For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಯಶಸ್ವಿಯಾದ ಸಣ್ಣ ಪ್ರಮಾಣದ ಉದ್ದಿಮೆಗಳು: ಹೀಗಿವೆ ಐಡಿಯಾ!

|

ನಾವು ಯಾವುದಾದರೂ ವ್ಯಾಪಾರವನ್ನು ಆರಂಭ ಮಾಡುವಾಗ ಆ ವ್ಯಾಪಾರದಲ್ಲಿ ನಾವು ಯಶಸ್ವಿಯಾಗಬಹುದೇ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹಾಗೆಯೇ ನಾವು ಮಾಡುವ ವ್ಯಾಪಾರ ಆ ಪ್ರದೇಶಕ್ಕೆ ಮುಖ್ಯವಾಗಿದೆಯೇ ಎಂದು ಕೂಡಾ ನಾವು ನೋಡಬೇಕಾಗುತ್ತದೆ. ಈ ಲೇಖನದಲ್ಲಿ ನಾವು ಭಾರತದಲ್ಲಿ ಯಶಸ್ವಿಯಾದ 21 ಉದ್ಯಮಗಳ ಬಗ್ಗೆ ವಿವರಣೆ ನೀಡಿದ್ದೇವೆ.

ನೀವು ಸ್ವಂತ ವ್ಯಾಪಾರವನ್ನು ಆರಂಭ ಮಾಡಲು ಬಯಸಿದರೆ ಈ ಸುದ್ದಿಯನ್ನು ಓದಲೇ ಬೇಕು. ಯಾವ ವ್ಯಾಪಾರ ಅಥವಾ ಉದ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಗೊಂದಲಗೊಳ್ಳಬೇಡಿ. ಪ್ರತಿಯೊಂದು ವ್ಯಾಪಾರದಲ್ಲೂ ಅದರದ್ದೇ ಆದ ಸಾಧಕ-ಬಾಧಕಗಳು ಇದೆ. ಆದರೆ ನಾವು ವ್ಯಾಪಾರ ಆರಂಭ ಮಾಡುವಾಗ ಸ್ಥಳ ಹಾಗೂ ಆ ಪರಿಸರದ ಅಗತ್ಯಕ್ಕೆ ತಕ್ಕುದಾದ ವ್ಯಾಪಾರವನ್ನು ಆರಂಭ ಮಾಡುವುದು ಉತ್ತಮ.

2020ಕ್ಕೆ ಭಾರತದಲ್ಲಿ ಕಡಿಮೆ ಬಂಡವಾಳ ಹೂಡಿಕೆ ಬಿಜಿನೆಸ್ ಐಡಿಯಾ2020ಕ್ಕೆ ಭಾರತದಲ್ಲಿ ಕಡಿಮೆ ಬಂಡವಾಳ ಹೂಡಿಕೆ ಬಿಜಿನೆಸ್ ಐಡಿಯಾ

ಗುರಿಯನ್ನು ಸಾಧಿಸುವಲ್ಲಿ ನಿಮ್ಮ ಕೌಶಲ್ಯವು ತುಂಬಾ ಮುಖ್ಯವಾಗಿದೆ. ನೀವು ಹೊಂದಿರುವ ಕೌಶಲ್ಯಗಳನ್ನು ನೀವು ಮೊದಲು ಅರ್ಥ ಮಾಡಿಕೊಂಡು ಮುಂಬರುವ ಸವಾಲುಗಳನ್ನು ಜಯಿಸಲು ಸಾಕಷ್ಟು ಆತ್ಮವಿಶ್ವಾಸವನ್ನು ಹೊಂದಿರಬೇಕಾಗುತ್ತದೆ. ಇಲ್ಲಿ ನಾವು ನಿಮ್ಮ ಕೌಶಲ್ಯಕ್ಕೆ ಹೊಂದಿಕೆಯಾಗುವ ಕೆಲವು ಸಣ್ಣ ಮತ್ತು ಕಡಿಮೆ-ವೆಚ್ಚದ ವ್ಯಾಪಾರದ ಬಗ್ಗೆ ವಿವರಿಸಿದ್ದೇವೆ ಮುಂದೆ ಓದಿ...

 ಗೂಡಂಗಡಿ, ಜ್ಯೂಸ್ ಪಾಯಿಂಟ್, ಟೈಲರಿಂಗ್

ಗೂಡಂಗಡಿ, ಜ್ಯೂಸ್ ಪಾಯಿಂಟ್, ಟೈಲರಿಂಗ್

1. ಗೂಡಂಗಡಿ: ಜೀವನದಲ್ಲಿ ನಮ್ಮ ಮೂರು ಮೂಲಭೂತ ಅವಶ್ಯಕತೆಗಳಲ್ಲಿ ಆಹಾರವು ಕೂಡಾ ಒಂದಾಗಿದೆ. ಈ ಉದ್ಯಮಕ್ಕೆ ಹೆಚ್ಚು ಬೇಡಿಕೆ ಇದೆ. ನಾವು ಗೂಡಂಗಡಿಯನ್ನು ಆರಂಭ ಮಾಡಿ ಅಲ್ಲಿ ಆರೋಗ್ಯಕರ, ಸಾಂಪ್ರಾದಾಯಿಕ ಉಪಾಹಾರವನ್ನು ಒದಗಿಸುವ ವ್ಯಾಪಾರ ಮಾಡಬಹುದು. ಇದು ಭಾರತದಲ್ಲಿ ಯಶಸ್ವಿಯಾಗಿರುವ ವ್ಯಾಪಾರದಲ್ಲಿ ಒಂದಾಗಿದೆ. ಆದರೆ ನಾವು ಆರಂಭ ಮಾಡುವ ಪ್ರದೇಶ ಕೂಡಾ ಮುಖ್ಯವಾಗಿದೆ. ಆ ಪ್ರದೇಶಕ್ಕೆ ಈ ಅಂಗಡಿ ಅಗತ್ಯವೇ ಎಂದು ನೋಡಿಕೊಂಡು ಆರಂಭ ಮಾಡಬೇಕಾಗುತ್ತದೆ.
2. ಜ್ಯೂಸ್ ಪಾಯಿಂಟ್: ಪ್ರಸ್ತುತ ಭಾರತೀಯರು ಆರೋಗ್ಯ ಪ್ರಜ್ಞೆಯನ್ನು ಹೆಚ್ಚು ಬೆಳೆಸಿಕೊಂಡಿದ್ದಾರೆ. ಫ್ರೆಶ್ ಜ್ಯೂಸ್‌ಗಳನ್ನು ಜನರು ಹೆಚ್ಚಾಗಿ ಸೇವನೆ ಮಾಡುತ್ತಿದ್ದಾರೆ. ಈ ವ್ಯಾಪಾರ ಕೂಡಾ ಉತ್ತಮವಾಗಿದೆ. ಭಾರತದಲ್ಲಿ ಹಲವಾರು ಮಂದಿ ಈ ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದಾರೆ. ಬೇಸಿಗೆ ಪಾನೀಯಗಳಾದ ನಿಂಬೆ ಪಾನಕ, ಮಜ್ಜಿಗೆ ಮತ್ತು ಲಸ್ಸಿ ಕೂಡ ಈ ಸಣ್ಣ ವ್ಯಾಪಾರಕ್ಕೆ ಸಹಾಯಕ.
3. ಟೈಲರಿಂಗ್/ಎಂಬ್ರಾಯಿಡರಿ ಶಾಪ್: ಯಶಸ್ವಿ ವ್ಯಾಪಾರಿ ಅಂದಾಗ ಅದಕ್ಕೆ ಟೈಲರಿಂಗ್ ಕೂಡಾ ಸೇರುತ್ತದೆ. ಜೀವನದ ಮತ್ತೊಂದು ಮೂಲಭೂತ ಅವಶ್ಯಕತೆ ಬಟ್ಟೆಯಾಗಿದೆ. ಹಾಗಾಗಿ ಟೈಲರಿಂಗ್ ಮತ್ತು ಕಸೂತಿಗೆ ಭಾರೀ ಬೇಡಿಕೆ ಇದೆ. ಇದು ಭಾರತದಲ್ಲಿ ಯಶಸ್ವಿಯಾಗಿ ನಡೆಯುವ ಉದ್ಯಮವಾಗಿದೆ.

ಆನ್ಲೈನ್ ಬಿಸಿನೆಸ್ ಮಾಡಬೇಕೆ? ಈ ವ್ಯವಹಾರ ಆರಂಭಿಸಿ, ಕೈತುಂಬಾ ಹಣ ಗಳಿಸಿ..ಆನ್ಲೈನ್ ಬಿಸಿನೆಸ್ ಮಾಡಬೇಕೆ? ಈ ವ್ಯವಹಾರ ಆರಂಭಿಸಿ, ಕೈತುಂಬಾ ಹಣ ಗಳಿಸಿ..

 

 ಆನ್‌ಲೈನ್ ​​ವ್ಯಾಪಾರ, ಬ್ಲಾಗಿಂಗ್/ವ್ಲಾಗಿಂಗ್, ಅಡುಗೆ ತರಗತಿಗಳು

ಆನ್‌ಲೈನ್ ​​ವ್ಯಾಪಾರ, ಬ್ಲಾಗಿಂಗ್/ವ್ಲಾಗಿಂಗ್, ಅಡುಗೆ ತರಗತಿಗಳು

4. ಆನ್‌ಲೈನ್ ​​ವ್ಯಾಪಾರ: ಸಣ್ಣ ವ್ಯಾಪಾರ ಬಳಿಕ ದೊಡ್ಡ ವ್ಯಾಪಾರವಾಗಿ ಬದಲಾವಣೆಯಾದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಪ್ರಸ್ತುತ ಆನ್‌ಲೈನ್ ಮೂಲಕ ನಡೆಸುವ ವ್ಯಾಪಾರವು ಹೆಚ್ಚು ಯಶಸ್ವಿಯಾಗುತ್ತಿದೆ. ಆನ್‌ಲೈನ್‌ ಮೂಲಕ ನಮ್ಮ ಉತ್ಪನ್ನಗಳನ್ನು ವ್ಯಾಪಾರ ಮಾಡುವುದರಿಂದ ಲಾಭ ಗಳಿಸುತ್ತಿರುವವರು ಎಷ್ಟೋ ಮಂದಿ ಇದ್ದಾರೆ. ಪ್ರಮುಖವಾಗಿ ಮಹಿಳೆಯರು ಮನೆಯಲ್ಲೇ ಕುಳಿತು ಈ ವ್ಯಾಪಾರ ನಡೆಸುತ್ತಿದ್ದಾರೆ. ಇನ್ನು ಈ ವ್ಯಾಪಾರ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮ ತಜ್ಞರು, ಯೂಟ್ಯೂಬರ್‌ಗಳು, ಎಸ್‌ಇಒ ತಜ್ಞರು, ವೆಬ್‌ಸೈಟ್ ವಿನ್ಯಾಸಕರು ಮತ್ತು ಡೆವಲಪರ್‌ಗಳು ಕೂಡಾ ಆನ್‌ಲೈನ್‌ನಲ್ಲಿಯೇ ದುಡಿಯುತ್ತಿದ್ದಾರೆ.
5. ಬ್ಲಾಗಿಂಗ್/ವ್ಲಾಗಿಂಗ್: ಮನೆಯಿಂದ ಇಂಟರ್ನೆಟ್-ಆಧಾರಿತ ಸಣ್ಣ ವ್ಯವಹಾರಗಳಲ್ಲಿ ಇದು ಕೂಡಾ ಒಂದಾಗಿದೆ. ಹೆಚ್ಚಾಗಿ ಯುವಕರು ಬ್ಲಾಗಿಂಗ್, ವ್ಲಾಗಿಂಗ್ ಮಾಡುತ್ತಿದ್ದಾರೆ, ಇದರಿಂದಲೇ ಆದಾಯವನ್ನು ಗಳಿಸುತ್ತಿದ್ದಾರೆ. ಜಾಹೀರಾತು ಗಳಿಸುವ ಮೂಲಕವು ಆದಾಯ ಗಳಿಸುತ್ತಿದ್ದಾರೆ.
6. ಅಡುಗೆ ತರಗತಿಗಳು ಕೂಡಾ ಐಡಿಯಾ: ನೀವು ನುರಿತ ವೃತ್ತಿಪರ ಅಡುಗೆಯವರು ಆಗಿದ್ದರೆ ಅದನ್ನು ರೆಸ್ಟೋರೆಂಟ್ ಅಥವಾ ಫುಡ್ ಟ್ರಕ್ ವ್ಯಾಪಾರಕ್ಕೆ ಬಳಕೆ ಮಾಡಿಕೊಳ್ಳಬಹುದು. ಜೊತೆಗೆ ನೀವು ಅಡುಗೆ ತರಗತಿಯನ್ನು ಕೂಡಾ ನೀಡಬಹುದು. ಇದಕ್ಕಾಗಿ ನೀವು ಆನ್‌ಲೈನ್ ಕ್ಲಾಸ್‌ಗಳನ್ನು ಕೂಡಾ ನಡೆಸಬಹುದು. ವ್ಲಾಗ್‌ಗಳನ್ನು ಕೂಡಾ ಮಾಡಬಹುದು. ಇದರಲ್ಲಿ ಆದಾಯ ಗಳಿಸಲು ಸಾಧ್ಯವಾಗುತ್ತದೆ.

 ಬೇಬಿ ಸಿಟ್ಟಿಂಗ್-ಡೇಕೇರ್, ಡ್ಯಾನ್ಸ್ ಕ್ಲಾಸ್, ಫೊಟೋಗ್ರಫಿ

ಬೇಬಿ ಸಿಟ್ಟಿಂಗ್-ಡೇಕೇರ್, ಡ್ಯಾನ್ಸ್ ಕ್ಲಾಸ್, ಫೊಟೋಗ್ರಫಿ

7. ಬೇಬಿ ಸಿಟ್ಟಿಂಗ್-ಡೇಕೇರ್: ಇಂದಿನ ಆಧುನಿಕ ಭಾರತದಲ್ಲಿ ಕೆಲಸ ಮಾಡುವ ತಾಯಂದಿರ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಕೂಡಾ ಹೆಚ್ಚು ಬೇಡಿಕೆಯಲ್ಲಿದೆ. ಹಾಗೆಯೇ ಆರೋಗ್ಯ ಸರಿಯಿಲ್ಲದವರನ್ನು ನೋಡಿಕೊಳ್ಳುವ ಕೆಲಸವನ್ನು ಕೂಡಾ ಮಾಡಬಹುದು. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ತಾಯಂದಿರು ಮಕ್ಕಳನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಕ ಮಾಡಿಕೊಳ್ಳುತ್ತಾರೆ. ವಿಭಕ್ತ ಕುಟುಂಬಗಳಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ.
8. ಡ್ಯಾನ್ಸ್ ಕ್ಲಾಸ್: ನೀವು ಉತ್ತಮ ನರ್ತಕಿ ಅಥವಾ ನೃತ್ಯ ಸಂಯೋಜಕರಾಗಿದ್ದರೆ, ಡ್ಯಾನ್ಸ್ ಕ್ಲಾಸ್ ಅನ್ನು ಆರಂಭ ಮಾಡಬಹುದು. ನೀವು ಬಾಡಿಗೆಗೆ ರೂಮ್ ಅನ್ನು ಪಡೆದುಕೊಂಡು ಅಲ್ಲಿ ಕ್ಲಾಸ್ ಅನ್ನು ಆರಂಭ ಮಾಡಬಹುದು.
9. ಫೋಟೋಗ್ರಫಿ: ಕೆಲವೊಮ್ಮೆ ನಿಮ್ಮ ಹವ್ಯಾಸವು ನಿಮಗೆ ಹಣವನ್ನು ಗಳಿಸುವಂತೆ ಮಾಡುತ್ತದೆ. ನೀವು ಫೋಟೋಗ್ರಫಿ ಹವ್ಯಾಸವನ್ನು ಹೊಂದಿದ್ದರೆ ಅದರಿಂದಲೇ ಹಣವನ್ನು ಸಂಪಾದನೆ ಮಾಡಬಹುದು. ಛಾಯಾಗ್ರಹಣವು ಹಲವಾರು ವೃತ್ತಿಪರರಿಗೆ ವೃತ್ತಿಯಾಗಿ ಬದಲಾಗಿರುವ ಹವ್ಯಾಸಗಳಲ್ಲಿ ಒಂದಾಗಿದೆ.

 ಯೋಗ, ವೆಡ್ಡಿಂಗ್ ಬ್ಯೂರೋ, ಟ್ರಾವೆಲ್ ಏಜೆನ್ಸಿ

ಯೋಗ, ವೆಡ್ಡಿಂಗ್ ಬ್ಯೂರೋ, ಟ್ರಾವೆಲ್ ಏಜೆನ್ಸಿ

10. ಯೋಗ ಕಲಿಸುವಿಕೆ: ಯೋಗದ ಜ್ಞಾನ ಮತ್ತು ಎಲ್ಲಾ 'ಯೋಗ ಆಸನಗಳು' ಸ್ವಯಂ-ಅಭ್ಯಾಸ ಮಾಡುವ ಅಭ್ಯಾಸವು ಉತ್ತಮ ಯೋಗ ಬೋಧಕರನ್ನಾಗಿ ನಿಮ್ಮನ್ನು ಮಾಡುತ್ತದೆ. ಪ್ರಸ್ತುತ ಯೋಗಕ್ಕೆ ಉತ್ತಮ ಡಿಮ್ಯಾಂಡ್ ಇದೆ. ಆದ್ದರಿಂದಾಗಿ ನೀವು ಯೋಗವನ್ನು ಅಭ್ಯಾಸ ಮಾಡಿಸುವ ಗುರುಗಳಾಗಿ ಕಾರ್ಯನಿರ್ವಹಣೆ ಮಾಡಬಹುದು
11. ವೆಡ್ಡಿಂಗ್ ಬ್ಯೂರೋ: ಮದುವೆ ಆನ್‌ಲೈನ್ ಪೋರ್ಟಲ್‌ಗಳಲ್ಲದೆ, ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ವಿವಾಹದ ಬ್ಯೂರೋಗಳು ಹೆಚ್ಚು ಪ್ರಚಲಿತದಲ್ಲಿವೆ. ಈಗ ಹೆಚ್ಚಾಗಿ ಬ್ರೋಕರೇಜ್ ಸಂಸ್ಥೆಗಳ ಮೂಲಕ ವಧು, ವರರನ್ನು ಹುಡುಕುತ್ತಾರೆ.
12. ಟೂರ್ ಆಪರೇಟರ್ಸ್/ಟ್ರಾವೆಲ್ ಏಜೆನ್ಸಿ: ಒಂದು ಪ್ರಮುಖ ಸ್ಥಳದಲ್ಲಿ ನೀವು ಟ್ರಾವೆಲ್ ಏಜೆನ್ಸಿಯನ್ನು ಆರಂಭ ಮಾಡಬಹುದು. ಯಶಸ್ವಿ ಟ್ರಾವೆಲ್ ಏಜೆಂಟ್ ಎಂದರೆ ಇತರರಿಗೆ ತನ್ನ ಗ್ರಾಹಕರಿಗೆ ಸಮಾಧಾನ ಮತ್ತು ಅನುಕೂಲಕ್ಕಾಗಿ ಪ್ರಯಾಣಿಸುವಂತೆ ಮಾಡಬಹುದು.

 ಬ್ಯೂಟಿ ಪಾರ್ಲರ್, ರಿಯಲ್ ಎಸ್ಟೇಟ್ ಏಜೆಂಟ್, ಉದ್ಯೋಗ ಸೇವೆಗಳು

ಬ್ಯೂಟಿ ಪಾರ್ಲರ್, ರಿಯಲ್ ಎಸ್ಟೇಟ್ ಏಜೆಂಟ್, ಉದ್ಯೋಗ ಸೇವೆಗಳು

13. ಸಲೂನ್/ಬ್ಯೂಟಿ ಪಾರ್ಲರ್: ಸಲೂನ್ ಅಥವಾ ಬ್ಯೂಟಿ ಪಾರ್ಲರ್ ಅನ್ನು ತೆರೆಯುವುದು ಮೆಟ್ರೋ ನಗರಗಳಲ್ಲಿ ಯಾವಾಗಲೂ ಹೆಚ್ಚು ಟ್ರೆಂಡಿಂಗ್ ವ್ಯಾಪಾರ ಆಯ್ಕೆಯಾಗಿದೆ. ಭಾರತದ ಯುವಕರು ಫ್ಯಾಶನ್‌ಗೆ ಅಧಿಕ ಆದ್ಯತೆ ನೀಡುತ್ತಿರುವ ನಡುವೆ ಸಲೂನ್, ಬ್ಯೂಟಿಪಾರ್ಲರ್ ಉದ್ಯಮ ಯಶಸ್ವಿಯಾಗಿ ಸಾಗುತ್ತಿದೆ. ಮೆಟ್ರೋ ನಗರಗಳಲ್ಲಿ ಹಬ್ಬದ ಅಥವಾ ಮದುವೆಯ ಸಮಯದಲ್ಲಿ ಸಲೂನ್ ಮಾಲೀಕರು ಭಾರಿ ಲಾಭವನ್ನು ಗಳಿಸುತ್ತಾರೆ.
14. ರಿಯಲ್ ಎಸ್ಟೇಟ್ ಏಜೆಂಟ್: ಜ್ಞಾನ ಮತ್ತು ಮನವೊಲಿಸುವ ಉತ್ತಮ ಶಕ್ತಿಯನ್ನು ಹೊಂದಿರುವ ಮಾರಾಟಗಾರರು ನೀವಾಗಿದ್ದರೆ ನಿಮಗೆ ರಿಯಲ್ ಎಸ್ಟೇಟ್ ಉತ್ತಮ ಆಯ್ಕೆಯಾಗಿದೆ. ಪ್ರಸ್ತುತ ರಿಯಲ್ ಎಸ್ಟೇಟ್ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ಉದ್ಯಮವಾಗಿದೆ.
15. ಉದ್ಯೋಗ ಸೇವೆಗಳು: ಮಾನವ ಸಂಪನ್ಮೂಲ (HR) ವಲಯವು ಪ್ರಸ್ತುತ ಅಧಿಕ ಬೇಡಿಕೆಯಲ್ಲಿ ಇರುವ ವಲಯವಾಗಿದೆ. ಉತ್ತಮ ನೇಮಕಾತಿಯು ಕಂಪನಿ ಬೆಳೆಯಲು ಸಹಕಾರಿಯಾಗುತ್ತದೆ. ಈ ನಡುವೆ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಟೈ-ಅಪ್‌ಗಳನ್ನು ಹೊಂದುವುದು ಮತ್ತು ಅವರಿಗೆ ಉತ್ತಮ ಉದ್ಯೋಗಿಗಳನ್ನು ಕಲ್ಪಿಸುವುದು ಕಡಿಮೆ-ವೆಚ್ಚದ ಉದ್ಯೋಗ ವ್ಯವಹಾರವಾಗಿದೆ.

 

 

 ಐಸ್ ಕ್ರೀಮ್ ಪಾರ್ಲರ್, ಕರಕುಶಲ, ಕೋಚಿಂಗ್ ಸೆಂಟರ್

ಐಸ್ ಕ್ರೀಮ್ ಪಾರ್ಲರ್, ಕರಕುಶಲ, ಕೋಚಿಂಗ್ ಸೆಂಟರ್

16. ಐಸ್ ಕ್ರೀಮ್ ಪಾರ್ಲರ್: ನಾವು ಸಣ್ಣ ಉದ್ಯಮವನ್ನು ಆರಂಭ ಮಾಡುವುದಾದರೆ ಐಸ್‌ಕ್ರೀಮ್ ಪಾರ್ಲರ್‌ ಅನ್ನು ಕೂಡಾ ಆರಂಭ ಮಾಡಬಹುದು. ಇದು ಕಾಲೋಚಿತ ವ್ಯಾಪಾರವಾಗಿದೆ. ಆದರೂ ಸಣ್ಣ ವ್ಯವಹಾರದಲ್ಲಿ ಅತೀ ಹಿಟ್ ಆದ ವ್ಯಾಪಾರ ಇದಾಗಿದೆ. ನಾವು ಹೆಚ್ಚು ಜನಸಂಖ್ಯೆ ಇರುವ ಪ್ರದೇಶದಲ್ಲಿ ಈ ವ್ಯಾಪಾರವನ್ನು ಆರಂಭ ಮಾಡಿದರೆ ಯಶಸ್ವಿಯಾಗಲು ಸಾಧ್ಯವಿದೆ.
17. ಕರಕುಶಲ ವಸ್ತುಗಳ ಮಾರಾಟ: ಭಾರತ ಸರ್ಕಾರವು ಹಲವಾರು ನಗರಗಳು ಮತ್ತು ರಾಜ್ಯಗಳಲ್ಲಿ ಕರಕುಶಲ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕಾಗಿ ಹಲವಾರು ಯೋಜನೆಗಳು ಕೂಡಾ ಇದೆ. ನೀವು ನಿಮ್ಮ ಕೈಯಿಂದ ಮಾಡಿದ ಯಾವುದೇ ಹ್ಯಾಡಿಕ್ರಾಫ್ಟ್ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಸಂಪಾದನೆ ಮಾಡಲು ಸಾಧ್ಯವಾಗಲಿದೆ. ಉದಾಹರಣೆಗೆ ನೀವು ವರ್ಣಚಿತ್ರಗಳು, ಶಾಲುಗಳು, ರತ್ನಗಂಬಳಿಗಳು, ಮರದ ಸಾಮಾನುಗಳು, ಮಣ್ಣಿನ ಪಾತ್ರೆಗಳು, ಕಿವಿಯೋಲೆ, ಕಸೂತಿ ವಸ್ತುಗಳು, ಕಂಚು ಮತ್ತು ಅಮೃತಶಿಲೆಯ ಶಿಲ್ಪಗಳು ಇತ್ಯಾದಿಗಳನ್ನು ತಯಾರಿಸಿ ಮಾರಾಟ ಮಾಡಬಹುದು.
18. ಕೋಚಿಂಗ್ ತರಗತಿಗಳು/ಸೆಂಟರ್: ಶಿಕ್ಷಣವು ವೈವಿಧ್ಯತೆಯ ಕ್ಷೇತ್ರವಾಗಿದೆ. ಕಡಿಮೆ ವೆಚ್ಚದ ಉತ್ತಮ ಆದಾಯವನ್ನು ಗಳಿಸುವ ವ್ಯಾಪಾರವಾಗಿ ಮಾರ್ಪಟ್ಟಿದೆ. ನೀವು ಮಕ್ಕಳಿಗೆ ಟ್ಯೂಷನ್, ಕೋಚಿಂಗ್ ನೀಡುವ ಮೂಲಕ ಆಧಾಯವನ್ನು ಗಳಿಸಲು ಸಾಧ್ಯವಾಗಲಿದೆ.

 ಕನ್ಸಲ್ಟೆಂನ್ಸಿ, ಕ್ಯಾಟರಿಂಗ್, ಬಟ್ಟೆ ಅಂಗಡಿ

ಕನ್ಸಲ್ಟೆಂನ್ಸಿ, ಕ್ಯಾಟರಿಂಗ್, ಬಟ್ಟೆ ಅಂಗಡಿ

19. ಸಲಹಾ ಸೇವೆಗಳು/ಕನ್ಸಲ್ಟೆಂನ್ಸಿ ಸರ್ವಿಸಸ್: ಪ್ರತಿಯೊಂದು ವಲಯಕ್ಕೂ ಅದರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಾಯ ಮಾಡಲು ಸಲಹೆಗಾರರ ಅಗತ್ಯವಿದೆ. ಐಟಿ, ಹಣಕಾಸು, ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಖಾತೆಗಳು, ಕಾನೂನು, ಆರೋಗ್ಯ, ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಬಗ್ಗೆ ಯೋಗ್ಯವಾದ ಜ್ಞಾನ ಹೊಂದಿರುವ ಜನರು ತಮ್ಮದೇ ಆದ ಸಲಹಾ ಕಂಪನಿಯನ್ನು ತೆರೆಯಬಹುದು. ಉತ್ತಮ ಹಣವನ್ನು ಗಳಿಸಲು ದೊಡ್ಡ ಕಾರ್ಪೊರೇಟ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು.
20. ಬಟ್ಟೆ ಅಂಗಡಿ/Boutique/ಬುಟಿಕ್: ಇದು ದೇಶದ ಸಾಂಪ್ರದಾಯಿಕ ಸಣ್ಣ-ಪ್ರಮಾಣದ ವ್ಯವಹಾರಗಳಲ್ಲಿ ಒಂದಾಗಿದೆ. ಬಟ್ಟೆಗಳನ್ನು ಹೊಲಿಯಲು ಇಷ್ಟಪಡುವ ಮತ್ತು ಇತ್ತೀಚಿನ ಫ್ಯಾಷನ್ ಟ್ರೆಂಡ್‌ಗಳೊಂದಿಗೆ ಅಪ್‌ಡೇಟ್ ಆಗಿರುವ ಮಹಿಳೆಯರು ಎಲ್ಲಿ ಬೇಕಾದರೂ ಬಟ್ಟೆ ಅಂಗಡಿಯನ್ನು ತೆರೆದು ನಡೆಸಲು ಸಾಧ್ಯವಾಗಲಿದೆ. ಮನೆಯಿಂದಲೇ ಈ ವ್ಯಾಪಾರವನ್ನು ನಡೆಸಲು ಸಾಧ್ಯವಾಗಲಿದೆ. ಹೊಲಿಗೆ ಯಂತ್ರ, ದಾರಕ್ಕೆ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ.
21. ಕ್ಯಾಟರಿಂಗ್/ಅಡುಗೆ ಸೇವೆಗಳು: ಕ್ಯಾಟರಿಂಗ್ ಅಥವಾ ಅಡುಗೆ ವ್ಯಾಪಾರ ನಡೆಸುವುದಾದರೆ ಕೇವಲ ಕಾರ್ಮಿಕರನ್ನು ನೇಮಿಸಿಕೊಳ್ಳಲು, ಕಚ್ಚಾ ವಸ್ತುಗಳನ್ನು ಖರೀದಿಸಲು ಮತ್ತು ಟೆಂಟ್‌ಗಳು, ಟೇಬಲ್‌ಗಳು, ಕುರ್ಚಿಗಳು ಮತ್ತು ಪಾತ್ರೆಗಳನ್ನು ಖರೀದಿ ಮಾಡಲು ಹೂಡಿಕೆ ಮಾಡಬೇಕಾಗುತ್ತದೆ. ಉಳಿದಂತೆ ನಿಮ್ಮ ಸಂಪರ್ಕ, ಮಾರ್ಕೆಟಿಂಗ್ ತಂತ್ರ ಇಲ್ಲಿ ಮುಖ್ಯವಾಗಿದೆ.

English summary

Small Scale Business Ideas in India; Here is the List in Kannada

Here is the list of most successful Small Scale Business Ideas in India. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X