For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ 10 ಅತೀ ಶ್ರೀಮಂತ ಖ್ಯಾತ ಸೆಲೆಬ್ರೆಟಿಗಳು

ಶ್ರೀಮಂತಿಕೆಯನ್ನು ಭೂಮಿ, ಮನೆಗಳು, ವಾಹನಗಳು, ಕಲಾಕೃತಿಗಳು ಮೊದಲಾದ ಸಂಪತ್ತಿನ ಅಂದಾಜು ಬೆಲೆಗಳ ಮಾನದಂಡದ ಮೇಲೆ ನಿರ್ಧರಿಸಲಾಗುತ್ತದೆ.

|

ವಿವಿಧ ಕ್ಷೇತ್ರಗಳಲ್ಲಿ ಅತೀ ಶ್ರೀಮಂತರು ಎನಿಸಿಕೊಂಡಿರುವವರ ಪಟ್ಟಿಯನ್ನು ಅಮೆರಿಕಾದ ವಾಣಿಜ್ಯ ನಿಯತಕಾಲಿಕೆ ಫೋರ್ಬ್ಸ್ ಪ್ರತಿ ವರ್ಷವೂ ಬಿಡುಗಡೆಗೊಳಿಸುತ್ತದೆ. ಶ್ರೀಮಂತಿಕೆಯನ್ನು ಭೂಮಿ, ಮನೆಗಳು, ವಾಹನಗಳು, ಕಲಾಕೃತಿಗಳು ಮೊದಲಾದ ಸಂಪತ್ತಿನ ಅಂದಾಜು ಬೆಲೆಗಳ ಮಾನದಂಡದ ಮೇಲೆ ನಿರ್ಧರಿಸಲಾಗುತ್ತದೆ.
ಫೋರ್ಬ್ಸ್ ಇಂಡಿಯಾ ಕೂಡಾ ಭಾರತದಲ್ಲಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಗಳನ್ನು ಬಿಡುಗಡೆ ಮಾಡಿದೆ. 2017ರ ಡಿಸೆಂಬರ್ ತಿಂಗಳಲ್ಲಿ ದೇಶದ ಹತ್ತು ಅತ್ಯಂತ ಶ್ರೀಮಂತ ಖ್ಯಾತನಾಮ ಸೆಲೆಬ್ರೆಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ್ ಕುರಿತು ನಾವಿಲ್ಲಿ ಅವಲೋಕಿಸಲಿದ್ದೇವೆ.. ಅಬ್ಬಾ..! ಇವು ಭಾರತದ ಸಾರ್ವಕಾಲಿಕ ಅತಿಹೆಚ್ಚು ವೆಚ್ಚದ ಸಿನಿಮಾಗಳು

 

10. ರಣವೀರ್ ಸಿಂಗ್, 32

10. ರಣವೀರ್ ಸಿಂಗ್, 32

ಗರಿಷ್ಟ ಮೊತ್ತದ ಸಂಭಾವನೆಯನ್ನು ಪಡೆಯುವ ಭಾರತದ ನಟರುಗಳ ಪೈಕಿ ರಣವೀರ್ ಸಿಂಗ್ ಸಹ ಒಬ್ಬರು. ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸುವಂತಹ ಅನೇಕ ಸೂಪರ್ ಹಿಟ್ ಚಲನಚಿತ್ರಗಳ ಗಳಿಕೆಯ ಹೊರತಾಗಿ, ರಣವೀರ್ ಸಿಂಗ್ ಅವರು ಬ್ರಾಂಡ್ ಅಂಬಾಸಿಡರ್ ಆಗಿರುವ ಹದಿನೇಳು ವಿವಿಧ ಕಂಪನಿಗಳಿಂದಲೂ ಆದಾಯ ಗಳಿಸಿದ್ದಾರೆ. 2017 ರಲ್ಲಿ ರಣವೀರ್ ಅವರ ಆದಾಯ ರೂ. 62.63 ಕೋಟಿಗಳಷ್ಟಾಗಿದ್ದಿತು. ಆದರೆ 2016ರಲ್ಲಿ ಅವರು ಗಳಿಸಿದ್ದ ರೂ. 67.41 ಕೋಟಿ ಆದಾಯಕ್ಕೆ ಹೋಲಿಸಿದರೆ, ಗತ ವರ್ಷದ ಅವರ ಆದಾಯವು 4.78 ಕೋಟಿ ರೂಪಾಯಿಗಳಷ್ಟು ಕಡಿಮೆಯಾಯಿತೆಂದೇ ಹೇಳಬಹುದು. ಬ್ಯಾಂಡ್ ಬಾಜಾ ಬಾರಾತ್ ಎಂಬ ಚೊಚ್ಚಲ ಚಿತ್ರದೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆಗೈದ ರಣವೀರ್ ಸಿಂಗ್ 2013 ಹಾಗೂ 2015 ರ ನಡುವೆ ಪ್ರವರ್ಧಮಾನಕ್ಕೆ ಬಂದರು. 2029 ರವರೆಗೆ ಮೋದಿ ಆಳ್ವಿಕೆ ನಡೆಸುತ್ತಾರೆ! 

9. ಹೃತಿಕ್ ರೋಶನ್, 44
 

9. ಹೃತಿಕ್ ರೋಶನ್, 44

ನಲವತ್ತರ ಹರೆಯದಲ್ಲಿರುವ ಹೃತಿಕ್ ಚಲನಚಿತ್ರ ನಿರ್ದೇಶಕರಾದ ರಾಕೇಶ್ ರೋಶನ್ ಅವರ ಮಗ. ಹೃತಿಕ್ ರೋಶನ್ ಅವರು ಸ್ಟೇಜ್ ಶೋ ಗಳನ್ನು, ಟೆಲಿವಿಷನ್ ಶೋಗಳನ್ನು ನಡೆಸಿಕೊಡುತ್ತಾರೆ ಹಾಗೂ ಜೊತೆಗೆ ಹೆಚ್ಆರ್ ಎಕ್ಸ್ (HRx) ಎಂಬ ಹೆಸರಿನ ಸ್ವಂತ ತಯಾರಿಕೆಯ ಬ್ರಾಂಡೆಡ್ ಉಡುಪುಗಳನ್ನು ಬಿಡುಗಡೆಗೊಳಿಸಿದ್ದಾರೆ. 2017 ರಲ್ಲಿ ಅವರ ಆದಾಯವು 63.12 ಕೋಟಿ ರೂಪಾಯಿಗಳಷ್ಟಾಗಿತ್ತು. ಆದಾಗ್ಯೂ, 2016 ರ ರೂ. 90.25 ಕೋಟಿ ಆದಾಯಕ್ಕೆ ಹೋಲಿಸಿದರೆ, ಕಳೆದ ವರ್ಷದ ಅವರ ಆದಾಯವು ರೂ. 27.13 ಕೋಟಿಗಳಷ್ಟು ಕಡಿಮೆಯಾಗಿತ್ತೆಂದೇ ಹೇಳಬಹುದು. ವಿಶ್ವದ ಅತೀ ಶ್ರೀಮಂತ 15 ರಾಷ್ಟ್ರಗಳು ಯಾವುವು ಗೊತ್ತೆ?

8. ಎಮ್.ಎಸ್. ಧೋನಿ, 36

8. ಎಮ್.ಎಸ್. ಧೋನಿ, 36

ಮಹೇಂದ್ರ ಸಿಂಗ್ ಧೋನಿ ಪದ್ಮಶ್ರೀ (2009), ಪದ್ಮಭೂಷಣ (2018), ರಾಜೀವ್ ರತ್ನ ಖೇಲ್ ಅವಾರ್ಡ್ (2007) ಮತ್ತು ಐ.ಸಿ.ಸಿ. ಏಕದಿನದ ಅಂತರಾಷ್ಟ್ರೀಯ ಪಂದ್ಯಾವಳಿಯ ವರ್ಷದ ಆಟಗಾರ (2008 ಮತ್ತು 2009) ಪ್ರಶಸ್ತಿಗಳನ್ನು ಪಡೆದಿದ್ದಾರೆ. 122.48 ಕೋಟಿ ರೂಪಾಯಿಗಳಷ್ಟಿದ್ದ ಧೋನಿಯವರ ಆದಾಯವು, 2017 ರಲ್ಲಿ ಬಹುತೇಕ ಅದರ ಅರ್ಧದಷ್ಟು, ಅರ್ಥಾತ್ ರೂ. 63.77 ಕೋಟಿಗಳಷ್ಟಕ್ಕೆ ಕುಸಿಯಿತು. ಜನವರಿ 2017 ರಲ್ಲಿ ಧೋನಿಯವರು ಭಾರತೀಯ ಕ್ರಿಕೆಟ್ ತಂಡದ ನಾಯಕನ ಸ್ಥಾನದಿಂದ ನಿರ್ಗಮಿಸಿದರು.

7. ಪ್ರಿಯಾಂಕಾ ಛೋಪ್ರಾ, 35

7. ಪ್ರಿಯಾಂಕಾ ಛೋಪ್ರಾ, 35

ಭಾರತದ ಅತ್ಯಂತ ಶ್ರೀಮಂತರೆಂದೆನಿಸಿಕೊಂಡಿರುವ ಹತ್ತು ಖ್ಯಾತನಾಮ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಸಫಲರಾಗಿರುವ ಏಕೈಕ ಮಹಿಳೆ ಪ್ರಿಯಾಂಕಾ ಛೋಪ್ರಾ. ಪ್ರಿಯಾಂಕಾ ಛೋಪ್ರಾ ಓರ್ವ ನಟಿ, ಗಾಯಕಿ, ನಿರ್ಮಾಪಕಿ, ಮಾನವತಾವಾದಿ ಹಾಗೂ ಜೊತೆಗೆ 2000 ರಲ್ಲಿ ದ ಮಿಸ್ ವರ್ಲ್ಡ್ ಬ್ಯೂಟಿ ಪಟ್ಟ ಪಡೆದಿದ್ದಾರೆ. 2016 ರಲ್ಲಿ ಪ್ರಿಯಾಂಕಾ ಛೋಪ್ರಾಗೆ ಪದ್ಮಶ್ರೀ ಪ್ರಶಸ್ತಿಯ ಗೌರವವು ಲಭಿಸಿದ್ದು, 2017 ರ ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿರುವ ನೂರು ಮಹಿಳೆಯರ ಪೈಕಿ ಓರ್ವಳೆಂಬ ಗೌರವಕ್ಕೂ ಪಾತ್ರರಾದರು. 2017 ರಲ್ಲಿ ಇವರ ಗಳಿಕೆಯು ರೂ. 68 ಕೋಟಿಗಳಷ್ಟಾಗಿದ್ದರೆ, 2016 ರಲ್ಲಿ ಇವರ ಗಳಿಕೆ ರೂ. 76 ಕೋಟಿಯಾಗಿತ್ತು.

6. ಅಮೀರ್ ಖಾನ್, 52

6. ಅಮೀರ್ ಖಾನ್, 52

ಅಮೀರ್ ಖಾನ್ ಓರ್ವ ನಟ, ನಿರ್ಮಾಪಕ ಹಾಗು ನಿರ್ದೇಶಕನೂ ಹೌದು. ಜೊತೆಗೆ ಟೆಲಿವಿಷನ್ ಟಾಕ್ ಶೋ ಅತಿಥೇಯನೂ ಹೌದು. 1999 ರಲ್ಲಿ ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ಇದುವರೆಗಿನ ಅವರ ನಿರ್ಮಾಣದ ಚಲನಚಿತ್ರಗಳ ಪೈಕಿ ಅತ್ಯಂತ ಯಶಸ್ವೀ ಚಲನಚಿತ್ರ "ದಂಗಲ್" ಆಗಿದೆ. 2017 ರಲ್ಲಿ ಅವರ ಆದಾಯ ಗಳಿಕೆಯು ರೂ. 68.75 ಕೋಟಿಗಳಾಗಿದ್ದವು.

5. ಸಚಿನ್ ತೆಂಡೂಲ್ಕರ್, 44

5. ಸಚಿನ್ ತೆಂಡೂಲ್ಕರ್, 44

ಎಲ್ಲಾ ಕಾಲಕ್ಕೂ ಸಲ್ಲುವ ಅತ್ಯಂತ ಶ್ರೇಷ್ಠ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ಮಾಜಿ ಕ್ರಿಕೆಟಿಗ, ಕ್ರಿಕೆಟ್ ಅನ್ನು ಹೊರತುಪಡಿಸಿ ಇನ್ನಿತರ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಟೆನಿಸ್ ಹಾಗೂ ಪುಟ್ ಬಾಲ್ ಲೀಗ್ ಗಳಲ್ಲಿ ಸ್ಟೇಕ್ ಹೋಲ್ಡರ್ ಆಗಿದ್ದಾರೆ. ಸಚಿನ್ ತೆಂಡುಲ್ಕರ್, ಹಲವು ರೆಸ್ಟೋರೆಂಟ್ ಗಳ, ಬ್ರಾಂಡೆಡ್ ಸರಕು ಉತ್ಪಾದನಾ ಸಂಸ್ಥೆಯೊಂದರ, ಹಾಗೂ ಕ್ರೀಡೋತ್ತೇಜನದಂತಹ ಸಾಹಸೋದ್ಯಮದ ಪಾಲುದಾರರೂ ಆಗಿದ್ದಾರೆ. 2016 ರಲ್ಲಿ, 58 ಕೋಟಿ ರೂಪಾಯಿಗಳಷ್ಟಿದ್ದ ಅವರ ಆದಾಯಕ್ಕೆ ಹೋಲಿಸಿದಲ್ಲಿ, 2017 ರಲ್ಲಿ ಆದಾಯವು ರೂ. 82.5 ಕೋಟಿಗಳಿಗೆ ಹೆಚ್ಚಳಗೊಂಡಿತು.

4. ಅಕ್ಷಯ್ ಕುಮಾರ್, 50

4. ಅಕ್ಷಯ್ ಕುಮಾರ್, 50

ಒಂದೇ ವರ್ಷದಲ್ಲಿ ತಾನು ನಟಿಸಿದ ಹಲವಾರು ಸಿನಿಮಾಗಳು ಬಿಡುಗಡೆಗೊಳ್ಳುವಂತಹ ಕೆಲವೇ ನಟರುಗಳ ಪೈಕಿ ಅಕ್ಷಯ್ ಕುಮಾರ್ ಒಬ್ಬರು. ಭಾರತೀಯ ಚಿತ್ರರಂಗದಲ್ಲಿ ಇಪ್ಪತ್ತೈದು ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಸಕ್ರಿಯರಾಗಿರುವ ಇವರು, ಹಲವಾರು ಬ್ರಾಂಡೆಡ್ ಕಂಪನಿಗಳ ರಾಯಭಾರಿಯೂ ಹೌದು. ಅಕ್ಷಯ್ ತನ್ನದೇ ಆದ ನಿರ್ಮಾಣ ಘಟಕವನ್ನೂ ಹೊಂದಿದ್ದಾರೆ. ಟಿವಿ ಷೋಗಳನ್ನು ಆರಂಭಿಸಿರುವ ಅಕ್ಷಯ್ ಅವರು, ವರ್ಲ್ಡ್ ಕಬ್ಬಡಿ ಲೀಗ್ ತಂಡವೊಂದರ ಮಾಲಕರೂ ಆಗಿದ್ದಾರೆ. ಇಷ್ಟೆಲ್ಲಾ ಆದರೂ ಸಹ, 2017 ರಲ್ಲಿ ಅವರ ಆದಾಯವು ತೀವ್ರವಾಗಿ ಕುಸಿಯಿತು. 2016 ರಲ್ಲಿ ರೂ. 203.02 ಕೋಟಿಗಳಷ್ಟಿದ್ದ ಅವರ ಆದಾಯವು 2017 ರಲ್ಲಿ 98.25 ಕೋಟಿ ರೂಪಾಯಿಗಳಿಗೆ ಕುಸಿಯಿತು.

3. ವಿರಾಟ್ ಕೊಹ್ಲಿ, 29

3. ವಿರಾಟ್ ಕೊಹ್ಲಿ, 29

ಭಾರತೀಯ ಕ್ರಿಕೆಟ್ ತಂಡದ ಈಗಿನ ನಾಯಕರಾಗಿರುವ ವಿರಾಟ್ ಕೊಹ್ಲಿಯವರು, 2017 ರಲ್ಲಿ ರೂ. 100.72 ಕೋಟಿ ಆದಾಯ ಗಳಿಸಿದರು. ಕ್ರಿಕೆಟ್ ಅನ್ನೂ ಹೊರತುಪಡಿಸಿ, ವಿವಿಧ ಲೀಗ್ ಗಳಲ್ಲಿ ಪುಟ್ಬಾಲ್, ಟೆನಿಸ್, ಮತ್ತು ಕುಸ್ತಿ ತಂಡಗಳ ಪಾಲುದಾರರೂ ಆಗಿದ್ದಾರೆ. ಇದರ ಜೊತೆಗೆ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದು, ಇಪ್ಪತ್ತಕ್ಕೂ ಹೆಚ್ಚಿನ ಬ್ರಾಂಡೆಡ್ ಕಂಪನಿಗಳ ರಾಯಭಾರಿಯೂ ಆಗಿದ್ದಾರೆ.

2. ಶಾರುಖ್ ಖಾನ್, 52

2. ಶಾರುಖ್ ಖಾನ್, 52

ಭಾರತದ ಅತ್ಯಂತ ಶ್ರೀಮಂತ ಖ್ಯಾತನಾಮರ ಫೋರ್ಬ್ಸ್ ಪಟ್ಟಿಯಲ್ಲಿ ಸತತ ಎರಡನೆಯ ಬಾರಿಗೆ ಎರಡನೆಯ ಸ್ಥಾನವನ್ನಲಂಕರಿಸಿದ್ದಾರೆ ಶಾರುಖ್ ಖಾನ್. ಬಾಲಿವುಡ್ ಬಾದಷಾ ಎಂದೇ ಕರೆಯಲ್ಪಡುವ ಶಾರುಖ್ ಖಾನ್, 2017 ರಲ್ಲಿ, ರೂ. 170.5 ಕೋಟಿ ಆದಾಯ ಗಳಿಸಿದ್ದರು. ಹಾಗೆ ನೋಡಿದರೆ, 2016 ರಲ್ಲಿ ಅವರು ಗಳಿಸಿದ್ದ ರೂ. 221.75 ಕೋಟಿ ಆದಾಯಕ್ಕೆ ಹೋಲಿಸಿದರೆ, 2017ರಲ್ಲಿ ಅವರ ಆದಾಯ ಗಳಿಕೆಯು 51.25 ಕೋಟಿ ರೂಪಾಯಿಗಳಷ್ಟು ಕಡಿಮೆಯಾಯಿತೆಂದು ಹೇಳಬಹುದು. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಎಂಬ ಉತ್ಪಾದನಾ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಇವರು, ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ತಂಡದ ಸಹ ಮಾಲೀಕರೂ ಹೌದು. ಟೆಲಿವಿಷನ್ ಷೋಗಳನ್ನೂ ಆಯೋಜಿಸುವ ಶಾರುಖ್ ಖಾನ್, ಸ್ಟೇಜ್ ಷೋಗಳನ್ನೂ ನಡೆಸಿಕೊಡುತ್ತಾರೆ. ಹಲವಾರು ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು, 2005 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾದರು.

1. ಸಲ್ಮಾನ್ ಖಾನ್, 52

1. ಸಲ್ಮಾನ್ ಖಾನ್, 52

ಅತ್ಯಂತ ಶ್ರೀಮಂತ ಭಾರತೀಯ ಖ್ಯಾತನಾಮ ಸೆಲೆಬ್ರೇಟಿಗಳ ಪಟ್ಟಿಯಲ್ಲಿ ಸತತವಾಗಿ ಎರಡನೆಯ ಬಾರಿಯೂ ಸಲ್ಮಾನ್ ಖಾನ್ ಅವರೇ ಮೊದಲನೆಯ ಸ್ಥಾನವನ್ನಲಂಕರಿಸಿದ್ದಾರೆ. ಭಾರತೀಯ ಚಲನಚಿತ್ರರಂಗದಲ್ಲಿ ಮೂವತ್ತು ವರ್ಷಗಳಿಗಿಂತಲೂ ಅಧಿಕ ಅವಧಿಯ ವೃತ್ತಿ ಜೀವನದಲ್ಲಿ, ಸಲ್ಮಾನ್ ಖಾನ್ ಅವರ ಹನ್ನೆರಡು ಚಲನಚಿತ್ರಗಳು ಒಂದು ಬಿಲಿಯನ್ ಗಳಿಗಿಂತಲೂ ಅಧಿಕ ಮೊತ್ತದ ಲಾಭ ಗಳಿಸಿಕೊಟ್ಟಿವೆ. ಸಲ್ಮಾನ್ ಖಾನ್ ಸ್ಟೇಜ್ ಷೋಗಳನ್ನು ನಡೆಸಿಕೊಡುತ್ತಾರೆ. ಟೆಲಿವಿಷನ್ ಷೋ ಗಳ ಅತಿಥೇಯರೂ ಆಗಿದ್ದಾರೆ. ಜತೆಗೆ ತನ್ನದೇ ಆದ ಚಲನಚಿತ್ರ ನಿರ್ಮಾಣದ ಸಂಸ್ಥೆಯನ್ನೂ ಹೊಂದಿದ್ದಾರೆ. ಇವೆಲ್ಲದರ ನಡುವೆ ಸಲ್ಮಾನ್ ಖಾನ್ ಅವರು "ಬೀಯಿಂಗ್ ಹ್ಯೂಮನ್" ಎಂಬ ಹೆಸರಿನಲ್ಲಿ ಯಾವುದೇ ಲಾಭದ ಉದ್ದೇಶವಿಲ್ಲದ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಸಲ್ಮಾನ್ ಖಾನ್ ಅನೇಕ ಬ್ರಾಂಡೆಡ್ ಉತ್ಪನ್ನಗಳ ರಾಯಭಾರಿಯೂ ಆಗಿದ್ದಾರೆ.

Read more about: india money finance news bollywood
English summary

Top 10 Most Richest Celebrities in India

Forbes India too releases its lists of Highest Earning Celebrities in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X