For Quick Alerts
ALLOW NOTIFICATIONS  
For Daily Alerts

ಮದುವೆ ಆಗ್ಬೇಕು ಅಂದುಕೊಂಡಿದ್ದೀರಾ? ಅದಕ್ಕೂ ಮೊದಲು ಈ ಹಣಕಾಸಿನ ವಿಚಾರವನ್ನು ತಿಳಿದುಕೊಳ್ಳಿ

|

ಮದುವೆ ಅನ್ನೋದು ಒಂದು ಮಧುರ ಅನುಬಂಧ.. ಮದುವೆ ಅನ್ನೋದು ಎರಡು ಪ್ರೀತಿಸುವ ಮನಸುಗಳು ಒಂದಾಗುವ ಸವಿ ಘಳಿಗೆ.. ಇನ್ನು ಸ್ಯಾಂಡಲ್‌ವುಡ್ ರಿಯಲ್‌ಸ್ಟಾರ್ ಉಪೇಂದ್ರ ಸ್ಟೈಲ್‌ನಲ್ಲಿ ಹೇಳಬೇಕಂದ್ರೆ ಮದುವೆ ಅನ್ನೋದು ಬಾಯಿಗೆ ಹಾಕಿದ ಚುಯಿಂಗ್ ಗಮ್ ಇದ್ದ ಹಾಗೆ, ಮೊದಲು ಸಿಹಿಯಾಗೇ ಇರುತ್ತೆ.. ಹೀಗೆ ಮದುವೆಯನ್ನು ಅವರದ್ದೇ ಆದ ವಿಭಿನ್ನ ಶೈಲಿಯಲ್ಲಿ ವರ್ಣಿಸಬಹುದು.

ಗಂಡಿರಲಿ, ಹೆಣ್ಣಿರಲಿ ಮದುವೆ ಅನ್ನೋದು ಪ್ರತಿಯೊಬ್ಬರ ಬಾಳಿನ ಸುಂದರ ಘಟ್ಟ. ಬಹುತೇಕರ ಬಾಳಿನಲ್ಲಿ ಒಂದೇ ಬಾರಿ ನಡೆಯುವ ಘಟನೆ. ಈ ಕ್ಷಣವನ್ನು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಹೀಗೆ ಮದುವೆ ಅನ್ನೋದು ಪ್ರತಿಯೊಬ್ಬಳ ಜೀವನದಲ್ಲಿ ಅತ್ಯಮೂಲ್ಯವಾದ ಘಟ್ಟ. ಕಾಲೇಜು ದಿನಗಳಲ್ಲಿ ಕೇವಲ ಒಂದು ಪರೀಕ್ಷೆಗೆ ಹೆಚ್ಚು ತಯಾರಾಗುವ ಯುವಜನತೆ ಮದುವೆ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.

 

ಇತ್ತೀಚಿನ ದಿನಗಳಲ್ಲಿ ಮದುವೆ ಅಂದರೆ ಸಾಮಾನ್ಯವಾಗಿ ಪುರುಷರು ಸುಮಾರು 30 ಮತ್ತು ಮಹಿಳೆಯರು ಸುಮಾರು 28 ನೇ ವಯಸ್ಸಿನಲ್ಲಿ ಮದುವೆ ಆಗ್ತಾರೆ. ಹತ್ತಾರು ವರ್ಷಗಳ ಹಿಂದೆ ಇದು ಕ್ರಮವಾಗಿ 26 ಮತ್ತು 24 ಆಗಿತ್ತು. ಇದರರ್ಥ ಬಹುತೇಕ ಜನರು ತಮ್ಮ ಹಣಕಾಸಿನ ಸ್ಥಿತಿ ಉತ್ತಮವಾದಾಗ ಅಥವಾ ಉತ್ತಮ ಉದ್ಯೋಗ ಪಡೆದ ಮೇಲೆ, ಮನೆ ಕಟ್ಟಿದ ಬಳಿಕವಷ್ಟೇ ಮದುವೆಯಾಗಲು ಬಯಸುತ್ತಾರೆ. ಆದರೆ ಭವಿಷ್ಯದ ಹಣಕಾಸಿನ ದೃಷ್ಟಿಯಲ್ಲಿ ಇಷ್ಟು ಮಾತ್ರ ಸಾಲದು. ದಂಪತಿಗಳು ಮದುವೆಯಾಗಲು ನಿರ್ಧರಿಸಿದಾಗ ದೊಡ್ಡ ಪಾತ್ರವನ್ನು ವಹಿಸಬೇಕು.

ಈಗಿನ ಆಧುನಿಕ ಜೀವನದಲ್ಲಿ ಮದುವೆಗೂ ಮುನ್ನ ದಂಪತಿಗಳು ಹಣಕಾಸಿನ ವಿಚಾರಗಳ ಕುರಿತು ಏನೆಲ್ಲಾ ಅರಿತುಕೊಂಡಿರಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

1) ಮೊದಲಿಗೆ, ಹಣಕಾಸಿನ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ

1) ಮೊದಲಿಗೆ, ಹಣಕಾಸಿನ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ

ಬಹುತೇಕ ಜನರು ಹಣದ ವಿಚಾರ ಬಂದಕೂಡಲೇ ಗೌಪ್ಯವಾಗಿ ಮಾತನಾಡುವುದು, ಇಲ್ಲವೇ ಚರ್ಚಿಸುವುದು ಸಾಮಾನ್ಯ. ಆದರೆ ದಂಪತಿಗಳು ಮನೆಯ ಹಣಕಾಸಿನ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಬೇಕು. ಮಕ್ಕಳನ್ನು ಹೊಂದುವುದು ಮತ್ತು ಮನೆ ಕಟ್ಟಿಸುವಂತಹ ಜೀವನದ ಪ್ರಮುಖ ಆಯ್ಕೆಗಳ ಹೊರತಾಗಿ, ಇತರೆ ಖರ್ಚುಗಳ ಕುರಿತಾಗಿ ನಿರ್ಧಾರಗಳನ್ನು ಚರ್ಚಿಸಿ ಮುಕ್ತವಾಗಿ ನಿರ್ಧಾರ ಕೈಗೊಳ್ಳುವುದು ಬಹಳ ಮುಖ್ಯ. ಇಬ್ಬರೂ ತಮ್ಮ ಆದ್ಯತೆಗಳನ್ನು ಪ್ರತ್ಯೇಕವಾಗಿ ಬರೆಯುವುದು, ನಂತರ ಆ ಪಟ್ಟಿಯನ್ನು ಹೋಲಿಕೆ ಮಾಡಿ ಎಲ್ಲಿ ತುಂಬಾ ಖರ್ಚು ಹೆಚ್ಚಾಗಿದೆ ಮತ್ತು ಎಲ್ಲಿ ರಾಜಿ ಅಗತ್ಯವಿದೆ ಎಂದು ಚರ್ಚಿಸುವುದು ಯೋಗ್ಯವಾದ ವಿಧಾನವಾಗಿದೆ.

ಅನೇಕ ಯೋಜನೆಗಳು ಆರಂಭದ ಹಂತದಲ್ಲೇ ಉಳಿದುಕೊಳ್ಳುತ್ತವೆ. ಏಕೆಂದರೆ ಸಂಗಾತಿಗಳಲ್ಲಿ ಒಬ್ಬರು ಮಾತ್ರ ದುಡಿಯುತ್ತಿದ್ದಾಗ ಯೋಜನೆಯ ಕಾರ್ಯಗಳನ್ನು ಬೇಗ ಮುಟ್ಟಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲಿ ದುಡಿಯುವವರು ಒಬ್ಬರೇ ಇದ್ದಾಗ ಅದಕ್ಕೆ ತಕ್ಕಂತೆ ಕಾರ್ಯ ತಂತ್ರಗಳನ್ನು ಹೆಣೆದುಕೊಳ್ಳಬೇಕು. ಏಕೆಂದರೆ ನಿಮ್ಮ ಗುರಿಗಳ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಇರಲಿ. ಉದ್ವೇಗದಿಂದ ನಿರ್ಧಾರಗಳನ್ನು ಕೈಗೊಳ್ಳದೆ ಯೋಚಿಸಿ ಮುಂದುವರಿಯಿರಿ.

Wedding Insurance: ಮದುವೆ ಇನ್ಷೂರೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

2) ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ
 

2) ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ

ಮದುವೆಗೂ ಮುನ್ನ ಶೈಕ್ಷಣಿಕ ಸಾಳ ಅಥವಾ ಯಾವುದಾದರೂ ಬಾಕಿ ಉಳಿದುಕೊಂಡಿರಬಹುದು. ಇದು ಮದುವೆಯ ಬಳಿಕವೂ ನಿಮ್ಮ ಮಾಸಿಕ ಖರ್ಚುಗಳಲ್ಲಿ ಸೇರಿಕೊಳ್ಳುತ್ತದೆ. ಆದರೆ ಮದುವೆಯ ನಂತರ ನಿಮ್ಮ ಒಟ್ಟಾರೆ ಖರ್ಚುಗಳಲ್ಲಿ ಇದು ಹೊರೆಯಾಗಿ ಪರಿಣಮಿಸಬಹುದು. ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾದಾಗ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು.

ಹೀಗಾಗಿ ಮದುವೆಯ ಬಳಿಕ ಈ ಸಾಲ ನಿರ್ವಹಣೆಗೆ ಮಾಸಿಕ ಎಷ್ಟು ಹಣ ಬೇಕಾಗಬಹುದು. ಇತರೆ ಖರ್ಚುಗಳು ಏನು? ಮಕ್ಕಳು ಆದರೆ ಅವರ ಪಾಲನೆ, ಪೋಷಣೆಗೆ ಎಷ್ಟು ಹಣ ಖರ್ಚು ಆಗಬಹುದು? ಉದ್ಯೋಗದಲ್ಲಿದ್ದರೆ ಬರುತ್ತಿರುವ ಸಂಬಳ ಸಾಲುತ್ತದೆಯೇ ಎಂದು ನಿಮ್ಮನ್ನು ನೀವು ಪ್ರಶ್ನಿಸಿ? ಒಂದು ವೇಳೆ ಸಾಲದೆ ಹೋದರೆ ಬೇರೆ ಯಾವ ಆದಾಯ ಮೂಲಗಳನ್ನು ಹುಡುಕಿಕೊಳ್ಳಬೇಕು ಎಂಬುದರ ಕುರಿತು ಈಗಲೇ ಯೋಜನೆ ರೂಪಿಸಿ. ಏಕೆಂದರೆ ಖರ್ಚುಗಳು ಹೇಗೆ ಬೇಕಾದರು ಬಂದು ನಿಮ್ಮ ಮೇಲೆ ಎರಗಬಹುದು. ಅದು ಆರೋಗ್ಯ ವಿಚಾರವಾಗಲಿ ಅಥವಾ ಇತರೆ ಹಣಕಾಸಿನ ವಿಚಾರವಾಗಿರಲಿ.

ಆನ್‌ಲೈನ್‌ನಲ್ಲಿ ಸಿಗಲಿದೆ ಮದುವೆಗೆ ಸಾಲ

3) ಸಂಗಾತಿ ಜೊತೆಗೆ ಪ್ರಾಮಾಣಿಕತೆಯಿಂದಿರಿ

3) ಸಂಗಾತಿ ಜೊತೆಗೆ ಪ್ರಾಮಾಣಿಕತೆಯಿಂದಿರಿ

ಬಲವಾದ ಸಂಬಂಧದ ಅಡಿಪಾಯವೆಂದರೆ ನಂಬಿಕೆ. ಅದರಲ್ಲೂ ಹಣದ ವಿಷಯದಲ್ಲಿ ಇದು ಇರಲೇಬೇಕಾದ ಪ್ರಮುಖ ಅಂಶ. ಮದುವೆಯ ಸಮಯದಲ್ಲಿ ಭರಿಸಬಹುದಾದ ಹಿಂದಿನ ಯಾವುದೇ ಹಣಕಾಸಿನ ತೊಂದರೆಗಳು ಅಥವಾ ಸಾಲಗಳ ಬಗ್ಗೆ ಪ್ರಾಮಾಣಿಕವಾಗಿರಬೇಕು. ಹಣಕಾಸಿನ ವಿಚಾರದಲ್ಲಿ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಿ. ಯಾವುದೇ ಸಾಲಗಳು, ಹಣದ ನಿರ್ವಹಣೆ ಕುರಿತು ಮಾತನಾಡಿ.

4) ಉಳಿತಾಯ ಯೋಜನೆಯನ್ನು ಮಾಡಿ

4) ಉಳಿತಾಯ ಯೋಜನೆಯನ್ನು ಮಾಡಿ

ಮದುವೆಯಾದ ಆರಂಭದಲ್ಲಿ ಸಂಗಾತಿಯನ್ನು ಖುಷಿ ಪಡಿಸಲು ಅಥವಾ ಅವರೆದುರು ದಾರಾಳ ಎಂದು ತೋರಿಸಿಕೊಳ್ಳಲು ಹಣವನ್ನು ಯಾವುದೇ ಮುಂದಾಲೋಚನೆ ಇಲ್ಲದೆ ಖರ್ಚು ಮಾಡುವುದನ್ನು ತಪ್ಪಿಸಿ. ಅಂದರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಆರ್ಥಿಕ ಶಿಸ್ತು ಅಗತ್ಯ.

ಮನೆಯಲ್ಲಿ ಇಬ್ಬರು ದುಡಿಯುತ್ತಿದ್ದರೆ ಸಂಸಾರ ಸುಲಭವಾಗಿ ಅಡೆತಡೆ ಇಲ್ಲದೆ ಮುನ್ನಡೆಯುತ್ತಿರುತ್ತದೆ. ಆದರೆ ಒಬ್ಬರೇ ದುಡಿಯುವಾಗ ಸವಾಲುಗಳು ಎದುರಿಸಬೇಕಾಗಬಹುದು. ಭವಿಷ್ಯದ ದೃಷ್ಟಿಯಿಂದ ನೋಡುವುದಾದರೆ ಉಳಿತಾಯ ಯೋಜನೆಗಳನ್ನು ಅನುಸರಿಸುವುದು ಬಹಳ ಮುಖ್ಯ. ತಿಂಗಳ ಆದಾಯದಲ್ಲಿ ಕನಿಷ್ಟ 20 ಪರ್ಸೆಂಟ್ ಹಣವನ್ನಾದರೂ ಉಳಿಸುವ ಗುರಿಯನ್ನು ಹೊಂದಿರಬೇಕು. ಅಲ್ಲದೆ ದೀರ್ಘಾವಧಿವರೆಗೂ ಉಳಿಸುವ ಬದ್ಧತೆಯನ್ನು ದಂಪತಿಗಳು ಎರಡು ಬದಿಯಿಂದ ಹೊಂದಿರಬೇಕು.

5) ಮಕ್ಕಳು ಯಾವಾಗ? ಅವರ ಬೆಳವಣಿಗೆಗೆ ಇರಲಿ ಒಂದು ಯೋಜನೆ

5) ಮಕ್ಕಳು ಯಾವಾಗ? ಅವರ ಬೆಳವಣಿಗೆಗೆ ಇರಲಿ ಒಂದು ಯೋಜನೆ

ಮಕ್ಕಳು ಯಾವಾಗ ಆಗಬೇಕು ಎಂದು ನಿರ್ಧರಿಸುವುದು ನಿಮ್ಮ ಖಾಸಗಿ ವಿಚಾರವಾಗಿರುತ್ತದೆ. ಆದರೆ ದಂಪತಿಗಳು ಈ ವಿಚಾರವಾಗಿ ನಿರ್ಧಾರ ಕೈಗೊಳ್ಳುವುದರ ಜೊತೆಗೆ ಮಕ್ಕಳ ಪೋಷಣೆ ಮತ್ತು ಅವರ ಶೈಕ್ಷಣಿಕ ವೆಚ್ಚ ಎಷ್ಟಾಗಬಹುದು ಎಂಬ ಪೂರ್ವ ಅಂದಾಜಿರಬೇಕು. ಪ್ರತಿ ವರ್ಷಕ್ಕೆ ಶೈಕ್ಷಣಿಕ ಖರ್ಚುಗಳು ಏರುತ್ತಲೇ ಸಾಗುತ್ತಿವೆ. ನೀವು ಮಕ್ಕಳು ಮಾಡಿಕೊಳ್ಳುವ ಸಮಯದ ವೇಳೆಗೆ ಈ ಖರ್ಚುಗಳು ದುಪ್ಪಟ್ಟಾಗಿಬಿಡಬಹುದು. ಹೀಗಾಗಿ ಮಕ್ಕಳ ವಿದ್ಯಾಭ್ಯಾಸ ಖರ್ಚುಗಳನ್ನು ನಿಭಾಯಿಸಲು ಆರಂಭದಲ್ಲ ದಂಪತಿಗಳು ಯೋಜನೆ ರೂಪಿಸಿಕೊಳ್ಳುವುದು ಉತ್ತಮ ಬೆಳವಣಿಗೆ.

English summary

What Couples Need To Know About Money Before Marriage

These are the tips about what coupes need to know about money before marriage
Story first published: Saturday, January 25, 2020, 18:00 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more