For Quick Alerts
ALLOW NOTIFICATIONS  
For Daily Alerts

ಎಲ್ ಪಿಜಿ ಸ್ಫೋಟ ಸಂಭವಿಸಿದಲ್ಲಿ ಆಗಲಿದೆ ಇನ್ಷೂರೆನ್ಸ್ ಕವರ್: ಈ ಬಗ್ಗೆ ಎಷ್ಟು ಗೊತ್ತು?

|

ಎಲ್ ಪಿಜಿಗೆ ಸಂಬಂಧಿಸಿದ ಅವಘಡಗಳು ಯಾವ ಸಮಯದಲ್ಲಾದರೂ ಸಂಭವಿಸಬಹುದು. ಒಂಚೂರು ಬೇಜವಾಬ್ದಾರಿತನ ತೋರಿದರೂ ಇದರಿಂದಲೇ ಸಾವು ಅಥವಾ ಗಂಭೀರ ಸ್ವರೂಪದ ಗಾಯಗಳು, ಆಸ್ತಿ ಹಾನಿ ಸಂಭವಿಸಬಹುದು. ಆದರೆ ಬಹಳ ಮಂದಿಗೆ ಗೊತ್ತಿಲ್ಲದ ವಿಚಾರ ಏನೆಂದರೆ, ತೈಲ ಮಾರ್ಕೆಟಿಂಗ್ ಕಂಪೆನಿಗಳ ಬಳಿ ನೋಂದಣಿ ಆಗಿರುವ ಎಲ್ಲ ಗ್ರಾಹಕರಿಗೂ ಇಂಥ ಅಪಘಾತಗಳಿಗೆ ಕವರ್ ಆಗುತ್ತದೆ.

ಸರ್ಕಾರಿ ಸ್ವಾಮ್ಯದ ಎಲ್ ಪಿಜಿ ಮಾರ್ಕೆಟಿಂಗ್ ಹಾಗೂ ವಿತರಣೆ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಡೀಲರ್ ಗಳಿಗೆ ಎಲ್ ಪಿಜಿ ಅನಿಲ ಇನ್ಷೂರೆನ್ಸ್ - ಗ್ರೂಪ್ ಇನ್ಷೂರೆನ್ಸ್ ಕವರ್ ಆಗುತ್ತದೆ.

ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ 5 ಅಂಶ ಗಮನದಲ್ಲಿರಲಿ

 

"ಪಬ್ಲಿಕ್ ಲಯಬಿಲಿಟಿ ಪಾಲಿಸಿ ಫಾರ್ ಆಯಿಲ್ ಇಂಡಸ್ಟ್ರೀಸ್" ಅಡಿಯಲ್ಲಿ ಸಮಗ್ರ ವಿಮಾ ಪಾಲಿಸಿ ಖರೀದಿ ಮಾಡುವುದರಿಂದ ಎಲ್ ಪಿಜಿಗೆ ಸಂಬಂಧಿಸಿದ ಅವಘಡಗಳು ಸಂಭವಿಸಿದಾಗ ಶೀಘ್ರವಾಗಿ ಪರಿಹಾರ ದೊರೆಯುತ್ತದೆ.

ಎಲ್ ಪಿಜಿ ಅನಿಲ ಸಿಲಿಂಡರ್ ಅಪಘಾತ ವಿಮೆ ಯಾವಾಗ ಸಿಗುತ್ತೆ?

ಎಲ್ ಪಿಜಿ ಅನಿಲ ಸಿಲಿಂಡರ್ ಅಪಘಾತ ವಿಮೆ ಯಾವಾಗ ಸಿಗುತ್ತೆ?

ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಅಪಘಾತದಿಂದ ಆಗುವ ಜೀವ ಹಾಗೂ ಆಸ್ತಿ ನಾಶಕ್ಕೆ ಪಬ್ಲಿಕ್ ಲಯಬಿಲಿಟಿ ಇನ್ಷೂರೆನ್ಸ್ ಅಡಿಯಲ್ಲಿ ವಿಮೆ ದೊರೆಯುತ್ತದೆ. ಮುಖ್ಯವಾಗಿ ಎಲ್ ಪಿಜಿಯಿಂದ ಆ ಅಪಘಾತ ಸಂಭವಿಸಿರಬೇಕು. ಬೇರೆ ಮೂಲದಿಂದ ಅಥವಾ ಕಾರಣದಿಂದ ಎಲ್ ಪಿಜಿ ಸಿಲಿಂಡರ್ ಗಳ ಅಪಘಾತ ಸಂಭವಿಸಿದಲ್ಲಿ ಅದಕ್ಕೆ ವಿಮೆ ಕವರ್ ಆಗಲ್ಲ.

ಇನ್ಷೂರೆನ್ಸ್ ನಲ್ಲಿ ಏನೇನು ಮತ್ತು ಎಷ್ಟು ಕವರ್ ಆಗುತ್ತದೆ?

ಇನ್ಷೂರೆನ್ಸ್ ನಲ್ಲಿ ಏನೇನು ಮತ್ತು ಎಷ್ಟು ಕವರ್ ಆಗುತ್ತದೆ?

* ಜೂನ್ 24, 2019ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ಸಂಬಂಧವಾಗಿ ಪತ್ರಿಕಾಗೋಷ್ಠಿ ಹೊರಡಿಸಿತ್ತು. ಆ ನಿಯಮಾವಳಿಗಳು ಹೀಗಿವೆ.

* ಒಂದು ವೇಳೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟಲ್ಲಿ ವೈಯಕ್ತಿಕ ಅಪಘಾತ ಕವರ್ ಮೊತ್ತ 6,00,000 ರುಪಾಯಿ ಇದೆ.

* ಒಂದು ಅವಘಡದಲ್ಲಿ ವೈದ್ಯಕೀಯ ವೆಚ್ಚ 30 ಲಕ್ಷ ಕವರ್ ಆಗುತ್ತದೆ. ಒಬ್ಬ ವ್ಯಕ್ತಿಗೆ ಗರಿಷ್ಠ 2,00,000 ರುಪಾಯಿ.

* ಅಧಿಕೃತವಾದ ಗ್ರಾಹಕರ ನೋಂದಾಯಿತ ಆವರಣದಲ್ಲಿ ಆಸ್ತಿ ಹಾನಿಯಾದಲ್ಲಿ ಒಂದು ಅವಘಡಕ್ಕೆ ಗರಿಷ್ಠ 2,00,000 ರುಪಾಯಿ ದೊರೆಯುತ್ತದೆ.

ಎಲ್ ಪಿಜಿ ಅಪಘಾತದಿಂದ ಸಂಭವಿಸುವ ನಷ್ಟಕ್ಕೆ ಕ್ಲೇಮ್ ಫೈಲ್ ಮಾಡೋದು ಹೇಗೆ?
 

ಎಲ್ ಪಿಜಿ ಅಪಘಾತದಿಂದ ಸಂಭವಿಸುವ ನಷ್ಟಕ್ಕೆ ಕ್ಲೇಮ್ ಫೈಲ್ ಮಾಡೋದು ಹೇಗೆ?

ಎಲ್ ಪಿಜಿ ಸ್ಫೋಟ ಸಂಭವಿಸಿದಲ್ಲಿ ಡೀಲರ್ ಅಥವಾ ವಿತರಕರಿಗೆ ಬರವಣಿಗೆಯಲ್ಲಿ ಮಾಹಿತಿ ನೀಡಬೇಕು. ಆ ನಂತರ ಅವರು ತೈಲ ಮಾರ್ಕೆಟಿಂಗ್ ಕಂಪೆನಿ ಮತ್ತು ಇನ್ಷೂರರ್ ಗೆ ಮಾಹಿತಿ ನೀಡುತ್ತಾರೆ. ಈ ಹಂತದಲ್ಲಿ ತೈಲ ಮಾರ್ಕೆಟಿಂಗ್ ಕಂಪೆನಿಯಿಂದ ಎಲ್ಲ ಪರಿಶೀಲನೆ ಮಾಡಿ, ಗ್ರಾಹಕರು ಕ್ಲೇಮ್ ನಿಯಮಾವಳಿ ಸಂಪೂರ್ಣ ಮಾಡಲು ಸಹಾಯ ಮಾಡಲಾಗುತ್ತದೆ. ಕ್ಲೇಮ್ಸ್ ಮುಂದಿನ ಹಂತಕ್ಕೆ ಪ್ರಕ್ರಿಯೆ ಶುರುವಾಗುತ್ತದೆ.

English summary

Insurance Cover For LPG Accident; How Much Amount And What Is The Procedure?

Did you know LPG accident cover under insurance? Here is the details of claim procedure.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X