For Quick Alerts
ALLOW NOTIFICATIONS  
For Daily Alerts

ಅತಿಹೆಚ್ಚು ಸಾಲ ಹೊಂದಿರುವ ವಿಶ್ವದ 10 ದೇಶಗಳು, ಭಾರತ ಎಷ್ಟನೇ ಸ್ಥಾನದಲ್ಲಿದೆ?

|

ಜಗತ್ತಿನ ಹಲವು ಶ್ರೀಮಂತ ರಾಷ್ಟ್ರಗಳಲ್ಲಿ ಐತಿಹಾಸಿಕ ಕಡಿಮೆ ಬಡ್ಡಿದರಗಳು ಕಾಣಿಸಿಕೊಳ್ಳುತ್ತಿರುವ ಸಮಯದಲ್ಲಿ ನಾವಿದ್ದೇವೆ. ಕೆಲವು ರಾಷ್ಟ್ರಗಳಲ್ಲಂತೂ ಬಡ್ಡಿ ದರ ಅಚ್ಚರಿಯೋ ಎಂಬತೆ ಋಣಾತ್ಮಕ ದರವನ್ನೂ ಕಂಡಿದೆ.

ಕಡಿಮೆ ಬಡ್ಡಿದರ, ಸುಲಭ ಮರುಪಾವತಿಯ ಕಾರಣ ಸರ್ಕಾರಗಳಿಗೆ, ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಹಾಗೂ ವೈಯಕ್ತಿಕ ಬಳಕೆಗಾಗಿ ಸಾಲ ಪಡೆಯುವುದು ಇಂದು ತುಂಬಾ ಸುಲಭವಾಗಿದೆ. ಒಂದು ರಾಷ್ಟ್ರ ಪಡೆದಿರುವ ಒಟ್ಟಾರೆ ಸಾಲವನ್ನು ಪರಿಗಣಿಸಿ ಆ ದೇಶ ಎಷ್ಟರ ಮಟ್ಟಿಗೆ ಆರ್ಥಿಕ ಸ್ವಾತಂತ್ರ್ಯ ಪಡೆದಿದೆ ಎಂಬುದನ್ನು ಪರಿಗಣಿಸಬಹುದು.

ಒಂದು ರಾಷ್ಟ್ರ ಪಡೆದುಕೊಂಡಿರುವ ಸಾಲಕ್ಕೂ ಆ ದೇಶದ ನಾಗರಿಕರು ತಮ್ಮ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆದುಕೊಂಡಿರುವ ಸಾಲಕ್ಕೂ ಆಗಾಧ ವ್ಯತ್ಯಾಸವಿದೆ. ಸರ್ಕಾರಿ ಸಾಲ ಎಂದರೆ ಕೇಂದ್ರ ಸರ್ಕಾರ ಎರವಲು ಪಡೆದಿರುವ ಒಟ್ಟು ಮೊತ್ತವಾಗಿದೆ. ಈ ಮೊತ್ತವನ್ನು ಪ್ರಜೆಗಳಿಂದ ಪಡೆಯುವ ಸುಂಕ ಹಾಗೂ ತೆರಿಗೆಗಳ ಮೂಲಕ ಸಂಗ್ರಹಿಸಿದ ಬಳಿಕವೇ ಮರುಪಾವತಿ ಮಾಡಲಾಗುತ್ತದೆ. ಒಂದು ವೇಳೆ ಪ್ರಜೆಗಳಿಂದ ಸಂಗ್ರಹಿಸಲಾದ ತೆರಿಗೆಯ ಒಟ್ಟು ಮೊತ್ತ ಪಡೆದ ಸಾಲದ ಮೊತ್ತಕ್ಕಿಂತ ಕಡಿಮೆಯಾದರೆ ಆಗ ತೀರಿಸಲಾಗದ ಸಾಲದ ಮೊತ್ತವನ್ನು ವಿತ್ತೀಯ ಕೊರತೆ (deficit) ಎಂದು ಕರೆಯಲಾಗುತ್ತದೆ ಹಾಗೂ ಇದು ರಾಷ್ಟೀಯ ಸಾಲಕ್ಕೆ ಸೇರ್ಪಡೆಯಾಗುತ್ತದೆ.

 

ಡಾಲರ್ ಅನ್ನು ಚಲಾವಣೆಯ ಹಣವನ್ನಾಗಿಸಿರುವ ರಾಷ್ಟ್ರಗಳೇ ಈ ಸಾಲದ ಕೂಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಅದರಲ್ಲೂ US $ 19.86 ಟ್ರಿಲಿಯನ್ ನಷ್ಟು ಮೊತ್ತದ ಸಾಲವನ್ನು ಹೊಂದಿರುವ ಜಗತ್ತಿನ ದೊಡ್ಡಣ್ಣ ಅಮೇರಿಕಾವೇ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. US $ 10.17 ಟ್ರಿಲಿಯನ್ ಮೊತ್ತ ಹೊಂದಿರುವ ಚೀನಾ ಎರಡನೇ ಸ್ಥಾನದಲ್ಲಿದೆ ಹಾಗೂ US $ 9.08 ಟ್ರಿಲಿಯನ್ ನೊಂದಿಗೆ ಜಪಾನ್ ಮೂರನೆಯ ಸ್ಥಾನದಲ್ಲಿದೆ. ಜಗತ್ತಿನ 25 ಶ್ರೀಮಂತ ದೇಶಗಳು

ಮಾನದಂಡ

ಮಾನದಂಡ

ಎಲ್ಲಾ ದೇಶಗಳಲ್ಲಿ ಡಾಲರ್ ಚಲಾವಣಾ ಹಣವಾಗಿರದೇ ಇರುವ ಕಾರಣ ಈ ಲೆಕ್ಕಾಚಾರ ಆ ದೇಶಗಳಿಗೆ ಅನ್ವಯಿಸುವುದಿಲ್ಲ. ಹಾಗಾಗಿ ಆ ದೇಶದ ಜಿಡಿಪಿ (ಅಥವಾ ಒಟ್ಟು ದೇಶೀಯ ಉತ್ಪನ್ನ) ಯನ್ನು ಆಧರಿಸಿ ಆ ದೇಶ ಹೊಂದಿರುವ ಸಾಲವನ್ನು ತುಲನೆ ಮಾಡಲಾಗುತ್ತದೆ. ಈ ತುಲನೆಯನ್ನೇ ಜಿಡಿಪಿ-ಅನ್ವಯ-ಸಾಲದ-ಅನುಪಾತ ಅಥವಾ ಸುಲಭವಾಗಿ ಜಿಡಿಪಿ-ಅನ್ವಯ-ಸಾಲ (debt-to-GDP) ರೂಪದಲ್ಲಿ ಪರಿಗಣಿಸಲಾಗುತ್ತದೆ. ಒಂದರ್ಥದಲ್ಲಿ ಓರ್ವ ವ್ಯಕ್ತಿ ಎಷ್ಟು ಎತ್ತರವಿದ್ದರೆ ಉತ್ತಮ ಆರೋಗ್ಯಕ್ಕಾಗಿ ಎಷ್ಟು ತೂಕ ಇರಬೇಕಾಗುತ್ತದೆ ಎಂಬ ಮಾನದಂಡದಂತೆಯೇ ಇದು.

ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಾರ್ಷಿಕ ವೇತನ ಎಷ್ಟು ಗೊತ್ತೆ?

1. ಜಪಾನ್

1. ಜಪಾನ್

ರಾಷ್ಟ್ರೀಯ ಸಾಲ: ¥ 1,028 ಟ್ರಿಲಿಯನ್ (9.087 ಟ್ರಿಲಿಯನ್ ಅಮೆರಿಕನ್ ಡಾಲರ್)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: 71,421 ಡಾಲರ್

ಜಿಡಿಪಿ-ಅನ್ವಯ-ಸಾಲ: 220.82%

ಜನಸಂಖ್ಯೆ: 127.2 ಮಿಲಿಯನ್

ಚಲಾವಣಾ ಹಣ: ಜಪಾನೀಸ್ ಯೆನ್ (¥)

ಡಾಲರ್ ಲೆಕ್ಕದಲ್ಲಿ ಪರಿಗಣಿಸಿದರೆ ಜಪಾನ್ ನ ಒಟ್ಟು ಸಾಲ ಅಮೆರಿಕಾದ ಅರ್ಧದಷ್ಟಿದೆ. ಆದರೆ, ಈ ದೇಶದ ಜಿಡಿಪಿ-ಅನ್ವಯ-ಸಾಲವನ್ನು ಪರಿಗಣಿಸಿದರೆ ಇದು ಆ ದೇಶದ ಜಿಡಿಪಿಗಿಂತಲೂ ದುಪ್ಪಟ್ಟಿರುವ ಕಾರಣ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಅಂದರೆ ಇದು ಬಲು ಗಂಭೀರವಾದ ಆರ್ಥಿಕ ಸಮಸ್ಯೆಯಾಗಿದೆ. ಆರ್ಥಿಕ ತಜ್ಞರು ಕೆಲವು ವರ್ಷಗಳ ಹಿಂದೆ ಅನುಮಾನಿಸಿದ್ದಕ್ಕಿಂತಲೂ ಕಡಿಮೆ ವೇಗದಲ್ಲಿ ದೇಶ ಪ್ರಗತಿ ಕಂಡಿದೆ. ಪರಿಣಾಮವಾಗಿ ಜಪಾನ್ ನ ಕೇಂದ್ರ ಬ್ಯಾಂಕ್ ಅನಿವಾರ್ಯವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಲು ಋಣಾತ್ಮಕ ಬಡ್ಡಿದರಗಳನ್ನು ವಿಧಿಸಬೇಕಾಗಿ ಬಂದಿದೆ. ಜಿಡಿಪಿ-ಅನ್ವಯ-ಸಾಲ 2016 ರಲ್ಲಿ 250.4% ಇದ್ದದ್ದು 2017ರಲ್ಲಿ 220.82% ಇಳಿದಿದೆ ಎಂಬುದೇ ಕೊಂಚ ಸಮಾಧಾನಕರ ಸಂಗತಿಯಾಗಿದೆ.

2. ಗ್ರೀಸ್
 

2. ಗ್ರೀಸ್

ರಾಷ್ಟ್ರೀಯ ಸಾಲ: € 332.6 ಬಿಲಿಯನ್ (379 ಬಿಲಿಯನ್ ಡಾಲರ್)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: $35,120 (ಅಮೆರಿಕನ್ ಡಾಲರ್)

ಜಿಡಿಪಿ-ಅನ್ವಯ-ಸಾಲ: 179%

ಜನಸಂಖ್ಯೆ: 10.8 ಮಿಲಿಯನ್

ಚಲಾವಣಾ ಹಣ: ಯೂರೋ (€)

ಅಮೆರಿಕಾದ ಸಾಲಕ್ಕೆ ಹೋಲಿಸಿದರೆ 379 ಬಿಲಿಯನ್ ಡಾಲರ್ ಸಾಲ ಏನೇನೂ ಅಲ್ಲ ಎನಿಸಬಹುದು. ಆದರೆ ಇರುವೆಗೆ ಸಕ್ಕರೆಯೇ ಭಾರ ಎಂಬಂತೆ ಇದರ ಅಧಿಕ ಜಿಡಿಪಿ-ಅನ್ವಯ-ಸಾಲ, ದೇಶವನ್ನು ಆವರಿಸಿರುವ ಹೆಚ್ಚಿನ ನಿರುದ್ಯೋಗ ಮೊದಲಾದವು ಸಾಲದ ಮರುಪಾವತಿಯನ್ನು ಕಷ್ಟವಾಗಿಸಿ ಈಗಿನ ಸಾಲಕೂಪದಿಂದ ಹೊರಬರಲು ಕಷ್ಟವಾಗಿಸಿದೆ. 2010ರಲ್ಲಿ ಈ ದೇಶದಲ್ಲಿ ಪ್ರಾರಂಭವಾದ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಇಂದಿಗೂ ಮುಂದುವರೆಯುತ್ತಿದೆ ಹಾಗೂ ಈ ದೇಶಕ್ಕೆ ಸಾಲ ನೀಡಿದ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಈಗಾಗಲೇ ಸಾಲ ಮರುಪಾವತಿಗೆ ಹಲವಾರು ಬಾರಿ ನ್ಯಾಯಾಲಯದ ನೋಟೀಸನ್ನು ಕಳಿಸಿವೆ. ಆದರೆ ಗ್ರೀಸ್ ಸರ್ಕಾರ ಈ ನೋಟಿಸುಗಳಿಗೆ ಜಪ್ಪೆನ್ನದೇ, ಯಾವುದೇ ಕ್ರಮ ಕೈಗೊಳ್ಳದೇ ತನ್ನ ಕೆಲಸವಾಯಿತು. ಜನರಿಗೇನಾದರೆ ತನಗೇನು ಎಂಬ ಧೋರಣೆಯನ್ನು ಅನುಸರಿಸುತ್ತಿದೆ.

3. ಪೋರ್ಚುಗಲ್

3. ಪೋರ್ಚುಗಲ್

ರಾಷ್ಟ್ರೀಯ ಸಾಲ: € 232 ಬಿಲಿಯನ್ (264 ಬಿಲಿಯನ್ ಅಮೆರಿಕನ್ ಡಾಲರ್)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: 25,538 ಅಮೆರಿಕನ್ ಡಾಲರ್

ಜಿಡಿಪಿ-ಅನ್ವಯ-ಸಾಲ: 138.08%

ಜನಸಂಖ್ಯೆ: 10.37 ಮಿಲಿಯನ್

ಚಲಾವಣಾ ಹಣ: ಯೂರೋ (€)

2010ರಿಂದಲೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪೋರ್ಚುಗಲ್ ಗೂ ಇದುವರೆಗೆ ಸಾಲ ನೀಡಿದ ಸಂಸ್ಥೆಗಳಿಂದ ಹಲವಾರು ನ್ಯಾಯಾಲಯದ ನೋಟೀಸುಗಳು ಬಂದಿವೆ. ಈ ಸ್ಥಿತಿಯಿಂದ ಹೊರಬರಲು ಹಲವಾರು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದರೂ ಇದರ ರಾಷ್ಟ್ರೀಯ ಸಾಲ ಜಿಡಿಪಿಗಿಂತಲೂ ಹೆಚ್ಚಾಗಿದೆ ಹಾಗೂ ಈ ಮೂಲಕ ಇದರ ಆರ್ಥಿಕ ಪರಿಸ್ಥಿತಿ ಇನ್ನೂ ಸರಿಯಾಗಿಲ್ಲ ಎಂದೇ ತೋರಿಸುತ್ತಿದೆ. 2016ರ ಕಡೆಯಲ್ಲಿ ಜಿಡಿಪಿ-ಅನ್ವಯ-ಸಾಲ 130.4% ರಷ್ಟಿತ್ತು. 2017ರ ನಡುವಣ ವೇಳೆಗೆ ಇದು 138.08%ಕ್ಕೇರಿತು. ಈ ದೇಶದ ದುರ್ಬಲ ಆರ್ಥಿಕ ಪರಿಸ್ಥಿತಿ ಹಾಗೂ ಅತಿ ನಿಧಾನವಾದ ಪ್ರಗತಿ ಮೂರನೆಯ ತ್ರೈಮಾಸಿಕದಲ್ಲಿ ಇನ್ನೂ ಇಳಿಯಲು ಕಾರಣವಾಗಿ ಭವಿಷ್ಯದಲ್ಲಿ ಇನ್ನಷ್ಟು ಅಪಾಯಕಾರಿ ಮಟ್ಟಕ್ಕೆ ಕುಸಿಯುವ ಸೂಚನೆಗಳನ್ನು ನೀಡುತ್ತಿದೆ.

4. ಇಟಲಿ

4. ಇಟಲಿ

ರಾಷ್ಟ್ರೀಯ ಸಾಲ: € 2.17 ಟ್ರಿಲಿಯನ್ (2.48 ಟ್ರಿಲಿಯನ್ ಅಮೆರಿಕನ್ ಡಾಲರ್)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: $40,787 (ಅಮೇರಿಕನ್ ಡಾಲರ್)

ಜಿಡಿಪಿ-ಅನ್ವಯ-ಸಾಲ: 137.81%

ಜನಸಂಖ್ಯೆ: 60.8 ಮಿಲಿಯನ್

ಚಲಾವಣಾ ಹಣ: ಯೂರೋ (€)

೨೦೦೭ರ ತ್ರಿವಳಿ ಮಟ್ಟದ ಆರ್ಥಿಕ ಕುಸಿತದಲ್ಲಿ ಭಾರೀ ನಷ್ಟ ಅನುಭವಿಸಿದ್ದ ಇಟಲಿ ನಂತರದ ವರ್ಷಗಳಲ್ಲಿ ಅತಿ ನಿಧಾನವಾದ ಆರ್ಥಿಕ ಪ್ರಗತಿಯ ಕಾರಣ ಹಾಗೂ ಇನ್ನೂ ಉಳಿದಿರುವ ನಿರುದ್ಯೋಗದ ಮಟ್ಟಗಳಿಂದಾಗಿ ಇನ್ನೂ ಹೀನಾಯ ಸ್ಥಿತಿಯಲ್ಲಿಯೇ ಇದೆ. 2017ರ ಮೊದ ತ್ರೈಮಾಸಿಕ ಅವಧಿಯಲಿ € 17 ಬಿಲಿಯನ್ ನಷ್ಟು ಬ್ಯಾಂಕಿನ ಸಾಲವನ್ನು ಹೊಂದಿರುವುದನ್ನು ಪ್ರಕಟಿಸಿದ ಬಳಿಕ ಬ್ಯಾಂಕಿನ ಮುಖ್ಯಸ್ಥರು ಈಗ ತಲೆಮರೆಸಿಕೊಂಡಿದ್ದಾರೆ.

5. ಭೂತಾನ್

5. ಭೂತಾನ್

ರಾಷ್ಟ್ರೀಯ ಸಾಲ: $ 2.33 ಬಿಲಿಯನ್ (ಅಮೆರಿಕನ್ ಡಾಲರ್)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: $2,993 (ಅಮೇರಿಕನ್ ಡಾಲರುಗಳು)

ಜಿಡಿಪಿ-ಅನ್ವಯ-ಸಾಲ: 118.6%

ಜನಸಂಖ್ಯೆ: 774,830

ಚಲಾವಣಾ ಹಣ: ಭೂತಾನೀಸ್ ನಗುಲ್ಟ್ರಮ್

ಭಾರತದ ಈಶಾನ್ಯ ಭಾಗದಲ್ಲಿರುವ ಪುಟ್ಟ ಹಾಗೂ ಅತ್ಯಂತ ಸುಂದರ ದೇಶವಾದ ಭೂತಾನ್ ಸಹಾ ಭಾರತದ ಆರ್ಥಿಕತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಆರ್ಥಿಕ ನೆರವಿಗಾಗಿ ಭಾರವತನ್ನೇ ಹೆಚ್ಚಾಗಿ ಅವಲಂಬಿಸಿರುವ ಈ ದೇಶದಲ್ಲಿ ಮೂಲಸೌಕರ್ಯಕ್ಕಾಗಿ ವಲಸಿಗರನ್ನೇ ಬಳಸಲಾಗುತ್ತದೆ. 2016ರ ಕೊನೆಯಲ್ಲಿ ಜಿಡಿಪಿ-ಅನ್ವಯ-ಸಾಲದ ನುಪಾನ 118.6% ರಷ್ಟು ದಾಖಲಾಗಿತ್ತು. ಅಂದರೆ ಇದಕ್ಕೂ ಹಿಂದಿನ ವರ್ಷವಿದ್ದ 98.9% ಕ್ಕಿಂತಲೂ 19.92% ರಷ್ಟು ಏರಿಕೆ ಪಡೆದಿದೆ.

6. ಸೈಪ್ರಸ್

6. ಸೈಪ್ರಸ್

ರಾಷ್ಟ್ರೀಯ ಸಾಲ: €18.95 ಬಿಲಿಯನ್ ($21.64 ಬಿಲಿಯನ್ ಅಮೇರಿಕನ್ ಡಾಲರುಗಳು)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: $25,551

ಜಿಡಿಪಿ-ಅನ್ವಯ-ಸಾಲ: 115.47%

ಜನಸಂಖ್ಯೆ: 847,008

ಚಲಾವಣಾ ಹಣ: ಯೂರೋ (€)

ಕಳ್ಳನ ಹಣ ಖರ್ಚು ಮಾಡಿದವನೂ ಕಳ್ಳನಾಗುತ್ತಾನೆಯೇ? ಆದರೆ ಗ್ರೀಸ್ ನೊಂದಿಗೆ ನಿಕಟವಾದ ಆರ್ಥಿಕ ಸಂಬಂಧ ಹೊಂದಿದ್ದ ಸೈಪ್ರಸ್ ಗೆ ಮಾತ್ರ ಇದೇ ತೊಂದರೆ ಎದುರಾಗಿದೆ. 2012 ರಿಂದ 2013ರ ವರೆಗೆ ಗ್ರೀಸ್ ನ ಆರ್ಥಿಕ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಸೈಪ್ರಸ್ ನ ಬ್ಯಾಂಕುಗಳೂ ಗ್ರೀಸ್ ನ ಕುಸಿತದ ಜೊತೆಗೇ ಕುಸಿದಿವೆ. ವಿಶೇಷವಾಗಿ ಗ್ರೀಸ್ ನ ಕಟ್ಟಡ ನಿರ್ಮಾಣ ಕ್ಷೇತ್ರದ ಸಂಸ್ಥೆಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳೆಲ್ಲವೂ ಬಳಿಕ ಭಾರೀ ಮುಗ್ಗಟ್ಟಿಗೆ ಕಾರಣವಾಗಿವೆ. ೨೦೧೩ರ ಮೊದಲ ತ್ರೈಮಾಸಿಕದಲ್ಲಿ ದೇಶದ ಅತಿದೊಡ್ಡ ಬ್ಯಾಂಕು €10 ಬಿಲಿಯನ್ ($11.4 ಬಿಲಿಯನ್ ಅಮೇರಿಕನ್ ಡಾಲರುಗಳು) ನಷ್ಟು ಅಂತಾರಾಷ್ಟ್ರೀಯ ಸಾಲವನ್ನು ತೀರಿಸಲಾಗದ ಅಸಹಾಯಕ ಪರಿಸ್ಥಿತಿಯನ್ನು ಪ್ರಕಟಿಸಿದೆ. ಆ ಸಮಯದಿಂದ ಜಿಡಿಪಿ-ಅನ್ವಯ-ಸಾಲ 2013 ರಲ್ಲಿ 102.2% ಇದ್ದದ್ದು 2017ರ ನಡುವಣ ಸಮಯದಲ್ಲಿ 115.47%ಕ್ಕೇರಿದೆ.

7. ಬೆಲ್ಜಿಯಂ

7. ಬೆಲ್ಜಿಯಂ

ರಾಷ್ಟ್ರೀಯ ಸಾಲ: €399.5 ಬಿಲಿಯನ್ ($456.18 ಬಿಲಿಯನ್ ಅಮೇರಿಕನ್ ಡಾಲರುಗಳು)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: $30,518 ಅಮೇರಿಕನ್ ಡಾಲರುಗಳು

ಜಿಡಿಪಿ-ಅನ್ವಯ-ಸಾಲ: 114.78%

ಜನಸಂಖ್ಯೆ: 11.25 ಮಿಲಿಯನ್

ಚಲಾವಣಾ ಹಣ: ಯೂರೋ (€)

ಯೂರೋ ಸಮುಚ್ಛಯ ದೇಶಗಳಲ್ಲಿ ಬೆಲ್ಜಿಯಂ ಒಂದು ಶ್ರೀಮಂತ ರಾಷ್ಟ್ರವಾಗಿ ಗುರುತಿಸಲ್ಪಡುತ್ತದೆ. ಆದರೆ ಈ ದೇಶವೂ ರಾಷ್ಟ್ರೀಯ ಸಾಲದ ಹೊರೆಯಿಂದ ಮುಕ್ತವಾಗಿಲ್ಲ. ಈ ದೇಶದ ನೈಸರ್ಗಿಕ ಸಂಪತ್ತಿನ ಕೊರತೆ ಇರುವ ಕಾರಣ ಆಮದನ್ನೇ ಬಹುವಾಗಿ ಅವಲಂಬಿಸಿರುವ ಕಾರಣ ಆರ್ಥಿಕತೆ ಏರಿಕೆಯ ಮಟ್ಟ ಪಡೆಯುತ್ತಿಲ್ಲ. ಜಿಡಿಪಿ-ಅನ್ವಯ-ಸಾಲ 2013ರಲ್ಲಿ 105% ಇತ್ತು. ಈಗ ಇದು ನಿಧಾನವಾಗಿ ಮೇಲೇರುತ್ತಿದೆ.

8. ಅಮೇರಿಕಾ ಸಂಯುಕ್ತ ಸಂಸ್ಥಾನ

8. ಅಮೇರಿಕಾ ಸಂಯುಕ್ತ ಸಂಸ್ಥಾನ

ರಾಷ್ಟ್ರೀಯ ಸಾಲ: $19.23 ಟ್ರಿಲಿಯನ್ (ಅಮೇರಿಕನ್ ಡಾಲರುಗಳು)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: $61,231 (ಅಮೇರಿಕನ್ ಡಾಲರುಗಳು)

ಜಿಡಿಪಿ-ಅನ್ವಯ-ಸಾಲ: 106.1%

ಜನಸಂಖ್ಯೆ: 324.35 ಮಿಲಿಯನ್

ಚಲಾವಣಾ ಹಣ: ಅಮೇರಿಕನ್ ಡಾಲರುಗಳು

ವಿಶ್ವದ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಿದ್ದರೂ ಅಮೇರಿಕಾ ಸಹಾ ಅತಿ ಹೆಚ್ಚಿನ ರಾಷ್ಟ್ರೀಯ ಸಾಲವನ್ನೂ ಹೊಂದಿದೆ. 2017ರಲ್ಲಿ ಈ ದೇಶದ ಜಿಡಿಪಿಗಿಂತಲೂ ಸಾಲವವೂ ಹೆಚ್ಚಾಗಿತ್ತು. 2007ರಲ್ಲಿ ಅಮೇರಿಕಾ 62.5%ರಷ್ಟು ಜಿಡಿಪಿ-ಅನ್ವಯ-ಸಾಲವನ್ನು ಹೊಂದಿತ್ತು. ಆದರೆ ಸರ್ಕಾರ ತನ್ನ ಒಟ್ಟು ಆದಾಯದ 6%ರಷ್ಟು ಮೊತ್ತವನ್ನು ಕೇವಲ ಪಡೆದ ಸಾಲಗಳ ಬಡ್ಡಿ ತೀರಿಸಲೆಂದೇ ಬಳಸುತ್ತಿದೆ. ಇದು ಇತರ ಕಾರ್ಯಕ್ರಮಗಳಿಗೆ ಅಗತ್ಯವಿರುವ ಹಣಕಾಸಿನ ಕೊರತೆಗೆ ಕಾರಣವಾಗಿದೆ. ಅಲ್ಲದೇ ಈ ಬೃತಹ್ ಮೊತ್ತದ ಸಾಲವನ್ನು ತೀರಿಸಲು ಸರ್ಕಾರಕ್ಕೆ ಖರ್ಚುಗಳನ್ನು ಕಡಿಮೆ ಮಾಡಬೇಕಾಗಿ ಬಂದಿದೆ. ಇದು ಆರ್ಥಿಕ ಪ್ರಗತಿಯನ್ನು ಇಳಿಸುತ್ತದೆ ಅಥವಾ ತೆರಿಗೆಗಳನ್ನು ಇಳಿಸಬೇಕಾಗಿ ಬರುತ್ತದೆ.

9. ಸ್ಪೇನ್

9. ಸ್ಪೇನ್

ರಾಷ್ಟ್ರೀಯ ಸಾಲ: €1.09 ಟ್ರಿಲಿಯನ್ ($1.24 ಅಮೇರಿಕನ್ ಡಾಲರುಗಳು)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: $26,724 (ಅಮೇರಿಕನ್ ಡಾಲರುಗಳು)

ಜಿಡಿಪಿ-ಅನ್ವಯ-ಸಾಲ: 105.76%

ಜನಸಂಖ್ಯೆ: 46.7 ಮಿಲಿಯನ್

ಚಲಾವಣಾ ಹಣ: ಯೂರೋ (€)

ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ ಹಾಗೂ 2017ರಲ್ಲಿ ಅತಿ ತೀವ್ರಗತಿಯ ಪ್ರಗತಿಯನ್ನು ಕಂಡಿದೆ ಎಂದು ಆರ್ಥಿಕ ತಜ್ಞರು ತಿಳಿಸುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಇದರ ಪ್ರಗತಿ ನಿಧಾನವಾಗಿ ಕುಸಿಯುತ್ತಿದೆ ಹಾಗೂ ಇದು ಆರ್ಥಿಕ ತಜ್ಞರಿಗೆ ತಲೆನೋವಾಗಿ ಪರಿಣಮಿಸಿದೆ.

10. ಸಿಂಗಾಪುರ

10. ಸಿಂಗಾಪುರ

ರಾಷ್ಟ್ರೀಯ ಸಾಲ: $350 ಬಿಲಿಯನ್ ($254 ಬಿಲಿಯನ್ ಅಮೇರಿಕನ್ ಡಾಲರುಗಳು)

ತಲಾ ವ್ಯಕ್ತಿಯ ಮೇಲೆ ಇರುವ ಸಾಲ: $45,915 (ಅಮೇರಿಕನ್ ಡಾಲರುಗಳು)

ಜಿಡಿಪಿ-ಅನ್ವಯ-ಸಾಲ: 104.7%

ಜನಸಂಖ್ಯೆ: 5.54 ಮಿಲಿಯನ್

ಚಲಾವಣಾ ಹಣ: ಸಿಂಗಪೂರ್ ಡಾಲರ್

ಇಂದು ಸಿಂಗಾಪುರ ಅಧಿಕ ಜಿಡಿಪಿ-ಅನ್ವಯ-ಸಾಲವನ್ನು ಹೊಂದಿದೆ. 2008ರ ಆರ್ಥಿಕ ಕುಸಿತದ ಬಳಿಕ 2016 ರಲ್ಲಿ ಆರ್ಥಿಕ ಬೆಳವಣಿಗೆ 0.6% ರಷ್ಟು ಕುಸಿಯಿತು. 2017ರ ಪ್ರಥಮ ಆರು ತಿಂಗಳುಗಳಲ್ಲಿ ಇನ್ನಷ್ಟು ನಿಧಾನಗೊಂಡ ಕಾರಣ ಇದು ಆರ್ಥಿಕ ದಿವಾಳಿತನದತ್ತ ಕುಸಿಯುವ ಭೀತಿಯನ್ನೂ ಎದುರಿಸುತ್ತಿದೆ.

ಭಾರತ

ಭಾರತ

ರಾಷ್ಟ್ರೀಯ ಸಾಲ: 495.7 ಬಿಲಿಯನ್ ಡಾಲರ್

ಜಿಡಿಪಿ-ಅನ್ವಯ-ಸಾಲ: 69.50%

ಭಾರತದ ರಫ್ತುಗಳು ಆಮದು ಮಾಡಿಕೊಂಡ ಅನುಪಾತಕ್ಕಿಂತಲೂ ಕಡಿಮೆ ಇರುವ ಕಾರಣ ಅದರಲ್ಲೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಆಮದು ಮಾಡಿದ್ದ ಕಾರಣ ಭಾರತ ಇನ್ನೂ ಸಾಲದ ಕೂಪದಲ್ಲಿಯೇ ಇದೆ. ಆದರೆ ನಿಧಾನವಾಗಿ ಏರುತ್ತಿರುವ ಆರ್ಥಿಕ ಪ್ರಗತಿ ಭಾರತದ ಸಾಲವನ್ನು ನಿಧಾನವಾಗಿ ತೀರಿಸುತ್ತಿದೆ. (ಮೂಲ: ರಾಯ್ಟರ್ಸ್)

English summary

Top 10 Countries with Largest National Debt in 2018

Here's a list of the top 10 countries that have the highest national debt-to-GDP ratio as of 2017.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more