ಭಾರತದ ಟಾಪ್ 10 ಅತಿ ಶ್ರೀಮಂತ ಮುಖ್ಯಮಂತ್ರಿಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಭಾರತದ ಒಟ್ಟು 25 ಮುಖ್ಯಮಂತ್ರಿಗಳು ರೂ. 1 ಕೋಟಿಗಿಂತ ಮಿಗಿಲಾದ ಆಸ್ತಿಯನ್ನು ಘೋಷಿಸಿದ್ದಾರೆ. 29 ರಾಜ್ಯಗಳ ಮುಖ್ಯಮಂತ್ರಿಗಳು ಸಲ್ಲಿಸಿದ ಸ್ವಯಂ ಪ್ರಮಾಣಿತ ಅಫಿಡವಿಟ್ ಗಳ ವಿಶ್ಲೇಷಣೆ ಮೇರೆಗೆ, ಸುಮಾರು ರೂ. 177 ಕೋಟಿ ಮೌಲ್ಯದ ಆಸ್ತಿ ಘೋಷಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾರತದ ಅತಿ ಶ್ರೀಮಂತ ಮುಖ್ಯಮಂತ್ರಿ ಎನಿಸಿದ್ದಾರೆ.

  ಈ ವಿಶ್ಲೇಷಣೆಯ ಆಧಾರದ ಮೇಲೆ ಪ್ರಜಾಸತ್ತೀಯ ಸುಧಾರಣೆಗಳ ಸಂಘ (Association of Democratic Reforms) ಹೊರ ತಂದಿರುವ ವರದಿಯ ಪ್ರಕಾರ ಇಬ್ಬರು ಮುಖ್ಯಮಂತ್ರಿಗಳು ರೂ. 100 ಕೋಟಿಗೂ ಮಿಗಿಲಾದ ಆಸ್ತಿ ಘೋಷಿಸಿದ್ದರೆ, ಆರು ಮುಖ್ಯಮಂತ್ರಿಗಳು 10 ರಿಂದ 50 ಕೋಟಿ ರೂ. ಗಳ ನಡುವೆ, 17 ಮುಖ್ಯಮಂತ್ರಿಗಳು ರೂ. 1 ರಿಂದ 10 ಕೋಟಿ ನಡುವಿನ ಸಂಪತ್ತು ಹಾಗೂ 6 ಮುಖ್ಯಮಂತ್ರಿಗಳು 6 ಕೋಟಿಗಿಂತ ಕಡಿಮೆ ಆಸ್ತಿ ಘೋಷಿಸಿದ್ದಾರೆ.

   

  ರೂ. 26 ಲಕ್ಷದಷ್ಟು ಸಂಪತ್ತು ಹೊಂದಿರುವ ತ್ರಿಪುರದ ಸಿ.ಎಂ. ಮಾನಿಕ್ ಸರ್ಕಾರ್ ಪಟ್ಟಿಯಲ್ಲಿ ಅತ್ಯಂತ ಬಡ ಮುಖ್ಯಮಂತ್ರಿಯಾಗಿದ್ದಾರೆ. ರೂ. 30 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಆಸ್ತಿ ಹೊಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಈ ಪಟ್ಟಿಯಲ್ಲಿರುವ ಸ್ವಾರಸ್ಯಕರ ಹೆಸರು. ಇವರ ನಂತರ ರೂ. 56 ಲಕ್ಷದಷ್ಟು ಆಸ್ತಿ ಘೋಷಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮಫ್ತಿ ಹೆಸರು ಬರುತ್ತದೆ. ಪ್ರಧಾನ ಮಂತ್ರಿ ರೋಜಗಾರ್ ಯೋಜನೆ 2018: ಅರ್ಹತೆ - ಸೌಲಭ್ಯಗಳೇನು?

  ಭಾರತದ 10 ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ ನೋಡಿ..

  1. ಚಂದ್ರಬಾಬು ನಾಯ್ಡು (ರೂ. 177.48 ಕೋಟಿ)

  ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರೂ. 177.48 ಕೋಟಿ ಸಂಪತ್ತಿನೊಂದಿಗೆ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ADR ವರದಿಯಂತೆ ಇದರಲ್ಲಿ ರೂ. 134.8 ಕೋಟಿಯಷ್ಟು ಚರ ಆಸ್ತಿ ಘೋಷಿಸಿದ್ದರೆ, ಸ್ಥಿರ ಆಸ್ತಿ ರೂ. 42.68 ಕೋಟಿಯಷ್ಟಿದೆ. ಇತ್ತೀಚಿಗೆ ನಾಯ್ಡುರವರು ಆಂಧ್ರ ಪ್ರದೇಶದ ಬಜೆಟ್ ಹಂಚಿಕೆಯ ವಿಚಾರದಲ್ಲಿ ಭಾಜಪವನ್ನು ವಿರೋಧಿಸಿದ್ದರು. ಅವರು NDA ದಿಂದ ಹೊರ ಬರುವ ಬೆದರಿಕೆ ಕೂಡ ಹಾಕಿದ್ದರು.  ಭಾರತದ 10 ಶ್ರೀಮಂತ ನಗರಗಳು ಯಾವುವು ಗೊತ್ತೆ?

  2. ಪೆಮಾ ಖಂಡು (ರೂ. 129.5 ಕೋಟಿ)

  ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ರೂ. 103 ಕೋಟಿ ಚರ ಆಸ್ತಿ ಹಾಗೂ ರೂ. 26 ಕೋಟಿ ಸ್ಥಿರ ಆಸ್ತಿಯೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

  3. ಅಮರಿಂದರ್ ಸಿಂಗ್ (ರೂ. 48.31 ಕೋಟಿ)

  ಕಳೆದ ವರ್ಷ ರಾಜ್ಯದಲ್ಲಿ ಮರು ಅಧಿಕಾರಕ್ಕೆ ಬಂದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶ್ರೀಮಂತ ಮುಖ್ಯಮಂತ್ರಿಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ರೂ. 6 ಕೋಟಿಯಷ್ಟು ಚರ ಆಸ್ತಿ ಮತ್ತು 42 ಕೋಟಿಯಷ್ಟು ಸ್ಥಿರ ಆಸ್ತಿ ಹೊಂದಿದ್ದಾರೆ.

  4. ಕೆ. ಚಂದ್ರಶೇಖರ್ ರಾವ್ (ರೂ. 15.51 ಕೋಟಿ)

  ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾದ ಇವರು ಕೆಸಿಆರ್ ಎಂಬ ಜನಪ್ರಿಯ ಹೆಸರಿನಿಂದ ಕರೆಯಲ್ಪಡುತ್ತಾರೆ. ಕೆಂದ್ರೀಯ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಕ್ಕೆ ಸಲ್ಲಬೇಕಾಗಿರುವ ನಿಧಿ ಹಂಚಿಕೆಯ ಪ್ರಮಾಣ ಪಡೆಯುವಲ್ಲಿ ಇವರು ಮಹತ್ವವಾದ ಪಾತ್ರ ವಹಿಸಿದ್ದಾರೆ.

  5. ಮುಕುಲ್ ಸಂಗ್ಮಾ (ರೂ. 14.50 ಕೋಟಿ)

  ಮೇಘಾಲಯದ ಮುಖ್ಯಮಂತ್ರಿಯಾದ ಇವರು ನಾಲ್ಕು ಬಾರಿ ರಾಜ್ಯ ವಿಧಾನಸಭಾ ಸದಸ್ಯರಾಗಿದ್ದಾರೆ. ಇವರು ಕಳೆದ ಹತ್ತು ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  6. ಸಿದ್ದರಾಮಯ್ಯ (ರೂ. 13.61 ಕೋಟಿ)

  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಈ ವರ್ಷದಲ್ಲಿ ಬರುವ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಪರ ಪ್ರಚಾರ ಅಭಿಯಾನದಲ್ಲಿ ಬಿಡುವಿಲ್ಲದೆ ನಿರತರಾಗಿದ್ದಾರೆ. ಈ ಮೊದಲು ಉಪಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ ಮತ್ತು ರಾಜ್ಯದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದ್ದಾರೆ.

  7. ನವೀನ್ ಪಟ್ನಾಯಕ್ (ರೂ. 12.06 ಕೋಟಿ)

  ಒರಿಸ್ಸಾದ ಮುಖ್ಯಮಂತ್ರಿಯಾದ ಇವರು ರಾಜಕಾರಣಿಯಾಗಿರುವುದರ ಜೊತೆಗೆ ನಾಲ್ಕು ಪುಸ್ತಕಗಳನ್ನು ಪ್ರಕಾಶಿಸಿರುವ ಬರಹಗಾರರೂ ಹೌದು. ಪಟ್ನಾಯಕ್ ರವರು ತಮ್ಮ ಪಕ್ಷವು ರಾಜ್ಯದಲ್ಲಿ, ಮೋದಿ ಅಲೆಯ ವಿರುದ್ಧ ಸಾಗಿ, ರಾಜ್ಯದ 21 ಲೋಕಸಭಾ ಕ್ಷೇತ್ರಗಳಲ್ಲಿ 20 ಸ್ಥಾನಗಳನ್ನೂ, 147 ವಿಧಾನಸಭಾ ಸ್ಥಾನಗಳಲ್ಲಿ 117 ಸ್ಥಾನಗಳನ್ನೂ ಗಳಿಸುವಂತೆ ಮಾಡಲು ಸಫಲರಾಗಿದ್ದಾರೆ.

  8. ಪವನ್ ಕುಮಾರ್ ಚಾಮ್ಲಿಂಗ್ (ರೂ. 10.70 ಕೋಟಿ)

  ಸಿಕ್ಕಿಂ ಮುಖ್ಯಮಂತ್ರಿಯಾದ ಇವರು, ಸಿಕ್ಕಿಂ ಡೆಮೋಕ್ರಾಟಿಕ್ ಫ್ರಂಟ್ ಪಕ್ಷದ ಸ್ಥಾಪಕ ಅಧ್ಯಕ್ಷರು. ಇವರ ಪಕ್ಷವು 1994 ರಿಂದ ಸತತ ಐದು ಅವಧಿಗೆ ರಾಜ್ಯ ಆಳುತ್ತಿದೆ. ನೇಪಾಳಿ ಭಾಷೆಯ ಲೇಖಕರೂ ಆಗಿರುವ ಇವರು ಚಾಮ್ಲಿಂಗ್ ಕಿರಣ್ ಎಂಬ ಉಪನಾಮದಿಂದ ಬರೆಯುತ್ತಾರೆ.

  9. ವಿ ನಾರಯಣಸ್ವಾಮಿ (ರೂ. 9.65 ಕೋಟಿ)

  ಹಿರಿಯ ಕಾಂಗ್ರೆಸ್ ನಾಯಕರಾದ ನಾರಾಯಣಸ್ವಾಮಿ, ಪುದುಚೇರಿ ಮುಖ್ಯಮಂತ್ರಿಯಾಗಿ 2016 ಅಧಿಕಾರ ವಹಿಸಿಕೊಂಡರು. ಇವರು ಹಿಂದೆ ಕೇಂದ್ರದಲ್ಲಿ ಯು.ಪಿ.ಏ. ಆಡಳಿತ ಅವಧಿಯಲ್ಲಿ, ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

  English summary

  10 richest chief ministers in india

  A total of 25 chief ministers in India have declared assets of over Rs 1 crore, with Andhra Pradesh CM Chandrababu Naidu emerging as the richest chief minister of India with assets worth over Rs 177 crore,
  Story first published: Saturday, February 24, 2018, 11:04 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more