For Quick Alerts
ALLOW NOTIFICATIONS  
For Daily Alerts

ಮೊಬೈಲ್ ಮೂಲಕ ಸಿಲಿಂಡರ್ ಗ್ಯಾಸ್ ಬುಕಿಂಗ್ ಮಾಡೋದು ಹೇಗೆ?

ನೀವು ಗ್ಯಾಸ್ ಬುಕಿಂಗ್ ಮಾಡುವಾಗ ಕೂಡ ಇದು ಅನ್ವಯವಾಗುತ್ತದೆ.ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಎಲ್ಪಿಜಿ ಗ್ರಾಹಕರಿಗೆ ಎಚ್‍ಪಿ ಗ್ಯಾಸ್ ಆಪ್ ಅನ್ನು ಪ್ರಾರಂಭಿಸಿದೆ.

|

ಯಾವುದೇ ಕೆಲಸಗಳನ್ನು ಮಾಡುವಾಗಲೂ ಪ್ರತಿಯೊಬ್ಬರೂ ತುಂಬಾ ಸುಲಭದ ಮಾರ್ಗಗಳನ್ನು ಆಯ್ಕೆ ಮಾಡಲು ಬಯಸುತ್ತಾರೆ. ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಕೆಲಸಗಳು ಕೈ ಬೆರಳ ತುದಿಯಲ್ಲಿ ಕಡಿಮೆ ಸಮಯ ಹಾಗು ಕಡಿಮೆ ಖರ್ಚಿನಲ್ಲಿ ಮಾಡಬಹುದು. ನೀವು ಗ್ಯಾಸ್ ಬುಕಿಂಗ್ ಮಾಡುವಾಗ ಕೂಡ ಇದು ಅನ್ವಯವಾಗುತ್ತದೆ.
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಎಲ್ಪಿಜಿ ಗ್ರಾಹಕರಿಗೆ ಎಚ್‍ಪಿ ಗ್ಯಾಸ್ ಆಪ್ ಅನ್ನು ಪ್ರಾರಂಭಿಸಿದೆ. ಎಲ್ಪಿಜಿ ಸಬ್ಸಿಡಿ ಖಾತೆಗೆ ಬರುತ್ತಿದೆಯೇ ಎಂಬುದನ್ನು ಚೆಕ್ ಮಾಡೋದು ಹೇಗೆ?

ಮೊಬೈಲ್ ಆಪ್ ಮೂಲಕ?

ಮೊಬೈಲ್ ಆಪ್ ಮೂಲಕ?

ಎಚ್‍ಪಿ ಸಿಲಿಂಡರ್ ಗ್ರಾಹಕರು ಮೊಬೈಲ್ ಆಪ್ ಮೂಲಕ ಆನ್ಲೈನ್ ನಲ್ಲಿ ಗ್ಯಾಸ್ ಬುಕಿಂಗ್ ಮಾಡಬಹುದು. ಅಪ್ಲಿಕೇಶನ್ ಮೂಲಕ ಸಿಲಿಂಡರ್ ಬುಕಿಂಗ್ ಸ್ಟೇಟಸ್/ ಇತಿಹಾಸ, ಗ್ರಾಹಕರ ದೂರುಗಳು, ವಿತರಣಾ ಆದ್ಯತೆಯ ಸಮಯ ಇತ್ಯಾದಿಗಳನ್ನು ಪರಿಶೀಲಿಸುವಂತಹ ಗ್ರಾಹಕ ಸೇವೆಗಳನ್ನು ಒದಗಿಸುತ್ತದೆ. ಆಂಡ್ರಾಯ್ಡ್ ಬಳಕೆದಾರರಿಗೆ HP ಗ್ಯಾಸ್ ಲಭ್ಯವಿರುತ್ತದೆ. ಎಚ್ಪಿ ಆಪ್ ಅನ್ನು Google Play Store ನಿಂದ ಡೌನ್ಲೋಡ್ ಮಾಡಬಹುದು. HP ಗ್ಯಾಸ್ ಅಪ್ಲಿಕೇಶನ್ ಐಒಎಸ್ ಬಳಕೆದಾರರಿಗೆ ಸಹ ಲಭ್ಯವಿದ್ದು, ಐಟ್ಯೂನ್ಸ್ ನಿಂದ ಡೌನ್ಲೋಡ್ ಮಾಡಬಹುದು.

ಎಚ್‍ಪಿ ಗ್ಯಾಸ್ ಆಪ್

ಎಚ್‍ಪಿ ಗ್ಯಾಸ್ ಆಪ್

ಪ್ರಾರಂಭ ಮಾಡಿದ್ದು: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್)
ವೆಬ್ಸೈಟ್: http://www.hindustanpetroleum.com/ https://myhpgas.in/myHPGas/Index.aspx
ಸಹಾಯವಾಣಿ/ದೂರು: ಕ್ಲಿಕ್ ಮಾಡಿ
ಡೌನ್ಲೋಡ್: ಗೂಗಲ್ ಪ್ಲೇ ಸ್ಟೋರ್ ನಿಂದ ಎಚ್ಪಿ ಗ್ಯಾಸ್ ಮೊಬೈಲ್ ಆಪ್ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
iTunes ನಿಂದ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

HP ಗ್ಯಾಸ್ ಅಪ್ಲಿಕೇಶನ್ ವೈಶಿಷ್ಟ್ಯಗಳು

HP ಗ್ಯಾಸ್ ಅಪ್ಲಿಕೇಶನ್ ವೈಶಿಷ್ಟ್ಯಗಳು

- ಬುಕ್ ಎಲ್ಪಿಜಿ ಸಿಲಿಂಡರ್ ರೀಫಿಲ್/ಆರ್ಡರ್ ಸಿಲಿಂಡರ್
- ಬುಕಿಂಗ್ ಸ್ಟೇಟಸ್ ಚೆಕ್ ಮಾಡಿ
- ಸಿಲಿಂಡರ್ ಬುಕಿಂಗ್ ಹಿಸ್ಟರಿ
- ಸಿಲಿಂಡರ್ ವಿತರಣಾ ಆದ್ಯತಾ ಸಮಯ ಹೊಂದಿಸಿ
- ದೂರು ದಾಖಲಿಸಿರಿ
- ಸರೆಂಡರ್ ಎಲ್ಪಿಜಿ ಕನೆಕ್ಷನ್
- ದರ ವಿತರಕರು
- ಎಲ್ಪಿಜಿ ಸಬ್ಸಿಡಿಯಿಂದ ಹೊರಗುಳಿಯುವ ಆಯ್ಕೆ  ಎಲ್ಪಿಜಿ (LPG) ಕನೆಕ್ಷನ್ ಪಡೆಯುವುದು ಹೇಗೆ?

ಎಚ್‍ಪಿ ಗ್ಯಾಸ್ ಎಲ್ಪಿಜಿ ಸಿಲಿಂಡರ್ ಆನ್ಲೈನ್ ಮೂಲಕ ಆರ್ಡರ್ ಮಾಡೋದು ಹೇಗೆ?

ಎಚ್‍ಪಿ ಗ್ಯಾಸ್ ಎಲ್ಪಿಜಿ ಸಿಲಿಂಡರ್ ಆನ್ಲೈನ್ ಮೂಲಕ ಆರ್ಡರ್ ಮಾಡೋದು ಹೇಗೆ?

ಹಂತ 1: ನಿಮ್ಮ ಮೊಬೈಲ್ ನಿಂದದ HP ಗ್ಯಾಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಹಂತ 2: ಅಪ್ಲಿಕೇಶನ್ ಅನ್ನು ಇನ್ಸಟಾಲ್ ಮಾಡಿ.
ಹಂತ 3: ನೀವು ನೋಂದಾಯಿತ ಬಳಕೆದಾರರಲ್ಲದಿದ್ದರೆ ಅಪ್ಲಿಕೇಶನ್ ತೆರೆಯಿರಿ. ನಂತರ ಇಲ್ಲಿ ಕ್ಲಿಕ್ ಮಾಡಿ ಮತ್ತು ಮೊದಲು ನೋಂದಾಯಿಸಿ.
ಹಂತ 4: ಈಗ ನಿಮ್ಮ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ನೊಂದಿಗೆ ಲಾಗಿನ್ ಮಾಡಿ
ಹಂತ 5: ಮುಖಪುಟದಲ್ಲಿ ಎಲ್ಪಿಜಿ ರೀಫಿಲ್ ಆರ್ಡರ್ ಮೆನು ಮೇಲೆ ಕ್ಲಿಕ್ ಮಾಡಿ
ಹಂತ 6: ರೀಫಿಲ್ ಆರ್ಡರ್ ಮಾಡಿ
HP ಗ್ಯಾಸ್ ಗ್ರಾಹಕರು ಮಾತ್ರ ಅಪ್ಲಿಕೇಶನ್ ಅನ್ನು ಬಳಸಬಹುದು. ಅಪ್ಲಿಕೇಶನ್ ಲಾಗಿನ್ ಮಾಡಲು ಮಾನ್ಯವಾದ ಮೊಬೈಲ್ ಸಂಖ್ಯೆ & ಇಮೇಲ್ ID ಅಗತ್ಯವಿದೆ.

ಆನ್ಲೈನ್ ಮೂಲಕ ಎಲ್ಪಿಜಿ ಸಂಪರ್ಕ

ಆನ್ಲೈನ್ ಮೂಲಕ ಎಲ್ಪಿಜಿ ಸಂಪರ್ಕ

ಭಾರತದಲ್ಲಿ ಈಗ ಬಹುತೇಕ ಎಲ್ಲ ಇಂಧನ ಮಾರಾಟ ಕಂಪನಿಗಳು ಆನ್ಲೈನ್ ಮೂಲಕ ಹೊಸ ಎಲ್ಪಿಜಿ ಸಂಪರ್ಕ ಪಡೆಯುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿವೆ. ಆನ್ಲೈನ್ ಮೂಲಕ ಎಲ್ಪಿಜಿ ಕನೆಕ್ಷನ್ ಬುಕ್ ಮಾಡಲು ವಿವಿಧ ಇಂಧನ ಮಾರಾಟ ಕಂಪನಿಗಳ ವೆಬ್ಸೈಟ್ ಲಿಂಕ್‌ಗಳು ಈ ಕೆಳಗಿನಂತಿವೆ:
ಇಂಡೇನ್: http://indane.co.in/new_connection.php
ಎಚ್‌ಪಿ ಗ್ಯಾಸ್: http://dcms.hpcl.co.in/consumerportal/logging/securelogin.aspx
ಭಾರತ ಗ್ಯಾಸ್: http://www.ebharatgas.com/pages/Customer_Console/New_Domestic_Connection.html

ಎಲ್ಪಿಜಿ ಕನೆಕ್ಷನ್‌ಗಾಗಿ ಅಗತ್ಯ ದಾಖಲೆಗಳು (ಇವುಗಳಲ್ಲಿ ಯಾವುದಾದರೂ ಒಂದು)

ಎಲ್ಪಿಜಿ ಕನೆಕ್ಷನ್‌ಗಾಗಿ ಅಗತ್ಯ ದಾಖಲೆಗಳು (ಇವುಗಳಲ್ಲಿ ಯಾವುದಾದರೂ ಒಂದು)

ವೋಟರ್ ಐಡಿ ಕಾರ್ಡ್
ಪಾಸ್ಪೋರ್ಟ
ಡ್ರೈವಿಂಗ್ ಲೈಸೆನ್ಸ್
ಪ್ಯಾನ್ ಕಾರ್ಡ್
ಸರಕಾರದಿಂದ ನೀಡಲಾದ ಭಾವಚಿತ್ರ ಸಹಿತ ಗುರುತಿನ ಪತ್ರ ಅಥವಾ ಆಧಾರ ಸಂಖ್ಯೆ. ಕೆವೈಸಿ ನಿಯಮಾವಳಿಗಳ ಪ್ರಕಾರ ಗುರುತು ಸಾಬೀತು ಪಡಿಸುವ ದಾಖಲೆ, ವಿಳಾಸದ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಜೊತೆಗೆ ನಿಮ್ಮ ಮನೆಯಲ್ಲಿ ಈಗಾಗಲೇ ಎಲ್ಪಿಜಿ/ ಕೊಳವೆ ಮಾರ್ಗದ ಎಲ್ಪಿಜಿ ಕನೆಕ್ಷನ್ ಇಲ್ಲ ಎಂಬುದಾಗಿ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ಎಲ್ಪಿಜಿ ಕನೆಕ್ಷನ್ ಶುಲ್ಕಗಳು

ಎಲ್ಪಿಜಿ ಕನೆಕ್ಷನ್ ಶುಲ್ಕಗಳು

ಒಂದು ಸಿಲಿಂಡರ್‌ನೊಂದಿಗೆ ಹೊಸ ಕನೆಕ್ಷನ್ ಶುಲ್ಕಗಳು ಹೀಗಿವೆ:
ಖಾಲಿ ಸಿಲಿಂಡರ್ ಶುಲ್ಕ: 1450 ರೂ. (ಮರುಪಾವತಿಯಾಗುವಂಥದ್ದು)
ಒಂದು ತುಂಬಿದ ಸಿಲಿಂಡರ್ ಬೆಲೆ (14.2 ಕೆಜಿ) : ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ ರೆಗ್ಯುಲೇಟರ್ ಶುಲ್ಕ: ರೂ.150 (ಮರುಪಾವತಿಯಾಗುವಂಥದ್ದು)
ಗ್ಯಾಸ್ ಪಾಸಬುಕ್ ಶುಲ್ಕ : ರೂ. 25
ದಾಖಲಾತಿ ಶುಲ್ಕಗಳು: ಕಂಪನಿಯಿಂದ ಕಂಪನಿಗೆ ವ್ಯತ್ಯಾಸವಾಗುತ್ತವೆ.
ಗ್ಯಾಸ್ ಒಲೆಯ ಬೆಲೆ (ಐಚ್ಛಿಕ) : ಗ್ಯಾಸ್ ಒಲೆಯ ಮಾಡೆಲ್ ಅನ್ನು ಆಧರಿಸಿರುತ್ತದೆ. 'ಎಲ್ಪಿಜಿ ಗ್ಯಾಸ್' ಏಜೆನ್ಸಿಯಿಂದ ತರುವ ಮುನ್ನ ನಿಮಗಿದು ತಿಳಿದಿರಲಿ..

Read more about: lpg hp money
English summary

How to Book Cylinder Gas Through Mobile?

Hindustan Petroleum Corporation Limited (HPCL) has launched HP GAS App for the LPG consumers.
Story first published: Monday, May 27, 2019, 13:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X