For Quick Alerts
ALLOW NOTIFICATIONS  
For Daily Alerts

Fact Check: IRCTC 20 ರು ಚಹಾಕ್ಕೆ 50 ರು ತೆರಿಗೆ ವೈರಲ್ ಪೋಸ್ಟ್!

|

ಭಾರತೀಯ ರೈಲ್ವೆ ಪ್ರಯಾಣಿಕರೊಬ್ಬರು ಹಂಚಿಕೊಂಡ ಚಹಾ ಬಿಲ್ ಸಾಮಾಜಿಕ ಜಾಲ ತಾಣದಲ್ಲಿ ಸಕತ್ ಟ್ರೆಂಡ್ ಆಗುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ 20 ರು ಚಹಾಕ್ಕೆ 50 ರು ತೆರಿಗೆ ವಿಧಿಸುತ್ತಿದೆ ಎಂದು ಹಲವರು ಕಿಡಿಕಾರಿದ್ದಾರೆ. ಸರ್ಕಾರಿ ಸ್ವಾಮ್ಯದ IRCTC ಸರ್ವೀಸ್ ಬಿಲ್ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ಅಸಲಿಗೆ ಇದು ದೆಹಲಿಯಿಂದ ಭೋಪಾಲ್ ಕಡೆಗೆ ತೆರಳುವಾಗ ಪ್ರಯಾಣಿಕರೊಬ್ಬರು IRCTC ಮೂಲಕ ಚಹಾ ಖರೀದಿಸಿದ್ದಕ್ಕೆ ಪಡೆದ ರಸೀತಿಯಾಗಿದೆ. ಶತಾಬ್ದಿ ಎಕ್ಸ್ ಪ್ರೆಸ್ ಚಹಾ ರಸೀತಿ ಎಲ್ಲರ ಗಮನ ಸೆಳೆದಿದೆ. ಬಾಲಗೋವಿಂದ್ ವರ್ಮಾ ಎಂಬುವರು ಟ್ವೀಟ್ ಮಾಡಿದ್ದು ವೈರಲ್ ಆಗಿದ್ದು, ಎಲ್ಲಾ ಭಾಷೆಗಳಲ್ಲೂ ಇದರ ಭಾವಾರ್ಥ ಪಸರಿಸಿದೆ. ಅನೇಕ ಕಡೆಗಳಲ್ಲಿ ಈ ರಸೀತಿ ಲೆಕ್ಕಾಚಾರ ಹೇಗೆ ಎಂಬುದನ್ನು ಅನೇಕರು ವಿವರಿಸಿದ್ದಾರೆ. ಇನ್ನು ಕೆಲವರು ಸರ್ಕಾರದ ವಿರುದ್ಧ ತಮ್ಮ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ.

ಮನರಂಜನೆಗೂ ತೆರಿಗೆ: ಯಾವ ರಾಜ್ಯದಲ್ಲಿ ಎಷ್ಟಿದೆ, ಹೇಗೆ ಅನ್ವಯ?ಮನರಂಜನೆಗೂ ತೆರಿಗೆ: ಯಾವ ರಾಜ್ಯದಲ್ಲಿ ಎಷ್ಟಿದೆ, ಹೇಗೆ ಅನ್ವಯ?

ಟ್ವಿಟ್ಟರ್ ಬಳಕೆದಾರರೊಬ್ಬರು ಪ್ರತಿಕ್ರಿಯೆ, "IRCTC ಒಂದು ಸರ್ಕಾರಿ ಸಂಸ್ಥೆಯಾಗಿದೆ ಮತ್ತು ಎಲ್ಲಾ ಸೇವಾ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಲಾಗುತ್ತದೆ. ಗ್ರಾಹಕರು ಅಥವಾ ಸಾರ್ವಜನಿಕರಿಗೆ ತಿಳಿದಿರುವಂತೆ ಅವರು ತೆರಿಗೆ ಎಂದು ಪರಿಗಣಿಸಲು ಸಾಧ್ಯವಿಲ್ಲ, ಆದ್ದರಿಂದ ಅವರು 'ಸೇವೆ(Service)' ಎಂದು ಬರೆದಿದ್ದಾರೆ. ಮತ್ತು ಈಗ ಅವರು ಅದನ್ನು 'ಸೇವೆ' ಎಂದು ಟ್ಯಾಗ್ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿಯಲ್ಲಿ ನೀವು ಹಂಚಿಕೊಂಡಿರುವುದು ಒಳ್ಳೆಯದು, ಯಾರಾದರೂ IRCTC ಯಿಂದ ಆರ್ಡರ್ ಮಾಡುತ್ತಾರೆಯೇ ಹೊರತು ಹೊರಗಿನ ಮಾರಾಟಗಾರರಿಂದಲ್ಲ'' ಎಂದಿದ್ದಾರೆ. ಈ ಬಗ್ಗೆ ವಿವರ ಮುಂದಿದೆ...

ಆಹಾರ, ಪಾನೀಯ ಸೇವೆಗಳನ್ನು ನೀಡಲಾಗುತ್ತದೆ

ಆಹಾರ, ಪಾನೀಯ ಸೇವೆಗಳನ್ನು ನೀಡಲಾಗುತ್ತದೆ

ಶತಾಬ್ದಿ, ರಾಜಧಾನಿ ಮುಂತಾದ ಉನ್ನತ-ಮಟ್ಟದ ರೈಲುಗಳಲ್ಲಿ ಆಹಾರ, ಪಾನೀಯ ಸೇವೆಗಳನ್ನು ನೀಡಲಾಗುತ್ತದೆ. ಆದರೆ, ಸೇವೆ ಪಡೆಯಲು ಯಾವುದೇ ಆದೇಶವಿಲ್ಲ. ಆದ್ದರಿಂದ, ಸಾಮಾನ್ಯ ಸಂದರ್ಭದಲ್ಲಿ, ಪ್ರಯಾಣಿಕರು ಟಿಕೆಟ್‌ಗೆ ಮಾತ್ರ ಹಣ ಪಾವತಿಸಬೇಕಾಗುತ್ತದೆ ಮತ್ತು ಅದರಲ್ಲಿ ಕೆಟರಿಂಗ್ ಸೇವೆ ಸೇರಿರುವುದಿಲ್ಲ. ಕೆಲವು ಎಕ್ಸ್ ಪ್ರೆಸ್ ರೈಲುಗಳಲ್ಲಿ ಮಾತ್ರ ಟಿಕೆಟ್ ಜೊತೆಗೆ ಕೆಟರಿಂಗ್ ಸೇವೆ ಸೇರಿರುತ್ತದೆ.

ಸೇವಾ ಶುಲ್ಕವನ್ನು ರೆಸ್ಟೋರೆಂಟ್‌ನಿಂದ ಪಾವತಿಸಬೇಕು

ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿ, "ಕಳೆದ ತಿಂಗಳು ಸರ್ಕಾರವು ಘೋಷಿಸಿದಂತೆ ಪ್ರತಿ ರೆಸ್ಟೋರೆಂಟ್‌ಗಳು ಸೇವಾ ಶುಲ್ಕವನ್ನು ಹೆಚ್ಚು ತೆಗೆದುಕೊಳ್ಳುವುದನ್ನು ನಾನು ಎಲ್ಲೆಡೆ ನೋಡಿದ್ದೇನೆ ಆದರೆ , ಸೇವಾ ಶುಲ್ಕವನ್ನು ರೆಸ್ಟೋರೆಂಟ್‌ನಿಂದ ಪಾವತಿಸಬೇಕು, ಅವರು ಗ್ರಾಹಕರಿಗೆ ಶುಲ್ಕ ವಿಧಿಸಲಾಗುವುದಿಲ್ಲ.. IRCTC ಟೀ (sic) ವಿರುದ್ಧ ದೂರು ನೀಡಿ ಗ್ರಾಹಕ ವೇದಿಕೆಗೆ ಹೋಗಿ.. ." ಎಂದು ಸಲಹೆ ನೀಡಿದ್ದಾರೆ.

ರೈಲ್ವೆ ಅಧಿಕಾರಗಳು ಸ್ಪಷ್ಟನೆ ನೀಡಿದ್ದು

ಮಾಧ್ಯಮ ವರದಿಗಳ ನಂತರ ಈ ಬಗ್ಗೆ ರೈಲ್ವೆ ಅಧಿಕಾರಗಳು ಸ್ಪಷ್ಟನೆ ನೀಡಿದ್ದು, ಗ್ರಾಹಕರಿಂದ ಯಾವುದೇ ಹೆಚ್ಚುವರಿ ಹಣವನ್ನು ವಸೂಲಿ ಮಾಡಿಲ್ಲ. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಅವರು 2018 ರಲ್ಲಿ ಭಾರತೀಯ ರೈಲ್ವೇ ಹೊರಡಿಸಿದ ಸುತ್ತೋಲೆಯನ್ನು ಲಗತ್ತಿಸಿದ್ದಾರೆ, ಅದು ಶತಾಬ್ದಿ ಅಥವಾ ರಾಜಧಾನಿಯಂತಹ ರೈಲುಗಳಲ್ಲಿ ರೈಲು ಕಾಯ್ದಿರಿಸುವಾಗ ಊಟವನ್ನು ಕಾಯ್ದಿರಿಸದಿದ್ದಲ್ಲಿ ಅಂತಹ ನಿದರ್ಶನದಲ್ಲಿ ಸೇವೆ ಎಂದು ಹೇಳುತ್ತದೆ. 50 ರು ಚಹಾ ಇತ್ಯಾದಿಗಳನ್ನು ಆರ್ಡರ್ ಮಾಡಲು ಅನ್ವಯಿಸುತ್ತದೆ. ಇದು ಒಂದು ಕಪ್ ಚಹಾವನ್ನು ಆರ್ಡರ್ ಮಾಡಿದರೂ ಸಹ ಎಂದಿದ್ದಾರೆ.

ಕೆಟರಿಂಗ್ ಸೇವೆ ಪ್ರಯಾಣಿಕರಿಗೆ ಐಚ್ಛಿಕ

ಶತಾಬ್ದಿ ಮುಂತಾದ ಎಕ್ಸ್ ಪ್ರೆಸ್ ರೈಲುಗಳಲ್ಲಿ IRCTC ಬಳಸುವ ಬಗ್ಗೆ ಈಗಾಗಲೇ ಮಾರ್ಗಸೂಚಿ ನೀಡಲಾಗಿದೆ. ಜೊತೆಗೆ ಕೆಟರಿಂಗ್ ಸೇವೆ ಪ್ರಯಾಣಿಕರಿಗೆ ಐಚ್ಛಿಕವಾಗಿದ್ದು, ಊಟದ ತರೆಸಿಕೊಳ್ಳುವುದು ಕಡಾಯವೇನಲ್ಲ. ಒಟ್ಟಾರೆ, ಇದು ತೆರಿಗೆ ಅಲ್ಲ, ಸರ್ವೀಸ್ ಛಾರ್ಜ್ ಎಂದು ನಮೂದಿಸಲಾಗಿದೆ. ಸರಕುಗಳಿಗಿಂತ ಸೇವೆ ಮೌಲ್ಯ ಅಧಿಕವಾಗಿರುವುದಕ್ಕೆ ಪ್ರಶಂಸಿಸಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

English summary

Fact Check: IRCTC Levies Rs. 50 As A Service Charge For A Cup Of Tea Worth Rs. 20 On Shatabdi Express

Fact Check: In a train journey from Delhi to Bhopal in Bhopal Shatabdi, a passenger was charged a hefty service fee of Rs. 50 for a cup of tea costing Rs. 20.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X