For Quick Alerts
ALLOW NOTIFICATIONS  
For Daily Alerts

ಈ ಷೇರಿನ ಮೇಲೆ ಹೂಡಿದ್ದ 1.1 ಲಕ್ಷ ಒಂದೂ ಮುಕ್ಕಾಲು ವರ್ಷದಲ್ಲಿ 1.22 ಕೋಟಿ

|

ಅದೃಷ್ಟವಿದ್ದರೆ, ಜತೆಗಿಷ್ಟು ಪ್ರಯತ್ನ, ಧೈರ್ಯ ಇದ್ದರೆ ಹೀಗೂ ಆಗಬಹುದು. ಏಕೆಂದರೆ, ಷೇರು ಮಾರುಕಟ್ಟೆಯಲ್ಲಿ ಇಂಥ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈಗಿನ ಉದಾಹರಣೆ ಬೆಸ್ಟ್ ಆಗ್ರೋ ಲೈಫ್ ಲಿಮಿಟೆಡ್ ನದು. ಒಂದು ವರ್ಷದಲ್ಲಿ ಈ ಷೇರಿನ ಬೆಲೆ ಬೆಳೆದಿರುವ ವೇಗ ಗಮನಿಸಿದರೆ ಒಂದು ಕ್ಷಣ ಅಚ್ಚರಿ, ಗಾಬರಿ ಒಟ್ಟೊಟ್ಟಿಗೆ ಆಗುತ್ತದೆ.

ಬಿಎಸ್ ಇ ಸೂಚ್ಯಂಕದಲ್ಲಿ ಮಾತ್ರ ವಹಿವಾಟು ನಡೆಸುವ ಬೆಸ್ಟ್ ಆಗ್ರೋಲೈಫ್ ಷೇರಿನ ಸದ್ಯದ ಬೆಲೆ (ಡಿಸೆಂಬರ್ 20, ಶುಕ್ರವಾರ ವಹಿವಾಟು ಕೊನೆಗೊಳಿಸಿದ ಮೇಲೆ) 242 ರುಪಾಯಿ. ನೂರು ಷೇರುಗಳನ್ನು ಖರೀದಿ ಮಾಡಬೇಕು ಅಂದರೆ, 24,200 ರುಪಾಯಿ ಆಗುತ್ತದೆ. ಜನವರಿ 2, 2019ರಲ್ಲಿ ಈ ಷೇರಿನ ಬೆಲೆ ತಲಾ 11 ರುಪಾಯಿ ಇತ್ತು. 100 ಷೇರುಗಳನ್ನು ಖರೀದಿಸಬೇಕು ಅಂದರೆ 1,100 ರುಪಾಯಿ ಅಷ್ಟೇ.

ಈ ಷೇರಿನ ಮೇಲೆ ರು. 5.93 ಲಕ್ಷ ಹೂಡಿದ್ದರೆ ಆರು ವರ್ಷದಲ್ಲಿ ಕೋಟಿ ರುಪಾಯಿಈ ಷೇರಿನ ಮೇಲೆ ರು. 5.93 ಲಕ್ಷ ಹೂಡಿದ್ದರೆ ಆರು ವರ್ಷದಲ್ಲಿ ಕೋಟಿ ರುಪಾಯಿ

ಬೆಸ್ಟ್ ಆಗ್ರೋಲೈಫ್ ನ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿರುವುದು ನವೆಂಬರ್ 19, 2019ರಂದು. ಪ್ರತಿ ಷೇರಿಗೆ 278.05 ರುಪಾಯಿ. ನೂರು ಷೇರುಗಳನ್ನು ಖರೀದಿಸಲು 27,800 ರುಪಾಯಿ. ಹನ್ನೊಂದೂವರೆ ತಿಂಗಳ ಫಾಸಲೆಯಲ್ಲಿ 1,100 ರುಪಾಯಿ ಮೊತ್ತ 27,800 ರುಪಾಯಿ ಆಗಿದೆ.

ಈ ಷೇರಿನ ಮೇಲಿನ 1.1 ಲಕ್ಷ ಒಂದೂ ಮುಕ್ಕಾಲು ವರ್ಷದಲ್ಲಿ 1.22 ಕೋಟಿ

ಏಪ್ರಿಲ್ 3, 2018ರಲ್ಲಿ ಬೆಸ್ಟ್ ಆಗ್ರೋ ಲೈಫ್ ನ ಷೇರಿನ ಬೆಲೆ 2.50 ರುಪಾಯಿ ಇತ್ತು. ಆಗಿನಿಂದ ಈ ವರ್ಷದ ಲೆಕ್ಕ ಹೇಳುವುದಾದರೆ ಯಾರಾದರೂ ಈ ಷೇರಿನ ಮೇಲೆ 1.1 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದರೆ ನವೆಂಬರ್ 2019ಕ್ಕೆ 1,22,32,000 ರುಪಾಯಿ ಆಗಿರುತ್ತಿತ್ತು.

ಹೌದು, ನೀವು ಸರಿಯಾಗಿಯೇ ಓದಿಕೊಂಡಿದ್ದೀರಿ: ಒಂದು ಕೋಟಿ ಇಪ್ಪತ್ತೆರಡು ಲಕ್ಷ ರುಪಾಯಿ. ಹ್ಞಾಂ, ಒಂದು ಮಾತು. ಇಲ್ಲಿ ಕೊಟ್ಟಿರುವುದು ಉದಾಹರಣೆಯೇ ಹೊರತು. ಈ ಷೇರಿನ ಖರೀದಿಗೆ ನಮ್ಮ ಶಿಫಾರಸು ಅಲ್ಲ. ಯಾವುದೇ ಷೇರು ಹೂಡಿಕೆ ಮಾಡುವ ಮುನ್ನ ವಿವಿಧ ಅಂಶಗಳನ್ನು ಪರಿಗಣಿಸಬೇಕು. ಜತೆಗೆ ತಜ್ಞರ ಮಾರ್ಗದರ್ಶನ ಪಡೆದು, ಅಂತಿಮವಾಗಿ ನೀವೇ ನಿರ್ಧರಿಸಬೇಕು.

English summary

1.1 Lakh Rupee Investment On This Share Become 1 Crore Rupees

Agro Life limited share investment of 1.1 lakh rupees become 1 crore rupees within 1 year 7 months. Here is the complete details.
Story first published: Sunday, December 22, 2019, 16:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X