LIC Whatsapp Service : ಎಲ್‌ಐಸಿಯಲ್ಲೂ ವಾಟ್ಸಾಪ್ ಸೇವೆ: ಈ ಸಂಖ್ಯೆ ಸೇವ್ ಮಾಡಿಕೊಳ್ಳಿ
ಪ್ರಸ್ತುತ ದೇಶದಲ್ಲಿ ಹಲವಾರು ಮಂದಿ ವಾಟ್ಸಾಪ್ ಬಳಕೆ ಮಾಡುತ್ತಾರೆ. ಹೀಗಿರುವಾಗ ಪ್ರಮುಖ ಸಂಸ್ಥೆಗಳು ತಮ್ಮ ಸೇವೆಯನ್ನು ವಾಟ್ಸಾಪ್ ಮೂಲಕ ನೀಡುತ್ತಿದೆ. ಈಗ ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಾಟ್ಸಾಪ್ ಸೇವೆಯನ್ನು ಆರಂಭ ಮಾಡಿದೆ.
ಶುಕ್ರವಾರ ಎಲ್‌ಐಸಿ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದೆ. ಎಲ್‌ಐಸಿ ಪಾಲಿಸಿಯನ್ನು ಹೊಂದಿರುವವರು ಎಲ್‌ಐಸಿ ಸೇವೆಯನ್ನು ಎಲ್‌ಐಸಿ ಪೋರ್ಟಲ್ ಬದಲಾಗಿ ವಾಟ್ಸಾಪ್ ಮೂಲಕವೇ ಪಡೆಯಬಹುದು. ನೀವು 8976862090 ಸಂಖ್ಯೆಗೆ HI ಎಂದು ಕಳುಹಿಸುವ ಮೂಲಕ ವಾಟ್ಸಾಪ್ ಸೇವೆಯನ್ನು ಪಡೆಯಬಹುದು.
ಈ ಸೇವೆ ಆರಂಭವಾಗಿರುವುದರಿಂದಾಗಿ ನೀವು ಯಾವುದೇ ಸಣ್ಣ, ದೊಡ್ಡ ಕೆಲಸಕ್ಕೆ ಎಲ್‌ಐಸಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಹಾಗೆಯೇ ಜನರು ಎಲ್‌ಐಸಿ ಏಜೆಂಟ್ ನಮ್ಮನ್ನು ಭೇಟಿ ಯಾವಾಗ ಆಗುತ್ತಾರೆ ಎಂದು ಕಾಯಬೇಕಾಗಿಲ್ಲ. ನಾವಾಗಿಯೇ ಈ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಎಲ್‌ಐಸಿ ಸೇವೆಯನ್ನು ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ವಾಟ್ಸಾಪ್ ಸೇವೆಯನ್ನು ಪಡೆಯುವುದು ಹೇಗೆ?
ಎಲ್‌ಐಸಿ ಪೋರ್ಟಲ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ರಿಜಿಸ್ಟರ್ ಮಾಡಿದ ಬಳಿಕ ಪಾಲಿಸಿದಾರರು ವಾಟ್ಸಾಪ್ ಸೇವೆಯನ್ನು ಪಡೆಯಬಹುದು. ಅದಕ್ಕಾಗಿ ನೀವು 8976862090 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು. ವಾಟ್ಸಾಪ್ ಮೂಲಕ 8976862090 ಸಂಖ್ಯೆಗೆ HI ಎಂದು ಕಳುಹಿಸುವ ಮೂಲಕ ಸೇವೆಯನ್ನು ಪಡೆಯುವುದನ್ನು ಆರಂಭಿಸಬಹುದು. ಯಾವೆಲ್ಲ ಸೇವೆ ಲಭ್ಯವಿದೆ ಎಂಬ ಮಾಹಿತಿ ಬರಲಿದೆ. ಅಲ್ಲಿ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಅಗತ್ಯವಿರುವ ಮಾಹಿತಿ ಲಭ್ಯವಾಗಲಿದೆ.
ವಾಟ್ಸಾಪ್‌ನಲ್ಲಿ ಯಾವೆಲ್ಲ ಎಲ್‌ಐಸಿ ಸೇವೆ ಲಭ್ಯ?
1. ಪ್ರೀಮಿಯಂ ಕೊನೆಯ ದಿನ (Premium due)
2. ಬೋನಸ್ ಬಗ್ಗೆ ಮಾಹಿತಿ (Bonus information)
3. ಪಾಲಿಸಿ ಸ್ಟೇಟಸ್ (Policy status)
4. ಸಾಲದ ಅರ್ಹತಾ ಮಾಹಿತಿ (Loan eligibility quotation)
5. ಸಾಲ ಮರುಪಾವತಿ ಮಾಹಿತಿ (Loan repayment Quotation)
6. ಸಾಲದ ಬಡ್ಡಿದರ ಗಡುವು (Loan interest due
7. ಪ್ರೀಮಿಯಂ ಪಾವತಿ ಪತ್ರ (Premium paid certificate)
8. ULIP -statement of units
9. ಎಲ್‌ಐಸಿ ಸರ್ವಿಸ್ ಲಿಂಕ್ (LIC services links)
10. Opt in/Opt out Services
11. End conversation