For Quick Alerts
ALLOW NOTIFICATIONS  
For Daily Alerts

2030ರ ವೇಳೆಗೆ 1 ಮಿಲಿಯನ್ ಮಹಿಳೆಯರ ಮಾಲೀಕತ್ವದ ಉದ್ಯಮ

|

ಬೆಂಗಳೂರು, ಜುಲೈ 10: ಉದ್ಯಮಶೀಲತೆಯ ಪ್ರಗತಿಗೆ ಭಾರತದ ಶ್ರೇಷ್ಠ ಮತ್ತು ಮುಂಚೂಣಿಯ ಬಿಸಿನೆಸ್ ಸ್ಕೂಲ್/ಸಂಸ್ಥೆಗಳಲ್ಲಿ ಆಂತ್ರಪ್ರಿನ್ಯೂರ್‌ಶಿಪ್ ಡೆವಲಪ್‌ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಇಡಿಐಐ ಒಂದಾಗಿದೆ. ಉದ್ಯಮ ಮಾಲೀಕರಿಗೆ ವೈವಿಧ್ಯಮಯ ಕೋರ್ಸ್‌ಗಳನ್ನು ಒದಗಿಸುತ್ತಿದೆ. ಈ ಧ್ಯೇಯೋದ್ದೇಶದ ಅಡಿಯಲ್ಲಿ 1 ಮಿಲಿಯನ್ ಹೊಸ ವ್ಯಾಪಾರಗಳು ಮತ್ತು ಉದ್ಯಮಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.

ಇಡಿಐಐ ಡೈರೆಕ್ಟರ್ ಜನರಲ್ ಡಾ.ಸುನಿಲ್ ಶುಕ್ಲಾ ಈ ಉಪಕ್ರಮವನ್ನು ಜುಲೈ 12ರಂದು ಬೆಂಗಳೂರಿನ ಡಿಕನ್‌ಸನ್ ರಸ್ತೆಯ ಮಣಿಪಾಲ್ ಸೆಂಟರ್‌ನಲ್ಲಿರುವ ಹೋಟೆಲ್ ರಾಯಲ್ ಆರ್ಕಿಡ್ ಸೆಂಟ್ರಲ್‌ನಲ್ಲಿ ನಡೆಯಲಿರುವ ಸಿಎಸ್‌ಆರ್ ಲೀರ್ಸ್ ರೌಂಡ್‌ಟೇಬಲ್ ಸಭೆಯಲ್ಲಿ ಉದ್ಘಾಟಿಸಲಿದ್ದಾರೆ.

ಈ ರೌಂಡ್‌ಟೇಬಲ್ ಸಭೆಯ ಮುಖ್ಯ ಉದ್ದೇಶ ತಾಜಾ ಪರಿಸರ-ಸ್ನೇಹಿ ಮತ್ತು ತಾಂತ್ರಿಕವಾಗಿ ಪ್ರೇರಿತ ಪ್ರವೃತ್ತಿಗಳು, ಆವಿಷ್ಕಾರಗಳು ಮತ್ತು ರೂಢಿಗಳನ್ನು ಮಹಿಳೆಯರ ಜೀವನೋಪಾಯಗಳು, ಆದಾಯ ಉತ್ಪಾದನೆ ಮತ್ತು ಉದ್ಯಮಶೀಲತೆಯ ಪ್ರಯತ್ನಗಳನ್ನು ಉತ್ತೇಜಿಸುವುದು. ಇಡಿಐಐ ಈ ಗುರಿಯನ್ನು ಸಾಧಿಸಲು ಸಿಎಸ್‌ಆರ್‌ಗಳು, ಹೆಚ್ಚುವರಿ ನಿಧಿ ಪೂರೈಕೆದಾರರು, ಸರ್ಕಾರದ ಸಂಸ್ಥೆಗಳು ಮತ್ತಿತರೆ ಪಾಲುದಾರರ ಸದೃಢ ಸಹಯೋಗದಿಂದ ಸಾಧ್ಯ ಎಂಬ ಭರವಸೆ ಹೊಂದಿದೆ.

2030ರ ವೇಳೆಗೆ 1 ಮಿಲಿಯನ್ ಮಹಿಳೆಯರ ಮಾಲೀಕತ್ವದ ಉದ್ಯಮ

ಇದು ವಿನೂತನ ಬಗೆಯ, ಶಕ್ತಿಯುತ ಮತ್ತು ವಿಸ್ತಾರವಾಗಬಲ್ಲ ಕಾರ್ಯಕ್ರಮವಾಗಿದ್ದು ಅದು ಇಡೀ ದೇಶವನ್ನು ಒಳಗೊಳ್ಳುತ್ತದೆ. ಇಡಿಐಐ ಯು.ಎನ್.ಎಸ್.ಡಿ.ಜಿ. ಗುರಿಗಳಿಗೆ ಪೂರಕವಾಗಿ ರಾಷ್ಟ್ರೀಯ ಅರ್ಥವ್ಯವಸ್ಥೆಗೆ ಕೊಡುಗೆ ನೀಡುವ ಮತ್ತು ಆದ್ಯತೆಗಳನ್ನು ರೂಪಿಸುಕೊಳ್ಳಲು ಮತ್ತಷ್ಟು ಸುಧಾರಣೆಯ ಭರವಸೆ ಹೊಂದಿದೆ.

ಇಡಿಐಐನ ಡೈರೆಕ್ಟರ್ ಜನರಲ್ ಡಾ.ಸುನಿಲ್ ಶುಕ್ಲಾ, ''ಇಡಿಐಐನ ಈ ಉಪಕ್ರಮವು ದೇಶಾದ್ಯಂತ ಮಹಿಳಾ ಉದ್ಯಮಿಗಳಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸಲಿದೆ. ಇಡಿಐಐ ಉದ್ಯಮಶೀಲತೆಯ ಕೋರ್ಸ್‌ಗಳನ್ನು ಪೂರೈಸಲು ಮಾತ್ರ ಸೀಮಿತವಾಗಿಲ್ಲ, ಇದು ಭಾರತವನ್ನು ವ್ಯಾಪಾರಕ್ಕೆ ಸನ್ನದ್ಧಗೊಳಿಸುತ್ತದೆ. 1ಎಂ2030 ಧ್ಯೇಯವು 1 ಮಿಲಿಯನ್ ಹೊಸ ವ್ಯಾಪಾರಗಳು ಮತ್ತು ಉದ್ಯಮಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು ಅವು ದೇಶದ ಮಹಿಳೆಯರ ಮಾಲೀಕತ್ವ ಹೊಂದಿರಬೇಕು ಮತ್ತು ದೇಶಾದ್ಯಂತ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕೂಡಾ ಒದಗಿಸಬೇಕು'' ಎಂದರು.

English summary

EDII will be establishing 1 million new ‘Women-owned Businesses by 2030

EDII, Entrepreneurship Development Institute of India is one of the country’s top and leading business schools/institutes for the growth of entrepreneurship.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X