For Quick Alerts
ALLOW NOTIFICATIONS  
For Daily Alerts

ನಿವೃತ್ತಿ ಬಗ್ಗೆ ಯೋಚಿಸಬೇಡಿ: ಆದರೆ ಈ 4 ಸೂತ್ರಗಳನ್ನು ಪಾಲಿಸಿ

|

ಮೊದಲ ಕೆಲಸ ಸಿಕ್ಕಾಗ ನಿಮಗೆ ಆಗುವ ಸಂತೋಷವನ್ನು ಮರೆಯಲು ಸಾಧ್ಯವಿಲ್ಲ. ಮೊದಲ ತಿಂಗಳು ಸಂಬಳ ಬಂದಾಗ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಇದೇ ಖುಷಿ ನೀವು ನಿವೃತ್ತಿ ದಿನ ಕಚೇರಿ ಬಿಡುವಾಗಲು ಉಳಿಯುವಂತೆ ನೀವು ಮಾಡಬೇಕೆ? ಹಾಗಾದರೆ ನೀವು ಈ ನಾಲ್ಕು ಸೂತ್ರಗಳನ್ನು ಪಾಲಿಸಿ.

 

ಉಳಿತಾಯ ಮತ್ತು ನಿವೃತ್ತಿ ಯೋಜನೆಗಳ ಬಗ್ಗೆ ಕಡೆಗಣಿಸಿದರೆ ಮುಂದಾಗುವ ತೊಂದರೆಗಳಿಗೆ ನೀವೆ ಜವಾಬ್ದಾರರು. ಉಳಿತಾಯ ಯೋಜನೆಗಳ ಬಗೆಗಿನ ನಿರ್ಲಕ್ಷ್ಯ ನಿಮ್ಮನ್ನು ಕಷ್ಟಕ್ಕೆ ದೂಡಬಹುದು. ನಿಶ್ಚಿತ ಆದಾಯವಿಲ್ಲದೆ ನಿವೃತ್ತಿ ಜೀವನವು ಸಾಲದ ಸುಳಿಯಲ್ಲಿ ಸಿಲುಕಿಸಬಹುದು. ಹೀಗಾಗಿ ಈಗಿನಿಂದಲೇ ಈ ನಾಲ್ಕು ಸೂತ್ರಗಳತ್ತ ಗಮನ ಹರಿಸಿ.

ನಾಳೆಗಾಗಿ ಸೂಕ್ತ ಯೋಜನೆ ರೂಪಿಸಿ

ನಾಳೆಗಾಗಿ ಸೂಕ್ತ ಯೋಜನೆ ರೂಪಿಸಿ

ಪ್ರಸ್ತುತ ಕೆಲಸ, ಸಂಬಳ ಎಲ್ಲವೂ ಚೆನ್ನಾಗಿದೆ , ಬದುಕು ಚೆನ್ನಾಗಿಯೇ ನಡೆಯುತ್ತಿದೆ ಎಂದು ನಿವೃತ್ತಿಯ ಬಗ್ಗೆ ಯೋಚನೆ ಮಾಡದೇ ಇರುವವರ ಸಂಖ್ಯೆಯೇ ಹೆಚ್ಚು. ಪ್ರತಿ ತಿಂಗಳು ಬರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕು.

ನಿವೃತ್ತಿ ಯೋಜನೆಗಳಿಗೆ ಎಷ್ಟು ಹಣ ಉಳಿಸಬೇಕು ಎನ್ನುವ ಸ್ಪಷ್ಟತೆ ಇರುವುದಿಲ್ಲ. ಹೀಗಾಗಿ ನಿವೃತ್ತಿ ಬದುಕಿನಲ್ಲಿ ಎದುರಾಗುವ ಸವಾಲುಗಳು, ಖರ್ಚುವೆಚ್ಚಗಳನ್ನು ಈಗಲೇ ಆಲೋಚಿಸಿ ಸೂಕ್ತ ಯೋಜನೆಯನ್ನು ರೂಪಿಸಿಕೊಳ್ಳಿ. ಆ ಮೂಲಕ ಸೂಕ್ತ ಮೊತ್ತವನ್ನು ಉಳಿತಾಯ ಮಾಡಬಹುದು.

ಈಗಿನ ಹೂಡಿಕೆಯೇ ಮುಂದಿನ ಉಳಿತಾಯ

ಈಗಿನ ಹೂಡಿಕೆಯೇ ಮುಂದಿನ ಉಳಿತಾಯ

ಮುಂದಾಲೋಚನೆಯಿಲ್ಲದೆ ಮಾಡುವ ಖರ್ಚುಗಳು ಸಮಸ್ಯೆಯನ್ನು ತಂದೊಡ್ಡಬಹುದು. ಮೊದಲ ವೇತನ ಪಡೆದಾಗಲೇ ಭವಿಷ್ಯದ ಕಡೆಗೆ ಸ್ವಲ್ಪ ಗಮನವಹಿಸಿ. ಏಕೆಂದರೆ ತಡವಾಗಿ ನಿವೃತ್ತಿ ಯೋಜನೆ ಮಾಡಿದರೆ ಉಳಿತಾಯದ ಮೊತ್ತ ಅಲ್ಪವಾಗಿರುತ್ತದೆ. ಅಥವಾ ನಿವೃತ್ತಿ ಯೋಜನೆಗೆ ದೊಡ್ಡ ಮೊತ್ತದ ಕಂತುಗಳನ್ನು ಕಟ್ಟಬೇಕಾಗಬಹುದು. ಹೀಗಾಗಿ ನೀವು ಯುವಕರಾಗಿರುವಾಗಲೇ ಇಂತಹ ಯೋಜನೆಗಳತ್ತ ಗಮನ ಹರಿಸಿದರೆ ಒಳಿತು.

ಇಪಿಎಫ್, ಪಿಪಿಎಫ್, ಅಟಲ್ ಪಿಂಚಣಿ ಯೋಜನೆ, ದೀರ್ಘಾವಧಿ ಹೂಡಿಕೆಗಳು ಹೀಗೆ ಯಾವುದಾದರೂ ಉತ್ತಮ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಕು. ಈಗ ನೀವು ಪ್ರತಿ ತಿಂಗಳು ಕಟ್ಟುವ ಅಲ್ಪ ಹಣವು ಮುಂದೆ ದೊಡ್ಡ ಮೊತ್ತವಾಗಿ ಬೆಳೆಯುತ್ತದೆ. ಉತ್ತಮ ಬಡ್ಡಿದರಗಳು ನೀಡುವ ಬ್ಯಾಂಕುಗಳನ್ನು ಆರಿಸಿ ಈಗಿನಿಂದಲೇ ಹಣ ಹೂಡಿಕೆಗೆ ಗಮನ ಹರಿಸಿ.

ಹಣದುಬ್ಬರದ ಅರಿವು ನಿಮಗಿರಲಿ
 

ಹಣದುಬ್ಬರದ ಅರಿವು ನಿಮಗಿರಲಿ

ಪ್ರತಿಯೊಬ್ಬರಿಗೂ ಹಣದುಬ್ಬರದ ಅರಿವು ಬಹಳ ಮುಖ್ಯ. ಏಕೆಂದರೆ ನೀವು ತಿಂಗಳಿಗೆ 1 ಸಾವಿರ ರುಪಾಯಿ ಉಳಿತಾಯ ಮಾಡಿದರೂ ವರ್ಷಕ್ಕೆ 12 ಸಾವಿರ ರುಪಾಯಿಗಳನ್ನು ಹೂಡಿಕೆ ಮಾಡಬಹುದು. ಆದರೆ ಈ ಪ್ರಮಾಣವು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ತಿಂಗಳ ಸಂಬಳದಲ್ಲಿ ಶೇಕಡಾ 25 ರಿಂದ 30ರಷ್ಟು ಹಣವನ್ನು ನೀವು ನಿವೃತ್ತಿ ಯೋಜನೆಗಳಿಗೆ ತೆಗೆದಿಡಬೇಕು.

ಹಣದುಬ್ಬರದ ಅಂದಾಜು ಇಲ್ಲದೆ ಹೋದರೆ ನಿಮ್ಮ ಭವಿಷ್ಯದ ಹೂಡಿಕೆ ಪ್ರಯೋಜನವಾಗುವುದಿಲ್ಲ. ಉದಾಹರಣೆಗೆ ಒಂದು ವಸ್ತುವಿನ ಬೆಲೆ 100 ರುಪಾಯಿ ಎಂದಿಟ್ಟುಕೊಳ್ಳೋಣ. ಶೇಕಡಾ 7ರಷ್ಟು ಹಣದುಬ್ಬರ ಲೆಕ್ಕಹಾಕಿದರೆ ಅದೇ ವಸ್ತುವಿನ ಬೆಲೆ 30 ವರ್ಷಗಳ ಬಳಿಕ 762 ರುಪಾಯಿ ಆಗುತ್ತದೆ. ಹೀಗಾಗಿ ನಿವೃತ್ತಿಗೆ ಮೊದಲೇ ನಂತರದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ, ಉಳಿತಾಯ ಮಾಡಿ.

ಆರೋಗ್ಯದ ಕಡೆ ಗಮನವಹಿಸಿ

ಆರೋಗ್ಯದ ಕಡೆ ಗಮನವಹಿಸಿ

ಮನುಷ್ಯನಿಗೆ ಆರೋಗ್ಯವೇ ಬಹುದೊಡ್ಡ ಸಂಪತ್ತು. ಹೀಗಾಗಿ ನೀವು ಎಷ್ಟು ಚೆನ್ನಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೀರಾ ಎಂಬುದು ನಿಮ್ಮ ಜೇಬಿಗೆ ಕನ್ನ ಬೀಳುವುದನ್ನು ತಪ್ಪಿಸುತ್ತದೆ. ಅನುವಂಶೀಯವಾಗಿ ಬರುವ ಕಾಯಿಲೆಗಳ ಬಗ್ಗೆ ಜಾಗ್ರತೆ ಇರಲಿ. ಸಮಸ್ಯೆಗಳು ಇದೆ ಎನ್ನುವುದಾದರೆ ಸೂಕ್ತ ಆರೋಗ್ಯ ವಿಮೆಗಳನ್ನು ಮಾಡಿಸಿ.

ಏಕೆಂದರೆ ಮುಂದೆ ಎದುರಾಗಬಹುದಾದ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ನೀವು ಶಕ್ತರಾಗಿರುತ್ತೀರ ಗಮನಿಸಿ. ಇಲ್ಲದೇ ಹೋದರೆ ನಿಮ್ಮ ಆದಾಯದ ಬಹು ಭಾಗವನ್ನು ವೈದ್ಯಕೀಯ ವೆಚ್ಚಗಳಲ್ಲಿ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಈಗಿನಿಂದಲೇ ನಿವೃತ್ತಿ ಯೋಜನೆಗಳನ್ನು ರೂಪಿಸಿಕೊಂಡರೆ ಸೂಕ್ತ.

English summary

Follow This 4 Retirement Plans For Better Life

These are the 4 tips for your happy retirement life
Story first published: Friday, November 22, 2019, 17:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X