For Quick Alerts
ALLOW NOTIFICATIONS  
For Daily Alerts

ಒಂದೇ ದಿನದಲ್ಲಿ 1 ಲಕ್ಷ ಕೋಟಿ ರು.ಗೂ ಹೆಚ್ಚಾಯಿತು ಈ ಶ್ರೀಮಂತನ ಆಸ್ತಿ

|

ಈ ಸಿರಿವಂತರ ಆಸ್ತಿಗೆ ಒಂದೇ ದಿನಕ್ಕೆ 1300 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ ಆಗಿದೆ. ಸೋಮವಾರ (ಜುಲೈ 20, 2020) ಒಂದೇ ದಿನ ಜೆಫ್ ಬೆಜೋಸ್ ಆಸ್ತಿಯಲ್ಲಿ ಇಷ್ಟು ಮೊತ್ತ ಹೆಚ್ಚಳ ಆಗಿದೆ ಎಂದು ಬ್ಲೂಮ್ ಬರ್ಗ್ ಬಿಲಯನೇರ್ಸ್ ಸೂಚ್ಯಂಕವು ತಿಳಿಸಿದೆ. ಇದಕ್ಕೆ ಕಾರಣ ಆಗಿರುವುದು ಅಮೆಜಾನ್.ಕಾಮ್ ಷೇರಿನ ಬೆಲೆ ಸೋಮವಾರ 7.9% ಏರಿಕೆ ಆಗಿದ್ದು, 2018ರ ಡಿಸೆಂಬರ್ ನಿಂದ ಈಚೆಗೆ ಕಂಡಿರುವ ಅತಿ ದೊಡ್ಡ ಹೆಚ್ಚಳ ಇದು.

ಅಂದ ಹಾಗೆ, 2020ರಲ್ಲಿ ಇಲ್ಲಿಯ ತನಕ ಅಮೆಜಾನ್ ಷೇರಿನ ಬೆಲೆ 73% ಏರಿಕೆ ಆಗಿದೆ. ಅಮೆಜಾನ್ ಸ್ಥಾಪಕ, 56 ವರ್ಷದ ಜೆಫ್ ಬೆಜೋಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಇದೊಂದೇ ವರ್ಷದಲ್ಲಿ ಬೆಜೋಸ್ ಆಸ್ತಿ 7400 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳವಾಗಿದ್ದು, ಒಟ್ಟಾರೆ ಆಸ್ತಿ 18,930 ಕೋಟಿ USD ತಲುಪಿದೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬಫೆಟ್ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬಫೆಟ್ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ

ಆರ್ಥಿಕ ಮಹಾಕುಸಿತದ ನಂತರ ಅಮೆರಿಕದ ಆರ್ಥಿಕತೆ ಪ್ರಸ್ತುತ ಸನ್ನಿವೇಶದಲ್ಲಿ ಬಹಳ ಕೆಟ್ಟದಾಗಿದೆ. ಸದ್ಯಕ್ಕೆ ಬೆಜೋಸ್ ಬಳಿ ಇರುವ ಆಸ್ತಿ ಎಕ್ಸಾನ್ ಮೊಬಿಲ್, ನೈಕ್ ಮತ್ತು ಮೆಕ್ ಡೊನಾಲ್ಡ್ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕಿಂತ ಹೆಚ್ಚಿದೆ. ಇನ್ನು ಬೆಜೋಸ್ ವಿಚ್ಛೇದಿತ ಪತ್ನಿ ಮೆಕ್ ಕೆಂಜಿ ಆಸ್ತಿಯಲ್ಲಿ ಸೋಮವಾರ ಒಂದೇ ದಿನ 4.6 ಬಿಲಿಯನ್ USD ಹೆಚ್ಚಾಗಿದ್ದು, ಸದ್ಯಕ್ಕೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಆಕೆ 13ನೇ ಸ್ಥಾನದಲ್ಲಿ ಇದ್ದಾರೆ.

ಒಂದೇ ದಿನದಲ್ಲಿ 1 ಲಕ್ಷ ಕೋಟಿ ರು.ಗೂ ಹೆಚ್ಚಾಯಿತು ಈ ಶ್ರೀಮಂತನ ಆಸ್ತಿ

ಇನ್ನು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ನಿವ್ವಳ ಆಸ್ತಿ ಮೌಲ್ಯ ಇದೊಂದೇ ವರ್ಷದಲ್ಲಿ ಇಲ್ಲಿಯವರೆಗೆ 1500 ಕೋಟಿ USD ಸೇರ್ಪಡೆಯಾಗಿದೆ.

English summary

13 Billion USD Added To This Rich Person In One Day

13 billion USD wealth added to Amazon founder Jeff Bezos On Monday (July 21, 2020).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X