For Quick Alerts
ALLOW NOTIFICATIONS  
For Daily Alerts

ಗ್ಯಾಸ್ ಸಿಲಿಂಡರ್ ರೀಫಿಲ್ ಬುಕಿಂಗ್ ಪೋರ್ಟಬಿಲಿಟಿ: ವಿತರಕರನ್ನು ಆಯ್ಕೆ ಮಾಡಿ

|

ನೀವು ಎಲ್‌ಪಿಜಿ ಸಿಲಿಂಡರ್ ಒಂದೆಡೆ ಖಾಯಂ ಆಗಿ ರೀಫಿಲ್ ಬುಕಿಂಗ್ ಮಾಡುತ್ತಿದ್ದು, ಅನಿವಾರ್ಯ ಕಾರಣಗಳಿಂದ ಬೇರೆಡೆ ತೆರಳಿದಾಗ ವಿತರಕರು ಬೇಕು ಅಥವಾ ಬೇಡ ಎಂಬುದನ್ನು ನಿರ್ಧರಿಸುವ ಆಯ್ಕೆಯು ಇನ್ಮುಂದೆ ನಿಮಗೆ ಸಿಗಲಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಈ ಉದ್ದೇಶಕ್ಕಾಗಿ ಹಲವಾರು ನಗರಗಳಲ್ಲಿ ಪೋರ್ಟಬಿಲಿಟಿ ಸೌಲಭ್ಯ ಒದಗಿಸಿದೆ.

 

ಚಂಡೀಗಡ, ಕೊಯಮತ್ತೂರು, ಗುರುಗಾಂವ್ ಪುಣೆ ಮತ್ತು ರಾಂಚಿಯಲ್ಲಿ ಈ ವಿಶೇಷ ಸೌಲ್ಯಭ್ಯವನ್ನು ಪ್ರಾಯೋಗಿಕವಾಗಿ ಸರ್ಕಾರ ಪ್ರಾರಂಭಿಸಿದೆ. ಈ ಮೂಲಕ ಅಲ್ಲಿನ ಗ್ರಾಹಕರು ತಮ್ಮ ವಿತರಕರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ನೋಂದಾಯಿತ ಮೊಬೈಲ್ ನಂಬರ್‌ನಿಂದ ಲಾಗಿನ್ ಆಗಿ

ನೋಂದಾಯಿತ ಮೊಬೈಲ್ ನಂಬರ್‌ನಿಂದ ಲಾಗಿನ್ ಆಗಿ

ನಿಮ್ಮ ಎಲ್‌ಪಿಜಿ ರೀಫಿಲ್ ಬುಕ್ಕಿಂಗ್ ಮಾಡಲು ಮೊಬೈಲ್ ಅಪ್ಲಿಕೇಶನ್ ಅಥವಾ ಗ್ರಾಹಕ ಪೋರ್ಟಲ್ ಮೂಲಕ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಮಾಡಬಹುದು. ಇದಕ್ಕೆ ನೀವು ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಿಂದಲೇ ಲಾಗಿನ್ ಆಗಬೇಕಿದೆ. ಹೀಗೆ ಲಾಗಿನ್ ಆದ ಬಳಿಕ ಎಲ್‌ಪಿಜಿ ರೀಫಿಲ್ ಬುಕಿಂಗ್ ವಿತರಣೆಯನ್ನು ಪಡೆಯಲು ಗ್ರಾಹಕರು ಪ್ರದೇಶಕ್ಕೆ ಅನ್ವಯವಾಗುವಂತೆ ಪಟ್ಟಿಯಿಂದ ಯಾವುದೇ ವಿತರಕರನ್ನು ಆಯ್ಕೆ ಮಾಡಬಹುದು.

ಮೊಬೈಲ್ ಆ್ಯಪ್ ಮೂಲಕ ವಿತರಕರ ಆಯ್ಕೆ ಹೇಗೆ?

ಮೊಬೈಲ್ ಆ್ಯಪ್ ಮೂಲಕ ವಿತರಕರ ಆಯ್ಕೆ ಹೇಗೆ?

ಯಾವುದೇ ಎಲ್‌ಪಿಇ ಗ್ರಾಹಕರು ರೀಫಿಲ್ ಬುಕಿಂಗ್ ಮಾಡುವಾಗ ವೈಯಕ್ತಿಕ ದಾಖಲೆಗಳನ್ನು ಅಪ್‌ಡೇಟ್ ಮಾಡಬಹುದು. ಇದರ ಜೊತೆಗೆ ಪೋರ್ಟಬಿಲಿಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಸಂಪರ್ಕ ವರ್ಗಾವಣೆ, ವಿಳಾಸ ಬದಲಾವಣೆ ಮತ್ತು ಇತರ ಎಲ್ಲಾ ರೀಫಿಲ್ ಬುಕಿಂಗ್ ಸಂಬಂಧಿತ ಸೇವೆಗಳನ್ನ ಪಡೆಯಬಹುದು.

ಇಂಡೇನ್ ಗ್ರಾಹಕರು ಇಂಡಿಯನ್ ಆಯಿಲ್ ಮೊಬೈಲ್ ಅಪ್ಲಿಕೇಶನ್‌ಗೆ ಭೇಟಿ ನೀಡಬೇಕಾಗುತ್ತದೆ ಅಥವಾ https://cx.indianoil.in/webcenter/portal/Customer

ಭಾರತ್ ಗ್ಯಾಸ್ ಗ್ರಾಹಕರು ಹಲೋ ಬಿಪಿಸಿಎಲ್ ಮೊಬೈಲ್ ಭೇಟಿ ನೀಡಬೇಕಾಗುತ್ತದೆ. ಅಥವಾ https://my.ebharatgas.com/bharatgas/Home/Index

ಹೆಚ್‌ಪಿ ಗ್ಯಾಸ್ ಗ್ರಾಹಕರು ಹೆಚ್‌ಪಿ ಪೇ ಮೊಬೈಲ್ ಅಪ್ಲಿಕೇಶನ್‌ಗೆ ಭೇಟಿ ನೀಡಬೇಕಾಗುತ್ತದೆ ಅಥವಾ https://myhpgas.in/myHPGas/Index.aspx

ಓರ್ವ ಸಾಮಾನ್ಯ ವ್ಯಕ್ತಿ ಕೋಟ್ಯಧಿಪತಿ ಆಗಲು ಏನು ಮಾಡ್ಬೇಕು?ಓರ್ವ ಸಾಮಾನ್ಯ ವ್ಯಕ್ತಿ ಕೋಟ್ಯಧಿಪತಿ ಆಗಲು ಏನು ಮಾಡ್ಬೇಕು?

 

ಪೋರ್ಟಬಿಲಿಟಿ ಆಯ್ಕೆ ಮಾಡಿ
 

ಪೋರ್ಟಬಿಲಿಟಿ ಆಯ್ಕೆ ಮಾಡಿ

ಹೀಗೆ ಮೇಲ್ಕಂಡ ವೆಬ್‌ಸೈಟ್ ಅಥವಾ ಮೊಬೈಲ್‌ ಆ್ಯಪ್ ಮೂಲಕ ಗ್ರಾಹಕರು ತಮ್ಮ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ವಿತರಕರನ್ನು ಆಯ್ಕೆ ಮಾಡಬಹುದು. ಈ ಮೂಲಕ ವಿತರಕರೆ ಗ್ರಾಹಕರನ್ನು ಸಂಪರ್ಕಿಸಲು ಅವಕಾಶ ಒದಗಿಸುತ್ತದೆ. ಗ್ರಾಹಕರಿಗೆ ಮನವರಿಕೆಯಾದರೆ ಅವನು/ಅವಳು ಪೋರ್ಟಬಿಲಿಟಿ ವಿನಂತಿಯನ್ನು ಮೂರು ದಿನಗಳ ನಿಗದಿತ ಸಮಯದೊಳಗೆ ಹಿಂಪಡೆಯಬಹುದಾಗಿದೆ. ಇಲ್ಲದಿದ್ರೆ ಸಂಪರ್ಕವನ್ನು ಸ್ವಯಂಚಾಲಿತವಾಗಿ ವಿತರಕರಿಗೆ ವರ್ಗಾಯಿಸಲಾಗುತ್ತದೆ.

ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಇಲ್ಲಿ ಗಮನಿಸಿ: 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶ!ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಇಲ್ಲಿ ಗಮನಿಸಿ: 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶ!

ಪೋರ್ಟಬಿಲಿಟಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ

ಪೋರ್ಟಬಿಲಿಟಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ

ಗ್ರಾಹಕರು ಹೀಗೆ ಒಂದು ಕಂಪನಿಯ ಇನ್ನೊಬ್ಬ ವಿತರಕರಿಗೆ ಆನ್‌ಲೈನ್ ಪೋರ್ಟಬಿಲಿಟಿ ಮಾಡುವಾಗ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಮತ್ತು ಈ ಸೌಲಭ್ಯವು ಉಚಿತವಾಗಿರುತ್ತದೆ.

ಆನ್‌ಲೈನ್ ಮೂಲಕವು ಎಲ್‌ಪಿಜಿ ಕನೆಕ್ಷನ್ ಪಡೆಯಬಹುದು

ಆನ್‌ಲೈನ್ ಮೂಲಕವು ಎಲ್‌ಪಿಜಿ ಕನೆಕ್ಷನ್ ಪಡೆಯಬಹುದು

ನೀವು ಹೊಸ ಗ್ಯಾಸ್ ಸಂಪರ್ಕವನ್ನು ಆನ್‌ಲೈನ್‌ ಮೂಲಕವು ಪಡೆಯಲು ಅವಕಾಶವಿದೆ. ದೇಶದ ಬಹುತೇಕ ಎಲ್ಲ ಇಂಧನ ಮಾರಾಟ ಕಂಪನಿಗಳು ಆನ್ಲೈನ್ ಮೂಲಕ ಹೊಸ ಎಲ್‌ಪಿಜಿ ಸಂಪರ್ಕ ಪಡೆಯುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿವೆ. ಆನ್ಲೈನ್ ಮೂಲಕ ಎಲ್‌ಪಿಜಿ ಕನೆಕ್ಷನ್ ಬುಕ್ ಮಾಡಲು ವಿವಿಧ ಇಂಧನ ಮಾರಾಟ ಕಂಪನಿಗಳ ವೆಬ್‌ಸೈಟ್‌ ಲಿಂಕ್‌ಗಳು ಈ ಕೆಳಗಿನಂತಿವೆ:

ಇಂಡೇನ್: http://indane.co.in/new_connection.php
ಎಚ್‌ಪಿ ಗ್ಯಾಸ್: http://dcms.hpcl.co.in/consumerportal/logging/securelogin.aspx
ಭಾರತ ಗ್ಯಾಸ್: http://www.ebharatgas.com/pages/Customer_Console/New_Domestic_Connection

 

ಸಬ್ಸಿಡಿ ಹಣ ಬರುತ್ತದೆಯೋ, ಇಲ್ಲವೋ ಎಂದು ತಿಳಿಯಿರಿ

ಸಬ್ಸಿಡಿ ಹಣ ಬರುತ್ತದೆಯೋ, ಇಲ್ಲವೋ ಎಂದು ತಿಳಿಯಿರಿ

ಎಲ್‌ಪಿಜಿ ಬೆಲೆಯನ್ನು ಅಂತರರಾಷ್ಟ್ರೀಯ ಮಾನದಂಡ ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಬದಲಾವಣೆಗಳಿಂದ ನಿರ್ಧರಿಸಲಾಗುತ್ತದೆ. ಗ್ಯಾಸ್‌ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ ಸರ್ಕಾರದಿಂದ ಅನಿಲ ಸಬ್ಸಿಡಿ ಹಣವು ನಿಮ್ಮ ಖಾತೆಗೆ ಬಂದಿದೆಯೆ ಅಥವಾ ಇಲ್ಲವೇ ಎಂಬುದನ್ನು ನೀವು ಯಾವಾಗಲೂ ಪರಿಶೀಲಿಸಬೇಕು.

ಕಳೆದ ಕೆಲವು ತಿಂಗಳುಗಳಲ್ಲಿ, ಕೆಲವು ಗ್ರಾಹಕರ ಅನಿಲ ಸಬ್ಸಿಡಿ ಹಣವನ್ನು ಬೇರೊಬ್ಬರ ಖಾತೆಗೆ ವರ್ಗಾಯಿಸಲಾಗಿದೆ ಎಂಬ ವರದಿಗಳು ಬಂದಿವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಖಾತೆಯಲ್ಲಿ ಸಬ್ಸಿಡಿ ಹಣ ಬರುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆಯೇ ಎಂದು ತಿಳಿಯಲು ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ. ನೀವು ಅದನ್ನು ಮನೆಯಲ್ಲಿ ಕುಳಿತುಕೊಂಡು ಪರೀಕ್ಷಿಸಬಹುದು.

 

ನಿಮ್ಮ ಖಾತೆಗೆ ಸಬ್ಸಿಡಿ ಹಣ ಬರುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ

ನಿಮ್ಮ ಖಾತೆಗೆ ಸಬ್ಸಿಡಿ ಹಣ ಬರುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ

* ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೌಸರ್‌ನಲ್ಲಿ ಮೊದಲು www.mylpg.in ಎಂದು ಟೈಪ್ ಮಾಡಿ.
* ಅಲ್ಲಿ ಎಲ್ಲಾ ಗ್ಯಾಸ್ ಕಂಪನಿಗಳ ಹೆಸರುಗಳ ಪಟ್ಟಿ ಇರುತ್ತದೆ. ಅದರಲ್ಲಿ ನಿಮ್ಮ ಸೇವಾ ಪೂರೈಕೆದಾರರ ಗ್ಯಾಸ್ ಸಿಲಿಂಡರ್‌ಗಳ ಫೋಟೋ ಕ್ಲಿಕ್ ಮಾಡಿ
* ಇದರ ನಂತರ ಹೊಸ ವಿಂಡೋ ತೆರೆಯುತ್ತದೆ. ಇದರಲ್ಲಿ, ಮೇಲಿನ ಬಲಭಾಗದಲ್ಲಿ ನೀವು ಸೈನ್-ಇನ್ ಮತ್ತು ಹೊಸ ಬಳಕೆದಾರ ಆಯ್ಕೆಯನ್ನು ನೋಡುತ್ತೀರಿ. ನೀವು ID ಹೊಂದಿದ್ದರೆ, ನಂತರ ಸೈನ್ ಇನ್ ಮಾಡಿ ಅಥವಾ ಇಲ್ಲ, ಮೊದಲು ID ಅನ್ನು ರಚಿಸಿ.
* ಲಾಗ್ ಇನ್ ಮಾಡಿದ ನಂತರ, ವೀವ್ ಸಿಲಿಂಡರ್ ಬುಕಿಂಗ್ ಹಿಸ್ಟರಿ ಎಂದು ಬಲಭಾಗದಲ್ಲಿ ಗೋಚರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ನೀವು ಯಾವ ಸಿಲಿಂಡರ್ ಅನ್ನು ಸಬ್ಸಿಡಿ ಪಡೆದಿದ್ದೀರಿ ಮತ್ತು ಯಾವಾಗ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯುತ್ತೀರಿ.
* ಅದೇ ಸಮಯದಲ್ಲಿ, ನಿಮ್ಮ ಖಾತೆಯಲ್ಲಿ ಸಬ್ಸಿಡಿ ಹಣ ಬರದಿದ್ದರೆ, ನೀವು ಪ್ರತಿಕ್ರಿಯೆ ಬಟನ್ ಕ್ಲಿಕ್ ಮಾಡುವ ಮೂಲಕವೂ ದೂರು ನೀಡಬಹುದು.

English summary

LPG Cylinder Users Can Now Choose Distributors: Here How To Choose Your Own LPG Distributor Via Portal

Customers using their registered login can choose a distributor of their OMC from the list of distributors serving in their area and opt for the porting of their LPG connection
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X