For Quick Alerts
ALLOW NOTIFICATIONS  
For Daily Alerts

Year Ender 2022: 2023ರಲ್ಲಿ ಕೊನೆಯಾಗಲಿದೆ ಈ ಎಫ್‌ಡಿಗಳು

|

ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಲ್ಲಿ ಅಧಿಕ ಲಾಭವನ್ನು ಗಳಿಸಲು ಸಾಧ್ಯ ಹಾಗೂ ಶೀಘ್ರ ಲಾಭವನ್ನು ಪಡೆಯಲು ಸಾಧ್ಯ ಎಂಬುವುದನ್ನು ನೋಡುತ್ತೇವೆ. ಜೊತೆಗೆ ಯಾವುದು ಸುರಕ್ಷಿತ ಹೂಡಿಕೆ ಎಂದು ಕೂಡಾ ನೋಡುತ್ತೇವೆ. ನಾವು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುವಾಗ ನಷ್ಟ ಉಂಟಾದರೆ ಹೇಗೆ ಅಲ್ಲವೇ?. ಹೀಗಿರುವಾಗ ನಮಗೆ ಉತ್ತಮ ಆಯ್ಕೆ ಫಿಕ್ಸಿಡ್ ಡೆಪಾಸಿಟ್ ಅಥವಾ ಎಫ್‌ಡಿ ಆಗಿದೆ.

 

ಇನ್ನು ನಾವೀಗ 2022ರ ಅಂತ್ಯದಲ್ಲಿದ್ದೇವೆ. 2023 ಇನ್ನು ಕೆಲವೇ ದಿನದಲ್ಲಿ ಆರಂಭವಾಗಲಿದೆ, ಅದಕ್ಕೂ ಮುನ್ನ ಹೂಡಿಕೆಗೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ತಿಳಿಯುವುದು ಉತ್ತಮವಲ್ಲವೇ? ಹಲವಾರು ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಹಾಗೆಯೇ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಈ ವರ್ಷದಲ್ಲಿ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಕಡಿಮೆಯಿಂದ ಹಿಡಿದು ದೀರ್ಘಾವಧಿವರೆಗಿನ ಎಫ್‌ಡಿ ಬಡ್ಡಿದರವನ್ನು ಬ್ಯಾಂಕುಗಳು ಹೆಚ್ಚಿಸಿದೆ. ಇದು ರೆಪೋ ದರ ಏರಿಕೆಯಿಂದ ಪ್ರೇರಿತವಾಗಿದೆ.

ಹಾಗೆಯೇ ಹಲವಾರು ಬ್ಯಾಂಕುಗಳು ಹೊಸ ಫಿಕ್ಸಿಡ್ ಡೆಪಾಸಿಟ್ ಅಥವಾ ಎಫ್‌ಡಿ ಯೋಜನೆಯನ್ನು ಆರಂಭಿಸಿದೆ. ಈ ಹೊಸ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಸಾಮಾನ್ಯ ಹೂಡಿಕೆದಾರರಿಗೂ ಅಧಿಕ ಬಡ್ಡಿದರ ಲಭ್ಯವಾಗಲಿದೆ. ಹಾಗೆಯೇ ಈ ವಿಶೇಷ ಯೋಜನೆ 2023ರಲ್ಲೇ ಕೊನೆಯಾಗಲಿದೆ. ಈ ಎಫ್‌ಡಿ ಯೋಜನೆ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ

ಎಸ್‌ಬಿಐ ವಿಕೇರ್ ಹಿರಿಯ ನಾಗರಿಕರಿಗೆ ಟರ್ಮ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತದೆ. ಹಾಗೆಯೇ ಮೆಚ್ಯೂರಿಟಿ ಮೊತ್ತವನ್ನು ರಿನೀವ್ ಮಾಡುವ ಅವಕಾಶವನ್ನು ಕೂಡಾ ಈ ಯೋಜನೆ ನೀಡುತ್ತದೆ. ಹಾಗೆಯೇ ಹೊಸ ಕೊಡುಗೆಗೆ ಅವಕಾಶ ನೀಡುತ್ತದೆ. ಹೆಚ್ಚುವರಿಯಾಗಿ 30 ಬಿಪಿಎಸ್, 50 ಬಿಪಿಎಸ್, 80 ಬಿಪಿಎಸ್ ಲಭ್ಯವಾಗುತ್ತದೆ. ಇದು ಐದು ವರ್ಷದಿಂದ 10 ವರ್ಷದ ಯೋಜನೆಯಾಗಿದೆ. ಮಾರ್ಚ್ 31, 2023ರಂದು ಈ ಯೋಜನೆಯು ಅಂತ್ಯವಾಗಲಿದೆ.

 ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ

ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ

ಖಾಸಗಿ ಬ್ಯಾಂಕುಗಳ ಪೈಕಿ ಅತೀ ದೊಡ್ಡ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಯೋಜನೆಯನ್ನು ಹೊಂದಿದೆ. ಸಿನೀಯರ್ ಸಿಟಿಜನ್ ಕೇರ್ ಎಫ್‌ಡಿ ವಿಶೇಷ ಎಫ್‌ಡಿ ಯೋಜನೆಯಾಗಿದೆ. ಮೇ 18, 2020ರಿಂದ ಈ ಯೋಜನೆಯು ಜಾರಿಯಲ್ಲಿದೆ. ಸೆಪ್ಟೆಂಬರ್ 30, 2022ರಂದು ಈ ಯೋಜನೆಯನ್ನು ಬ್ಯಾಂಕ್ ಸ್ಥಗಿತ ಮಾಡಿತು. ಆದರೆ ಬಳಿಕ ಮತ್ತೆ ಆರಂಭಿಸಲಾಗಿದೆ. ಈ ಎಫ್‌ಡಿ ಯೋಜನೆಯು ಮಾರ್ಚ್ 31, 2023ರಂದು ಕೊನೆಯಾಗಲಿದೆ.

 ಐಸಿಐಸಿಐ ಬ್ಯಾಂಕ್ ಎಫ್‌ಡಿ
 

ಐಸಿಐಸಿಐ ಬ್ಯಾಂಕ್ ಎಫ್‌ಡಿ

ಐಸಿಐಸಿಐ ಬ್ಯಾಂಕ್ ಕೂಡಾ ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಯೋಜನೆಯನ್ನು ಹೊಂದಿದೆ. ಈ ಎಫ್‌ಡಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿ 10 ಮೂಲಾಂಕ ಬಡ್ಡಿದರ ಲಭ್ಯವಾಗಲಿದೆ. ಪ್ರಸ್ತುತ ಎಫ್‌ಡಿ ಬಡ್ಡಿದರ 50 ಬಿಪಿಎಸ್ ಆಗಿದೆ. 5 ವರ್ಷ 1ದಿನದಿಂದ 10 ವರ್ಷದವರೆಗೆ ಯೋಜನೆಗೆ ಈ ಬಡ್ಡಿದರ ಅನ್ವಯವಾಗಲಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಹೂಡಿಕೆಗೆ ಈ ಯೋಜನೆಯಿದೆ. ಮಾರ್ಚ್ 2023ರ ಏಪ್ರಿಲ್ 7ರವರೆಗೆ ಈ ಯೋಜನೆ ಜಾರಿಯಲ್ಲಿದರಲಿದೆ.

 ಪಿಎನ್‌ಬಿ ಬಡ್ಡಿದರ

ಪಿಎನ್‌ಬಿ ಬಡ್ಡಿದರ

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಾಮಾನ್ಯ ಜನರಿಗೆ ಸುಮಾರು ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 7.75ರಷ್ಟು ಬಡ್ಡಿದರ ಲಭ್ಯವಾಗಿದೆ. 80 ವರ್ಷಕ್ಕಿಂತ ಅಧಿಕ ವಯಸ್ಸಿವರಿಗೆ ಶೇಕಡ 8.05ರಷ್ಟು ಬಡ್ಡಿದರ ಲಭ್ಯವಾಗಲಿದೆ. ಇದು 666 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ವಿಶೇಷ ಯೋಜನೆಯಾಗಿದೆ.

English summary

Year Ender 2022: Some Banks Fixed Deposit Plans to End in 2023, Explained in Kannada

Additionally, a number of banks have introduced unique fixed deposit plans that offer investors and senior citizens higher rates. Some Banks Fixed Deposit Plans to End in 2023, Explained in Kannada.
Story first published: Saturday, December 31, 2022, 9:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X