For Quick Alerts
ALLOW NOTIFICATIONS  
For Daily Alerts

HDFC ಬ್ಯಾಂಕ್ SMS ಬ್ಯಾಂಕಿಂಗ್ ಸೇವೆ ಪಡೆಯುವುದು ಹೇಗೆ?

|

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಅಲ್ಲದೇ HDFC ಬ್ಯಾಂಕ್ ಕೂಡಾ ತನ್ನ ಗ್ರಾಹಕರಿಗೆ HDFC WhatsApp ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದೆ. ಇದಲ್ಲದೇ ಗ್ರಾಹಕರ ಅನುಕೂಲಕ್ಕಾಗಿ ಎಸ್ಎಂಎಸ್ ಮೂಲಕ ಕೂಡಾ ಬ್ಯಾಂಕಿಂಗ್ ಸೇವೆಯನ್ನು ಸುಲಭವಾಗಿ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಗ್ರಾಹಕರು ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ HDFC ಯೊಂದಿಗೆ ಚಾಟ್ ಮಾಡಬಹುದು ಹಾಗೂ ಅಗತ್ಯ ಸೇವೆ ಬಳಸಿಕೊಳ್ಳಬಹುದು ಮತ್ತು WhatsApp ನಲ್ಲಿ ಚಾಟ್ ಸೇವೆಯಾಗಿರುವ HDFC ಬ್ಯಾಂಕ್ ಚಾಟ್ ಬ್ಯಾಂಕಿಂಗ್ ಮೂಲಕ 90 ಕ್ಕೂ ಹೆಚ್ಚು ಸೇವೆಗಳು ಮತ್ತು ವಹಿವಾಟುಗಳ ಲಾಭವನ್ನು ಪಡೆಯಬಹುದು.

HDFC WhatsApp ಬ್ಯಾಂಕಿಂಗ್: ಸೌಲಭ್ಯ ಬಳಕೆಗೆ ಹಂತ-ಹಂತದ ಮಾರ್ಗದರ್ಶಿHDFC WhatsApp ಬ್ಯಾಂಕಿಂಗ್: ಸೌಲಭ್ಯ ಬಳಕೆಗೆ ಹಂತ-ಹಂತದ ಮಾರ್ಗದರ್ಶಿ

ಇದೇ ರೀತಿಯಲ್ಲಿ ಹೊಸ ಮಾದರಿಯ ಎಸ್ಎಂಎಸ್ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. 24/7 x 365 ಎಲ್ಲಿದ್ದರೂ ಬ್ಯಾಂಕಿಂಗ್ ಸೇವೆ ನಿಮಗೆ ಲಭ್ಯವಾಗಲಿದೆ ಎಂದು ಎಚ್‌ಡಿಎಫ್‌ಸಿ ಟ್ವೀಟ್ ಮಾಡಿದೆ. ಬ್ಯಾಂಕಿಂಗ್ ಸೇವೆ, ಚೆಕ್ ಬ್ಯಾಲೆನ್ಸ್, ಸಾಲ ಪಡೆಯುವುದು, ಕ್ರೆಡಿಟ್ ಕಾರ್ಡ್ ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಈ ಮುಂಚೆ ಇದ್ದಂತೆ ಉದ್ದುದ್ದ ಎಸ್ಎಂಎಸ್ ಕಳಿಸಬೇಕಾಗಿಲ್ಲ, ಸುಲಭವಾಗಿ ಬ್ಯಾಂಕ್ ಜೊತೆಗೆ ವ್ಯವಹರಿಸಬಹುದು. ಇದಕ್ಕಾಗಿ AI ನೆರವನ್ನು ಬ್ಯಾಂಕ್ ಪಡೆದುಕೊಂಡಿದ್ದು, ಗ್ರಾಹಕ ಸ್ನೇಹಿ ಬ್ಯಾಂಕಿಂಗ್ ವಾತಾವರಣ ಒದಗಿಸುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ.

ಎಚ್‌ಡಿಎಫ್‌ಸಿ ಅಧಿಕೃತ ಟ್ವೀಟ್

ಎಚ್‌ಡಿಎಫ್‌ಸಿ ಅಧಿಕೃತ ಟ್ವೀಟ್

ಎಚ್‌ಡಿಎಫ್‌ಸಿ ಅಧಿಕೃತ ಟ್ವೀಟ್ ಪ್ರಕಾರ, ''ಬ್ಯಾಂಕ್ ಸೇವೆ ಪಡೆಯಲು ಸುಲಭ ಸಂದೇಶ ಸಾಕು, ನಮ್ಮ ಜೊತೆ ಬ್ಯಾಂಕಿಂಗ್ ಮಾಡಿ, 24/7 x 365 ಅವಧಿ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಿ, ಈ ಸೌಲಭ್ಯ ಪಡೆಯಲು ಹೀಗೆ ಮಾಡಿ Register ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು, ನಿಮ್ಮ ಕಸ್ಟಮರ್ ಐಡಿಯ ಕೊನೆ ನಾಲ್ಕು ಅಂಕಿಗಳನ್ನು ನಮೂದಿಸಿ 7308080808 ಸಂಖ್ಯೆಗೆ ಕಳಿಸಿ.

SMS ಬ್ಯಾಂಕಿಂಗ್ ಸೇವೆಗೆ ನೋಂದಾಯಿಸಿದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ನೋಂದಣಿ ಯಶಸ್ವಿಯಾಗಿದೆ ಎಂದು ಸಂದೇಶ ಬರುತ್ತದೆ. ಜೊತೆಗೆ ನಿಮ್ಮ ಖಾತೆ ಸಂಖ್ಯೆಯನ್ನು ಎಂದಿನ ಎಸ್ಎಂಎಸ್ ಸೇವೆಯ ಸಂದೇಶದಂತೆ ಕಳಿಸಲಾಗುತ್ತದೆ. ನಿಮ್ಮ ಖಾತೆಯ ಅಕೌಂಟ್ ಬ್ಯಾಂಕ್ ಬ್ಯಾಲೆನ್ಸ್ ತಿಳಿಯಲು 7308080808ಗೆ ಸಂದೇಶ ಅಥವಾ1860-267-6161 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಿ

ಸದ್ಯಕ್ಕೆ ಎಸ್ಎಂಎಸ್ ಸೇವೆ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ದಿನವಿಡಿ ಸೇವೆ ಲಭ್ಯವಿರಲಿದ್ದು, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ.

"SMS ಬ್ಯಾಂಕಿಂಗ್‌ನೊಂದಿಗೆ ನೀವು ಎಲ್ಲಿದ್ದರೂ ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಖಾತೆಯನ್ನು ಪರಿಶೀಲಿಸಬಹುದು. ನಿಮ್ಮ ಬ್ಯಾಂಕ್ ಖಾತೆಯನ್ನು ಪ್ರವೇಶಿಸಿ, ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಿ ಮತ್ತು ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಖಾತೆಗಳು ಮತ್ತು ಸ್ಥಿರ ಠೇವಣಿಗಳನ್ನು ಮೇಲ್ವಿಚಾರಣೆ ಮಾಡಿ. 18 ವಹಿವಾಟುಗಳಿಗೆ ಪ್ರಶ್ನೆ ಆಧಾರಿತ SMS ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಏಕೈಕ ಬ್ಯಾಂಕ್ ನಮ್ಮದು" ಎಂದು HDFC ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

ಎಟಿಎಂ ಮೂಲಕ ನೋಂದಾಯಿಸುವುದು ಹೇಗೆ?

ಎಟಿಎಂ ಮೂಲಕ ನೋಂದಾಯಿಸುವುದು ಹೇಗೆ?

ಎಸ್ಎಂಎಸ್ ಬ್ಯಾಂಕಿಂಗ್ ಸೇವೆಗೆ ಎಟಿಎಂ ಮೂಲಕ ನೋಂದಾಯಿಸುವುದು ಹೇಗೆ?

ಎಚ್ ಡಿ ಎಫ್ ಸಿ ಶಾಖೆಯ ATM ನಲ್ಲಿ, HDFC ಬ್ಯಾಂಕ್ ಗ್ರಾಹಕರು ಹೊಸ SMS ಬ್ಯಾಂಕಿಂಗ್‌ಗೆ ಸೈನ್ ಅಪ್ ಮಾಡಬಹುದು. ಕೆಳಗೆ ನೀಡಲಾದ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ನೋಂದಣಿಯನ್ನು ಪೂರ್ಣಗೊಳಿಸಬಹುದು.
1. ನಿಮ್ಮ ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಎಟಿಎಂಗೆ ಭೇಟಿ ಕೊಡಿ.
2. ನಿಮ್ಮ ಡೆಬಿಟ್ ಕಮ್ ಎಟಿಎಂ ಕಾರ್ಡ್ ಹಾಕಿ, PIN ನಮೂದಿಸಿ
3. ಮುಖಪುಟದಲ್ಲಿರುವ More options ಕ್ಲಿಕ್ ಮಾಡಿ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ನಮೂದಿಸಿ, ಎಸ್ಎಂಎಸ್ ಬ್ಯಾಂಕಿಂಗ್ ನೋಂದಾಯಿಸಿಕೊಳ್ಳಿ
4. ಮುಖ್ಯ ಮೆನುವಿನಲ್ಲಿ ಕನ್ಫರ್ಮ್ ಒತ್ತಿದ ಬಳಿಕ ಮೊಬೈಲ್ ಸಂಖ್ಯೆಗೆ ನೋಂದಣಿ ಯಶಸ್ವಿಯಾದ ಸಂದೇಶ ಬರಲಿದೆ.

SBI WhatsApp Banking: ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್: ಹೇಗೆ ಬಳಸುವುದು, ಇಲ್ಲಿದೆ ವಿವರ
ಎಸ್ಎಂಎಸ್ ಬ್ಯಾಂಕಿಂಗ್ ಸೇವೆಗಳು

ಎಸ್ಎಂಎಸ್ ಬ್ಯಾಂಕಿಂಗ್ ಸೇವೆಗಳು

ಖಾತೆ ಸೇವೆಗಳು:

  • ಬ್ಯಾಲೆನ್ಸ್ ವಿಚಾರಣೆ
  • ಚೆಕ್ ಪುಸ್ತಕ ವಿನಂತಿಯನ್ನು ಪರಿಶೀಲಿಸಿ
  • ಖಾತೆ ಸ್ಟೇಟ್ ಮೆಂಟ್ ಪಡೆಯಲು ವಿನಂತಿ
  • ಇತ್ತೀಚಿನ 7 ದಿನಗಳ ವಹಿವಾಟುಗಳು
  • FD ಸಾರಾಂಶ
  • ಡೆಬಿಟ್ ಕಾರ್ಡ್ ಸಮಸ್ಯೆ

ಸಾಲಗಳು:

  • ವೈಯಕ್ತಿಕ ಸಾಲ
  • ವಾಹನ ಸಾಲ
  • ವ್ಯಾಪಾರ ಸಾಲ
  • ಗ್ರಾಹಕ ಬಾಳಿಕೆ ಬರುವ ಸಾಲ

ಕ್ರೆಡಿಟ್ ಕಾರ್ಡ್:

  • ರಿವಾರ್ಡ್ ಪಾಯಿಂಟ್‌ಗಳನ್ನು ವೀಕ್ಷಿಸಿ
  • ದೊಡ್ಡ ಖರ್ಚುಗಳನ್ನು EMI ಗೆ ಪರಿವರ್ತಿಸಿ
  • ಕ್ರೆಡಿಟ್ ಕಾರ್ಡ್ ವಿವಾದ

ಇತರೆ:

  • ಫಾಸ್‌ಟ್ಯಾಗ್ ನೋಂದಣಿ
  • ಸ್ಥಿರ ಠೇವಣಿ ತೆರೆಯಿರಿ
  • ವಿಮೆ - LI & GI

English summary

HDFC Bank introduced a new SMS banking facility for its customers. How to avail it

The private sector lender HDFC Bank introduced a new SMS banking facility for its customers. The bank claims that now customers can access a wide range of banking services round-the-clock
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X