For Quick Alerts
ALLOW NOTIFICATIONS  
For Daily Alerts

2022ರ ಒಳಗೆ ಪ್ರತಿಯೊಬ್ಬ ಭಾರತೀಯರಿಗೆ ಸ್ವಂತ ಮನೆ

ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ್ ಯೋಜನೆ" (Pradhan Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದವರು, ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ನೌಕರರು ಲ್ಲರೂ ಒಳಗೊಂಡಿದ್ದಾರೆ.

|

ನಮ್ಮ ದೇಶದಲ್ಲಿ ಇಂದಿಗೂ ಸಹ ಸಾವಿರಾರು ಕುಟುಂಬಗಳು ಸ್ವಂತ ಮನೆ ಇಲ್ಲದೆ ಬೀದಿಯಲ್ಲಿವೆ. ಭಾರತದ ಪ್ರತಿ ಕುಟುಂಬಕ್ಕೂ ಮನೆ ಸಿಗುವಂತಾಗಬೇಕು ಎನ್ನುವುದು ನರೇಂದ್ರ ಮೋದಿ ಸರ್ಕಾರದ ಚಿಂತನೆ. ಇದು ವಸತಿ ರಹಿತರಿಗೆ ತುಂಬಾ ಸಂತಸದ ಸುದ್ದಿಯಾಗಿದೆ. ಆ ಆಶಯದ ಸಾಧನೆಗಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ್ ಯೋಜನೆ" (Pradhan Mantri Awas Yojana) ಪ್ರಾರಂಭಿಸಿದೆ.

ಇದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದವರು, ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

2022ರಲ್ಲಿ ಎಲ್ಲರಿಗೂ ಮನೆ

2022ರಲ್ಲಿ ಎಲ್ಲರಿಗೂ ಮನೆ

ಮೋದಿಯವರ ಕನಸಿನಂತೆ 2022ರಲ್ಲಿ ಎಲ್ಲರಿಗೂ ಸ್ವಂತ ಮನೆ ಸಿಗುವಂತಾಗಬೇಕು. ಭಾರತ ಗುಡಿಸಲು ಮುಕ್ತ, ಟೆಂಟ್ ಮುಕ್ತ ದೇಶವಾಗಬೇಕು ಎಂಬ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ತೀವ್ರವಾದ ವೇಗವನ್ನು ನೀಡಲಾಗುತ್ತಿದೆ.

ಮಹಿಳೆಯರ ಹೆಸರಿನಲ್ಲಿ ಮನೆ

ಮಹಿಳೆಯರ ಹೆಸರಿನಲ್ಲಿ ಮನೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳಲಿರುವ ಮನೆಗಳು ಪ್ರ್ತಿ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಇರಲಿವೆ ಎಂದು ತಿಳಿಸಲಾಗಿದೆ.

ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ

ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ

ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಕಾಂಗ್ರೆಸ್ ಮಾಡಿದ ಆರೋಪಕ್ಕೆ ಕೇಂದ್ರ ನಗರಾಭಿವೃದ್ದಿ ಸಚಿವ ಹರ್ದೀಪ್ ಸಿಂಗ್ ಪುರಿ ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ. ಈ ಹಿಂದೆ ನಗರ ಪ್ರದೇಶಗಳಲ್ಲಿದ್ದ 18 ಮಿಲಿಯನ್ ಮನೆಗಳ ಬೇಡಿಕೆಯು ಈಗ 11 ಮಿಲಿಯನ್ ಗೆ ಕುಸಿದಿದೆ ಎಂದು ಅಂಕಿ ಅಂಶ ಸಹಿತ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತಿಲ್ಲ

ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತಿಲ್ಲ

ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಮನೆ ಕಟ್ಟಿಕೊಳ್ಳಲು ಸಾಲ ಸೌಲಭ್ಯ ನೀಡುತ್ತಿಲ್ಲವಾದರಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹಿನ್ನಡೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಆರೋಪ ಮಾಡಿದ್ದರು. ಆದರೆ ಆರೋಪ ತಳ್ಳಿ ಹಾಕಿರುವ ಸಚಿವ ಹರ್ದೀಪ್ ಸಿಂಗ್ ಪುರಿ, ಅವಾಸ್ ಯೋಜನೆ ಸಂಪೂರ್ಣ ಯಶಸ್ಸಿನತ್ತ ಸಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮೋದಿ ಆರೋಪ, ಕರ್ನಾಟಕ ನಿರಾಕರಣೆ

ಮೋದಿ ಆರೋಪ, ಕರ್ನಾಟಕ ನಿರಾಕರಣೆ

ಕರ್ನಾಟಕದಲ್ಲಿ ಈ ಯೋಜನೆಯಡಿಯಲ್ಲಿ ಬಡವರಿಗೆ 3.36 ಲಕ್ಷ ಮನೆಗಳನ್ನು ನೀಡಲಾಗಿದೆ. ಆದರೆ ರಾಜ್ಯ ಸರಕಾರ ಕೇವಲ 38,000 ಮನೆಗಳನ್ನು ಮಾತ್ರ ನಿರ್ಮಿಸಿದೆ ಎಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿಯ ರಾಲಿಯಲ್ಲಿ ಮೋದಿ ಹೇಳಿದ್ದಾರೆ.
2013-18ರ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಲು ಸರಕಾರ ಭರವಸೆ ನೀಡಿದೆ. ಅದರಲ್ಲಿ ಈಗಾಗಲೇ 13.71 ಲಕ್ಷ ಮನೆಗಳನ್ನು ಪೂರ್ಣಗೊಳಿಸಿ 14,300 ಕೋಟಿ ರೂ. ಖರ್ಚು ಮಾಡಿದೆ ಎಂದಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ನಗರ ಮತ್ತು ಗ್ರಾಮೀಣ ಬಡವರಿಗೆ 15 ಲಕ್ಷ ಮನೆಗಳ ನಿರ್ಮಾಣವನ್ನು ಕರ್ನಾಟಕದಲ್ಲಿ ಪೂರ್ಣಗೊಳಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ರಾಜ್ಯದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಐ) ಅಡಿಯಲ್ಲಿ ಬಡವರಿಗೆ ವಸತಿ ಯೋಜನೆಯನ್ನು ಜಾರಿಗೆ ತರಲು ಕರ್ನಾಟಕ ವಿಫಲವಾಗಿದೆ ಎಂಬ ಮೋದಿಯವರ ಆರೋಪವನ್ನು ಕರ್ನಾಟಕ ಸರ್ಕಾರ ನಿರಾಕರಿಸಿದೆ.

 ಇಂಪ್ಲಿಮೆಂಟ್ ಮಾಡುವವರು ಯಾರು?

ಇಂಪ್ಲಿಮೆಂಟ್ ಮಾಡುವವರು ಯಾರು?

ಕೇಂದ್ರ ಸರ್ಕಾರದ ಈ ಯೋಜನೆಯನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್(NHB), BLC(beneficiary led construction) ಘಟಕ ಮತ್ತು ಹುಡ್ಕೊ(HUDCO) ಸಂಸ್ಥೆಗಳು ಕಾರ್ಯಗತಗೊಳಿಸಲಿವೆ

English summary

Every Indian To Get A Home By 2022, Promises Govt

The Pradhan Mantri Awas Yojana is a "roaring success" and the government's aim of housing for all by 2022 will be achieved, Urban Development Minister Hardeep Singh Puri said, rejecting a Congress member's claim of the scheme being a failure in the Lok Sabha.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X