For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ 2018: ಅರ್ಹತೆ - ಸೌಲಭ್ಯಗಳೇನು?

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ 2018 (Pradhan Mantri Rojgar Protsahan Yojana) ಎಂಬ ಹೆಸರಿನ ಈ ಯೋಜನೆಯನ್ನು ಇಂದಿನ ಜನಾಂಗದ ಯುವಕರಿಗಾಗಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿದೆ.

|

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ 2018 (Pradhan Mantri Rojgar Protsahan Yojana(PMRPY) ಎಂಬ ಹೆಸರಿನ ಈ ಯೋಜನೆಯನ್ನು ಇಂದಿನ ಜನಾಂಗದ ಯುವಕರಿಗಾಗಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿದೆ. ಉದ್ಯೋಗ ನೀಡುವ ಉದ್ಯೋಗದಾತರಿಗೆ ಭಾರತ ಸರ್ಕಾರದ ವತಿಯಿಂದ 8.33% ಪ್ರೋತ್ಸಾಹಧನ (EPS) ನೀಡಲಾಗುತ್ತದೆ. ಈ ಯೋಜನೆಯಲ್ಲಿ ಎರಡು ಬಗೆಯ ಪ್ರಯೋಜನಗಳಿವೆ.

 

ಮೊದಲನೆಯದು ಉದ್ಯೋಗದಾತ ತನ್ನ ಉದ್ಯಮದಲ್ಲಿ ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ನೀಡುವ ಹೆಚ್ಚು ಪ್ರೋತ್ಸಾಹಧನ ಪಡೆಯಬಹುದು ಹಾಗೂ ಹೆಚ್ಚು ಜನರು ಉದ್ಯೋಗಗಳನ್ನು ಪಡೆಯುವಂತಾಗಿ ಅವರ ಭವಿಷ್ಯವೂ ಉಜ್ವಲಗೊಳ್ಳುತ್ತದೆ. ಈ ಉದ್ಯೋಗಿಗಳು ಸಂಘಟಿತ ವಲಯದಲ್ಲಿ ಸಾಮಾಜಿಕ ಸುರಕ್ಷಾ ಪ್ರಯೋಜನಗಳಿಗೂ ಅರ್ಹರಾಗುವ ಮೂಲಕ ಉದ್ಯೋಗದಲ್ಲಿ ಭದ್ರತೆ ಪಡೆಯುತ್ತಾರೆ. (ಸರ್ಕಾರಿ ಯೋಜನೆಗಳು)

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ

ನಮ್ಮ ಭಾರತದಲ್ಲಿ ಇಂದಿಗೂ ದೊಡ್ಡ ಸಂಖ್ಯೆಯ ಯುವಜನತೆ ಇನ್ನೂ ನಿರುದ್ಯೋಗಿಗಳಾಗಿದ್ದಾರೆ. ಈ ಕೊರತೆಯನ್ನು ಮನಗಂಡ ಸರ್ಕಾರ ಈ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಶಿಕ್ಷಣ ಮುಗಿಸಿ ಹೊರ ಬಂದ ಯುವಕರು ಹಾಗೂ ಯುವತಿಯರಿಗೆ ಆದ್ಯತೆ ನೀಡಲಾಗುತ್ತದೆ. ಈ ಯುವಜನರಿಗೆ ಮೊದಲು ಕೆಲಸಕ್ಕೆ ಅಗತ್ಯವಿರುವ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಮಾತ್ರವಲ್ಲ ಒಂದು ವೇಳೆ ಇವರು ತಮ್ಮದೇ ಉದ್ಯೋಗ ಪ್ರಾರಂಭಿಸಲು ಇಚ್ಛಿಸಿದರೆ ಸ್ವ ಉದ್ಯೋಗಕ್ಕಾಗಿ ಸಾಲದ ನೆರವನ್ನೂ ನೀಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಸುಲಭವಾಗಿಸಲು ಕೇಂದ್ರ ಸರ್ಕಾರ ಆನ್ಲೈನ್ ಮೂಲಕ ಈ ಪ್ರಕ್ರಿಯೆ ಸಾಧ್ಯವಾಗುವಂತೆ ಕ್ರಮ ಕೈಗೊಂಡಿದೆ. ನಿರುದ್ಯೋಗಿಗಳು ಈ ಪ್ರಯೋಜನವನ್ನು ಪಡೆಯಲು ಕನಿಷ್ಟ ಮೆಟ್ರಿಕ್ಯುಲೇಶನ್ ಅಥವಾ ಹತ್ತನೆಯ ತರಗತಿ ತೇರ್ಗಡೆಯಾಗಿರಬೇಕು. ಆದರೆ ಕೇವಲ ಆಯ್ದ ಅರ್ಜಿದಾರರಿಗೆ ಮಾತ್ರ ತರಬೇತಿ ಮತ್ತು ಸಾಲವನ್ನು ಒದಗಿಸಲಾಗುತ್ತದೆ. ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇರುವ ವಯೋಮಿತಿ 18 ರಿಂದ 35 ವರ್ಷಗಳು. ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಯೋಜನೆಯ ಉದ್ದೇಶಗಳು
 

ಯೋಜನೆಯ ಉದ್ದೇಶಗಳು

ಈ ಯೋಜನೆಯಲ್ಲಿ ಹಲವಾರು ಉದ್ದೇಶಗಳಿವೆ. ಮೊದಲನೆಯದಾಗಿ ಗ್ರಾಮಾಂತರ ಪ್ರದೇಶದ ನಿರುದ್ಯೋಗಿಗಳು ತಮ್ಮ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವುದಾಗಿದೆ.
ಶಿಕ್ಷಣ ಪಡೆದಿರುವ ನಿರುದ್ಯೋಗಿಗಳಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ಯುವಜನರಿಗೆ ಉತ್ತೇಜನ ನೀಡುವುದು.
ಶಿಕ್ಷಣ ಪಡೆದ ಯುವಜನತೆ ತಮ್ಮ ಭವಿಷ್ಯವನ್ನು ತಮ್ಮ ಇಷ್ಟದ ಕ್ಷೇತ್ರದಲ್ಲಿ ಗಟ್ಟಿಗೊಳಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಈ ಯೋಜನೆಯಿಂದ ನಿರುದ್ಯೋಗಿಗಳು ಉದ್ಯೋಗಗಳನ್ನೂ ಪಡೆಯಬಹುದು. 'ಮುದ್ರಾ ಬ್ಯಾಂಕ್' ಪ್ರಯೋಜನಗಳೇನು?

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ (PMRY) ಅರ್ಹತೆ

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ (PMRY) ಅರ್ಹತೆ

ವಯೋಮಿತಿ:
18 ರಿಂದ 35 ವರ್ಷಗಳು.
ಅರ್ಜಿದಾರರ ಕುಟುಂಬದ ವರಮಾನ: ರೂ. 40,000 ಅಥವಾ ಅದಕ್ಕೂ ಕಡಿಮೆ
ಕನಿಷ್ಟ ವಿದ್ಯಾರ್ಹತೆ:
ಹತ್ತನೆಯ ತರಗತಿ ಪಾಸಾಗಿರಬೇಕು
ಅರ್ಜಿದಾರ ಶಿಕ್ಷಣ ಪಡೆದಿರಬೇಕು ಹಾಗೂ ಎಲ್ಲಿಯೂ ಉದ್ಯೋಗದಲ್ಲಿರಬಾರದು.
ಅರ್ಜಿದಾರ ಅರ್ಜಿ ಸಲ್ಲಿಸುವ ಸ್ಥಳದಲ್ಲಿ ಕನಿಷ್ಟ ಮೂರು ವರ್ಷಗಳ ಕಾಲ ವಾಸವಾಗಿರಬೇಕು.
ITI ತೇರ್ಗಡೆಯಾಗಿರುವವರು ತರಬೇತಿಯನ್ನು ಪಡೆಯಬಹುದು.

11 ಲಕ್ಷ ಫಲಾನುಭವಿಗಳ ಆಯ್ಕೆ

11 ಲಕ್ಷ ಫಲಾನುಭವಿಗಳ ಆಯ್ಕೆ

ಈ ಯೋಜನೆಯಲ್ಲಿ ಸುಮಾರು ಹನ್ನೊಂದು ಲಕ್ಷ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸರ್ಕಾರ 33% EPS ರೂಪದಲ್ಲಿ ಒದಗಿಸಲಿದೆ.
ಯೋಜನೆಯಲ್ಲಿ ಎರಡು ಬಗೆಯ ಲಾಭಗಳಿವೆ
ಉದ್ಯೋಗದಾತರು ಪ್ರೋತ್ಸಾಹಧನವನ್ನು ಪಡೆಯುತ್ತಾರೆ ಹಾಗೂ ಹೆಚ್ಚು ನಿರುದ್ಯೋಗಿಗಳಿಗೆ ನೆಲೆ ಸಿಕ್ಕಂತಾಗುತ್ತದೆ. 'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?

ಅರ್ಜಿ ಸ್ವೀಕಾರ

ಅರ್ಜಿ ಸ್ವೀಕಾರ

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ 2017-2018
ಈ ಯೋಜನೆಗೆ ಸಲ್ಲಿಸಲಾದ ಅರ್ಜಿಗಳನ್ನು ದೆಹಲಿಯ ಉಪ ಕಮೀಶನರ್ ರವರ ಕಾರ್ಯಸ್ಥಳದಲ್ಲಿ ಸ್ವೀಕರಿಸಲಾಗುತ್ತದೆ. ಪ್ರತಿ ಜಿಲ್ಲೆಯ PMRY ಏಜೆಂಟರು ಗ್ರಾಮಾಂತರ ಸ್ಥಳಗಳ ಏಜೆಂಟರನ್ನು ನಿಯಂತ್ರಿಸುತ್ತಾರೆ ಹಾಗೂ ಕಾರ್ಯವಿಧಾನವನ್ನು ಪರಿಶೀಲಿಸುತ್ತಾರೆ. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಯೋಜನೆಯ ಲಾಭಗಳು

ಯೋಜನೆಯ ಲಾಭಗಳು

ಆಯ್ಕೆಯಾದವರು 15% ರಿಂದ 20% ರಷ್ಟು ಸಬ್ಸಿಡಿಯನ್ನು ಪಡೆಯುತ್ತಾರೆ.
ಹಲವು ಸಣ್ಣ ಉದ್ದಿಮೆಗಳಿಗೆ ರೂ. 1 ಲಕ್ಷದ ನೆರವು ದೊರಕುತ್ತದೆ.
ಇತರ ಚಟುವಟಿಕೆಗಳಿಗೆ ಸುಮಾರು 2 ಲಕ್ಷ ರೂ ನೆರವು ದೊರಕುತ್ತದೆ.
ಸಣ್ಣ ಉದ್ದಿಮೆ ಪ್ರಾರಂಭಿಸಲು ಸುಮಾರು ರೂ. 10 ಲಕ್ಷ ಸಾಲದ ನೆರವು ದೊರಕುತ್ತದೆ.

ಅರ್ಜಿ ಡೌನ್ಲೋಡ್ ಮಾಡಿಕೊಳ್ಳುವುದು ಹಾಗು ಆನ್ಲೈನ್ ಮೂಲಕ ಸಲ್ಲಿಸುವುದು ಹೇಗೆ?

ಅರ್ಜಿ ಡೌನ್ಲೋಡ್ ಮಾಡಿಕೊಳ್ಳುವುದು ಹಾಗು ಆನ್ಲೈನ್ ಮೂಲಕ ಸಲ್ಲಿಸುವುದು ಹೇಗೆ?

ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ ಯುವಕರು ಈ ಯೋಜನೆಯ ಅಧಿಕೃತ ಅಂತರ್ಜಾಲ ತಾಣ https://pmrpy.gov.in/ ಮೂಲಕ ಹೆಚ್ಚಿನ ವಿವರ ಹಾಗೂ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಪರ್ಯಾಯವಾಗಿ ಈ ಅರ್ಜಿ ಇರುವ ಕೊಂಡಿಯನ್ನು ಕ್ಲಿಕ್ಕಿಸುವ ಮೂಲಕ ಅರ್ಜಿಯನ್ನು ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
"Online Application Form Download" ನ ಕೊಂಡಿ ಹೀಗಿದೆ: http://forms.gov.in/TN/7239.pdf

English summary

Pradhan Mantri Rojgar Yojana 2018: Eligibility and Benifits

Pradhan Mantri Rojgar Protsahan Yojana(PMRPY) Plan Scheme has been designed to incentivise employers for generation of new employment, where Government of India will be paying the 8.33% EPS contribution of the employer for the new employment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X