ ಹಾಜರಿಯಲ್ಲೇ ಖಾತೆ ತೆರೆದು ಯೋಜನೆ ಮಾಡಿಸಬೇಕು.
ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ನಿಮ್ಮ ಉಳಿತಾಯ ಖಾತೆ ಇದ್ದ ಬ್ಯಾಂಕ್ ನಲ್ಲಿ ಸುಲಭವಾಗಿ ತೆರೆಯಬಹುದು.

8. ಹಣ ವಿತ್ ಡ್ರಾ

8. ಹಣ ವಿತ್ ಡ್ರಾ

ಅಟಲ್ ಪಿಂಚಣಿ ಯೋಜನೆಯಡಿ ಅವಧಿಗೆ ಮುನ್ನ ಹಣ ವಿತ್ ಡ್ರಾ ಮಾಡಲಾಗುವುದಿಲ್ಲ (ಸಾವು ಮತ್ತು ಗಂಭೀರ ಸಂದರ್ಭ ಹೊರತುಪಡಿಸಿ)
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಟೈರ್ II ಖಾತೆಗೆ ಮಾತ್ರ ಹಣ ವಿತ್ ಡ್ರಾ ಮಾಡಲು ಅವಕಾಶವಿದೆ.

9. ಖಾತೆ

9. ಖಾತೆ

ಅಟಲ್ ಪಿಂಚಣಿ ಯೋಜನೆಗಾಗಿ ಕೇವಲ ಒಂದು ಖಾತೆಯನ್ನು (ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ) ತೆರೆಯಬಹುದು.
ರಾಷ್ಟ್ರೀಯ ಪಿಂಚಣಿ ಯೋಜನೆಗಾಗಿ Tier-I ಮತ್ತು Tier-II ಬಗೆಯ ಖಾತೆ ಲಭ್ಯವಿದೆ. ಶ್ರೇಣಿ-1 ರ ಖಾತೆ ಅಡಿಯಲ್ಲಿ ವ್ಯಕ್ತಿ 60 ವರ್ಷ ವಯಸ್ಸು ತಲುಪುವವರೆಗೂ ಚಂದಾದಾರ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಶ್ರೇಣಿ-2 ಸ್ವಯಂ ಪ್ರೇರಿತವಾಗಿ ಹಿಂತೆಗೆದುಕೊಳ್ಳಬಹುದಾದ ಖಾತೆಯಾಗಿರುತ್ತದೆ. ಅಂದರೆ ಹಿಂಪಡೆಯುವಿಕೆಯ ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಸಕ್ರಿಯ ಶ್ರೇಣಿ-1ರ ಖಾತೆಯನ್ನು ಹೊಂದಿರುವ ಚಂದಾದಾರರು ಹೆಚ್ಚುವರಿ ಖಾತೆಯನ್ನು ಶ್ರೇಣಿ-2ರ ರೂಪದಲ್ಲಿ ತೆರೆಯಬಹುದು.

10. ಆದಾಯ

10. ಆದಾಯ

ಅಟಲ್ ಪಿಂಚಣಿ ಯೋಜನೆ ಪೂರ್ವ ನಿರ್ಧರಿತ ಆದಾಯ ರೂ. 1000 ದಿಂದ ರೂ. 5000 (in multiples of 1,000) ವ್ಯಾಪ್ತಿಯೊಳಗೆ ಒದಗಿಸುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯು ಮಾರುಕಟ್ಟೆಗೆ ಸಂಬಂಧಿಸಿರುತ್ತದೆ. ಅಂದರೆ ಆದಾಯವು ಮಾರುಕಟ್ಟೆಯ ಏರಿಳಿತ ಅಥವಾ ಚಲನೆಯ ಆಧಾರದ ಮೇಲೆ ಅವಲಂಭಿತವಾಗಿರುತ್ತದೆ.

11. ವೆಬ್ಸೈಟ್

11. ವೆಬ್ಸೈಟ್

ಅಟಲ್ ಪಿಂಚಣಿ ಯೋಜನೆ - http://jansuraksha.gov.in/
ರಾಷ್ಟ್ರೀಯ ಪಿಂಚಣಿ ಯೋಜನೆ- https://www.pfrda.org.in/

12. ಅಕಾಲಿಕ ನಿರ್ಗಮನ

12. ಅಕಾಲಿಕ ನಿರ್ಗಮನ

ನಿವೃತ್ತ ನಿಧಿ ನಿಯಂತ್ರಕ "ಪಿಎಫ್ಆರ್ಡಿಎ" ಯ ವೆಬ್ ಸೈಟ್ pfrda.org.in ಪ್ರಕಾರ ಅಟಲ್ ಪಿಂಚಣಿ ಯೋಜನೆ ಚಂದಾದಾರರಿಗೆ 60 ವರ್ಷಕ್ಕೆ ಮುಂಚಿತವಾಗಿ ಮರಣ/ಗಂಭೀರ ಆರೋಗ್ಯ ಸಮಸ್ಯೆ ಸಂದರ್ಭದಲ್ಲಿ ಅಕಾಲಿಕ ನಿರ್ಗಮನವನ್ನು ಅನುಮತಿಸಲಾಗುತ್ತದೆ.

13. ನಾಮನಿರ್ದೇಶನ ಸೌಲಭ್ಯ

13. ನಾಮನಿರ್ದೇಶನ ಸೌಲಭ್ಯ

ಎನ್ ಪಿಎಸ್ ಗಾಗಿ ನಾಮನಿರ್ದೇಶನವು ಕಡ್ಡಾಯವಾಗಿಲ್ಲ. ಆದಾಗ್ಯೂ, ಗರಿಷ್ಠ 3 ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು. ಈ ಮೂರು ನಾಮಿನಿಯರಿಗೆ ಘೋಷಿಸಲ್ಪಡುವ ಮೊತ್ತ ಶೇ. 100 ರಷ್ಟು ಸಮಾನವಾಗಿರಬೇಕು.
ಅಟಲ್ ಪಿಂಚಣಿ ಯೋಜನೆಗಾಗಿ (APY)ನಾಮನಿರ್ದೇಶನವು ಕಡ್ಡಾಯವಾಗಿದೆ. ಖಾತೆಯನ್ನು ತೆರೆಯುವಾಗ ನಾಮಿನಿ ವಿವರಗಳನ್ನು ನೀವು ಒದಗಿಸಬೇಕು.

English summary

Difference Between Atal Pension Yojana and National Pension system

APY and NPS Two government-run schemes which offer maximum benefits after retirement are Atal Pension Yojana (APY) and National Pension System (NPS).
Story first published: Tuesday, January 29, 2019, 12:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X