For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್‌ ಆರಂಭಿಸಿ ಶತಕೋಟ್ಯಾಧಿಪತಿಗಳಾದವರು

|

ಸಿಲಿಕಾನ್ ಸಿಟಿ ಬೆಂಗಳೂರು ಸಾವಿರಾರು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಹಾಗೆಯೇ ನೂರಾರು ಸ್ಟಾರ್ಟ್‌ ಅಪ್‌ಗಳ ಅಡಿಪಾಯವಾಗಿದೆ. ಅನೇಕರು ಹೊಸ ಆಲೋಚನೆಗಳ ಮೂಲಕ ಇಲ್ಲಿ ಬಿಜೆನೆಸ್ ಆರಂಭಿಸಿ ಯಶಸ್ಸು ಸಾಧಿಸಿದ್ದಾರೆ. ಅದೇ ರೀತಿ ಅನೇಕರು ಈ ಮೂಲಕ ಶತ ಕೋಟ್ಯಾಧಿಪತಿಗಳು ಆಗಿದ್ದಾರೆ. ಬೆಂಗಳೂರು ಒಂದು ರೀತಿಯಲ್ಲಿ ಶತಕೋಟ್ಯಾಧಿಪತಿಗಳ ತವರಾಗುತ್ತಿದೆ ಎಂದರು ಅತಿಶಯವಲ್ಲ

 

ಬೆಂಗಳೂರು ಅನೇಕ ಯುವ ಬಿಲಿನಿಯೇರ್‌ಗಳಿಗೆ ಜನ್ಮ ನೀಡಿದ ಸ್ಥಳವಾಗಿದೆ. ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಆರಂಭಿಸಿ ಬಿಲಿನಿಯೇರ್ ಆದವರು ಅನೇಕರಿದ್ದಾರೆ. ಅದರಲ್ಲೂ ಅನೇಕ ಬಿಲಿನಿಯೇರ್‌ಗಳು 40 ವರ್ಷದೊಳಗಿನವರು ಎಂಬುದು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ 2019ರ ಪ್ರಕಾರ 17 ಸ್ವಯಂ ಬೆಳೆದು ಬಂದ ಉದ್ಯಮಿಗಳ ಪಟ್ಟಿಯಲ್ಲಿ 10ರಷ್ಟು ಜನರು ಬೆಂಗಳೂರಿನವರೇ ಆಗಿದ್ದಾರೆ. ಅದರಲ್ಲೂ ಅವರೆಲ್ಲಾ 40 ವರ್ಷ ವಯಸ್ಸಿನ ಕೆಳಗಿನವರು.

ಮುಂಬೈ ಅತಿ ಹೆಚ್ಚು ಶತ ಕೋಟ್ಯಾಧಿಪತಿಗಳನ್ನು ಹೊಂದಿದ್ದರೆ, ಬೆಂಗಳೂರು ಕೂಡ ಬಿಲಿಯನೇರ್‌ಗಳ ರಾಜಧಾನಿಯಾಗಿದೆ ಎಂದೇ ಹೇಳಲಾಗುತ್ತದೆ. ಹಾಗಿದ್ದರೆ ಬೆಂಗಳೂರಿನಲ್ಲಿ ಸ್ಟಾರ್ಟ್ ಆರಂಭಿಸಿ ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಧಿಪತಿಗಳು ಆದವರಲ್ಲಿ ಪ್ರಮುಖರು ಮತ್ತು ಅವರ ಕಂಪನಿ ಬಗ್ಗೆ ಮಾಹಿತಿ ಈ ಕೆಳಗಿದೆ ಓದಿ

ನಿತಿನ್ ಕಾಮತ್

ನಿತಿನ್ ಕಾಮತ್

ಷೇರು ವಹಿವಾಟು ನಡೆಸಲು ವೇದಿಕೆ ಒದಗಿಸುವ ಬೆಂಗಳೂರು ಮೂಲದ ಜೆರೋಧಾ ಬ್ರೋಕರೇಜ್ ಕಂಪನಿ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜೆರೋಧಾ ಡಾಟ್‌ಕಾಮ್ ಮೂಲಕ ಷೇರುಗಳನ್ನು ಖರೀದಿ ಮತ್ತು ಮಾರಾಟ ಮಾಡಬಹುದು. ಜೆರೋಧಾ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್‌ ಮೂಲತಃ ಶಿವಮೊಗ್ಗದವರು.

40 ವರ್ಷ ವಯಸ್ಸಿನ ನಿತಿನ್ ಕಾಮತ್ ತಮ್ಮ ಸಹೋದರನ ಜೊತೆಗೂಡಿ ಜೆರೋಧಾ ಕಂಪನಿಯನ್ನು ಸ್ಥಾಪಿಸಿದ್ರು. ಇವರ ಆಸ್ತಿಯ ಮೌಲ್ಯ ಅಂದಾಜು 6,600 ಕೋಟಿ ರುಪಾಯಿ. 2010ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಸ್ಟಾರ್ಟ್ ಅಪ್ ಕಂಪನಿ ಜೆರೋಧಾ ಈಗ ಭಾರತೀಯ ಚಿಲ್ಲರೆ ವ್ಯಾಪಾರದ ಸುಮಾರು 15 ಪರ್ಸೆಂಟ್‌ನಷ್ಟು ಷೇರುಗಳನ್ನು ವಹಿವಾಟು ನಡೆಸುವ ದಲ್ಲಾಳಿ ಸಂಸ್ಥೆಯಾಗಿದೆ. 1.5 ದಶಲಕ್ಷಕ್ಕೂ ಹೆಚ್ಚಿನ ಗ್ರಾಹಕರ ಸಂಖ್ಯೆಯನ್ನು ಹೊಂದಿದೆ.

ತನ್ನ ಕಾಲೇಜು ದಿನಗಳಿಂದಲೇ ಷೇರು ವಹಿವಾಟು ಆರಂಭಿಸಿದ್ದ ನಿತಿನ್ ಕಾಮತ್ ಆ ಕುರಿತು ಉತ್ತಮವಾಗಿ ಅಭ್ಯಸಿಸಿದರು. 3 ವರ್ಷ ಕಾಲ್ ಸೆಂಟರ್‌ನಲ್ಲಿ ಟೆಲಿಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿದ್ದು ಇವರು ನಂತರ ಅದರಿಂದ ಹೊರಬಂದು ತಮ್ಮದೇ ಆದ ಸ್ಟಾರ್ಟ್ ಅಪ್ ಜೆರೋಧಾ ಕಂಪನಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಯಶಸ್ವಿಯಾದ್ರು.

 

ಸಚಿನ್ ಬನ್ಸಾಲ್
 

ಸಚಿನ್ ಬನ್ಸಾಲ್

ಇ-ಕಾರ್ಟ್ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕರಾದ ಸಚಿನ್ ಬನ್ಸಾಲ್ (6,100 ಕೋಟಿ ರುಪಾಯಿ), ಮತ್ತು ಬಿನ್ನಿ ಬನ್ಸಾಲ್ (5,500 ಕೋಟಿ ರುಪಾಯಿ ) ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಆರಂಭಿಸಿ ಬಿಲಿಯನೇರ್ ಆದವರಾಗಿದ್ದಾರೆ. ಜಗತ್ತಿನ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೆಜಾನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರಿಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದರು. ಆನಂತರ ಅವರು ಶುರುಮಾಡಿದ್ದೇ ಫ್ಲಿಪ್‌ಕಾರ್ಟ್ ಸ್ಟಾರ್ಟ್ ಅಪ್. ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಯಾಗಿ ಬೆಳೆಯುತ್ತಿರುವ ಫ್ಲಿಪ್‌ಕಾರ್ಟ್ 77 ಪರ್ಸೆಂಟ್ ಷೇರುಗಳನ್ನು ಕಳೆದ ವರ್ಷ ವಾಲ್‌ಮಾರ್ಟ್ ಖರೀದಿಸಿತು.

ಸಚಿನ್ ಬನ್ಸಾಲ್ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ 5.5-6 ಪರ್ಸೆಂಟ್ ಷೇರುಗಳನ್ನು ಕಳೆದ ವರ್ಷ ಮಾರಾಟ ನಡೆಸಿದರು. ಮತ್ತೊಂದೆಡೆ ಬಿನ್ನಿ 700-800 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಷೇರುಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದಿಂದ ತಮ್ಮ ಪಾಲನ್ನು ಇತರರಿಗೂ ಮಾರಿ ಹೂಡಿಕೆದಾರರಿಗೆ ಅಪ್‌ಲೋಡ್ ಮಾಡುತ್ತಿದ್ದಾರೆ.

 

 ನಿಖಿಲ್ ಕಾಮತ್

ನಿಖಿಲ್ ಕಾಮತ್

ಜೆರೋಧಾ ಬ್ರೋಕರೇಜ್ ಕಂಪನಿಯ ಸಂಸ್ಥಾಪಕ ನಿತಿನ್ ಕಾಮತ್ ಸಹೋದರನಾದ ನಿಖಿಲ್ ಕಾಮತ್ ಕೂಡ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಮೂಲಕ ಬಿಲಿಯನೇರ್ ಆದವರು. ಸುಮಾರು 4,400 ಕೋಟಿ ರುಪಾಯಿ ಆಸ್ತಿಯನ್ನು ಹೊಂದಿರುವ ನಿಖಿಲ್ ಸ್ಟಾರ್ಟ್ ಅಪ್ ಮೂಲಕ ಅತಿ ಹೆಚ್ಚು ಹಣ ಸಂಪಾದಿಸಿರುವ ನಾಲ್ಕನೇ ಬಿಲಿಯನೇರ್ ಆಗಿದ್ದಾರೆ.

ಟ್ರೂ ಬೀಕನ್ ಮತ್ತು ಜೆರೋಧಾ ಸಹ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ನಿಖಿಲ್ ಕಾಮತ್ ಯಶಸ್ವಿ ತಂತ್ರಜ್ಙಾನ ಆಧಾರಿತ ವ್ಯವಹಾರಗಳಿಗೆ ಬೆಂಗಳೂರು ನೆಲೆಯಾಗಿದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ.

 

ರಿಜು ರವೀಂದ್ರನ್

ರಿಜು ರವೀಂದ್ರನ್

ಆನ್‌ಲೈನ್ ಟ್ಯುಟೋರಿಂಗ್ ಆ್ಯಪ್ BYJUನ ಸಹ ಸಂಸ್ಥಾಪಕ ರಿಜು ರವೀಂದ್ರನ್ ಅವರ ಒಟ್ಟು ಸಂಪತ್ತು 3,600 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ನ ಒಂದು ಘಟಕವಾದ ಬೈಜು ಅಂದಾಜು ಮೌಲ್ಯ ಜುಲೈನಲ್ಲಿ 5.5 ಬಿಲಿಯನ್ ಅಮೆರಿಕನ್ ಡಾಲರ್‌ ಆಗಿದೆ.

BYJUನ ಮತ್ತೊಬ್ಬ ಸಹ ಸಂಸ್ಥಾಪರಾಗಿರುವ ರಿಜು ರವೀಂದ್ರನ್ ಪತ್ನಿ ದಿವ್ಯಾ ಗೋಕುಲ್‌ನಾಥ್‌ ಕೂಡ ಕೋಟ್ಯಾಧಿಪತಿಯಾಗಿದ್ದು ಇವರ ಅಂದಾಜು ಆಸ್ತಿ ಮೌಲ್ಯ 1,800 ಕೋಟಿ ರುಪಾಯಿ.

 

ಅಮೋದ್ ಮಾಳವಿಯಾ, ಸುಜೀತ್ ಕುಮಾರ್‌ ಮತ್ತು ವೈಭವ್ ಗುಪ್ತಾ

ಅಮೋದ್ ಮಾಳವಿಯಾ, ಸುಜೀತ್ ಕುಮಾರ್‌ ಮತ್ತು ವೈಭವ್ ಗುಪ್ತಾ

ಮಾಜಿ ಫ್ಲಿಪ್‌ಕಾರ್ಟ್ ಅಧಿಕಾರಿಗಳಾದ ಅಮೋದ್ ಮಾಳವಿಯಾ, ಸುಜೀತ್ ಕುಮಾರ್ ಮತ್ತು ವೈಭವ್ ಗುಪ್ತಾ ಕೂಡ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಮೂಲಕ ಬಿಲಿಯನೇರ್ ಆದವರ ಲಿಸ್ಟ್‌ನಲ್ಲಿದ್ದಾರೆ.

40 ವರ್ಷ ವಯಸ್ಸಿನ ಒಳಗಿನವರಾದ ಇವರು ಆನ್‌ಲೈನ್ B2B ಮಾರುಕಟ್ಟೆ ಉಡಾನ್ ಅನ್ನು ವೇಗವಾಗಿ ಬೆಳೆಸಿ ಯೂನಿಕಾರ್ನ್ ಸ್ಥಾನಮಾನವನ್ನು ನೀಡಿದವರು. ಇವರ ಅಂದಾಜು ಆಸ್ತಿ 3,500 ಕೋಟಿ ರುಪಾಯಿ. ಹಾಗೆಯೇ ಇವರ ಸ್ಟಾರ್ಟ್ ಅಪ್ ಮಾರುಕಟ್ಟೆ ಮೌಲ್ಯ 2.5 ರಿಂದ 3 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ.

ಭವೀಶ್ ಅಗರ್ವಾಲ್

ಭವೀಶ್ ಅಗರ್ವಾಲ್

34 ವರ್ಷ ವಯಸ್ಸಿನ ಭವೀಶ್ ಅಗರ್ವಾಲ್ ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಸರ್ವೀಸ್ ಆರಂಭಿಸಿ ಯಶಸ್ಸಿ ಉದ್ಯಮಿಯಾದವರು. ಐಐಟಿ ಬಾಂಬೆಯಲ್ಲಿ ಬಿ-ಟೆಕ್ ಎಂಜಿನಿಯರ್ ಪದವಿ ಪಡೆದು ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕೆಲಸ ತೊರೆದು ತಮ್ಮದೇ ಆದ ಸ್ಟಾರ್ಟ್ ಅಪ್ ಆರಂಭಿಸಿ ಯಶಸ್ವಿ ಬಿಲಿಯನೇರ್ ಆದರು.

ಭಾರತದಲ್ಲಿ ಉಬರ್‌ಗೆ ಸಮಾನ ಸ್ಫರ್ಧೆಯನ್ನು ನೀಡಿದ್ದ ಭವಿಶ್ ಅಗರ್ವಾಲ್ ನೇತೃತ್ವದ ಓಲಾ ಸಂಸ್ಥೆಯು ಇಂಗ್ಲೆಂಡ್ ಹೊರತುಪಡಿಸಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಭವೀಶ್ ಅಗರ್ವಾಲ್ ಅಂದಾಜು ಆಸ್ತಿ ಮೌಲ್ಯ 3,100 ಕೋಟಿ ರುಪಾಯಿ ಆಗಿದೆ. ಓಲಾ ಕಂಪನಿಯ ಮತ್ತೊಬ್ಬ ಸಹ ಸಂಸ್ಥಾಪಕ ಅಂಕಿತ್ ಬಾಟಿಯ ಆಸ್ತಿ ಮೌಲ್ಯವು ಅಂದಾಜು 1,400 ಕೋಟಿ ರುಪಾಯಿನಷ್ಟಿದೆ.

 

ರಿತೇಶ್ ಅಗರ್ವಾಲ್

ರಿತೇಶ್ ಅಗರ್ವಾಲ್

ಸ್ವಯಂ ಸ್ಟಾರ್ಟ್ ಅಪ್ ಆರಂಭಿಸಿ ಬಿಲಿಯನೇರ್ ಆದ ಯಂಗ್ ಉದ್ಯಮಿಗಳಲ್ಲಿ ಒಬ್ಬರು ಓಯೋ ಹೋಟೆಲ್ಸ್ ಮತ್ತು ಹೋಮ್ಸ್ ಸ್ಥಾಪಕ ರಿತೇಶ್ ಅಗರ್ವಾಲ್. ಸುಮಾರು 7,500 ಕೋಟಿ ಆಸ್ತಿಯನ್ನು ಹೊಂದಿರುವ 26 ವರ್ಷ ವಯಸ್ಸಿನ ಬಿಲಿಯನೇರ್ ರಿತೇಶ್ ಅಗರ್ವಾಲ್ ನಮ್ಮ ಬೆಂಗಳೂರಿನಲ್ಲೇ ಸ್ಟಾರ್ಟ್ ಅಪ್ ಆರಂಭಿಸಿ ಶತಕೋಟ್ಯಾಧಿಪತಿ ಆದವರ ಲಿಸ್ಟ್‌ನಲ್ಲಿದ್ದಾರೆ.

English summary

Banglore Based Startups Billionaires

Banglore India's startups capital, now also holds most number of billionaires aged number 40.
Story first published: Saturday, December 21, 2019, 19:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X