For Quick Alerts
ALLOW NOTIFICATIONS  
For Daily Alerts

ವಿಐ App ಬಳಸಿ ರೈಲ್ವೆಯ ಗ್ರೂಪ್ ಡಿ ಪರೀಕ್ಷೆಗೆ ಸಿದ್ಧತೆ ಹೇಗೆ?

|

ನವದೆಹಲಿ, ಆಗಸ್ಟ್ 11: ದೇಶದಾದ್ಯಂತ ನಡೆಯುವ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಿವಿಧ ಸರಕಾರಿ ಉದ್ಯೋಗಗಳಿಗೆ ಸಿದ್ಧರಾಗಲು ಹಾಗೂ ಉತ್ತಮ ಸಾಧನೆ ಮಾಡಲು ಯುವಜನರಿಗೆ ವಿಐ ನೆರವಾಗುತ್ತಿದೆ. ತನ್ನ ಗ್ರಾಹಕರ ಭವಿಷ್ಯಕ್ಕೆ ಬಲ ಒದಗಿಸಲು ಭಾರತದ ಮುಂಚೂಣಿ ದೂರಸಂಪರ್ಕ ಸಂಸ್ಥೆಯಾದ ವಿಐ, ಪರೀಕ್ಷಾದೊಂದಿಗಿನ ಸಹಯೋಗದೊಂದಿಗೆ 2022ರ ಆಗಸ್ಟ್ 17ರಿಂದ ಆರಂಭವಾಗುವ ಅಖಿಲ ಭಾರತ ರೈಲ್ವೆ ಡಿ ಗ್ರೂಪ್ ಪರೀಕ್ಷೆಗಳಿಗೆ ಸಿದ್ಧರಾಗುವ ನಿಟ್ಟಿನಲ್ಲಿ ಸಿದ್ಧತಾ ಪರೀಕ್ಷಾ ಸರಣಿಯ ಸಾಮಗ್ರಿಗಳನ್ನು (ಸ್ಟಡಿ ಮೆಟೀರಿಯಲ್) ಒದಗಿಸುತ್ತಿದೆ.

ವಿಐ ಬಳಕೆದಾರರು ಸರಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವ ಪ್ರಕ್ರಿಯೆಗೆ ಅನುಕೂಲವಾಗಲು ವಿಐ ಉದ್ಯೋಗಗಳು ಮತ್ತು ಶಿಕ್ಷಣವು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಉದ್ಯೋಗಗಳ ಆಕಾಂಕ್ಷಿಗಳಿಗೆ 'ಪರೀಕ್ಷಾ ಪಾಸ್'ನ ಒಂದು ತಿಂಗಳ ಚಂದಾವನ್ನು ಉಚಿತವಾಗಿ ನೀಡುತ್ತದೆ.

ವಿ APP ಬಳಸಿ ನೆಚ್ಚಿನ ಹಾಡು ಕಾಲರ್ ಟ್ಯೂನ್ ಮಾಡ್ಕೊಳ್ಳೋದು ಹೇಗೆ? ವಿ APP ಬಳಸಿ ನೆಚ್ಚಿನ ಹಾಡು ಕಾಲರ್ ಟ್ಯೂನ್ ಮಾಡ್ಕೊಳ್ಳೋದು ಹೇಗೆ?

ರಾಜ್ಯ ಆಯ್ಕೆ ಆಯೋಗಗಳು, ಬ್ಯಾಂಕಿಂಗ್, ಶಿಕ್ಷಕರು, ರಕ್ಷಣೆ, ರೈಲ್ವೇಸ್ ಇತ್ಯಾದಿ ವಿವಿಧ ವಿಭಾಗಗಳಲ್ಲಿ 150+ ಪರೀಕ್ಷೆಗಳಲ್ಲಿ ಅನಿಯಮಿತ ಅಣಕು ಟೆಸ್ಟ್ ಗಳನ್ನೂ ಅದು ಒಳಗೊಂಡಿರುತ್ತದೆ. ಟ್ರಯಲ್ ಅವಧಿಯ ಕೊನೆಯಲ್ಲಿ ಬಳಕೆದಾರರು ಈ ವೇದಿಕೆಯಲ್ಲಿ ವಾರ್ಷಿಕ 249 ರೂಪಾಯಿ ಸಾಂಕೇತಿಕ ಚಂದಾ ಶುಲ್ಕದೊಂದಿಗೆ ಕಲಿಕೆಯನ್ನು ಮುಂದುವರಿಸಬಹದಾಗಿದೆ.

ವಿಐ App ಬಳಸಿ ರೈಲ್ವೆಯ ಗ್ರೂಪ್ ಡಿ ಪರೀಕ್ಷೆಗೆ ಸಿದ್ಧತೆ ಹೇಗೆ?

ವಿಐ ಆ್ಯಪ್‌ನಲ್ಲಿ ರೈಲ್ವೇಸ್‌ನ ಗ್ರೂಪ್ ಡಿ ಪರೀಕ್ಷಾ ಸರಣಿಗಳು, ಭಾರತೀಯ ರೈಲ್ವೆಯಲ್ಲಿನ ಭಾರತದ ಯುವಜನರಿಗೆ ಟ್ರ್ಯಾಕ್ ನಿರ್ವಹಣೆದಾರರು ಗ್ರೇಡ್-4, ಹೆಲ್ಪರ್/ಸಹಾಯಕರು, ಸಹಾಯಕ ಪೋಸ್ಟ್ ಮ್ಯಾನ್ ಲೆವೆಲ್-1 ಸ್ಥಾನಗಳ ಸಹಿತ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳ ನೇಮಕಾತಿಗೆ ತಯಾರಾಗಲು ಅವಕಾಶವನ್ನು ಒದಗಿಸುತ್ತದೆ. ವಿಐ ಗ್ರಾಹಕರು ವಿಐ ಆ್ಯಪ್‌ನಲ್ಲಿ ಎಲ್ಲಿಂದಾದರೂ ಯಾವಾಗ ಬೇಕಾದರೂ ವಿಐ ಉದ್ಯೋಗಗಳು ಮತ್ತು ಶಿಕ್ಷಣ ವೇದಿಕೆ ಮೂಲಕ ಉತ್ತಮವಾಗಿ ಸಂಶೋಧಿಸಲಾದ ಪರೀಕ್ಷಾ ಸಾಮಗ್ರಿಗಳನ್ನು (ಸ್ಟಡಿ ಮೆಟೀರಿಯಲ್) ಪಡೆಯಬಹುದಾಗಿದೆ.

* ವಿಐ ಆ್ಯಪ್‌ನಲ್ಲಿ ಆರ್‌ಆರ್‌ಬಿ ಗ್ರೂಪ್ ಡಿ ಪರೀಕ್ಷಾ ಸಾಮಗ್ರಿಗಳನ್ನು ಪಡೆಯಲು ಹಂತ-ಹಂತದ ಮಾರ್ಗಸೂಚಿ:
* 1ನೇ ಹಂತ: ನಿಮ್ಮ ವಿಐ ಸಂಖ್ಯೆ ಮೂಲಕ ವಿಐ ಆ್ಯಪ್‌ಗೆ ಲಾಗಿನ್ ಆಗಿ.
* 2ನೇ ಹಂತ: 'ವಿಐ ಉದ್ಯೋಗಗಳು ಮತ್ತು ಶಿಕ್ಷಣ' ಆಯ್ಕೆ ಮೇಲೆ ಕ್ಲಿಕ್ ಮಾಡಿ.
* 3ನೇ ಹಂತ: 'ಸರಕಾರಿನೌಕರಿ' ಆಯ್ಕೆಯನ್ನು ಆಯ್ಕೆ ಮಾಡಿ.
* 4ನೇ ಹಂತ: ನಿಮ್ಮ ಪ್ರೊಫೈಲ್ ವಿವರಗಳನ್ನು ಭರ್ತಿ ಮಾಡಿ ರೈಲ್ವೇಸ್'ಅನ್ನು ಆಯ್ಕೆ ಮಾಡಿ.
* 5ನೇ ಹಂತ: ರೈಲ್ವೆ ಕೋರ್ಸ್ ಗಳಿಂದ ಆಯ್ಕೆ ಮಾಡಿ.

ವಿಐ ಆ್ಯಪ್‌ನಲ್ಲಿನ ವಿಐ ಉದ್ಯೋಗಗಳು ಮತ್ತು ಶಿಕ್ಷಣವು ಭಾರತದ ಅತಿ ದೊಡ್ಡ ಉದ್ಯೋಗ ಹುಡುಕಾಟ ವೇದಿಕೆಯಾದ 'ಅಪ್ನಾ', ಮುಂಚೂಣಿ ಇಂಗ್ಲಿಷ್ ಕಲಿಕಾ ವೇದಿಕೆ ಎನ್‌ಗುರು' ಮತ್ತು ಸರಕಾರಿ ಉದ್ಯೋಗಗಳ ಪರೀಕ್ಷಾ ಸಿದ್ಧತೆಯಲ್ಲಿ 'ಪರೀಕ್ಷಾ' ಇವುಗಳೊಂದಿಗೂ ಸಮಗ್ರಗೊಳಿಸುತ್ತದೆ.

English summary

How to Prepare for Railways Group D Exams on Vi App

Vi in partnership with Pariksha is offering access to the preparatory test series material for the all India Railway D exams starting 17th August, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X