For Quick Alerts
ALLOW NOTIFICATIONS  
For Daily Alerts

ಹೈಸ್ಕೂಲ್ ಗೆ ಶಾಲೆ ಬಿಟ್ಟ ವ್ಯಕ್ತಿಯಿಂದ ಈಗ ವರ್ಷಕ್ಕೆ ಕೋಟಿ ಕೋಟಿ ವ್ಯಾಪಾರ

|

"ಒಂದು ಡಿಗ್ರಿ ಸರ್ಟಿಫಿಕೇಟ್ ಕೂಡ ಇಲ್ಲದೆ ಅದು ಹೇಗೆ ದುಡಿಯುವುದಕ್ಕೆ ಸಾಧ್ಯ? ಸರಿ, ಯಾವುದೋ ಬಿಜಿನೆಸ್ ಮಾಡಬೇಕು ಅಂದರೂ ಕನಿಷ್ಠ ಓದಿರಬೇಕಲ್ಲ?" -ಇಂಥ ಮಾತನ್ನು ಅದೆಷ್ಟು ಬಾರಿ ಕೇಳಿಸಿಕೊಂಡಿರುತ್ತೀರಿ. ಅಥವಾ ನೀವೇ ಹೇಳಿರುತ್ತೀರಿ. ಆದರೆ ಹೈಸ್ಕೂಲ್ ಮೆಟ್ಟಿಲೇರಿ, ಆ ನಂತರ ಶಾಲೆ ಬಿಟ್ಟ ಒಬ್ಬ ವ್ಯಕ್ತಿಯ ಜೀವನಗಾಥೆ ನಿಮಗೆ ಹೇಳಬೇಕಾಗಿದೆ.

ಓದಿಲ್ಲ, ಸರ್ಟಿಫಿಕೇಟ್ ಇಲ್ಲ, ಅದಿಲ್ಲ- ಇದಿಲ್ಲ ಎಂದು 'ಇಲ್ಲ'ಗಳ ಬಗ್ಗೆಯೇ ಹೇಳುವವರಿಗಾಗಿ ಮತ್ತು ಏನಿಲ್ಲದಿದ್ದರೂ ಏನಾದರೂ ಸಾಧಿಸುವ ತುಡಿತ ಇರುವವರಿಗೆ ಈತನ ಬದುಕು ಮಾದರಿ ಆಗಬಹುದು. ಉತ್ತರಪ್ರದೇಶದ ಲಖನೌ ಅಂದರೆ ಚಿಕನ್ ಎಂಬ್ರಾಯಿಡರಿಗೆ ಬಹಳ ಹೆಸರುವಾಸಿ. ಹದಿನೇಳನೇ ಶತಮಾನದ ಮೊಘಲರ ಕಾಲಘಟ್ಟದಿಂದಲೂ ಇದು ಪ್ರಖ್ಯಾತಿ.

ಓದಿದ್ದು ಹೈಸ್ಕೂಲ್ ತನಕ
 

ಓದಿದ್ದು ಹೈಸ್ಕೂಲ್ ತನಕ

ಈಗ ಅದೇ ಕಲೆಯನ್ನೇ ಆಧರಿಸಿ ನಾನಾ ಬಿಜಿನೆಸ್ ನಡೆಯುತ್ತಿದೆ. ಅದರಲ್ಲಿ ಒಂದು ತ್ರಿವೇಣಿ ಚಿಕನ್ ಆರ್ಟ್ಸ್. ಅದನ್ನು ಆರಂಭಿಸಿದ್ದು ನಿತೇಶ್ ಅಗರ್ವಾಲ್. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನಿತೇಶ್ ಚಿಕಂಕರಿ ವ್ಯಾಪಾರಕ್ಕೆ ಬರಬೇಕು ಅಂದುಕೊಂಡಾಗ ವಯಸ್ಸು ಹತ್ತೊಂಬತ್ತು ವರ್ಷ. ಓದಿದ್ದು ಹೈಸ್ಕೂಲ್ ವರೆಗೆ ಮಾತ್ರ. ಮನೆಯಲ್ಲಿ ಕಷ್ಟ ಇರುವ ಕಾರಣಕ್ಕೆ ಶಿಕ್ಷಣ ಮುಂದುವರಿಸುವುದಕ್ಕೆ ಆಗಲಿಲ್ಲ. ಆದರೆ ಜೀವನ ನಡೆಯಬೇಕಲ್ಲ, ಆ ಕಾರಣಕ್ಕೆ ಒಂಬತ್ತು ವರ್ಷದ ಹಿಂದೆ ನಿತೇಶ್ ಲಖನೌನಲ್ಲಿ ತ್ರಿವೇಣಿ ಚಿಕನ್ ಆರ್ಟ್ಸ್ ಆರಂಭಿಸಿದರು. ನಾನೂರು ವರ್ಷದ ಇತಿಹಾಸ ಇರುವ ಚಿಕಂಕರಿ ಕಲೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬುದು ಅವರ ಗುರಿ, ಉದ್ದೇಶ ಆಗಿತ್ತು. ಈ ಕಂಪೆನಿಯಲ್ಲಿ ಕೈಯಿಂದಲೇ ಮಾಡಲಾದ ಎಂಬ್ರಾಯಿಡರಿ ಚಿಕಂಕರಿ ಕುರ್ತಾ, ಟುನಿಕ್ಸ್, ಸೀರೆ, ಪುರುಷರ ಕುರ್ತಾ, ಮಹಿಳೆಯರ ಲೆಹೆಂಗಾ ಮತ್ತಿತರ ಕರಕುಶಲ ಮತ್ತು ಬಟ್ಟೆಗಳನ್ನು ಉತ್ಪಾದನೆ ಮತ್ತು ರಫ್ತು ಮಾಡಲಾಗುತ್ತದೆ.

ಹದಿಮೂರು ಸಾವಿರ ರುಪಾಯಿ ಹೂಡಿಕೆ

ಹದಿಮೂರು ಸಾವಿರ ರುಪಾಯಿ ಹೂಡಿಕೆ

ನಿತೇಶ್ ಹೇಳುವ ಪ್ರಕಾರ, ತ್ರಿವೇಣಿ ಚಿಕನ್ ಆರ್ಟ್ಸ್ ಆರಂಭವಾದದ್ದು ಹದಿಮೂರು ಸಾವಿರ ರುಪಾಯಿ ಹೂಡಿಕೆಯೊಂದಿಗೆ. ಈಗ ಇದರ ವಾರ್ಷಿಕ ವಹಿವಾಟು ಮೂರು ಕೋಟಿ ಇದೆ. ಸದ್ಯಕ್ಕೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಎರಡಕ್ಕೂ ಪೂರೈಕೆ ಮಾಡಲಾಗುತ್ತಿದೆ. ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಯುರೋಪ್, ಸಿಂಗಾಪೂರ್, ಇಂಡೋನೇಷ್ಯಾ, ಬರ್ಮಾ, ಯು.ಎಸ್., ಯು.ಕೆ. ಮತ್ತಿತರ ದೇಶಗಳಿಗೆ ರಫ್ತು ಕೂಡ ಮಾಡಲಾಗುತ್ತಿದೆ. ಅಂದ ಹಾಗೆ ಈ ವ್ಯವಹಾರಕ್ಕೆ ಕಾಲಿಟ್ಟಾಗ ನಿತೇಶ್ ಗೆ ಇನ್ನೂ ಹದಿಹರೆಯ. ಲಖನೌನ ಸ್ಥಳೀಯ ಉತ್ಪಾದಕರ ಬಳಿ ನಿತೇಶ್ ಕೆಲಸ ಮಾಡಿಕೊಂಡಿದ್ದರು. ಮಾರುಕಟ್ಟೆಯಲ್ಲಿ ನಿತೇಶ್ ವಿಶ್ವಾಸ ಗಳಿಸಿಕೊಂಡರು. ಆ ಹಿನ್ನೆಲೆಯಲ್ಲಿ ವರ್ತಕರು, ತಮ್ಮ ಬಳಿ ಮಾರಾಟ ಆಗದೆ ಉಳಿದ ಸರಕನ್ನು ನಿತೇಶ್ ಗೆ ಒದಗಿಸುತ್ತಿದ್ದರು. ಅವುಗಳನ್ನೇ ಮುಂಬೈ ಮತ್ತು ವಿದೇಶಗಳಿಗೆ ಚಿಕನ್ ಉತ್ಪನ್ನಗಳನ್ನು ಪೂರೈಸುತ್ತಿದ್ದವರಿಗೆ ಮಾರಲು ಆರಂಭಿಸಿದರು.

ವಿದೇಶಗಳಲ್ಲೂ ಪ್ರದರ್ಶನ
 

ವಿದೇಶಗಳಲ್ಲೂ ಪ್ರದರ್ಶನ

ಅನುಭವ ಗಳಿಸಿ, ಒಂದಿಷ್ಟು ಹಣ ಕೂಡಿಟ್ಟುಕೊಂಡ ನಂತರ ಲಖನೌನ ಡಿಸಿಎಚ್ ನಲ್ಲಿ ನೋಂದಣಿ ಮಾಡಿ, ಆ ನಂತರ ನಿತೇಶ್ ಸ್ವಂತ ವ್ಯಾಪಾರ ಆರಂಭಿಸಿದರು. ತಾವು ತಯಾರಿಸಿದ ಉತ್ಪನ್ನಗಳನ್ನು ಸಿಂಗಾಪೂರ್ ನಲ್ಲಿ ಕೂಡ ಪ್ರದರ್ಶಿಸಲು ಅವರಿಗೆ ಅವಕಾಶ ಸಿಕ್ಕಿದೆ. ಅದಕ್ಕೆ ಲಖನೌನ ಎಕ್ಸ್ ಪೋರ್ಟ್ ಪ್ರಮೋಷನ್ ಬ್ಯುರೋ ಸಹಾಯ ಮಾಡಿದೆ. ಜಾಗತಿಕ ಮಟ್ಟದಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನಕ್ಕೂ ಇದರಿಂದ ಅನುಕೂಲ ಆಗಿದೆ. ಸದ್ಯಕ್ಕೆ ನಿತೇಶ್ ಅವರ ತಂಡದಲ್ಲಿ ಹದಿನೈದು ಮಂದಿ ಇದ್ದಾರೆ. ಅದರಲ್ಲಿ ಕುಟುಂಬದ ನಾಲ್ವರು ಸದಸ್ಯರು ಕೂಡ ಇದ್ದಾರೆ. ಇದನ್ನು ಹೊರತು ಪಡಿಸಿದಂತೆ ಇನ್ನೂರರಷ್ಟು ಮಹಿಳೆಯರು, ಕೆಲವು ಪುರುಷರು ಪರೋಕ್ಷವಾಗಿ ಇವರ ಜತೆ ಕೆಲಸದಲ್ಲಿ ತೊಡಗಿದ್ದಾರೆ. ಈ ಕಲಾವಿದರು ಎಂಬ್ರಾಯಿಡರಿ ಸೇರಿದಂತೆ ಇತರ ಅಗತ್ಯ ಕೆಲಸಗಳನ್ನು ಮಾಡುತ್ತಾರೆ.

ಭವಿಷ್ಯದ ಬಗ್ಗೆ ಕನಸುಗಳು

ಭವಿಷ್ಯದ ಬಗ್ಗೆ ಕನಸುಗಳು

ನಿತೇಶ್ ಅವರು ಉತ್ಪನ್ನ ತಯಾರಿಸುವುದು ಕೈಯಿಂದ. ಅಂದರೆ ಕರಕುಶಲ ಕಲೆ. ಲಖನೌನಲ್ಲಿ ಮಾಡುವಂಥದ್ದು. ತುಂಬ ಸೂಕ್ಷ್ಮವಾದ ಮತ್ತು ಅತ್ಯುತ್ತಮವಾದ ಎಂಬ್ರಾಯಿಡರಿ ಮಾಡಲಾಗುತ್ತದೆ ಎನ್ನುತ್ತಾರೆ ಅವರು. ಅಂದಹಾಗೆ ಚಿಕಂಕರಿ ಕೆಲಸ ಬಹಳ ಶ್ರಮವನ್ನು ಬೇಡುತ್ತದೆ. ಬ್ರ್ಯಾಂಡೆಡ್ ಮಳಿಗೆಗಳ ರೆಡಿಮೇಡ್ ಬಟ್ಟೆಗಳಿಗೆ ಹೋಲಿಸಿದರೆ ಸರಿಯಾದ ಬೆಲೆ ಸಿಗುವುದಿಲ್ಲ. ಒಂದು ವೇಳೆ ಸರ್ಕಾರವೇ ಸ್ಥಳೀಯ ಕುಶಲಕರ್ಮಿಗಳ ಪರವಾಗಿ ಜಾಹೀರಾತು ಮಾಡಿದರೆ ಸಹಾಯ ಆಗುತ್ತದೆ. ಉತ್ತಮ ಬೆಲೆ ಸಿಕ್ಕಲ್ಲಿ ಮಹಿಳಾ ಕುಶಲಕರ್ಮಿಗಳಿಗೆ ಇನ್ನೂ ಉತ್ತಮ ಕೂಲಿ ಕೊಡುವುದಕ್ಕೆ ಸಾಧ್ಯ ಎನ್ನುತ್ತಾರೆ ನಿತೇಶ್. ಮಾರುಕಟ್ಟೆಯಲ್ಲಿ ಚೀನಾದ ಸ್ಪರ್ಧೆ ಕಠಿಣವಾಗಿದೆ. ಇನ್ನು ಸರ್ಕಾರದ ಜಿಎಸ್ ಟಿ ಭಾರವಾಗಿ ಪರಿಣಮಿಸಿದೆ ಎನ್ನುತ್ತಾರೆ. ಸರ್ಕಾರದಿಂದ ಚಿಕಂಕರಿ ಉತ್ಪನ್ನಗಳ ಮೇಲಿನ ತೆರಿಗೆ ಇಳಿಸಬೇಕು. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ಪನ್ನವನ್ನು ಪ್ರಚುರ ಪಡಿಸಬೇಕು ಎಂದಿರುವ ನಮ್ಮ ಉದ್ದೇಶ ಈಡೇರಬೇಕು ಎಂದು ಭವಿಷ್ಯದ ಬಗ್ಗೆ ಕನಸು ತೆರೆದಿಡುತ್ತಾರೆ.

English summary

Success Story: High School Dropout Become Successful Businessman

Here is the success story of businessman Nitesh from Uttar Pradesh.
Story first published: Monday, January 6, 2020, 18:55 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more