For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ ಯೋಜನೆ: 42 ಹೂಡಿಕೆ ಮಾಡಿ ಪ್ರತಿ ತಿಂಗಳು 1000 ಪಿಂಚಣಿ ಪಡೆಯೋದು ಹೇಗೆ?

ಕೇಂದ್ರ ಸರ್ಕಾರದ ಹಲವು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆ ಕೂಡ ಮುಖ್ಯವಾದದ್ದು. ನಿವೃತ್ತಿ ನಂತರ ಭದ್ರತೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗ

|

ಕೇಂದ್ರ ಸರ್ಕಾರದ ಹಲವು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆ ಕೂಡ ಮುಖ್ಯವಾದದ್ದು. ನಿವೃತ್ತಿ ನಂತರ ಭದ್ರತೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ.
ಅಟಲ್ ಪಿಂಚಣಿ ಯೋಜನೆ ಅಥವಾ ಎಪಿವೈ ಸರಕಾರ ನೀಡುವ ಪಿಂಚಣಿ ಯೋಜನೆಯಾಗಿದ್ದು, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ನಿರ್ವಹಿಸುತ್ತದೆ. ನಿವೃತ್ತಿ ವಯಸ್ಸಿನ ನಂತರ ಈ ಯೋಜನೆಯು ವ್ಯಕ್ತಿಯ ನಿಯಮಿತ ಪಿಂಚಣಿ ಹೊಂದಲು ಅನುವು ಮಾಡಿಕೊಡುತ್ತದೆ.

ಐದು ಸ್ಲ್ಯಾಬ್ ಗಳಲ್ಲಿ ಪಿಂಚಣಿ

ಐದು ಸ್ಲ್ಯಾಬ್ ಗಳಲ್ಲಿ ಪಿಂಚಣಿ

ಪ್ರಸ್ತುತ, ಅಟಲ್ ಪಿಂಚಣಿ ಯೋಜನೆ ಮೂಲಕ ತಿಂಗಳಿಗೆ ಐದು ಹಂತಗಳಲ್ಲಿ ಅಂದರೆ 1,000 ರಿಂದ ರೂ 5,0000ವರೆಗೆ ಪಡೆಯಬಹುದು. ಮಾಸಿಕವಾಗಿ ಪಿಂಚಣಿ ಪಡೆಯಲು ಬಯಸಬಹುದಾದ ಮೊತ್ತ ರೂ. 1000, 2000, 3000, 4000, 5000 ಆಗಿರುತ್ತದೆ.

ಎಪಿವೈ  ಅರ್ಹತೆ

ಎಪಿವೈ ಅರ್ಹತೆ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ನಿರ್ದೇಶನದಂತೆ ಈ ಎಪಿವೈ ಯೋಜನೆಗೆ ಒಳಪಡಲು ಕನಿಷ್ಟ ವಯಸ್ಸಿನ ಮಿತಿ 18 ಹಾಗು ಗರಷ್ಠ 40 ವರ್ಷಗಳಾಗಿವೆ. ವಂತಿಗೆದಾರರಿಗೆ ೬೦ ವರ್ಷ ತುಂಬಿದ ನಂತರ ಪಿಂಚಣಿ ಆರಂಭವಾಗುತ್ತದೆ. ಕೆಲವು ಸಂಧಿಗ್ದ ಪರಿಸ್ಥಿತಿಗಳ ಹೊರತಾಗಿ, 60 ವರ್ಷಕ್ಕಿಂತ ಮೊದಲು ನಿರ್ಗಮಿಸಲು ಅವಕಾಶವಿಲ್ಲ. ಫಲಾನುಭವಿ ಅಥವಾ ಟರ್ಮಿನಲ್ ರೋಗದ ಸಾವಿನ ಸಂದರ್ಭದಲ್ಲಿ ಚಂದಾದಾರರು ನಿರ್ಗಮಿಸಲು ಅವಕಾಶ ನೀಡಲಾಗುತ್ತದೆ.

ಹೂಡಿಕೆಯ ಕನಿಷ್ಠ ಮೊತ್ತ

ಹೂಡಿಕೆಯ ಕನಿಷ್ಠ ಮೊತ್ತ

ಅಟಲ್ ಪಿಂಚಣಿ ಯೋಜನೆಗೆ ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಅವಧಿಗಳಲ್ಲಿ ವಂತಿಗೆ ಪಾವತಿಸಬಹುದು. ಅಂದರೆ ಪ್ರತಿ ವರ್ಷ ಕನಿಷ್ಠ ಎರಡು ವಂತಿಗೆಗಳನ್ನು ವಂತಿಗೆದಾರ ಪಾವತಿಸಬೇಕಾಗುತ್ತದೆ. ಕಡಿಮೆ ವಯೋಮಾನದಲ್ಲಿರುವಾಗಲೇ ಈ ಯೋಜನೆಗೆ ಒಳಪಟ್ಟರೆ ಕಡಿಮೆ ಮೊತ್ತದ ಕಂತು ಪಾವತಿಸಿ ಹೆಚ್ಚು ಮೊತ್ತದ ಪಿಂಚಣಿ ಪಡೆಯಲು ಅವಕಾಶವಿರುತ್ತದೆ. ಉದಾಹರಣೆಗೆ- 18 ವರ್ಷ ತುಂಬಿದ ವ್ಯಕ್ತಿಗಳು ಪ್ರತಿ ತಿಂಗಳು ಕೇವಲ 42 ರೂಪಾಯಿ ಪಾವತಿಸಿದರೆ ತಮ್ಮ 60ನೇ ವರ್ಷದಿಂದ ರೂ. 1000 ಮಾಸಿಕ ಪಿಂಚಣಿ ಪಡೆಯಬಹುದಾಗಿದೆ.

ಶೇ. 50 ರಷ್ಟು ಕೇಂದ್ರದ ಕೊಡುಗೆ!

ಶೇ. 50 ರಷ್ಟು ಕೇಂದ್ರದ ಕೊಡುಗೆ!

ಪಿಎಫ್ಆರ್ಡಿಎ ವೆಬ್ಸೈಟ್ ಪ್ರಕಾರ, ಕೇಂದ್ರ ಸರಕಾರವು ಪ್ರತಿ ವರ್ಷ ಶೇ. 50 ಅಥವಾ ವರ್ಷಕ್ಕೆ ರೂ 1,000 ಕೊಡುಗೆ ನೀಡುತ್ತದೆ. ಪ್ರತಿ ಅರ್ಹ ಚಂದಾದಾರರ ಖಾತೆಗೆ ೫ ವರ್ಷಗಳ ಅವಧಿಯವರೆಗೆ ಅಂದರೆ ಹಣಕಾಸಿನ ವರ್ಷದ 2015 ರಿಂದ -16 ರಿಂದ 2019-20 ವರೆಗೆ ಕೊಡುಗೆ ಒದಗಿಸುತ್ತದೆ.
ಯಾವ ವ್ಯಕ್ತಿ ಜೂನ್ 1, 2015 ರಿಂದ 31 ಡಿಸೆಂಬರ್ 2015 ರ ನಡುವಿನ ಅವಧಿಯಲ್ಲಿ APY ಗೆ ಸೇರಿಕೊಂಡಿದ್ದಾರೆ, ಯಾರು ಯಾವುದೇ ಕಾನೂನುಬದ್ಧ ಸಾಮಾಜಿಕ ಭದ್ರತಾ ಯೋಜನೆಯ ಸದಸ್ಯರಾಗಿಲ್ಲವೋ ಹಾಗು ಯಾರು ಆದಾಯ ತೆರಿಗೆದಾರರು ಅಲ್ಲ ಅವರಿಗೆ ಈ ಕೊಡುಗೆ ಲಭ್ಯವಿರುತ್ತದೆ.

1,000 ಪಿಂಚಣಿ ಪಡೆಯೋದು ಹೇಗೆ?

1,000 ಪಿಂಚಣಿ ಪಡೆಯೋದು ಹೇಗೆ?

ತಿಂಗಳಿಗೆ ರೂ. 1,000 ಮತ್ತು 5,000 ನಡುವೆ ನಿಗದಿತ ಮಾಸಿಕ ಪಿಂಚಣಿ ಪಡೆಯಲು ಬಯಸಿದ್ದರೆ, 18 ವರ್ಷ ವಯಸ್ಸಿನಲ್ಲಿ ಸೇರಿದ ಚಂದಾದಾರರು ರೂ. 42 ಮತ್ತು ರೂ. 210 ರ ನಡುವೆ ಮಾಸಿಕ ಆಧಾರದ ಮೇಲೆ ವಂತಿಗೆ ನೀಡಬೇಕು. ಚಂದಾದಾರರು 40 ವರ್ಷ ವಯಸ್ಸಿನೊಳಗೆ ಸೇರಿಕೊಂಡರೆ, ಅದೇ ನಿಶ್ಚಿತ ಪಿಂಚಣಿ ಪಡೆಯಲು ರೂ. 291 ರಿಂದ ರೂ. 1,454 ರವರೆಗೆ ವಂತಿಗೆ ಪಾವತಿಸಬೇಕು.

5 ಸಾವಿರ ಪಿಂಚಣಿ ಪಡೆಯೋದು ಹೇಗೆ?

5 ಸಾವಿರ ಪಿಂಚಣಿ ಪಡೆಯೋದು ಹೇಗೆ?

ಯಾವುದೇ ವ್ಯಕ್ತಿ ತನ್ನ 18 ನೇ ವರ್ಷದಿಂದ ಮಾಸಿಕ ರೂ. 210ರಂತೆ 40 ನೇ ವಯಸ್ಸಿನವರೆಗೆ ವಂತಿಗೆ ಪಾವತಿಸಿದರೆ 60 ವರ್ಷಗಳ ನಂತರ ಮಾಸಿಕ 5 ಸಾವಿರ ಪಿಂಚಣಿ ಪಡೆಯಬಹುದು. ಇದನ್ನು ಲೆಕ್ಕಾಚಾರ ಮಾಡಿದರೆ 18 ನೇ ವಯಸ್ಸಿನಲ್ಲಿ ಯೋಜನೆಗೆ ಒಳಪಡುವ ವ್ಯಕ್ತಿ ಒಟ್ಟಾರೆ ರೂ. 105840 ಪಾವತಿಸಿ 5 ಸಾವಿರ ರೂ. ಪಿಂಚಣಿ ಪಡೆಯುತ್ತಾನೆ. ಆದರೆ ಅದೇ 40ನೇ ವಯಸ್ಸಿನಲ್ಲಿ ಯೋಜನೆಗೆ ಒಳಪಟ್ಟರೆ ೫ ಸಾವಿರ ರೂಪಾಯಿ ಪಿಂಚಣಿ ಪಡೆಯಲು ಒಟ್ಟಾರೆ ೩,೪೮,೯೬೦ ರೂ. ವಂತಿಗೆ ನೀಡಬೇಕಾಗುತ್ತದೆ. ಚಂದಾದಾರರು ಆದಾಯ ತೆರಿಗೆ ಕಾಯಿದೆ ೮೦ ಸಿಸಿಡಿ (೧ಬಿ) ಅನ್ವಯ ಈ ಯೋಜನೆಯಲ್ಲಿ ಹೂಡಿಕೆ ಮಾಡಲಾಗುವ ಗರಿಷ್ಠ ೫೦ ಸಾವಿರದಗಳಿಗೆ ವಿನಾಯಿತಿ ಇರುತ್ತದೆ. ಅಟಲ್ ಪಿಂಚಣಿ ಯೋಜನೆ ಮಾಡಿಸಿ, ತಿಂಗಳಿಗೆ 5000 ಪಡೆಯೋದು ಹೇಗೆ?

ಚಂದಾದಾರರಿಗೆ SMS ಮೂಲಕ ಮಾಹಿತಿ

ಚಂದಾದಾರರಿಗೆ SMS ಮೂಲಕ ಮಾಹಿತಿ

ಎಪಿವೈ ಚಂದಾದಾರರು ಖಾತೆಯಲ್ಲಿನ ಮೊತ್ತದ ಬಗ್ಗೆ ನಿಯತಕಾಲಿಕವಾಗಿ ಮಾಹಿತಿಯನ್ನು ಪಡೆಯುತ್ತಾರೆ. ಎಸ್ಎಂಎಸ್ ಸಂದೇಶದ ಮೂಲಕ ಮತ್ತು ಖಾತೆಯ ಸ್ಟೇಟ್ಮೆಂಟ್ ಸ್ವೀಕರಿಸುತ್ತಾರೆ. ಚಂದಾದಾರರಿಗೆ ಈ ಯೋಜನೆಯಲ್ಲಿ ಮಾಸಿಕ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಕೊಡುಗೆ ನೀಡಲು ಅವಕಾಶವಿದೆ. ಚಂದಾದಾರರ ಉಳಿತಾಯ ಖಾತೆಯಿಂದ ಆಟೋ-ಡೆಬಿಟ್ ಸೌಲಭ್ಯದ ಮೂಲಕ ಮೊತ್ತ ಕಡಿತಗೊಳಿಸಲಾಗುತ್ತದೆ.

ಎಪಿವೈ ಖಾತೆ ತೆರೆಯುವುದು ಹೇಗೆ?

ಎಪಿವೈ ಖಾತೆ ತೆರೆಯುವುದು ಹೇಗೆ?

ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸಬೇಕಾದರೆ ಈಗಾಗಲೇ ಉಳಿತಾಯ ಖಾತೆ ಇರುವ ಬ್ಯಾಂಕಿಗೆ ತೆರಳಿ ಅರ್ಜಿ ತುಂಬಿ ಖಾತೆ ತೆರೆಯಬೇಕು. ಬ್ಯಾಂಕ್ ಖಾತೆಯಿಂದಲೇ ಹೂಡಿಕೆಯ ಮೊತ್ತ ಕಡಿತವಾಗುತ್ತದೆ. ಪ್ರತಿ ತಿಂಗಳು ಬ್ಯಾಂಕಿಗೆ ಹೋಗಬೇಕಾದ ಅಗತ್ಯವಿರುವುದಿಲ್ಲ. ಬದಲಾಗಿ ಖಾತೆಯಲ್ಲಿ ಬ್ಯಾಲೆನ್ಸ್ ಮೊತ್ತ ಇದ್ದರೆ ಸಾಕು. ಹಣ ಅಟಲ್ ಪಿಂಚಣಿ ಯೋಜನೆ ಖಾತೆಗೆ ತನ್ನಿಂದ ತಾನೇ ವರ್ಗಾವಣೆಯಾಗುತ್ತದೆ.ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ಯೋಜನೆ ಬಗ್ಗೆ ವಿಚಾರಿಸಿ ಅರ್ಜಿ ಪಡೆದುಕೊಳ್ಳಬೇಕು. ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಕೆ ಮಾಡಬೇಕು. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು. 

English summary

Atal Pension Scheme: Invest Rs. 42 Get 1000 Pensions Per Month?

Atal Pension Yojana or APY is a pension scheme offered by government and administered by the Pension Fund Regulatory and Development Authority (PFRDA).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X